ಸೋದರ ಸಂಬಂಧಿ ಕೋಕಿಲಾಗೆ ತಾಳಿಕಟ್ಟಿದ ನಟ ಬಾಲಾ, ಇದು ನಾಲ್ಕನೇ ಮದುವೆ; ಲಿವರ್‌ ಕಸಿ ಸಪೋರ್ಟ್‌ಗಾಗಿ ಮದುವೆಯಾದ್ರ?
ಕನ್ನಡ ಸುದ್ದಿ  /  ಮನರಂಜನೆ  /  ಸೋದರ ಸಂಬಂಧಿ ಕೋಕಿಲಾಗೆ ತಾಳಿಕಟ್ಟಿದ ನಟ ಬಾಲಾ, ಇದು ನಾಲ್ಕನೇ ಮದುವೆ; ಲಿವರ್‌ ಕಸಿ ಸಪೋರ್ಟ್‌ಗಾಗಿ ಮದುವೆಯಾದ್ರ?

ಸೋದರ ಸಂಬಂಧಿ ಕೋಕಿಲಾಗೆ ತಾಳಿಕಟ್ಟಿದ ನಟ ಬಾಲಾ, ಇದು ನಾಲ್ಕನೇ ಮದುವೆ; ಲಿವರ್‌ ಕಸಿ ಸಪೋರ್ಟ್‌ಗಾಗಿ ಮದುವೆಯಾದ್ರ?

ತಮಿಳು, ಮಲಯಾಳಂ ಚಿತ್ರಗಳಲ್ಲಿ ನಟಿಸಿರುವ ನಟ ಬಾಲಾ ನಾಲ್ಕನೇ ಬಾರಿ ವಿವಾಹವಾಗಿದ್ದಾರೆ. ತನ್ನ ಸೋದರ ಸಂಬಂಧಿ ಕೋಕಿಲಾರನ್ನು ವಿವಾಹವಾಗಿದ್ದಾರೆ. ಲಿವರ್‌ ಕಸಿಯ ಬಳಿಕ ಆರೋಗ್ಯ ಸುಧಾರಿಸಲು ಕೋಕಿಲಾ ನೆರವು ಮಹತ್ವದ್ದು ಎಂದು ಅವರು ಹೇಳಿದ್ದಾರೆ.

ಸೋದರ ಸಂಬಂಧಿ ಕೋಕಿಲಾಗೆ ತಾಳಿಕಟ್ಟಿದ ನಟ ಬಾಲಾ, ಇದು ನಾಲ್ಕನೇ ಮದುವೆ
ಸೋದರ ಸಂಬಂಧಿ ಕೋಕಿಲಾಗೆ ತಾಳಿಕಟ್ಟಿದ ನಟ ಬಾಲಾ, ಇದು ನಾಲ್ಕನೇ ಮದುವೆ

ತಮಿಳು ಮತ್ತು ಮಲಯಾಳಂ ನಟ ಬಾಲಾ ಮತ್ತೆ ವಿವಾಹವಾಗಿದ್ದಾರೆ. ಚೆನ್ನೈ ಮೂಲದ ಕೋಕಿಲಾರಿಗೆ ತಾಳಿ ಕಟ್ಟಿದ್ದಾರೆ. ಈಕೆ ನಟ ಬಾಲಾರ ಸೋದರ ಸಂಬಂಧಿ. ಇಂದು ಕೇರಳದ ಎರ್ನಾಕುಲಂ ಕಾಲೂರ್‌ ಪಾವಕುಲಂ ದೇವಸ್ಥಾನದಲ್ಲಿ ಬೆಳಗ್ಗೆ 8.30 ಗಂಟೆಗೆ ನಡೆದ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ವಧು ವರರ ಹತ್ತಿರದ ಸಂಬಂಧಿಗಳು, ಸ್ನೇಹಿತರು ವಿವಾಹ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

"ಕೋಕಿಲಾ ನನ್ನ ಸಂಬಂಧಿ. ಈ ಮದುವೆ ಕಾರ್ಯಕ್ರಮದಲ್ಲಿ ನನ್ನ ಅಮ್ಮ ಇಲ್ಲಿದ್ದರೆ ಚೆನ್ನಾಗಿರುತ್ತಿತ್ತು. ಅಮ್ಮನಿಗೆ 74 ವರ್ಷ ವಯಸ್ಸಾಗಿದೆ. ಆಕೆಯ ಆರೋಗ್ಯ ಹದಗೆಟ್ಟಿದೆ. ಆಕೆ ಈ ಮದುವೆಯಲ್ಲಿ ಪಾಲ್ಗೊಳ್ಳಲು ಬಯಸಿದ್ದಳು. ನನ್ನ ಸೋದರ ಸಂಬಂಧಿ ಕೋಕಿಲಾ ಯೌವನದಲ್ಲಿ ನನ್ನನ್ನು ಮದುವೆಯಾಗುವ ಆಸೆ ಹೊತ್ತಿದ್ದಳು. ಆಕೆಯ ಆಸೆ ಈಗ ಪೂರೈಸಿದೆ" ಎಂದು ನಟ ಬಾಲಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.

