Mohanlal hospitalized: ಖ್ಯಾತ ಮಲಯಾಳಿ ನಟ ಮೋಹನ್ ಲಾಲ್ ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ದಾಖಲು
ಮಾಲಿವುಡ್ ನಟ ಮೋಹನ್‌ಲಾಲ್ ತೀವ್ರತರವಾದ ಜ್ವರ ಮತ್ತು ಉಸಿರಾಟದ ಸಮಸ್ಯೆಯಿಂದಾಗಿ ಕೇರಳದ ಕೊಚ್ಚಿಯ ಖಾಸಗಿ ಆಸ್ಪತ್ರೆಗೆ ಭಾನುವಾರ ದಾಖಲಾಗಿದ್ದಾರೆ.
Mohanlal hospitalised: ಮಲಯಾಳಂನ ಸ್ಟಾರ್ ನಟ ಮೋಹನ್‌ಲಾಲ್ ತೀವ್ರತರವಾದ ಜ್ವರ, ಉಸಿರಾಟದ ಸಮಸ್ಯೆಯಿಂದಾಗಿ ಕೇರಳದ ಕೊಚ್ಚಿಯ ಖಾಸಗಿ ಆಸ್ಪತ್ರೆಗೆ ಭಾನುವಾರ ದಾಖಲಾಗಿದ್ದಾರೆ. ಉಸಿರಾಟದ ಸೋಂಕಿನಿಂದ ಈ ರೀತಿ ಆಗಿದೆ ಎಂದು ವೈದ್ಯರು ತಿಳಿಸಿದ್ದು, ಚಿಕಿತ್ಸೆ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಸಹ ಮಾಡಲಾಗಿದೆ.
ಜ್ವರ ಮತ್ತು ಉಸಿರಾಟದ ತೊಂದರೆಯಿಂದ ನಟ ಮೋಹನ್ ಲಾಲ್ ಕೊಚ್ಚಿಯ ಅಮೃತಾ ಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಗಾದರು. ಮೋಹನ್‌ಲಾಲ್ ಹೀಗೆ ಆಸ್ಪತ್ರೆ ಸೇರುತ್ತಿದ್ದಂತೆ, ಅವರ ಅಪಾರ ಅಭಿಮಾನಿಗಳು ಕೆಲ ಕಾಲ ಆತಂಕಕ್ಕೆ ಒಳಗಾದರು. ಬಳಿಕ ಆಸ್ಪತ್ರೆಯಿಂದ ಅಧಿಕೃ ಹೆಲ್ತ್ ಬುಲಿಟಿನ್ ಬಿಡುಗಡೆ ಮಾಡಿ, ಆರೋಗ್ಯದ ಬಗ್ಗೆ ಮಾಹಿತಿ ನೀಡಿದೆ.
ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ
ಮೋಹನ್ ಲಾಲ್ ಅವರಿಗೆ ಉಸಿರಾಟದ ಸೋಂಕು ಇರುವುದು ತಿಳಿದುಬಂದಿದೆ. ಹಾಗಾಗಿ ಅದಕ್ಕೆ ಸಂಬಂಧಿಸಿದ ಔಷದೋಪಚಾರವನ್ನು ನೀಡಲಾಗಿದೆ. ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ. ಮುಂದಿನ ಒಂದು ವಾರ ಅವರಿಗೆ ವಿಶ್ರಾಂತಿಯಲ್ಲಿರುವಂತೆ ಸೂಚಿಸಲಾಗಿದೆ. ಜತೆಗೆ ಜನಸಂದಣಿ ಇರುವ ಸ್ಥಳಗಳಿಗೆ ಭೇಟಿ ನೀಡುವುದನ್ನು ತಪ್ಪಿಸುವಂತೆಯೂ ಬುಲಿಟಿನ್‌ನಲ್ಲಿ ವೈದ್ಯರು ತಿಳಿಸಿದ್ದಾರೆ.
'ಎಲ್ 2: ಎಂಪುರಾನ್' ಮತ್ತು 'ಬರೋಜ್' ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸವನ್ನು ಮುಗಿಸಿದ್ದಾರೆ. ಜತೆಗೆ ಇತ್ತೀಚೆಗಷ್ಟೇ ಗುಜರಾತ್‌ನಿಂದ ಕೊಚ್ಚಿಗೆ ಮರಳಿದ್ದಾರೆ. ಆ ಪ್ರಯಾಣದ ಅವಧಿಯಲ್ಲಿ ಮೋಹನ್‌ಲಾಲ್ ಆರೋಗ್ಯ ಸ್ಥಿತಿ ಹದಗೆಟ್ಟಿತ್ತು.
ಅಕ್ಟೋಬರ್ 2ರಂದು ಬರೋಜ್ ಸಿನಿಮಾ ರಿಲೀಸ್
ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ಅಕ್ಟೋಬರ್ 2 ರಂದು ಮೋಹನ್‌ಲಾಲ್ ನಟಿಸಿರುವ 'ಬರೋಜ್' ಚಿತ್ರ ಬಿಡುಗಡೆಯಾಗಲಿದೆ. ಇದು ಮೋಹನ್‌ಲಾಲ್ ನಿರ್ದೇಶನದ ಚೊಚ್ಚಲ ಸಿನಿಮಾ ಸಹ ಆಗಿರುವುದರಿಂದ ಅಷ್ಟೇ ನಿರೀಕ್ಷೆ ಹುಟ್ಟುಹಾಕಿದೆ. ಎಲ್ಲ ಅಂದುಕೊಂಡಂತೆ ಆಗಿದ್ದರೆ, ಇದೇ ಮಾರ್ಚ್ 28ರಂದು ಈ ಸಿನಿಮಾ ಬಿಡುಗಡೆ ಆಗಬೇಕಿತ್ತು. ಪೋಸ್ಟ್ ಪ್ರೊಡಕ್ಷನ್ ವಿಳಂಬದ ಹಿನ್ನೆಲೆಯಲ್ಲಿ ಬಿಡುಗಡೆ ಮುಂದೂಡಲ್ಪಟ್ಟಿತ್ತು.