Manjummel Boys OTT: ಮಲಯಾಳಂನ ಮಂಜುಮ್ಮೇಲ್ ಬಾಯ್ಸ್ ಒಟಿಟಿಗೆ; ಸೂಪರ್‌ಹಿಟ್ ಸರ್ವೈವಲ್ ಸಿನಿಮಾವನ್ನು ಮನೆಯಲ್ಲೇ ನೋಡಿ
Manjummel boys ott release date: ಕೇರಳದ ಯುವಕರ ಗುಂಪು ಪ್ರವಾಸ ಹೋದ ಸಮಯದಲ್ಲಿ ನಡೆದ ಸತ್ಯ ಘಟನೆ ಆಧರಿತ ಬದುಕಿ ಉಳಿಯಲು ಪ್ರಯತ್ನಿಸುವ ಸಾಹಸಮಯ ಸಿನಿಮಾ "ಮಂಜುಮ್ಮೇಲ್ ಬಾಯ್ಸ್" ಇದೀಗ ಒಟಿಟಿಯಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ. ಏಪ್ರಿಲ್ 5ರಿಂದ ಮಂಜುಮ್ಮೇಲ್ ಬಾಯ್ಸ್ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗಲಿದೆ.

ಬೆಂಗಳೂರು: ಮಂಜುಮ್ಮೇಲ್ ಬಾಯ್ಸ್ ಎಂಬ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಗಳಿಕೆ ಮಾಡಿದ ಸಂಗತಿ ನಿಮಗೆಲ್ಲರಿಗೂ ಗೊತ್ತಿರಬಹುದು. ಬೆಂಗಳೂರು ಸೇರಿದಂತೆ ಜಗತ್ತಿನಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 200 ಕೋಟಿಗೂ ಹೆಚ್ಚು ಗಳಿಕೆ ಮಾಡಿದೆ. ಕೇರಳದ ಯುವಕರ ತಂಡವೊಂದು ತಮಿಳುನಾಡಿಗೆ ಪ್ರವಾಸ ಹೋಗಿ ಅಲ್ಲಿ ಅವರಳೊಬ್ಬ ಕಡಿದಾದ ಆಳವಾದ ಕಂದಕದೊಳಗೆ ಬೀಳುವ ಕಥೆಯನ್ನು ಈ ಸಿನಿಮಾ ಹೊಂದಿದೆ. ಆ ಕಂದಕಕ್ಕೆ ಬಿದ್ದವರು ಬದುಕಿ ವಾಪಸ್ ಬಂದ ಇತಿಹಾಸವೇ ಇರುವುದಿಲ್ಲ. ಆದರೆ, ಆತನ ಜತೆಗಿದ್ದ ಸ್ನೇಹಿತರೂ ಆತನನ್ನು ಬದುಕಿಸಲೇಬೇಕೆಂದು ಹಠಕ್ಕೆ ಬೀಳುತ್ತಾರೆ. ಸತ್ಯ ಘಟನೆ ಆಧರಿತ ಸಿನಿಮಾವು ಈಗಾಗಲೇ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್ ಪಡೆದಿದೆ. ಇದೇ ಸಿನಿಮಾವನ್ನು ಥಿಯೇಟರ್‌ಗಳಲ್ಲಿ ನೋಡಲು ಸಾಧ್ಯವಾಗದೆ ಪರಿತಪಿಸುವವರಿಗೆ ಶುಭ ಸುದ್ದಿಯಿದೆ. ಹೌದು, ಸದ್ಯದಲ್ಲಿಯೇ ಮಂಜುಮ್ಮೇಲ್ ಬಾಯ್ಸ್ ಒಟಿಟಿಯಲ್ಲಿ ರಿಲೀಸ್ ಆಗಲಿದೆ.
ಮಂಜುಮ್ಮೇಲ್ ಬಾಯ್ಸ್ ಒಟಿಟಿ ಬಿಡುಗಡೆ ದಿನಾಂಕ
ಮಲಯಾಳಂನ ಸೂಪರ್‌ಹಿಟ್ ಸಿನಿಮಾ ಮಂಜುಮ್ಮೇಲ್ ಬಾಯ್ಸ್ ಇದೇ ಏಪ್ರಿಲ್ 5ರಿಂದ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ ಎನ್ನಲಾಗಿದೆ. ಈ ಕುರಿತು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಅಧಿಕೃತ ಪ್ರಕಟಣೆ ಬಂದಿಲ್ಲ. ಆದರೆ, ಮೂಲಗಳ ಪ್ರಕಾರ ಕನ್ನಡ, ತಮಿಳು, ಮಲಯಾಳಂ ಸೇರಿದಂತೆ ಹಲವು ಭಾಷೆಗಳಲ್ಲಿ ಮಂಜುಮ್ಮೇಲ್ ಬಾಯ್ಸ್ ಒಟಿಟಿಯಲ್ಲಿ ರಿಲೀಸ್ ಆಗಲಿದೆ. ಸದ್ಯದಲ್ಲಿಯೇ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಈ ಕುರಿತು ಅಪ್‌ಡೇಟ್ ನೀಡುವ ನಿರೀಕ್ಷೆಯಿದೆ.
