Aavesham: ಮೊದಲ ದಿನವೇ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಫಸಲು ತೆಗೆದ ಆವೇಶಂ; 100 ಕೋಟಿ ಗಳಿಸುವುದೇ ಫಹಾದ್ ಫಾಸಿಲ್ ಸಿನಿಮಾ
Aavesham box office collection day 1: ಕಳೆದ ಕೆಲವು ತಿಂಗಳುಗಳಲ್ಲಿ ಮಲಯಾಳಂ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಬಹುಕೋಟಿ ಗಳಿಕೆ ಮಾಡುತ್ತಿವೆ. ನಿನ್ನೆ ಬಿಡುಗಡೆಯಾದ ಫಹಾದ್ ಫಾಸಿಲ್ ನಟನೆಯ, ಜಿತು ಮಾಧವನ್ ನಿರ್ದೇಶನದ ಆವೇಶಂ ಸಿನಿಮಾವು ಮೊದಲ ದಿನವೇ ಉತ್ತಮ ಗಳಿಕೆ ಮಾಡಿದೆ. ಈ ವಿಕೆಂಡ್‌ನಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಫಸಲು ತೆಗೆಯುವ ಸೂಚನೆಯಿದೆ.

ಬೆಂಗಳೂರು: ಆವೇಶಂ ಬಾಕ್ಸ್ ಆಫೀಸ್ ಕಲೆಕ್ಷನ್ ದಿನ 1: ಮೊದಲ ದಿನ ಫಹಾದ್ ಫಾಸಿಲ್ ನಟನೆಯ ಆವೇಶಂ ಸಿನಿಮಾವು ಉತ್ತಮವಾಗಿಯೇ ಕಲೆಕ್ಷನ್ ಮಾಡಿದೆ. ಸಚ್‌ನಿಲ್ಕ್.ಕಾಂ ವರದಿ ಪ್ರಕಾರ ಗುರುವಾರ ಆವೇಶಂ ಸಿನಿಮಾದ ಗಲ್ಲಾಪೆಟ್ಟಿಗೆ ಕಲೆಕ್ಷನ್ 3.26 ಕೋಟಿ ರೂಪಾಯಿಗೆ ತಲುಪಿದೆ. ಈ ಸಿನಿಮಾವನ್ನು ಜಿತು ಮಾಧವನ್ ನಿರ್ದೇಶನ ಮಾಡಿದ್ದಾರೆ. ಕಳೆದ ಕೆಲವು ತಿಂಗಳುಗಳಲ್ಲಿ ಮಲಯಾಳಂ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಬಹುಕೋಟಿ ಗಳಿಕೆ ಮಾಡುತ್ತಿವೆ. ಈ ವಿಕೆಂಡ್‌ನಲ್ಲಿ ಬಾಕ್ಸ್ ಆಫೀಸ್‌ನಲ್ಲಿಈ ಸಿನಿಮಾ ಭರ್ಜರಿ ಗಳಿಕೆ ಮಾಡುವ ಸೂಚನೆಗಳಿವೆ.
ಆವೇಶಂ ಬಾಕ್ಸ್ ಆಫೀಸ್ ಕಲೆಕ್ಷನ್
ಸಚ್‌ನಿಲ್ಕ್.ಕಾಂ ಪ್ರಕಾರ ಗುರುವಾರ ಥಿಯೇಟರ್‌ಗಳಲ್ಲಿ ಶೇಕಡ 73.56ರಷ್ಟು ಆಕ್ಯುಪೆನ್ಸಿ ಹೊಂದಿತ್ತು. ಬೆಳಗ್ಗಿನ ಶೋಗೆ ಆಕ್ಯುಪೆನ್ಸಿ ಶೇಕಡ 62.97ರಷ್ಟಿತ್ತು. ಮಧ್ಯಾಹ್ನದ ಬಳಿಕ ಶೇಕಡ 73.67 ಮತ್ತು ಸಂಜೆಯ ಶೋಗೆ ಶೇಕಡ 78.85ರಷ್ಟು ಆಕ್ಯುಪೆನ್ಸಿ ಇತ್ತು. ರಾತ್ರಿ ಶೋಗಳಲ್ಲಿ ಥಿಯೇಟರ್ ಶೇಕಡ 78.78 ರಷ್ಟು ಫುಲ್ ಆಗಿತ್ತು. ಹೈದರಾಬಾದ್‌ನಲ್ಲಿ ಥಿಯೇಟರ್ ಆಕ್ಯುಪೆನ್ಸಿ ಶೇಕಡ 94ರಷ್ಟಿತ್ತು.
