ಕನ್ನಡ ಸುದ್ದಿ  /  Entertainment  /  Mollywood News He Used To Beat Me During Vanangaan Movie Shoot Mamitha Baiju On Director Bala Mnk

ಶೂಟಿಂಗ್‌ ಸೆಟ್‌ನಲ್ಲಿ ಎಲ್ಲರೆದುರೇ ಹಾಗಾ ಮಾಡೋದು? ನಿರ್ದೇಶಕ ಬಾಲಾ ವಿರುದ್ಧ ಮಾಲಿವುಡ್‌ ಬ್ಯೂಟಿಯ ಗಂಭೀರ ಆರೋಪ

ಮಾಲಿವುಡ್‌ ನಟಿ ಮಮಿತಾ ಬೈಜು, ಇದೀಗ ತಮಿಳಿನ ಖ್ಯಾತ ನಿರ್ದೇಶಕ ಬಾಲ ಅವರ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ಸಂದರ್ಶನದ ವೇಳೆ ವನಂಗಾನ್‌ ಚಿತ್ರದ ಚಿತ್ರೀಕರಣದ ವೇಳೆ ನಡೆದ ಘಟನೆಯನ್ನು ನೆನಪು ಮಾಡಿಕೊಂಡಿದ್ದಾರೆ. ಆ ಸಿನಿಮಾವನ್ನು ಅರ್ಧಕ್ಕೆ ಕೈಬಿಟ್ಟಿದ್ದಕ್ಕೆ ಕಾರಣವನ್ನೂ ತಿಳಿಸಿದ್ದಾರೆ ಮಮಿತಾ. ಹಾಗಾದರೆ, ಅಷ್ಟಕ್ಕೂ ಏನಾಗಿತ್ತು?

ಶೂಟಿಂಗ್‌ ಸೆಟ್‌ನಲ್ಲಿ ಎಲ್ಲರೆದುರೇ ಹಾಗಾ ಮಾಡೋದು? ನಿರ್ದೇಶಕ ಬಾಲಾ ವಿರುದ್ಧ ಮಾಲಿವುಡ್‌ ಬ್ಯೂಟಿಯ ಗಂಭೀರ ಆರೋಪ
ಶೂಟಿಂಗ್‌ ಸೆಟ್‌ನಲ್ಲಿ ಎಲ್ಲರೆದುರೇ ಹಾಗಾ ಮಾಡೋದು? ನಿರ್ದೇಶಕ ಬಾಲಾ ವಿರುದ್ಧ ಮಾಲಿವುಡ್‌ ಬ್ಯೂಟಿಯ ಗಂಭೀರ ಆರೋಪ

Mamitha Baiju on Director Bala: ಕಾಲಿವುಡ್‌ ಚಿತ್ರರಂಗದಲ್ಲಿ ನಿರ್ದೇಶಕ ಬಾಲ (Bala) ಅವರದ್ದು ದೊಡ್ಡ ಹೆಸರು. ತಮ್ಮ ನಿರ್ದೇಶನದ ಸಿನಿಮಾಗಳಿಂದಲೇ ಅವರದ್ದೇ ಆದ ನೋಡುಗ ವರ್ಗವನ್ನು ಸಂಪಾದಿಸಿಕೊಂಡಿದ್ದಾರೆ. ತಮ್ಮ ಕೆರಿಯರ್‌ನಲ್ಲಿ ಸಾಕಷ್ಟು ಹಿಟ್‌ ಸಿನಿಮಾ ನೀಡಿದ್ದಾರೆ. ರಾಷ್ಟ್ರ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದಾರೆ. ಇದೀಗ ಇದೇ ನಿರ್ದೇಶಕನ ಮೇಲೆ ಮಾಲಿವುಡ್‌ ನಟಿ ಗಂಭೀರ ಆರೋಪ ಮಾಡಿದ್ದಾರೆ. ಮಲಯಾಳಿ ಬ್ಯೂಟಿ ಮಮಿತಾ ಬೈಜು (Mamitha Baiju), ಯೂಟ್ಯೂಬ್‌ ಚಾನೆಲ್‌ವೊಂದರಲ್ಲಿ ಈ ನಿರ್ದೇಶಕರ ವರ್ತನೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ನಟಿಯ ಈ ಹೇಳಿಕೆ ಇದೀಗ ವೈರಲ್‌ ಆಗಿದೆ.

