Drishyam Remake: ಹಾಲಿವುಡ್‌ಗೂ ರಿಮೇಕ್‌ ಆಗಲಿದೆ ಮಲಯಾಳಂನ ಬ್ಲಾಕ್‌ ಬಸ್ಟರ್‌ ಸಿನಿಮಾ ದೃಶ್ಯಂ; ಹೀರೋ ಯಾರು?
ಕನ್ನಡ ಸುದ್ದಿ  /  ಮನರಂಜನೆ  /  Drishyam Remake: ಹಾಲಿವುಡ್‌ಗೂ ರಿಮೇಕ್‌ ಆಗಲಿದೆ ಮಲಯಾಳಂನ ಬ್ಲಾಕ್‌ ಬಸ್ಟರ್‌ ಸಿನಿಮಾ ದೃಶ್ಯಂ; ಹೀರೋ ಯಾರು?

Drishyam Remake: ಹಾಲಿವುಡ್‌ಗೂ ರಿಮೇಕ್‌ ಆಗಲಿದೆ ಮಲಯಾಳಂನ ಬ್ಲಾಕ್‌ ಬಸ್ಟರ್‌ ಸಿನಿಮಾ ದೃಶ್ಯಂ; ಹೀರೋ ಯಾರು?

ಮೂಲ ಮಲಯಾಳಂನಲ್ಲಿ ಬಿಡುಗಡೆಯಾಗಿ ಅಲ್ಲಿಂದ ಸೌತ್‌ನ ಇನ್ನುಳಿದ ಭಾಷೆಗಳಿಗೆ ರಿಮೇಕ್‌ ಆಗಿ, ಕೆಲ ವಿದೇಶಿ ಭಾಷೆಯಲ್ಲೂ ಮೋಡಿ ಮಾಡಿತ್ತು ಮೋಹನ್‌ಲಾಲ್‌ ನಟನೆಯ ದೃಶ್ಯಂ ಸಿನಿಮಾ. ಇದೀಗ ಇದೇ ಸಿನಿಮಾ ಹಾಲಿವುಡ್‌ ಅಂಗಳದಲ್ಲೂ ರಿಮೇಕ್‌ ಆಗಲಿದೆ. ಅಂದಹಾಗೆ 2013ರಲ್ಲಿ ಈ ಸಿನಿಮಾ ತೆರೆಕಂಡಿತ್ತು.

Drishyam Hollywood Remake: ಹಾಲಿವುಡ್‌ಗೂ ರಿಮೇಕ್‌ ಆಗಲಿದೆ ಮಲಯಾಳಂನ ಬ್ಲಾಕ್‌ ಬಸ್ಟರ್‌ ಸಿನಿಮಾ ದೃಶ್ಯಂ
Drishyam Hollywood Remake: ಹಾಲಿವುಡ್‌ಗೂ ರಿಮೇಕ್‌ ಆಗಲಿದೆ ಮಲಯಾಳಂನ ಬ್ಲಾಕ್‌ ಬಸ್ಟರ್‌ ಸಿನಿಮಾ ದೃಶ್ಯಂ

Drishyam Hollywood Remake: 2013ರಲ್ಲಿ ಮಲಯಾಳಂನಲ್ಲಿ ತೆರೆಗೆ ಬಂದು ಹಿಟ್‌ ಪಟ್ಟಿಗೆ ಸೇರಿದ್ದ ದೃಶ್ಯಂ ಸಿನಿಮಾ, ಇತರ ಭಾರತೀಯ ಭಾಷೆಗಳಿಗೂ ರಿಮೇಕ್‌ ಆಗಿ ಯಶಸ್ಸು ಪಡೆದಿತ್ತು. ಅಷ್ಟೇ ಅಲ್ಲ ವಿದೇಶಿ ಭಾಷೆಗೂ ರಿಮೇಕ್‌ ಆಗಿತ್ತು. ಇದೀಗ ಹಾಲಿವುಡ್‌ಗೂ ಹೊರಟು ನಿಂತಿದೆ ಇದೇ ಸಿನಿಮಾ. ಈ ವಿಚಾರವನ್ನು ನಿರ್ಮಾಣ ಸಂಸ್ಥೆ ಪನೋರಮಾ ಸ್ಟುಡಿಯೋಸ್ ಗುರುವಾರ ಅಧಿಕೃತಪಡಿಸಿದೆ. ಗಲ್ಫ್‌ಸ್ಟ್ರೀಮ್‌ ಪಿಕ್ಚರ್ಸ್‌ ಮತ್ತು ಜೋಟ್‌ ಫಿಲಂಸ್‌ ಸಂಸ್ಥೆಗಳು ಜಂಟಿಯಾಗಿ ಇಂಗ್ಲಿಷ್‌ನಲ್ಲಿ ಈ ಚಿತ್ರವನ್ನು ರಿಮೇಕ್‌ ಮಾಡುವುದಾಗಿ ಹೇಳಿಕೊಂಡಿವೆ.

