ಕನ್ನಡ ಸುದ್ದಿ  /  ಮನರಂಜನೆ  /  ಇಳಯರಾಜಾ ಕಣ್ಮಣಿ ಹಾಡನ್ನು ಬಳಸಲು ಅನುಮತಿ ಪಡೆದಿದ್ದೇವೆ ಎಂದ ಮಂಜುಮ್ಮೆಲ್‌ ಬಾಯ್ಸ್‌ ನಿರ್ಮಾಪಕ; ಮತ್ಯಾಕೆ ಕೇಸ್?‌ ಇಲ್ಲಿದೆ ವಿವರ

ಇಳಯರಾಜಾ ಕಣ್ಮಣಿ ಹಾಡನ್ನು ಬಳಸಲು ಅನುಮತಿ ಪಡೆದಿದ್ದೇವೆ ಎಂದ ಮಂಜುಮ್ಮೆಲ್‌ ಬಾಯ್ಸ್‌ ನಿರ್ಮಾಪಕ; ಮತ್ಯಾಕೆ ಕೇಸ್?‌ ಇಲ್ಲಿದೆ ವಿವರ

ಮಂಜುಮ್ಮೆಲ್‌ ಬಾಯ್ಸ್‌ ಸಿನಿಮಾದಲ್ಲಿ ಇಳಯರಾಜಾ ಅವರ ಕಣ್ಮಣಿ ಹಾಡನ್ನು ಬಳಸಿದ್ದ ಕಾರಣಕ್ಕಾಗಿ ನಿರ್ಮಾಪಕರಿಗೆ ಸಂಗೀತ ನಿರ್ದೇಶಕ ಇಳಯರಾಜಾ ಅವರು ಲೀಗಲ್‌ ನೋಟಿಸ್‌ ಕಳುಹಿಸಿದ್ದರು. ಆದರೆ, ಈ ಹಾಡನ್ನು ಬಳಸಿಕೊಳ್ಳಲು ಅನುಮತಿ ಪಡೆದಿದ್ದೇವೆ ಎಂದು ಮಂಜುಮ್ಮೆಲ್‌ ಬಾಯ್ಸ್‌ ಪ್ರೊಡ್ಯುಸರ್‌ ಹೇಳಿದ್ದಾರೆ. ಈ ಕುರಿತು ಹೆಚ್ಚಿನ ವಿವರ ಇಲ್ಲಿದೆ.

ಇಳಯರಾಜಾ ಕಣ್ಮಣಿ ಹಾಡನ್ನು ಬಳಸಲು ಅನುಮತಿ ಪಡೆದಿದ್ದೇವೆ ಎಂದ ಮಂಜುಮ್ಮೆಲ್‌ ಬಾಯ್ಸ್‌ ನಿರ್ಮಾಪಕ
ಇಳಯರಾಜಾ ಕಣ್ಮಣಿ ಹಾಡನ್ನು ಬಳಸಲು ಅನುಮತಿ ಪಡೆದಿದ್ದೇವೆ ಎಂದ ಮಂಜುಮ್ಮೆಲ್‌ ಬಾಯ್ಸ್‌ ನಿರ್ಮಾಪಕ

ಬೆಂಗಳೂರು: ಕಮಲ್ ಹಾಸನ್ ನಟನೆಯ 'ಗುನಾ' ಚಿತ್ರದ ಕಣ್ಮಣಿ ಅನ್ಬೋಡು ಕಾದಲನ್ ಹಾಡನ್ನು ತಮ್ಮ ಚಿತ್ರದಲ್ಲಿ ಬಳಸಿದ್ದಕ್ಕಾಗಿ ಮಲಯಾಳಂನ ಸೂಪರ್‌ಹಿಟ್‌ ಸಿನಿಮಾ ಮಂಜುಮ್ಮೆಲ್ ಬಾಯ್ಸ್ ನಿರ್ಮಾಪಕರ ವಿರುದ್ಧ ಸಂಗೀತ ಸಂಯೋಜಕ ಇಳಯರಾಜಾ ಲೀಗಲ್‌ ನೋಟಿಸ್‌ ಕಳುಹಿಸಿದ್ದರು. ಆದರೆ, ಈ ಹಾಡನ್ನು ಎಲ್ಲಾ ಭಾಷೆಗಳಲ್ಲೂ ಬಳಸಲು ಕಾನೂನುಬದ್ಧವಾಗಿ ಹಕ್ಕುಗಳನ್ನು ಪಡೆದುಕೊಂಡಿರುವುದಾಗಿ ಮಂಜುಮ್ಮೆಲ್‌ ಬಾಯ್ಸ್‌ ನಿರ್ದೇಶಕರು ಹೇಳಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಹಕ್ಕುಗಳನ್ನು ಖರೀದಿಸಿದ್ದೇವೆ ಎಂದ ನಿರ್ಮಾಪಕ