ಆವೇಶಂ ಸಿನಿಮಾದ ಕುರಿತು
ಆವೇಶಂ ಚಿತ್ರವನ್ನು ಜಿತು ಮಾಧವನ್ ನಿರ್ದೇಶಿಸಿದ್ದಾರೆ. ಅನ್ವರ್ ರಶೀದ್ ಎಂಟರ್‌ಟೈನ್‌ಮೆಂಟ್ಸ್ ಮತ್ತು ಫಹಾದ್ ಫಾಸಿಲ್ ಮತ್ತು ಫ್ರೆಂಡ್ಸ್ ನಿರ್ಮಿಸಿದ್ದಾರೆ. ಇದರಲ್ಲಿ ಫಹಾದ್ ಫಾಸಿಲ್, ಆಶಿಶ್ ವಿದ್ಯಾರ್ಥಿ, ಮನ್ಸೂರ್ ಅಲಿ ಖಾನ್ ಮತ್ತು ಸಜಿನ್ ಗೋಪು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಆವೇಶಂ ಸಿನಿಮಾದ ಕುರಿತು ಈಗಾಗಲೇ ಸಕಾರಾತ್ಮಕ ವಿಮರ್ಶೆಗಳು ಬಂದಿವೆ. ರಂಗಾ ಪಾತ್ರದಲ್ಲಿ ಫಹಾದ್ ಮತ್ತು ಅಂಬಾನ್ ಪಾತ್ರದಲ್ಲಿ ಸಚಿನ್ ಪಾತ್ರವು ವೀಕ್ಷಕರಿಗೆ ಇಷ್ಟವಾಗಿದೆ.
ಇದನ್ನೂ ಓದಿ: Premalu OTT: ಮನೆಯಲ್ಲೇ ಪ್ರೇಮಲು ಸಿನಿಮಾ ನೋಡಿ
ಆವೇಶಂ ಸಿನಿಮಾ "ನೀರಿನಿಂದ ಹೊರಕ್ಕೆ ತೆಗೆದ ಮೀನಿನಂತಹ ಪರಿಸ್ಥಿತಿಗೆ ಸಿಲುಕಿದ" ಕಥೆಯನ್ನು ಹೊಂದಿದೆ. ಇದರಲ್ಲಿ ಮೂವರು ಕಾಲೇಜು ವಿದ್ಯಾರ್ಥಿಗಳು ಅನಿರೀಕ್ಷಿತ ಸಂದರ್ಭಗಳಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ. ಚಿತ್ರದಲ್ಲಿ ಫಹದ್ ಬೆಂಗಳೂರು ಮೂಲದ ಡಾನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಆವೇಶಂ ಸಿನಿಮಾದ ಟ್ವಿಟ್ಟರ್ ವಿಮರ್ಶೆ
ಅಭಿಮಾನಿಗಳ ಪ್ರಕಾರ ಈ ಸಿನಿಮಾ ಫಾಹದ್‌ಗೆ ಅತ್ಯಧಿಕ ಗಳಿಕೆ ತಂದುಕೊಡಲಿದೆ. "ಆವೇಶಂ ಸಿನಿಮಾ ಸೂಪರ್ ಎಂಟರ್‌ಟ್ರೈನ್‌ಮೆಂಟ್. ಅತ್ಯಧಿಕ ಕಾಮಿಡಿ ಮತ್ತು ಆಕ್ಷನ್ ಇದೆ. ಫಾಹದ್ ಫಾಸಿಲ್ ಅವರನ್ನು ಈ ರೀತಿ ಕಮರ್ಷಿಯಲ್ ಆಗಿ ಈ ಹಿಂದೆ ನೋಡಿರಲು ಸಾಧ್ಯವಿಲ್ಲ. ಇದು ಖಂಡಿತವಾ ಮಾಲಿವುಡ್‌ನ ಮುಂದಿನ 100 ಕೋಟಿ ಗಳಿಕೆಯ ಸಿನಿಮಾ" ಎಂದು ಅಭಿಮಾನಿಯೊಬ್ಬರು ಟ್ವೀಟ್ ಮಾಡಿದ್ದಾರೆ.
"ಈ ಆಕ್ಷನ್ ಕಾಮಿಡಿ ಮನರಂಜನಾ ಸಿನಿಮಾದಲ್ಲಿ ಸರಳ ಕಥೆಯಿದೆ. ಎಂದಿನಂತೆ ಫಾಹದ್ ಅದ್ಭುತವಾಗಿ ಅಭಿನಯಿಸಿದ್ದಾರೆ. ಈ ಸಿನಿಮಾದ ಬಹುತೇಕ ಕಡೆ ಕಾಮಿಡಿ ವರ್ಕ್ ಆಗಿದೆ. ಇಂಟರ್‌ವಲ್ ವೇಳೆಯ ಫೈಟಿಂಗ್ ಸೀನ್ ಸಖತ್ ಇದೆ. ಈ ಸಿನಿಮಾ ಕೆಲವು ಕಡೆ ಮಂದಗತಿ ಹೊಂದಿರಬಹುದು, ಆದರೆ, ಅತ್ಯುತ್ತಮವಾಗಿ ಮನರಂಜನೆ ನೀಡುತ್ತದೆ. ಕ್ಲೈಮ್ಯಾಕ್ಸ್ ಸಖತ್ ಇದೆ" ಎಂದು ಇನ್ನೊಬ್ಬರು ಬರೆದಿದ್ದಾರೆ.