ದೃಶ್ಯ ಸಿನಿಮಾ ಮೂಲ ಮಲಯಾಳಂನಲ್ಲಿ ತೆರೆಕಂಡಿತ್ತು. ಅಲ್ಲಿನ ಸಕ್ಸಸ್‌ ಬಳಿಕ, ನಂತರ ತೆಲುಗಿನಲ್ಲಿ ವೆಂಕಟೇಶ್ ದಗ್ಗುಬಾಟಿ, ಕನ್ನಡದಲ್ಲಿ ರವಿಚಂದ್ರನ್‌, ತಮಿಳಿನಲ್ಲಿ ಕಮಲ್‌ ಹಾಸನ್‌, ಹಿಂದಿಯಲ್ಲಿ ಅಜಯ್ ದೇವಗನ್ ಸಹ ಈ ಚಿತ್ರದ ರಿಮೇಕ್‌ನಲ್ಲಿ ನಟಿಸಿದ್ದರು. ಕನ್ನಡದ ಜತೆಗೆ ತೆಲುಗಿನಲ್ಲೂ ಸಿನಿಮಾ ದೊಡ್ಡ ಮಟ್ಟದ ಯಶಸ್ಸು ಗಳಿಸಿತು. ಬಾಲಿವುಡ್‌ನಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಸಿನಿಮಾ ಆಗಿ ಹೊರಹೊಮ್ಮಿತು. ಈಗ ಇದೇ ಸಿನಿಮಾ ಹಾಲಿವುಡ್‌ಗೆ ಹೊರಟು ನಿಂತಿದೆ. ಪನೋರಮಾ ಸ್ಟುಡಿಯೋಸ್ ಈ ಚಿತ್ರವನ್ನು ಮಲಯಾಳಂನಲ್ಲಿ ನಿರ್ಮಿಸಿದ ಆಶೀರ್ವಾದ್ ಸಿನಿಮಾಸ್‌ನಿಂದ ಅಂತರಾಷ್ಟ್ರೀಯ ರಿಮೇಕ್ ಹಕ್ಕುಗಳನ್ನು ಪಡೆದುಕೊಂಡಿದೆ.

ಅಂತಾರಾಷ್ಟ್ರೀಯ ಪ್ರೇಕ್ಷಕರೊಂದಿಗೆ ದೃಶ್ಯ ಕಥೆಯನ್ನು ಹಂಚಿಕೊಳ್ಳಲು ಸಂತೋಷವಾಗುತ್ತಿದೆ. ಸದ್ಯ, ಕೊರಿಯಾ ಮತ್ತು ಹಾಲಿವುಡ್‌ನಲ್ಲಿ ಶೂಟಿಂಗ್‌ ಮುಗಿದ ಬಳಿಕ, ಮುಂದಿನ ಐದು ವರ್ಷಗಳಲ್ಲಿ ಇತರ ಹತ್ತು ದೇಶಗಳಲ್ಲಿ ಚಿತ್ರವನ್ನು ಅಲ್ಲಿನ ಬೇರೆ ಬೇರೆ ಭಾಷೆಗಳಿಗೆ ರಿಮೇಕ್ ಮಾಡಲು ಅವರು ಬಯಸಿದ್ದಾರೆ ಎಂದು ತಿಳಿದುಬಂದಿದೆ. ಅನಿರೀಕ್ಷಿತ ಸನ್ನಿವೇಶದಲ್ಲಿ ಕೊಲೆಯಲ್ಲಿ ಸಿಕ್ಕಿಬಿದ್ದ ತನ್ನ ಕುಟುಂಬವನ್ನು ಕಾನೂನಿನಿಂದ ರಕ್ಷಿಸಲು ಚಿತ್ರದ ನಾಯಕ ಏನು ಮಾಡಿದನು ಎಂಬುದೇ ಈ ಸನ್ನಿವೇಶದ ಕಥೆ" ಎಂದರು ಪನೋರಮಾ ಸ್ಟುಡಿಯೊದ ಸಿಎಂಡಿ ಕುಮಾರ್ ಮಂಗತ್ ಪಾಠಕ್.

