ಫೋಟೋದಲ್ಲೂ ನಿನ್ನನ್ನು ಒಂಟಿಯಾಗಿ ಬಿಡೊಲ್ಲ; ಹೆಂಡತಿ ಬರ್ತ್‌ಡೇಗೆ ವಿಶ್‌ ಮಾಡಿ ಪ್ರೀತಿಯ ಮಳೆ ಸುರಿಸಿದ ದುಲ್ಕರ್‌ ಸಲ್ಮಾನ್‌-mollywood news dulquer salmaan shared photo with wife amal sufiya on her birthday malayalam film industry rsm ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಫೋಟೋದಲ್ಲೂ ನಿನ್ನನ್ನು ಒಂಟಿಯಾಗಿ ಬಿಡೊಲ್ಲ; ಹೆಂಡತಿ ಬರ್ತ್‌ಡೇಗೆ ವಿಶ್‌ ಮಾಡಿ ಪ್ರೀತಿಯ ಮಳೆ ಸುರಿಸಿದ ದುಲ್ಕರ್‌ ಸಲ್ಮಾನ್‌

ಫೋಟೋದಲ್ಲೂ ನಿನ್ನನ್ನು ಒಂಟಿಯಾಗಿ ಬಿಡೊಲ್ಲ; ಹೆಂಡತಿ ಬರ್ತ್‌ಡೇಗೆ ವಿಶ್‌ ಮಾಡಿ ಪ್ರೀತಿಯ ಮಳೆ ಸುರಿಸಿದ ದುಲ್ಕರ್‌ ಸಲ್ಮಾನ್‌

ನಟ ದುಲ್ಮರ್‌ ಸಲ್ಮಾನ್‌ ಪತ್ನಿ ಅಮಲ್‌ ಸುಫಿಯಾ ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಪತ್ನಿ ಜೊತೆಗಿನ ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ದುಲ್ಕರ್‌ ಸಲ್ಮಾನ್‌, ಫೋಟೋದಲ್ಲೂ ನಿನ್ನನ್ನು ಒಂಟಿಯಾಗಿರಲು ಬಿಡುವುದಿಲ್ಲ ಎಂದು ವಿಶೇಷ ಸಾಲುಗಳನ್ನು ಬರೆದು ವಿಶ್‌ ಮಾಡಿದ್ದಾರೆ.

ಫೋಟೋದಲ್ಲೂ ನಿನ್ನನ್ನು ಒಂಟಿಯಾಗಿ ಬಿಡೊಲ್ಲ; ಹೆಂಡತಿ ಬರ್ತ್‌ಡೇಗೆ ವಿಶ್‌ ಮಾಡಿ ಪ್ರೀತಿಯ ಮಳೆ ಸುರಿಸಿದ ದುಲ್ಕರ್‌ ಸಲ್ಮಾನ್‌
ಫೋಟೋದಲ್ಲೂ ನಿನ್ನನ್ನು ಒಂಟಿಯಾಗಿ ಬಿಡೊಲ್ಲ; ಹೆಂಡತಿ ಬರ್ತ್‌ಡೇಗೆ ವಿಶ್‌ ಮಾಡಿ ಪ್ರೀತಿಯ ಮಳೆ ಸುರಿಸಿದ ದುಲ್ಕರ್‌ ಸಲ್ಮಾನ್‌

ಮಲಯಾಳಿ ನಟ ಮಮ್ಮುಟ್ಟಿ ಪುತ್ರ ದುಲ್ಕರ್‌ ಸಲ್ಮಾನ್‌ ಕೂಡಾ ಮಲಯಾಳಂ ಚಿತ್ರರಂಗದಲ್ಲಿ ಮಾತ್ರವಲ್ಲದೆ ತಮಿಳು, ತೆಲುಗು, ಹಿಂದಿ ಸಿನಿಮಾ ರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ತಂದೆಯಂತೆಯೇ ಮಗನಿಗೂ ಫ್ಯಾನ್ ಫಾಲೋಯಿಂಗ್‌ ಜೋರಾಗಿದೆ. ದುಲ್ಕರ್‌ ಸಲ್ಮಾನ್‌ ಇಂದು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿರುವ ಪೋಸ್ಟ್‌ ನೋಡಿ , ಕೆಲವರಿಗೆ ಖುಷಿಯಾದರೆ, ಕೆಲವು ಅಭಿಮಾನಿಗಳ ಹಾರ್ಟ್‌ ಬ್ರೇಕ್‌ ಆಗಿದೆ.

