ಕನ್ನಡ ಸುದ್ದಿ  /  ಮನರಂಜನೆ  /  Manjummel Boys: ಮಂಜುಮ್ಮೆಲ್ ಬಾಯ್ಸ್‌ನ ಈ 2 ಸೀನ್‌ಗಳ ಕುರಿತು ನಡೆಯುತ್ತಿದೆ ಬಿಸಿಬಿಸಿ ಚರ್ಚೆ, ಅದ್ಭುತ ಅಂದ್ರು ಒಟಿಟಿ ಪ್ರೇಕ್ಷಕರು

Manjummel Boys: ಮಂಜುಮ್ಮೆಲ್ ಬಾಯ್ಸ್‌ನ ಈ 2 ಸೀನ್‌ಗಳ ಕುರಿತು ನಡೆಯುತ್ತಿದೆ ಬಿಸಿಬಿಸಿ ಚರ್ಚೆ, ಅದ್ಭುತ ಅಂದ್ರು ಒಟಿಟಿ ಪ್ರೇಕ್ಷಕರು

Manjummel Boys OTT: ಮಂಜುಮ್ಮೆಲ್ ಬಾಯ್ಸ್‌ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಮೆಚ್ಚುಗೆಗೆ ಪಾತ್ರವಾಗಿದೆ. ಈ ಸಿನಿಮಾದ ಎರಡು ಸೀನ್‌ಗಳು ಕುರಿತು ಒಟಿಟಿ ಪ್ರೇಕ್ಷಕರು ಬಿಸಿಬಿಸಿಯಾಗಿ ಚರ್ಚೆ ಮಾಡುತ್ತಿದ್ದಾರೆ. ಬನ್ನಿ ಆ ಎರಡು ಸೀನ್‌ಗಳು ಯಾವುವು ಎಂದು ತಿಳಿಯೋಣ.

Manjummel Boys: ಮಂಜುಮ್ಮೆಲ್‌ ಬಾಯ್ಸ್‌ನ ಈ 2 ಸೀನ್‌ ಕುರಿತು ನಡೆಯುತ್ತಿದೆ ಬಿಸಿಬಿಸಿ ಚರ್ಚೆ
Manjummel Boys: ಮಂಜುಮ್ಮೆಲ್‌ ಬಾಯ್ಸ್‌ನ ಈ 2 ಸೀನ್‌ ಕುರಿತು ನಡೆಯುತ್ತಿದೆ ಬಿಸಿಬಿಸಿ ಚರ್ಚೆ

Manjummel Boys: ಸ್ಟಾರ್‌ ನಟರ ಕೊರತೆಯ ನಡುವೆಯೂ ಅದ್ಭುತ ನಿರೂಪಣೆಯ ಸರ್ವೈವಲ್‌ ಸಿನಿಮಾವಾಗಿ ಮಂಜುಮ್ಮೆಲ್ ಬಾಯ್ಸ್‌ ಸಿನಿಮಾ ಸದ್ದು ಮಾಡುತ್ತಿದೆ. ಈ ಸಿನಿಮಾವೀಗ ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ನಲ್ಲಿ ರಿಲೀಸ್‌ ಆಗಿದೆ. ಈ ಸಿನಿಮಾದ ಕುರಿತು ಸೋಷಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ಮುಖ್ಯವಾಗಿ ಎರಡು ಸೀನ್‌ಗಳನ್ನು ನೆಟ್ಟಿಗರು ಮುಕ್ತಕಂಠದಿಂದ ಹೊಗಳುತ್ತಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಮಂಜುಮ್ಮೆಲ್ ಬಾಯ್ಸ್‌ನ ಈ 2 ಸೀನ್‌ಗಳ ಕುರಿತು ಚರ್ಚೆ

