Bazooka Trailer: ಮಲಯಾಳಂ ಮೆಗಾಸ್ಟಾರ್ ಮಮ್ಮೂಟಿಯ ಆ್ಯಕ್ಷನ್ ಥ್ರಿಲ್ಲರ್ ʻಬಜೂಕಾʼ ಚಿತ್ರದ ಟ್ರೇಲರ್ ಬಿಡುಗಡೆ
Bazooka Trailer: ಮಲಯಾಳಂ ಮೆಗಾಸ್ಟಾರ್ ಮಮ್ಮೂಟಿ ಅಭಿನಯದ ಬಜೂಕಾ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಈ ಚಿತ್ರವು ಏಪ್ರಿಲ್ 10 ರಂದು ರಿಲೀಸ್ ಆಗಲಿದ್ದು, ಬುಧವಾರ (ಮಾರ್ಚ್ 26) ಟ್ರೇಲರ್ ಹೊರಬಿದ್ದಿದೆ.

Bazooka Trailer: ಮಲಯಾಳಂ ಸ್ಟಾರ್ ನಟ ಮಮ್ಮೂಟಿ ಅಭಿನಯದ ಬಜೂಕಾ ಚಿತ್ರದ ಟ್ರೇಲರ್ ಬುಧವಾರ (ಮಾರ್ಚ್ 26) ಬಿಡುಗಡೆಯಾಗಿದೆ. ಮೋಹನ್‌ಲಾಲ್ ಅಭಿನಯದ 'ತುಡರುಮ್', ನಸ್ಲೆನ್ ಅಭಿನಯದ ‘ಆಲಪ್ಪುಝ ಜಿಂಖಾನಾ’ ಚಿತ್ರಗಳ ಟ್ರೇಲರ್‌ಗಳ ಬಳಿಕ, ಮಮ್ಮೂಟಿ ಅಭಿನಯದ ಬಜೂಕಾ ಟ್ರೇಲರ್ ಕೂಡ ಪ್ರೇಕ್ಷಕರ ಮುಂದೆ ಬಂದಿದೆ. ಡೀನೋ ಡೆನ್ನಿಸ್ ನಿರ್ದೇಶನದ ಬಜೂಕಾ ಚಿತ್ರವು ಏಪ್ರಿಲ್ 10 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಮಾಸ್ ಆಕ್ಷನ್ ಜಾನರ್ ಈ ಸಿನಿಮಾದಲ್ಲಿ ಮಮ್ಮೂಟಿ ಸ್ಟೈಲಿಶ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಕ್ಲಾಸಿ ಲುಕ್‌ನಲ್ಲಿ ಮಮ್ಮೂಟಿ
ಗೇಮ್ ಥ್ರಿಲ್ಲರ್ ಚಿತ್ರದಲ್ಲಿ ಮಮ್ಮೂಟಿ ಅವರಿಗೆ ವಿನೋದ್ ಮೆನನ್ ಎಂಬ ಪಾತ್ರವಿದೆ. ನಟ, ನಿರ್ದೇಶಕ ಗೌತಮ್ ವಾಸುದೇವ್ ಮೆನನ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ತನ್ನದೇ ಆದ ತಂಡಕಟ್ಟಿಕೊಂಡು, ರೌಡಿಗಳ ಹೆಡೆಮುರಿಕಟ್ಟುವ ಕೊಚ್ಚಿ ನಗರದ ಎಸಿಪಿ ಬೆಂಜಮಿನ್ ಜೋಶುವಾ ಪಾತ್ರದಲ್ಲಿ ಗೌತಮ್ ನಟಿಸಿದ್ದಾರೆ. ಬಳಿಕ ಮಮ್ಮೂಟಿ ಪಾತ್ರ ಪರಿಚಯವಾಗುತ್ತದೆ. ಅವರು ಮಿಸ್ಟರ್ ನೋಬಡಿ ಆದರೆ ಸಮ್‌ಬಡಿ ಎಂದು ಮಮ್ಮೂಟಿ ಪಾತ್ರದ ವರ್ಣನೆಯಾಗುತ್ತದೆ.
ಏಪ್ರಿಲ್ 10ಕ್ಕೆ ತೆರೆಗೆ
ಬಜೂಕಾ ಚಿತ್ರವು ಏಪ್ರಿಲ್ 10 ರಂದು ಪ್ರೇಕ್ಷಕರ ಮುಂದೆ ಬರಲಿದೆ. 73 ವರ್ಷ ವಯಸ್ಸಿನ ಮಲಯಾಳಂ ಮೆಗಾಸ್ಟಾರ್ ಮಮ್ಮೂಟಿ ಈ ಆ್ಯಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ಮತ್ತೊಂದು ವಿಭಿನ್ನ ಪಾತ್ರದ ಮೂಲಕ ಆಗಮಿಸಿದ್ದಾರೆ. ಇತ್ತೀಚಿನ ಕೆಲ ವರ್ಷಗಳಿಂದ ವಿಶಿಷ್ಟ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಮಮ್ಮೂಟಿ, ಈ ಬಜೂಕಾ ಚಿತ್ರದ ಮೂಲಕ ಪ್ರೇಕ್ಷಕರನ್ನು ಮತ್ತಷ್ಟು ರಂಜಿಸಲು ಸಿದ್ಧರಾಗಿದ್ದಾರೆ. ಸದ್ಯ ಬಿಡುಗಡೆ ಆಗಿರುವ 2 ನಿಮಿಷ 32 ಸೆಕೆಂಡುಗಳ ಅವಧಿಯ ಬಜೂಕಾ ಟ್ರೇಲರ್, ಚಿತ್ರದ ಮೇಲಿನ ನಿರೀಕ್ಷೆಗಳನ್ನು ಹೆಚ್ಚಿಸಿದೆ.
ಬಜೂಕಾ ಚಿತ್ರದಲ್ಲಿ ಮಮ್ಮೂಟಿ, ಗೌತಮ್ ವಾಸುದೇವ್ ಮೆನನ್ ಜೊತೆಗೆ ಬಾಬು ಆಂಟೋನಿ, ನೀತಾ ಪಿಳ್ಳೈ, ಶರಫ್ ಯು ದೀನ್, ಜಗದೀಶ್, ಸಿದ್ಧಾರ್ಥ್ ಭರತನ್, ಶೈನ್ ಟಾಮ್ ಚಾಕೋ, ಸ್ಫದಿಕಂ ಜಾರ್ಜ್, ಗಾಯತ್ರಿ ಅಯ್ಯರ್, ದಿವ್ಯ ಪಿಳ್ಳೈ, ಐಶ್ವರ್ಯ ಮೀನನ್, ಶಮ್ಮಿ ತಿಲಕನ್ ಈ ಚಿತ್ರದಲ್ಲಿ ವಿವಿಧ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಬಿಗ್ ಬಜೆಟ್ ಆ್ಯಕ್ಷನ್ ಥ್ರಿಲ್ಲರ್ ಬಜೂಕಾ ಚಿತ್ರವು ಏಪ್ರಿಲ್ 10 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