ಮೂಲತಃ ಮಾಲಿವುಡ್‌ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಟಿ ಮಮಿತಾ ಬೈಜು, ಇತ್ತೀಚೆಗಷ್ಟೇ ಪ್ರೇಮಲು ಚಿತ್ರದ ಗೆಲುವಿನ ಗುಂಗಿನಲ್ಲಿದ್ದಾರೆ. ಎಲ್ಲ ಕಡೆಯಿಂದ ಮೆಚ್ಚುಗೆ ಪಡೆದಿರುವ ಈ ಸಿನಿಮಾವನ್ನು ಪರ ಭಾಷೆಗಳಿಗೂ ಡಬ್‌ ಮಾಡಿ ಬಿಡುಗಡೆ ಮಾಡುವ ಕಾತರದಲ್ಲಿದೆ ಚಿತ್ರತಂಡ. ಚಿತ್ರದಲ್ಲಿ ನಾಯಕಿ ಮಮಿತಾ ಬೈಜು ಅವರ ನಟನೆಯೂ ಎಲ್ಲರಿಂದ ಪ್ರಶಂಸೆ ಗಿಟ್ಟಿಸಿಕೊಳ್ಳುತ್ತಿದೆ. ಹೀಗಿರುವಾಗಲೇ ಇತ್ತೀಚೆಗಷ್ಟೇ ಕಾಲಿವುಡ್‌ ನಿರ್ದೇಶಕ ಬಾಲಾ ಅವರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

"ವನಂಗಾನ್‌ ಸಿನಿಮಾ ಶೂಟಿಂಗ್‌ ಸೆಟ್‌ನಲ್ಲಿಯೇ ನನ್ನ ಮೇಲೆ ನಿರ್ದೇಶಕ ಬಾಲಾ ಕೈ ಮಾಡಿದ್ದಾರೆ. ಮನಬಂದಂತೆ ಬೈದಿದ್ದಾರೆ. ಗದರುವುದರ ಜತೆಗೆ ಹೊಡೆಯುವುದನ್ನೂ ಮಾಡುತ್ತಿದ್ದರು" ಎಂದು ಮಮಿತಾ ಆರೋಪಿಸಿದ್ದಾರೆ. ಇದೀಗ ನಟಿಯ ಈ ಹೇಳಿಕೆ ಸಿನಿವಲಯದಲ್ಲಿ ಸಂಚಲನ ಸೃಷ್ಟಿಸಿದೆ. ಅಷ್ಟಕ್ಕೂ ನಟಿಯ ಮೇಲೆ ನಿರ್ದೇಶಕ ಬಾಲಾ ಅವರು ಈ ರೀತಿ ಮಾಡಿದ್ದೇಕೆ? ಕಾರಣ ಏನಿರಬಹುದು? ಇಲ್ಲಿದೆ ಉತ್ತರ. ಓದಿ.

ವನಂಗಾನ್‌ ಚಿತ್ರೀಕರಣದ ವೇಳೆ ನಡೆದ ಘಟನೆ

ವನಂಗಾನ್‌ ಸಿನಿಮಾವನ್ನು ತಮಿಳು ನಟ ಸೂರ್ಯ ನಿರ್ಮಾಣ ಮಾಡುವುದರ ಜತೆಗೆ ನಾಯಕನಾಗಿಯೂ ನಟಿಸುತ್ತಿದ್ದರು. ಇದೇ ಚಿತ್ರಕ್ಕೆ ಮಮಿತಾ ಬೈಜು ಸಹ ಆಯ್ಕೆಯಾಗಿದ್ದರು. ಈ ಸಿನಿಮಾ ನಿರ್ದೇಶನದ ಸಂದರ್ಭದಲ್ಲಿ ನಿರ್ದೇಶಕ ಬಾಲಾ ನಟಿ ಮಮಿತಾ ಅವರ ಮೇಲೆ ರೇಗಾಡಿದ್ದಾರೆ. 2022ರಲ್ಲಿ ಶೂಟಿಂಗ್‌ ಸಂದರ್ಭದಲ್ಲಿ ಸೆಟ್‌ನಲ್ಲಿಯೇ ನಟಿಯ ಮೇಲೆ ಕೈ ಮಾಡಿದ್ದರು. ಇದರಿಂದ ಬೇಸರದಲ್ಲಿಯೇ ಸಿನಿಮಾದಿಂದಲೇ ಹಿಂದೆ ಸರಿದಿದ್ದರು ಮಮಿತಾ. ಅದಾದ ಬಳಿಕ ಕೆಲ ದಿನಗಳ ನಂತರ ಆ ಚಿತ್ರದಿಂದ ಸೂರ್ಯ ಸಹ ಹಿಂದೆ ಸರಿದರು. ಸೂರ್ಯ ಪಾತ್ರದಲ್ಲಿ ಅರುಣ್‌ ವಿಜಯ್‌ ನಟಿಸಿದರು.

