Bramayugam OTT: ಭ್ರಮಯುಗಂ ಒಟಿಟಿ ಬಿಡುಗಡೆ ದಿನಾಂಕ ಪ್ರಕಟ; ಮನೆಯಲ್ಲಿಯೇ ನೋಡಿ ಮಮ್ಮುಟ್ಟಿ ಮಲಯಾಳಂ ಸಿನಿಮಾ-mollywood news bramayugam ott release date march 15 sonyliv when and where you can stream mammootty movie pcp ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Bramayugam Ott: ಭ್ರಮಯುಗಂ ಒಟಿಟಿ ಬಿಡುಗಡೆ ದಿನಾಂಕ ಪ್ರಕಟ; ಮನೆಯಲ್ಲಿಯೇ ನೋಡಿ ಮಮ್ಮುಟ್ಟಿ ಮಲಯಾಳಂ ಸಿನಿಮಾ

Bramayugam OTT: ಭ್ರಮಯುಗಂ ಒಟಿಟಿ ಬಿಡುಗಡೆ ದಿನಾಂಕ ಪ್ರಕಟ; ಮನೆಯಲ್ಲಿಯೇ ನೋಡಿ ಮಮ್ಮುಟ್ಟಿ ಮಲಯಾಳಂ ಸಿನಿಮಾ

Bramayugam OTT release: ಮಮ್ಮುಟ್ಟಿ ನಟನೆಯ ಭ್ರಮಯುಗಂ ಸಿನಿಮಾ ಒಟಿಟಿಯಲ್ಲಿ ಇದೇ ಮಾರ್ಚ್‌ 15ರಂದು ಬಿಡುಗಡೆಯಾಗಲಿದೆ. ಕಳೆದ ತಿಂಗಳು ಈ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಬಾಕ್ಸ್‌ ಆಫೀಸ್‌ನಲ್ಲಿ ಉತ್ತಮ ಗಳಿಕೆ ಮಾಡಿದ್ದ ಮಮ್ಮುಟ್ಟಿ ಸಿನಿಮಾ ಮುಂದಿನ ವಾರವೇ ಒಟಿಟಿಯಲ್ಲಿ ರಿಲೀಸ್‌ ಆಗುತ್ತಿದೆ.

Mammootty in a still from Bramayugam
Mammootty in a still from Bramayugam

Bramayugam OTT release: ಮಮ್ಮುಟ್ಟಿ ನಟನೆಯ ಮಲಯಾಳಂ ಸಿನಿಮಾ ಕಳೆದ ತಿಂಗಳು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಬಿಡುಗಡೆಯಾದ ದಿನದಿಂದಲೇ ಈ ಚಿತ್ರದ ಕುರಿತು ಬಾಯ್ಮಾತಿನ ಪ್ರಚಾರ ಹೆಚ್ಚಾಗಿತ್ತು. ಚಿತ್ರ ಚೆನ್ನಾಗಿದೆ, ಚಿತ್ರ ಡಿಫರೆಂಟ್‌ ಆಗಿದೆ ಎಂದೆಲ್ಲ ಅಭಿಪ್ರಾಯಗಳು ವ್ಯಕ್ತವಾಗಿತ್ತು. ಭಾರತದ ಇತರೆ ನಗರಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಅತ್ಯಧಿಕ ಚಿತ್ರಮಂದಿರಗಳಲ್ಲಿ ಭ್ರಮಯುಗಂ ಸಿನಿಮಾ ರಿಲೀಸ್‌ ಆಗಿತ್ತು. ಇದೀಗ ಸೋನಿಲಿವ್‌ ಟಿವಿಯು ಭ್ರಮಯುಗಂ ಸಿನಿಮಾ ಬಿಡುಗಡೆ ದಿನಾಂಕವನ್ನು ಪ್ರಕಟಿಸಿದೆ.

ಭ್ರಮಯುಗಂ ಸಿನಿಮಾ ಒಟಿಟಿ ಬಿಡುಗಡೆ ದಿನಾಂಕ

"ಐಕಾನಿಕ್‌ ಮಮ್ಮುಟ್ಟಿ ನಟನೆಯ ಭ್ರಮಯುಗಂ ಎಂಬ ಕಪ್ಪು ಬಿಳುಪಿನ ಮಾಸ್ಟರ್‌ಪೀಸ್‌ ಸಿನಿಮಾವು ಹಾರರ್‌ ಮತ್ತು ಮಿಸ್ಟರಿ ಕಥಾನಕ. ಈ ಸಿನಿಮಾ ಮಾರ್ಚ್‌ 15ರಿಂದ ಸೋನಿಲಿವ್‌ನಲ್ಲಿ ಪ್ರಸಾರಗೊಳ್ಳಲಿದೆ" ಎಂದು ಸೋನಿ ಲಿವ್‌ ಎಕ್ಸ್‌ನಲ್ಲಿ ಟ್ವೀಟ್‌ ಮಾಡಿದೆ. ಅಂದಹಾಗೆ ಭ್ರಮಯುಗಂ ಸಿನಿಮಾ ನಿರೀಕ್ಷೆಗಿಂತಲೂ ಬೇಗನೇ ಒಟಿಟಿಗೆ ಆಗಮಿಸಿದೆ. ಕಳೆದ ತಿಂಗಳು ಬಿಡುಗಡೆಯಾದ ಈ ಸಿನಿಮಾ ಮುಂದಿನ ತಿಂಗಳು ಒಟಿಟಿಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿತ್ತು. ಇದೀಗ ಮುಂದಿನ ವಾರವೇ ಭ್ರಮಯುಗಂ ಒಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ.