ವಿಶೇಷವೆಂದರೆ ಬೆಂಗಳೂರಿನ ಹಲವು ಚಿತ್ರಮಂದಿರಗಳಲ್ಲಿ ಮಂಜುಮ್ಮೇಲ್ ಬಾಯ್ಸ್ ಈಗಲೂ ಪ್ರದರ್ಶನಗೊಳ್ಳುತ್ತಿದೆ. ಫೆಬ್ರವರಿ 22ರಲ್ಲಿ ಬಿಡುಗಡೆಯಾದ ಈ ಸಿನಿಮಾದ ಗಳಿಕೆ ಈಗಾಗಲೇ 200 ಕೋಟಿ ದಾಟಿದೆ. ಈ ಸಿನಿಮಾ ಹನುಮಾನ್ ಸಿನಿಮಾದಂತೆ ಬಾಯ್ಮಾತಿನ ಪ್ರಚಾರದಿಂದಲೇ ಪ್ರೇಕ್ಷಕರನ್ನು ಹೆಚ್ಚಿಸಿಕೊಂಡು ಬಾಕ್ಸ್ ಆಫೀಸ್‌ನಲ್ಲಿ ಧೂಳಿಪಟ ಮಾಡಿದೆ. ಕಳೆದ ವರ್ಷ ತೆರೆಕಂಡು ಬಾಕ್ಸ್ ಆಫೀಸ್‌ನಲ್ಲಿ 150 ಕೋಟಿ ಗಳಿಕೆ ಕಂಡಿದ್ದ ನೈಜ ಘಟನೆ ಆಧರಿತ 2018 ಸಿನಿಮಾದ ದಾಖಲೆಯನ್ನು ಈ ಮಂಜುಮ್ಮೇಲ್ ಬಾಯ್ಸ್ ಅಳಿಸಿದೆ. ಮಂಜುಮ್ಮೇಲ್ ಬಾಯ್ಸ್ ತಮಿಳಿಗೂ ಡಬ್ ಆಗಿದೆ. ಅಲ್ಲೂ ಸುಮಾರು 50 ಕೋಟಿ ರೂಪಾಯಿ ಗಳಿಕೆ ಮಾಡಿದೆ. ತಮಿಳುನಾಡಿನಲ್ಲಿ ನಡೆದ ನೈಜ ಘಟನೆ ಆಧರಿತ ಸಿನಿಮಾವಾಗಿರುವುದರಿಂದ ತಮಿಳರಿಗೂ ಈ ಸಿನಿಮಾ ಕನೆಕ್ಟ್ ಆಗಿದೆ.
ಮಂಜುಮ್ಮೇಲ್ ಬಾಯ್ಸ್ ಚಿದಂಬರಂ ರಚನೆ ಮತ್ತು ನಿರ್ದೇಶನದ ಸಿನಿಮಾ. ಪರವ ಫಿಲ್ಮ್ಸ್ ನಿರ್ಮಾಣ ಮಾಡಿದೆ. ಸೌಬಿನ್ ಶಾಹಿರ್, ಶ್ರೀನಾಥ್ ಭಾಸಿ, ಬಾಲು ವರ್ಗೀಸ್, ಗಣಪತಿ ಎಸ್. ಪೊದುವಾಲ್, ಲಾಲ್ ಜೂನಿಯರ್, ದೀಪಕ್ ಪರಂಬೋಲ್, ಅಭಿರಾಮ್ ರಾಧಾಕೃಷ್ಣನ್, ಅರುಣ್ ಕುರಿಯನ್, ಖಾಲಿದ್ ರೆಹಮಾನ್, ಚಂದು ಸಲೀಂಕುಮಾರ್, ಶೆಬಿನ್ ಬೆನ್ಸನ್, ಮತ್ತು ವಿಷ್ಣು ರೇಘು ಮುಂತಾದ ಕಲಾವಿದರು ನಟಿಸಿದ್ದಾರೆ. 006 ರ ನೈಜ ಘಟನೆಯನ್ನು ಆಧರಿಸಿದ ಚಿತ್ರ ಇದಾಗಿದೆ. ಕೊಚ್ಚಿ ಬಳಿಯ ಮಂಜುಮ್ಮೆಲ್ ಎಂಬ ಸಣ್ಣ ಊರಿನ ಸ್ನೇಹಿತರ ಗುಂಪಿನ ಕಥೆಯನ್ನು ಹೊಂದಿದೆ.