ಪತ್ನಿ ಅಮಲ್‌ ಸುಫಿಯಾ ಬರ್ತ್‌ಡೇಗೆ ಶುಭ ಕೋರಿದ ದುಲ್ಕರ್‌ ಸಲ್ಮಾನ್‌

ದುಲ್ಕರ್‌ ಸಲ್ಮಾನ್‌ಗೆ ಮಹಿಳಾ ಅಭಿಮಾನಿಗಳು ಹೆಚ್ಚಾಗಿದ್ದಾರೆ. ಈ ಚೆಲುವನಿಗೆ ಈಗಾಗಲೇ ಮದುವೆ ಆಗಿ ಮಗು ಕೂಡಾ ಇದೆ. ಆರಂಭದಲ್ಲಿ ಇದನ್ನು ತಿಳಿಯದ ಎಷ್ಟೋ ಯುವತಿಯರು ನಿಜ ವಿಚಾರ ತಿಳಿದ ನಂತರ ಬೇಸರ ವ್ಯಕ್ತಪಡಿಸಿದ್ದರು. ದುಲ್ಕರ್‌ ಸಲ್ಮಾನ್‌ ತಮ್ಮ ಪತ್ನಿ, ಮಗುವಿನೊಂದಿಗೆ ಇರುವ ಫೋಟೋವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡರೆ ಅದನ್ನು ನೋಡಿ ಕೆಲವರು ಖುಷಿ ಪಟ್ಟರೆ, ಅದಕ್ಕಿಂತ ಹೆಚ್ಚಾಗಿ ಹಾರ್ಟ್‌ ಬ್ರೇಕ್‌ ಎಮೋಜಿ ಕಾಣಸಿಗುವುದೇ ಹೆಚ್ಚು. ಇಂದು (ಸೆ.4) ದುಲ್ಕರ್‌ ಸಲ್ಮಾನ್‌, ತಮ್ಮ ಪತ್ನಿಯನ್ನು ಎಷ್ಟು ಪ್ರೀತಿಸುತ್ತಿದ್ದೇನೆ ಎಂದು ಹೇಳಿಕೊಳ್ಳುವ ಮೂಲಕ ಮಹಿಳಾ ಅಭಿಮಾನಿಗಳ ಹೃದಯ ಒಡೆದಿದ್ದಾರೆ.

ದುಲ್ಕರ್‌ ಸಲ್ಮಾನ್‌ ಪತ್ನಿ ಅಮಲ್‌ ಸುಫಿಯಾ ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಹೆಂಡತಿ ಜೊತೆಗಿನ 4 ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳುವ ಮೂಲಕ ದುಲ್ಕರ್‌ ಸಲ್ಮಾನ್‌ ಬರ್ತ್‌ಡೇ ಶುಭ ಕೋರಿದ್ದಾರೆ. ಜೊತೆಗೆ ಕೆಲವೊಂದು ಪ್ರೀತಿಯ ಸಾಲುಗಳನ್ನು ಬರೆದಿದ್ದಾರೆ. ನಿನಗೆ ಹುಟ್ಟುಹಬ್ಬದ ಶುಭಾಶಯಗಳು ಅಮಲ್‌, ನಿನ್ನ ಹುಟ್ಟುಹಬ್ಬದ ಫೋಟೋಗಳಲ್ಲಿ ಕೂಡಾ ನಿನ್ನನ್ನು ಒಂಟಿಯಾಗಿರಲು ನಾನು ಬಿಡುವುದಿಲ್ಲ. ನಾವಿಬ್ಬರೂ ಹೀಗೇ ಜೊತೆಯಾಗಿ ಇರಲು ಬಯಸುತ್ತೇನೆ. ನಿನ್ನನ್ನು ಬಹಳ ಪ್ರೀತಿಸುತ್ತೇನೆ ಎಂದು ದುಲ್ಕರ್‌ ಸಲ್ಮಾನ್‌ ಬರೆದುಕೊಂಡಿದ್ದಾರೆ.

22 ಡಿಸೆಂಬರ್‌ 2011 ರಲ್ಲಿ ಮದುವೆ ಆದ ಜೋಡಿ

ಅಭಿಮಾನಿಗಳು ಈ ಫೋಟೋಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅಮಲ್‌ ಸುಫಿಯಾಗೆ ಬರ್ತ್‌ಡೇ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. ಇನ್ನೂ ಕೆಲವರು ಹಾರ್ಟ್‌ ಬ್ರೇಕ್‌ ಎಮೋಜಿ ಹಾಕಿದ್ದಾರೆ. ನಿಮ್ಮನ್ನು ನೋಡಿದರೆ ಹೊಟ್ಟೆಗೆ ಕಿಚ್ಚು ಹಾಕಿದಂತಿದೆ ಎಂದು ಕಾಮೆಂಟ್‌ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಈ ಫೋಟೋ ಹಾಗೂ ಮೆಸೇಜ್‌ ಮೂಲಕ ದುಲ್ಕರ್‌ ಸಲ್ಮಾನ್‌, ತಮ್ಮ ಪತ್ನಿಯನ್ನು ಎಷ್ಟು ಪ್ರೀತಿಸುತ್ತಾರೆ, ತಮ್ಮ ಕುಟುಂಬಕ್ಕೆ ಎಷ್ಟು ಪ್ರಾಮುಖ್ಯತೆ ಕೊಡುತ್ತಾರೆ ಎನ್ನುವುದು ತಿಳಿಯುತ್ತಿದೆ. ಅಂದ ಹಾಗೆ ಚಿತ್ರರಂಗಕ್ಕೆ ಬರುವ ಮುನ್ನವೇ ದುಲ್ಕರ್‌ ಸಲ್ಮಾನ್‌ ಅಪ್ಪ ನೋಡಿದ ಹುಡುಗಿ ಅಮಲ್‌ ಸುಫಿಯಾ ಕೈ ಹಿಡಿದಿದ್ದರು. 22 ಡಿಸೆಂಬರ್‌ 2011 ರಲ್ಲಿ ಮದುವೆ ಆದ ಈ ಜೋಡಿಗೆ 7 ವರ್ಷದ ಮಗಳಿದ್ದಾಳೆ.

ದುಲ್ಕರ್‌ ಸಿನಿಮಾಗಳ ವಿಚಾರಕ್ಕೆ ಬರುವುದಾದರೆ ಕಲ್ಕಿ 2898 AD, ಲಕ್ಕಿ ಭಾಸ್ಕರ್‌, ಆಕಾಶಂ ಲೋ ಒಕ ತಾರಾ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.