"ನಿಮ್ಮೆಲ್ಲರ ಆಶೀರ್ವಾದವಿರಲಿ. ಕೋಕಿಲಾಗೆ ಮಲಯಾಳಂ ಗೊತ್ತಿಲ್ಲ. ಆಕೆ ತಮಿಳು ಮಾತನಾಡುತತಾಳೆ. ಕಳೆದ ವರ್ಷದಿಂದ ನನ್ನ ಆರೋಗ್ಯ ಚೇತರಿಸಿಕೊಳ್ಳಲು ಈಕೆಯ ಕೊಡುಗೆ ಮಹತ್ವದ್ದು" ಎಂದು ನಟ ಬಾಲಾ ಹೇಳಿದ್ದಾರೆ.

ತನ್ನ ಮದುವೆಯ ಕುರಿತು ಫೇಸ್‌ಬುಕ್‌ನಲ್ಲೂ ಪರೋಕ್ಷವಾಗಿ ನಟ ಬಾಲಾ ಪೋಸ್ಟ್‌ ಮಾಡಿದ್ದರು ಎಂದು ಮಾತೃಭೂಮಿ ವರದಿ ತಿಳಿಸಿದೆ. "ನನ್ನ ಲಿವರ್‌ ಕಸಿಯಾಗಿರುವ ಕಾರಣ ನನಗೆ ಬೆಂಬಲ ಬೇಕೆಂದು ಬಯಸಿದ್ದೆ. ನಾನು ಈ ತೊಂದರೆಯಿಂದ ಬೇಗ ಪಾರಾಗುವ ನಿರೀಕ್ಷೆಯಿದೆ. ನನ್ನ ಡಯೆಟ್‌ ಮತ್ತು ಔಷಧದ ಕುರಿತು ಕಾಳಜಿ ಹೊಂದಿದ್ದೇನೆ. ನನ್ನ ಆರೋಗ್ಯ ಸುಧಾರಿಸಿದೆ. ಬೇಗ ಆರೋಗ್ಯವಂತನಾಗುವೆ. ನಿಮ್ಮ ಆಶೀರ್ವಾದ ಇರಲಿ" ಎಂದು ಪೋಸ್ಟ್‌ ಮಾಡಿದ್ದರು. ಇದೀಗ ತನ್ನ ಆರೋಗ್ಯ ಸುಧಾರಣೆ ಹಿಂದೆ ಕೋಕಿಲಾರ ಬೆಂಬಲ ಇತ್ತು ಎನ್ನುವುದನ್ನು ಹೇಳಿದ್ದಾರೆ.

ಇದು ನಟ ಬಾಲಾರ ನಾಲ್ಕನೇ ವಿವಾಹ

ಈ ಹಿಂದೆ ಗಾಯಕಿ ಅಮೃತಾ ಸುರೇಶ್‌ ಅವರನ್ನು ವಿವಾಹವಾಗಿದ್ದು. ಆದರೆ, ಸಂಬಂಧ ಹದಗೆಟ್ಟ ಕಾರಣ ಡಿವೋರ್ಸ್‌ ಪಡೆದಿದ್ದರು. ಅಮೃತಾ ಮತ್ತು ಆಕೆಯ ಮಗಳ ಕುರಿತು ಸಾರ್ವಜನಿಕವಾಗಿ ಮಾತನಾಡದಂತೆ ಇವರಿಗೆ ಎರ್ನಾಕುಲಂ ಮ್ಯಾಜಿಸ್ಟ್ರೀಟ್‌ ಕೋರ್ಟ್‌ ಇತ್ತೀಚೆಗೆ ಸೂಚಿಸಿತ್ತು. "ನನ್ನನ್ನು ಮತ್ತು ನನ್ನ ಮಗಳನ್ನು ಸಾರ್ವಜನಿಕವಾಗಿ ನಟ ಬಾಲಾ ಟೀಕಿಸುತ್ತಿದ್ದಾರೆ" ಎಂದು ಅಮೃತ ಕೇಸ್‌ ದಾಖಲಿಸಿದ್ದರು. ಈ ಪ್ರಕರಣದಲ್ಲಿ ಬಂಧನಕ್ಕೆ ಒಳಗಾದ ನಟ ಬಾಲಾರಿಗೆ "ಇವರ ಕುರಿತು ಸಾರ್ವಜನಿಕವಾಗಿ ಮಾತನಾಡಬಾರದು" ಎಂಬ ನಿಬಂಧನೆ ಮೇಲೆ ಬೇಲ್‌ ದೊರಕಿತ್ತು. ಇದೇ ಅಕ್ಟೋಬರ್‌ 14ರಂದು ಕೊಚ್ಚಿಯಲ್ಲಿ ಇವರನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿತ್ತು. ಇದೀಗ ಇವರು ತನ್ನ ಮಾವನ ಮಗಳನ್ನು ಮದುವೆಯಾಗಿದ್ದಾರೆ.

ಅಮೃತ ಸುರೇಶ್‌ಗೆ ಡಿವೋರ್ಸ್‌ ನೀಡಿದ ಬಳಿಕ ಎಲಿಜಬೆತ್‌ ಉದಯನ್‌ರನ್ನು ಮದುವೆಯಾಗಿದ್ದಾರೆ. ಆದರೆ, ಈ ವಿವಾಹ ನೋಂದಣಿಯಾಗಿಲ್ಲ. ವರದಿಗಳ ಪ್ರಕಾರ ಇದೀಗ ಕೋಕಿಲಾರ ಜತೆಗಿನ ಇವರ ಮದುವೆಯು "ಇವರ ನಾಲ್ಕನೇ ಮದುವೆ".

Whats_app_banner