ಪ್ರೇಕ್ಷಕನಿಗೆ ಇಷ್ಟವಾಗಿತ್ತು ರೋಚಕ ತಿರುವುಗಳ ಕಥೆ

2013 ರಲ್ಲಿ ಮಲಯಾಳಂನಲ್ಲಿ ಬಿಡುಗಡೆಯಾದ ದೃಶ್ಯ ಚಿತ್ರವನ್ನು ಜೀತು ಜೋಸೆಫ್ ನಿರ್ದೇಶನದ ಮಾಡಿದ್ದಾರೆ. ಈ ಚಿತ್ರದಲ್ಲಿ ಮೋಹನ್ ಲಾಲ್ ಜಾರ್ಜ್ ಕುಟ್ಟಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಕ್ರೈಮ್ ಥ್ರಿಲ್ಲರ್ ಸ್ಯಾಂಡಲ್‌ವುಡ್‌ ಪ್ರೇಕ್ಷಕರಿಂದಲೂ ಮೆಚ್ಚುಗೆ ಪಡೆದಿತ್ತು. ಚಿತ್ರವು ತೆಲುಗು, ಹಿಂದಿ, ಸಿಂಹಳ ಮತ್ತು ಮ್ಯಾಂಡರಿನ್ ಭಾಷೆಗಳಲ್ಲಿ ರೀಮೇಕ್ ಆಗಿತ್ತು. ಪೊಲೀಸ್ ಅಧಿಕಾರಿಯಿಂದ ತನ್ನ ಕುಟುಂಬವನ್ನು ರಕ್ಷಿಸಲು ನಾಯಕನ ನಡೆಗಳು, ತಿರುವುಗಳು ಮತ್ತು ಕೋರ್ಟ್‌ ರೂಮ್‌ ಡ್ರಾಮಾ ಪ್ರೇಕ್ಷಕರನ್ನು ಆಕರ್ಷಿಸಿದ್ದವು.

ಹಿಂದಿಯಲ್ಲಿ 313 ಕೋಟಿ ಬಾಚಿದ ದೃಶ್ಯಂ

ದೃಶ್ಯ ಚಿತ್ರದ ಮೂರನೇ ಭಾಗವೂ ಬರಲಿದೆ ಎಂದು ಮೇಕರ್ಸ್‌ ಈ ಹಿಂದೆ ಬಹಿರಂಗಪಡಿಸಿದರು. ಆ ಬಗ್ಗೆ ಇನ್ನಷ್ಟೇ ಅಧಿಕೃತ ಮಾಹಿತಿ ಹೊರಬೀಳಬೇಕಿದೆ. ಇತ್ತ ಮಲಯಾಳಂ, ತೆಲುಗು, ಕನ್ನಡಕ್ಕಿಂತ ಹಿಂದಿಯಲ್ಲಿ ಈ ಸಿನಿಮಾ ಮೆಗಾ ಹಿಟ್ ಆಯಿತು. ಅದರಲ್ಲೂ ದೃಶ್ಯ 2 ಚಿತ್ರ ಮೂಲ ಮಲಯಾಳಂನಲ್ಲಿ ಕೇವಲ 25 ಕೋಟಿ ಗಳಿಕೆ ಕಂಡರೆ, ಹಿಂದಿಯಲ್ಲಿ 313 ಕೋಟಿ ಗಳಿಸಿ ದಾಖಲೆ ಬರೆದಿತ್ತು. ಆ ಚಿತ್ರದಲ್ಲಿ ಅಜಯ್ ದೇವಗನ್ ಮತ್ತು ಶ್ರಿಯಾ ಸರಣ್ ನಟಿಸಿದ್ದರು. ಈಗ ಹಾಲಿವುಡ್‌ನಲ್ಲಿ ಈ ಫ್ರಾಂಚೈಸಿ ಹೇಗೆ ಕಮಾಲ್‌ ಮಾಡುತ್ತೆ ಎಂಬುದನ್ನು ಕಾದು ನೋಡಬೇಕಿದೆ.

You are reading this copy on "Hindustan Times Kannada". For latest updates on entertainment, OTT, Web series, Kannada film industry, Kannada serials, Reality shows visit kannada.hindustantimes.com/entertainment

Whats_app_banner