ಕಂದಕದೊಳಗೆ ಬಿದ್ದ ಸ್ನೇಹಿತನನ್ನು ರಕ್ಷಿಸಲು ರಕ್ಷಣೆ ಕಾರ್ಯಚರಣೆಯವರು ಇಳಿಯಲು ಹಿಂಜರಿಯುತ್ತಾರೆ. ಈ ಸ್ನೇಹಿತರ ಗುಂಪಿನಲ್ಲಿದ್ದ ಒಬ್ಬ ಸ್ವತಃ ಹಗ್ಗ ಕಟ್ಟಿಕೊಂಡು ಇಳಿಯುತ್ತಾನೆ. ಆಳದಲ್ಲಿ ಬಿದ್ದ ಸ್ನೇಹಿತನಿಗೆ ಹಗ್ಗ ಕಟ್ಟಿ ಆತನನ್ನು ಮೇಲಕ್ಕೆ ಕರೆದುಕೊಂಡು ಬರುವ ಸೀನ್‌ ಅದ್ಭುತ ಸಿನಿಮ್ಯಾಟಿಕ್‌ ಅನುಭವ ನೀಡುತ್ತದೆ. ಈ ದೃಶ್ಯದ ಕುರಿತು ನೆಟ್ಟಿಗರು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಇದು ಭಾರತ ಚಿತ್ರರಂಗದ ಸಿನಿಮಾಗಳಲ್ಲಿ ಅದ್ಭುತ ದೃಶ್ಯಗಳಲ್ಲಿ ಒಂದು ಎನ್ನಲಾಗುತ್ತಿದೆ. ಕೊನೆಗೆ ಆತ ಮೇಲಕ್ಕೆ ಬಂದಾಗ ಕಮಲ್‌ ಹಾಸನ್‌ ಸಿನಿಮಾದ ಹಾಡನ್ನು ಬಳಸಿರುವುದಕ್ಕೂ ಮೆಚ್ಚುಗೆಯ ಮಾತುಗಳು ಕೇಳಿಬರುತ್ತವೆ. ಆದರೆ, ಕೆಲವರ ಪ್ರಕಾರ ಈ ಕಣ್ಮಣಿ ಹಾಡು ಬೇಕಿರಲಿಲ್ಲ. ಈ ಸಿನಿಮಾದ ರಿಯಲಿಸ್ಟಿಕ್‌ ಫೀಲಿಂಗ್‌ಗೆ ಆ ಹಾಡು ಅಡ್ಡಿಯಾಗುತ್ತದೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಪ್ರೇಕ್ಷಕರಿಗೆ ಇಷ್ಟವಾದ ಇನ್ನೊಂದು ದೃಶ್ಯ "ಶ್ರೀನಾಥ್‌ ಭಾಸಿಯ ಬಾಲ್ಯದ ಚಿತ್ರಣ". ಇವೆರಡು ಸೀನ್‌ಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಒಟಿಟಿ ಪ್ರೇಕ್ಷಕರು ಹೊಗಳುತ್ತಿದ್ದಾರೆ.

ಮಂಜುಮ್ಮೆಲ್‌ ಬಾಯ್ಸ್‌ ಒಟಿಟಿಯಲ್ಲಿ ಬಿಡುಗಡೆ

ಮಲಯಾಳಂನ ಮಂಜುಮ್ಮೆಲ್ ಬಾಯ್ಸ್ ಸಿನಿಮಾವು ನಿನ್ನೆ (ಮೇ 5) ಡಿಸ್ನಿ + ಹಾಟ್‌ಸ್ಟಾರ್‌ ಒಟಿಟಿ ವೇದಿಕೆಯಲ್ಲಿ ರಿಲೀಸ್‌ ಆಗಿದೆ. ಮಲಯಾಳಂ ಜೊತೆಗೆ ತೆಲುಗು, ತಮಿಳು, ಕನ್ನಡ ಮತ್ತು ಹಿಂದಿಯಲ್ಲಿ ಪ್ರಸಾರ ಕಾಣುತ್ತಿದೆ. ಮಂಜುಮ್ಮೆಲ್ ಬಾಯ್ಸ್ ಫೆಬ್ರವರಿ 22ರಂದು ಮಲಯಾಳಂನಲ್ಲಿ ಬಿಡುಗಡೆಯಾಗಿತ್ತು. ಕಲೆಕ್ಷನ್ ವಿಚಾರದಲ್ಲಿ ಸುನಾಮಿಯನ್ನೇ ಸೃಷ್ಟಿಸಿ ಬರೋಬ್ಬರಿ 200 ಕೋಟಿ ರೂ.ಗಳನ್ನು ಗಳಿಸಿದ ಮೊದಲ ಮಲಯಾಳಂ ಸಿನಿಮಾ ಆಗಿ ಹೊರಹೊಮ್ಮಿತು. ಮಲಯಾಳಂನಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ 73 ದಿನಗಳ ನಂತರ ಈ ಚಿತ್ರವು ಇಂದು ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಒಟಿಟಿಯಲ್ಲಿ ರಿಲೀಸ್‌ ಆಗಿದೆ.