ಇಳಯರಾಜಾ ಕಳುಹಿಸಿದ ಕಾನೂನು ನೋಟಿಸ್ ಅನ್ನು ಇನ್ನೂ ಸ್ವೀಕರಿಸಿಲ್ಲ ಎಂದು ಮಂಜುಮ್ಮೆಲ್ ಬಾಯ್ಸ್ ನಿರ್ಮಾಪಕರು ದಿ ನ್ಯೂಸ್ ಮಿನಿಟ್‌ಗೆ ತಿಳಿಸಿದ್ದಾರೆ. ಎರಡು ಸಂಗೀತ ಕಂಪನಿಗಳಿಂದ ಈ ಹಾಡಿನ ಹಕ್ಕುಗಳನ್ನು ಖರೀದಿಸಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ ಶಾನ್ ಆಂಥೋನಿ ಈ ಕುರಿತು ವಿವರ ನೀಡಿದ್ದಾರೆ.

"ಒಂದು ಕಂಪನಿಯು ಈ ಹಾಡಿನ ತೆಲುಗು ಆವೃತ್ತಿಯ ಹಕ್ಕುಗಳನ್ನು ಹೊಂದಿದೆ. ಇನ್ನೊಂದು ಉಳಿದ ಭಾಷೆಗಳ ಹಕ್ಕುಗಳನ್ನು ಹೊಂದಿದೆ. ಹಾಡಿನ ಮಾಲೀಕತ್ವ ಹೊಂದಿರುವ ಸಂಗೀತ ಕಂಪನಿಗಳಾದ ಪಿರಮಿಡ್ ಮತ್ತು ಶ್ರೀದೇವಿ ಸೌಂಡ್ಸ್ನಿಂದ ನಾವು ಹಕ್ಕುಗಳನ್ನು ಪಡೆದಿದ್ದೇವೆ" ಎಂದು ಮಾಹಿತಿ ನೀಡಿದ್ದಾರೆ. "ತಮಿಳು ಹಾಡಿಗೆ ಮಾತ್ರವಲ್ಲ, ಮಂಜುಮ್ಮೆಲ್ ಬಾಯ್ಸ್ ಬಿಡುಗಡೆಯಾದ ಎಲ್ಲಾ ಭಾಷೆಗಳ ಹಕ್ಕುಗಳನ್ನು ಪಡೆದುಕೊಂಡಿದ್ದೇವೆ" ಎಂದು ಅವರು ಹೇಳಿದ್ದಾರೆ. ಈ ಚಿತ್ರದಲ್ಲಿ ನಟಿಸಿದ ಸೌಬಿನ್ ಶಾಹಿರ್ ಮತ್ತು ಅವರ ತಂದೆ ಬಾಬು ಶಾಹಿರ್ ಕೂಡ ಚಿದಂಬರಂ ನಿರ್ದೇಶನದ ಚಿತ್ರದ ಪ್ರೊಡ್ಯುಸರ್‌ಗಳಾಗಿದ್ದಾರೆ.

ಲೀಗಲ್‌ ನೋಟಿಸ್‌ ಕಳುಹಿಸಿದ ಇಳಯರಾಜಾ

ಈ ವಾರದ ಆರಂಭದಲ್ಲಿ ಮಂಜುಮ್ಮೆಲ್ ಬಾಯ್ಸ್ ನಿರ್ಮಾಪಕರಿಗೆ ಇಳಯರಾಜಾ ಲೀಗಲ್ ನೋಟಿಸ್ ನೀಡಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. "ಗೌರವ ಇರಲಿ, ಇಲ್ಲದೆ ಇರಲಿ, ಯಾರಾದರೂ ಹಾಡನ್ನು ಮತ್ತೊಂದು ಚಿತ್ರದಲ್ಲಿ ಬಳಸಿದಾಗ ಕಾನೂನು ವಿಧಾನಗಳನ್ನು ಅನುಸರಿಸಬೇಕಾಗುತ್ತದೆ. ಅನುಮತಿಯನ್ನು ಪಡೆಯಬೇಕು" ಎಂದು ಇಳಯರಾಜಾ ಅವರ ಕಾನೂನು ಸಲಹೆಗಾರ ಸರವಣನ್ ಅಣ್ಣಾದೊರೈ ಹೇಳಿದ್ದರು.