ಈ ಸ್ನೇಹಿತರು ತಮಿಳುನಾಡಿನ ಕೊಡೈಕೆನಾಲ್‌ಗೆ ಪ್ರವಾಸ ಹೋಗುತ್ತಾರೆ. ಗುಣ ಗುಹೆಯ ಹತ್ತಿರದಲ್ಲಿ ನಿರ್ಬಂಧಿತ ಪ್ರದೇಶಗಳಲ್ಲಿ ಅನ್ವೇಷಣಾತ್ಮಕ ಪ್ರವಾಸ ಕೈಗೊಳ್ಳುತ್ತಾರೆ. ಇವರಲ್ಲಿ ಒಬ್ಬಾತ ಒಂದು ಕಂದಕದೊಳಗೆ ಬೀಳುತ್ತಾನೆ. ಪೊಲೀಸರಿಗೆ ದೂರು ನೀಡಿದರೂ ಪ್ರಯೋಜನವಾಗುವುದಿಲ್ಲ. ಆ ಗುಂಡಿಗೆ ಹದಿಮೂರು ಜನರು ಬಿದ್ದಿದ್ದಾರೆ. ಯಾರೂ ಬದುಕಿ ಬಂದ ಇತಿಹಾಸ ಇರುವುದಿಲ್ಲ. ಪೊಲೀಸರು "ನೀವೇ ನಿಮ್ಮ ಸ್ನೇಹಿತನನ್ನು ಕೊಲೆ ಮಾಡಿ ಕಥೆ ಕಟ್ಟಿದ್ದೀರಿ" ಎಂದು ಹೊಡೆಯುತ್ತಾರೆ. ಪೊಲೀಸರಿಗೆ ಮನವರಿಕೆ ಮಾಡುತ್ತಾರೆ. ಸ್ಥಳೀಯ ಜನರ ಸಹಕಾರವೂ ದೊರಕುತ್ತದೆ. ಆ ಕಂದಕಕ್ಕೆ ಬಿದ್ದ ವ್ಯಕ್ತಿ ಮಾಜಿ ಕೇಂದ್ರ ಸಚಿವರ ಸೋದರಳಿಯ ಎಂದು ಇನ್ಸ್‌ಪೆಕ್ಟರ್ ಎಂದು ತಿಳಿದಾಗ ರಕ್ಷಣಾ ಕಾರ್ಯ ಮತ್ತೊಂದು ಹಂತಕ್ಕೆ ಹೋಗುತ್ತದೆ.
ರಕ್ಷಣಾ ಪಡೆಗಳು ಬಂದರೂ ಅವರಿಗೆ ರಕ್ಷಣೆ ಮಾಡಲು ಸಾಧ್ಯವಾಗುವುದಿಲ್ಲ. ಆತ ಬದುಕಿರುವುದು ಡೌಟ್ ಎಂದು ಎಲ್ಲರೂ ಹೇಳಿದರೂ ಆ ಸ್ನೇಹಿತರು ಬಿಡುವುದಿಲ್ಲ. ಆ ಸಮಯದಲ್ಲಿ ಕಂದಕದೊಳಗಿನಿಂದ ಸ್ನೇಹಿತ ಅಳು ಕೇಳಿಸಿ ರಕ್ಷಣಾ ಕಾರ್ಯ ಮುಂದುವರೆಯುತ್ತದೆ. ಕಂದಕದೊಳಗೆ ಇಳಿಯಲು ರಕ್ಷಣಾ ಪಡೆಯ ಯಾರೂ ಸಿದ್ಧರಿರುವುದಿಲ್ಲ. ಸ್ನೇಹಿತರಲ್ಲಿ ಒಬ್ಬ ಆ ಇಳಿಯುತ್ತಾನೆ. ಗೆಳೆಯನನ್ನು ಬದುಕಿಸಲು ಯಶಸ್ವಿಯಾಗುತ್ತಾರ? ಇತ್ಯಾದಿ ಹಲವು ಪ್ರಶ್ನೆಗಳ ಜತೆಗೆ ಸ್ನೇಹದ ಮಹತ್ವ ತಿಳಿಸುವ ಈ ಸಿನಿಮಾ ಇದೀಗ ಒಟಿಟಿಗೆ ಆಗಮಿಸುವ ಸೂಚನೆ ದೊರಕಿದೆ.