ಕಪ್ಪು ಬಿಳುಪಿನ ಚಿತ್ರ

ಭ್ರಮಯುಗಂ ಕಲರ್‌ ಚಿತ್ರವಲ್ಲ. ಇಡೀ ಸಿನಿಮಾ ಕಪ್ಪು ಬಿಳುಪಿನಲ್ಲಿದೆ. ಭ್ರಮಯುಗಂ ಪ್ರಯೋಗಾತ್ಮಕ ಸಿನಿಮಾ. ಮಮ್ಮುಟ್ಟಿ ಜೊತೆಗೆ ಅರ್ಜುನ್ ಅಶೋಕನ್, ಸಿದ್ಧಾರ್ಥ್ ಭರತನ್ ಮತ್ತು ಅಮಲ್ಡಾ ಲಿಜ್ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಚಿತ್ರವನ್ನು ರಾಹುಲ್ ಸದಾಶಿವನ್ ನಿರ್ದೇಶಿಸಿದ್ದಾರೆ. ಭ್ರಮಯುಗದಲ್ಲಿ ಮಮ್ಮುಟ್ಟಿ ಅವರ ಅದ್ಭುತ ಮತ್ತು ವೈವಿಧ್ಯಮಯ ಅಭಿನಯಕ್ಕೆ ಪ್ರಶಂಸೆ ವ್ಯಕ್ತವಾಗಿದೆ. ಮಮ್ಮುಟ್ಟಿ ಪ್ರಯೋಗಾತ್ಮಕ ಚಿತ್ರಗಳತ್ತ ತಮ್ಮ ಒಲವನ್ನು ತೋರಿಸುತ್ತಿದ್ದಾರೆ. ನಿರ್ದೇಶಕ ಸದಾಶಿವನ್ ಕೂಡ ಈ ಚಿತ್ರವನ್ನು ನಿರ್ದೇಶಿಸಿದ ರೀತಿಗೆ ಸಿನಿಪ್ರಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚಿತ್ರಮಂದಿರಗಳಲ್ಲಿ ಸಿನಿಮಾ ನೋಡಲಾಗದೆ ಇರುವವರು ಒಟಿಟಿಯಲ್ಲಿ ಮನೆಯಲ್ಲಿಯೇ ಕುಳಿತು ನೋಡಬಹುದು.

ಭ್ರಮಯುಗಂ ಸ್ಟೋರಿ

ಬ್ಲಾಕ್‌ ಆಂಡ್‌ ವೇಟ್‌ ಸಿನಿಮಾ ಎಂದು ಕಡೆಗಣಿಸುವಂತಹ ಸಿನಿಮಾ ಇದಲ್ಲ. ಇದು ಹಾರರ್‌ ಮತ್ತು ಥ್ರಿಲ್ಲರ್‌ ಸಿನಿಮಾ. ಪಾನನ (ಅರ್ಜುನ್ ಅಶೋಕನ್) ಎಂಬಾತ ಗುಲಾಮಗಿರಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾನೆ. ಈ ಸಂದರ್ಭದಲ್ಲಿ ಕಾಡಿನಲ್ಲಿ ದಾರಿ ತಪ್ಪಿ ಮಹಲೊಂದರ ಮೇಲೆ ಬೀಳುತ್ತಾನೆ. ಆ ಪಾಳು ಬಿದ್ದ ಮಹಲಿನಲ್ಲಿ (ಬಂಗಲೆಯಲ್ಲಿ) ಯುಜಮಾನ ಇರುತ್ತಾನೆ. ಕೊಡುಮೋನ್ ಪೊಟ್ಟಿ (ಮಮ್ಮುಟ್ಟಿ) ಈ ಬಂಗಲೆಯ ಮಾಲೀಕ. ಆತನ ಜತೆ ಇನ್ನೊಬ್ಬ ಮಾತ್ರ ಇರುತ್ತಾನೆ. ಅಂದರೆ, ಆತನ ಜತೆ ಒಬ್ಬ ಅಡುಗೆಯಾತ (ಸಿದ್ಧಾರ್ಥ್ ಭರತನ್) ಮೌನವಾಗಿ ಇರುತ್ತಾನೆ. ಈ ಮಹಲು ಮತ್ತು ಅದರ ಯುಜಮಾನನ ಬಗ್ಗೆ ಆ ಅಡುಗೆಯಾತನಿಗೆ ನಿಗೂಢ ಸಂಗತಿಗಳು ತಿಳಿದಿರುತ್ತವೆ. ಪಾನನ ಈ ಬಂಗಲೆಯಲ್ಲಿ ಶಾಶ್ವತವಾಗಿ ಇರಬೇಕೆಂದು ಕೊಡಮೋನ್‌ ಪೊಟ್ಟಿ ಬಯಸುತ್ತಾನೆ. ಆರಂಭದಲ್ಲಿ ಪಾನನ್‌ ಆಗೋದಿಲ್ಲ ಅನ್ನುತಾನೆ. ಕೊಡುಮೋನ್‌ ಒತ್ತಾಯಕ್ಕೆ ಒಪ್ಪಿ ಅಲ್ಲಿ ಇರುತ್ತಾನೆ. ಪಾನನಿಗೆ ತಾನು ಸಿಲುಕಿರುವ ಅಪಾಯದ ಕುರಿತು ತಿಳಿದಿರಲಿಲ್ಲ. ಈ ಚಿತ್ರದ ಟ್ರೇಲರ್‌ ನೋಡಿದಾಗಲೇ ಭ್ರಮಯುಗಂ ಹೇಗಿರಲಿದೆ ಎಂಬ ಕಲ್ಪನೆ ಬರುತ್ತದೆ. ಭ್ರಮಯುಗಂ ಟ್ರೇಲರ್‌ ಈ ಕೆಳಗೆ ನೀಡಲಾಗಿದೆ.

mysore-dasara_Entry_Point