"ಒಬ್ಬ ವ್ಯಕ್ತಿಯು ಅಂತಹ ಮೂಲ ಸಂಗೀತ ಕೃತಿಗಳನ್ನು ವಾಣಿಜ್ಯ ಲಾಭ ಮತ್ತು ಇತರ ವ್ಯವಹಾರ ಲಾಭಗಳಿಗಾಗಿ ಬಳಸುತ್ತಿದ್ದರೆ, ಅಂತಹ ವ್ಯಕ್ತಿಯು ಕಾನೂನುಬದ್ಧವಾಗಿರಬೇಕು. ಲೇಖಕ / ಮಾಲೀಕರಿಂದ ಅಗತ್ಯ ಮತ್ತು ಸೂಕ್ತ ಅನುಮತಿ / ಪರವಾನಗಿಯನ್ನು ಪಡೆಯಬೇಕು" ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.

"ಈ ಪ್ರಕರಣದಲ್ಲಿ, ಹಾಡಿನ ಮಾಲೀಕರು ಇಳಯರಾಜಾ ಅವರ ಒಪ್ಪಿಗೆಯಿಲ್ಲದೆ ಮಂಜುಮ್ಮೆಲ್‌ ಬಾಯ್ಸ್‌ ಕಣ್ಮಣಿ ಹಾಡನ್ನು ಬಳಸಿಕೊಂಡಿದ್ದಾರೆ. ಯಾವುದೇ ರಾಯಲ್ಟಿ ಅಥವಾ ಪರವಾನಗಿ ಶುಲ್ಕವನ್ನು ಪಾವತಿಸದೆ ಅವರ ಹಾಡನ್ನು ಬಳಸಿದ್ದಾರೆ ಎಂದು ಸರವಣನ್ ಹೇಳಿದ್ದರು.

ಈ ಚಿತ್ರದಲ್ಲಿ ಹಾಡನ್ನು ಬಳಸುವುದನ್ನು ಮುಂದುವರಿಸಲು ನಿರ್ಮಾಪಕರು ಸರಿಯಾದ ಅನುಮತಿಯನ್ನು ಪಡೆಯಬೇಕು. ಅಥವಾ ನೋಟಿಸ್ ಸ್ವೀಕರಿಸಿದ 15 ದಿನಗಳಲ್ಲಿ ಆ ಹಾಡನ್ನು ತೆಗೆದುಹಾಕಬೇಕು ಎಂದು ನೋಟಿಸ್ ನಲ್ಲಿ ತಿಳಿಸಲಾಗಿದೆ. ಎಲ್ಲಾದರೂ ಈ ರೀತಿ ಮಾಡದೆ ಇದ್ದರೆ ನಾವು ಕೃತಿಸ್ವಾಮ್ಯ ಕಾಯ್ದೆ 1957 ರ ಅಡಿಯಲ್ಲಿ ಪರಿಹಾರವನ್ನು ಪಡೆಯುತ್ತೇವೆ ಎಂದು ಅವರು ಹೇಳಿದ್ದಾರೆ.

ಲೋಕೇಶ್ ಕನಕರಾಜ್‌ ನಿರ್ದೇಶನದ ರಜನಿಕಾಂತ್ ಅಭಿನಯದ ಕೂಲಿ ಚಿತ್ರದ ನಿರ್ಮಾಪಕರಿಗೆ ಮೇ 2 ರಂದು ಇಳಯರಾಜಾ ನೋಟಿಸ್ ನೀಡಿದ್ದರು. ಸನ್ ಪಿಕ್ಚರ್ಸ್ ನಿರ್ಮಿಸಿದ ಈ ಚಿತ್ರವು 1983 ರ ತಮಿಳು ಚಿತ್ರ ತಂಗ ಮಗನ್ ನ ವಾ ವಾ ಪಕ್ಕಂ ವಾ ಹಾಡಿನ ಒಂದು ಭಾಗವನ್ನು ಬಳಸಿತ್ತು. ಈ ಸಿನಿಮಾದಲ್ಲಿ ರಜನಿಕಾಂತ್‌ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. ಇದೇ ಸಮಯದಲ್ಲಿ ಇಳಯರಾಜಾ ಅವರು ತಮ್ಮ 4500 ಹಾಡುಗಳ ಹಕ್ಕುಗಳ ಬಗ್ಗೆ ಖಾಸಗಿ ರೆಕಾರ್ಡಿಂಗ್ ಕಂಪನಿ ಎಕೋ ರೆಕಾರ್ಡಿಂಗ್ ಪ್ರೈವೇಟ್ ಲಿಮಿಟೆಡ್‌ನೊಂದಿಗೆ ಜತೆ ಕಾನೂನು ಹೋರಾಟ ನಡೆಸುತ್ತಿದ್ದಾರೆ.

ಟಿ20 ವರ್ಲ್ಡ್‌ಕಪ್ 2024