ಸೆಟ್‌ನಲ್ಲಿ ನಿರ್ದೇಶಕರ ಕೆಟ್ಟ ವರ್ತನೆ

"ವನಂಗಾನ್ ಶೂಟಿಂಗ್‌ ಸಮಯದಲ್ಲಿ ನಾನು ಸಂಗೀತ ವಾದ್ಯವನ್ನು ನುಡಿಸುವ ದೃಶ್ಯವಿತ್ತು. ಆದರೆ, ನನಗೆ ಸಂಗೀತ ವಾದ್ಯಗಳ ನುಡಿಸುವಿಕೆಯ ಬಗ್ಗೆ ಗೊತ್ತಿರಲಿಲ್ಲ. ಅದಾದ ಬಳಿಕ ನಾನು ಅನುಭವಿ ವಾದ್ಯನುಡಿಸುವವಳಂತೆ ನಟಿಸಬೇಕೇ? ಅಥವಾ ಮೊದಲ ಬಾರಿಗೆ ಕಲಿಯುತ್ತಿರುವ ಹುಡುಗಿಯಂತೆ ನಟಿಸುವುದೇ? ಎಂದು ನಾನು ನಿರ್ದೇಶಕರನ್ನು ಕೇಳಿದೆ. ಅದಕ್ಕೆ ಅವರು ಅನುಭವಿ ಕಲಾವಿದರಾಗಿ ನೀವು ನಟಿಸಬೇಕು ಎಂದರು. ಅದಕ್ಕೆಂದೇ ಓರ್ವ ಅನುಭವಸ್ಥ ವಾದ್ಯಗಾರರನ್ನು ಕರೆಸಿ ನೋಡುವಂತೆ ಹೇಳಿದರು. ಅದು ಮುಗಿಯುತ್ತಿದ್ದಂತೆ, ತತ್‌ಕ್ಷಣ ಟೇಕ್‌ಗೆ ಬನ್ನಿ ಎಂದರು. ಆಗ ನನಗೆ ಕೊಂಚ ಗಲಿಬಿಲಿಯಾಯ್ತು. ನನಗಿನ್ನು ಆ ವಾದ್ಯವನ್ನು ನುಡಿಸಲು ಬರುತ್ತಿರಲಿಲ್ಲ" ಎಂದಿದ್ದಾರೆ.

ಎಲ್ಲರ ಮುಂದೆಯೇ ಹೊಡೆದರು..

"ರೀ ಟೇಕ್‌ ಜಾಸ್ತಿಯಾಗುತ್ತಿದ್ದಂತೆ, ಅವರು ಬೈಯುತ್ತಲೇ ಇದ್ದರು. ಬಾಲಾ ಅವರು ಶೂಟಿಂಗ್‌ ಸೆಟ್‌ನಲ್ಲಿ ಕೊಂಚ ಗರಂ ಆಗಿರುತ್ತಾರೆ ಎಂಬುದು ನನಗೆ ಗೊತ್ತಿತ್ತು. ಸೆಟ್‌ನಲ್ಲಿರುವ ಇತರರೂ ನಿರ್ದೇಶಕರ ಬಗ್ಗೆ ನನ್ನ ಗಮನಕ್ಕೆ ತಂದಿದ್ದರು. ಬಾಲಾ ಹೇಗೆ ಅಂತ ನಿರ್ದೇಶಕ ಸೂರ್ಯ ಅವರಿಗೂ ಗೊತ್ತಿತ್ತು. ಹಾಗಾಗಿ ನಾನು ಹೆಚ್ಚು ತಲೆ ಕೆಡಿಸಿಕೊಂಡಿರಲಿಲ್ಲ. ಹೀಗಿರುವಾಗಲೇ ಎಲ್ಲರ ಮುಂದೆಯೇ ನನಗೆ ಹೊಡೆದರು. ಹಾಗಾಗಿ ಅನಿವಾರ್ಯವಾಗಿ ನಾನು ಆ ಸಿನಿಮಾದಿಂದ ಹೊರಬರಬೇಕಾಯಿತು" ಎಂದಿದ್ದಾರೆ ಮಮಿತಾ.

IPL_Entry_Point