ಮಂಜುಮ್ಮೆಲ್‌ ಬಾಯ್ಸ್‌ ಸಿನಿಮಾ ವಿಮರ್ಶೆ

ಕೇರಳದ ಮಂಜುಮ್ಮೆಲ್‌ ಎಂಬ ಊರಿನಲ್ಲಿ 11 ಯುವಕರ ತಂಡ ಇರುತ್ತದೆ. ಎಲ್ಲರದ್ದೂ ಒಂದೊಂದು ಕಡೆ ಕೆಲಸ. ಸಂಜೆ ಸಮಯ ಸಿಕ್ಕರೆ ಹರಟೆ, ಮಾತುಕತೆ ನಡೆಸುವ ಫ್ರೆಂಡ್ಸ್‌ ಇವರು.. ಹೀಗಿರುವಾಗ ಒಂದು ದಿನ ಎಲ್ಲಾದರೂ ಟ್ರಿಪ್‌ ಹೋಗಬೇಕೆಂಬ ಯೋಜನೆ ಮಾಡುತ್ತಾರೆ.. ಆ ಊರು ಈ ಊರು ಎಂದೆಲ್ಲ ಚರ್ಚೆಯಾಗಿ ಕೊನೆಗೆ ಕೊಡೈಕೆನಾಲ್‌ ಹೋಗಲು ಪ್ಲ್ಯಾನ್‌ ಮಾಡುತ್ತಾರೆ. ಕ್ವಾಲಿಸ್‌ ಏರಿ ಹೊರಟೇ ಬಿಡ್ತಾರೆ. ಕಡಿದಾದ ದಾರಿಯಲ್ಲಿ ಬೆಟ್ಟ ಗುಡ್ಡ ನೋಡುತ್ತ ಗುಣ ಗುಹೆಯತ್ತಲೂ ಹೆಜ್ಜೆ ಹಾಕ್ತಾರೆ. ಬಿಗಿ ಭದ್ರತೆ, ನಿಷೇಧದ ನಡುವೆಯೂ ಅಲ್ಲಿನ ಭದ್ರತಾ ಸಿಬ್ಬಂದಿಯ ಕಣ್ಣು ತಪ್ಪಿಸಿ ನಿಷೇಧಿತ ಪ್ರದೇಶಕ್ಕೆ ಇವರು ಎಂಟ್ರಿ ನೀಡುತ್ತಾರೆ. ಮೋಜು, ಮಸ್ತಿ ಮಾಡುತ್ತ ತರಲೆ ಮಾತುಗಳನ್ನಾಡುತ್ತ ಸಾಗುವಾಗಲೇ, ಒಂದು ಕ್ಷಣ ಆ 11 ಮಂದಿಯಲ್ಲೊಬ್ಬ ಅಲ್ಲೇ ಇದ್ದ ಕಿರಿದಾದ ಕಲ್ಲಿನ ಕಂದಕದೊಳಕ್ಕೆ ಬೀಳುತ್ತಾನೆ. ಮಂಜುಮ್ಮೆಲ್‌ ಬಾಯ್ಸ್‌ ಸಿನಿಮಾದ ಸಂಪೂರ್ಣ ವಿಮರ್ಶೆ ಓದಲು ಇಲ್ಲಿ ಕ್ಲಿಕ್‌ ಮಾಡಿ.

IPL_Entry_Point