OTT Malayalam Movies: ಒಟಿಟಿ ಆಗಮನದ ಸನಿಹದಲ್ಲಿವೆ ಮಲಯಾಳಂನ ನಾಲ್ಕು ಥ್ರಿಲ್ಲರ್‌ ಸಿನಿಮಾಗಳು, ನಾಲ್ಕರಲ್ಲಿ ಎರಡು ಬ್ಲಾಕ್‌ ಬಸ್ಟರ್‌
ಕನ್ನಡ ಸುದ್ದಿ  /  ಮನರಂಜನೆ  /  Ott Malayalam Movies: ಒಟಿಟಿ ಆಗಮನದ ಸನಿಹದಲ್ಲಿವೆ ಮಲಯಾಳಂನ ನಾಲ್ಕು ಥ್ರಿಲ್ಲರ್‌ ಸಿನಿಮಾಗಳು, ನಾಲ್ಕರಲ್ಲಿ ಎರಡು ಬ್ಲಾಕ್‌ ಬಸ್ಟರ್‌

OTT Malayalam Movies: ಒಟಿಟಿ ಆಗಮನದ ಸನಿಹದಲ್ಲಿವೆ ಮಲಯಾಳಂನ ನಾಲ್ಕು ಥ್ರಿಲ್ಲರ್‌ ಸಿನಿಮಾಗಳು, ನಾಲ್ಕರಲ್ಲಿ ಎರಡು ಬ್ಲಾಕ್‌ ಬಸ್ಟರ್‌

OTT Malayalam Movies: ಮಾಲಿವುಡ್‌ನಲ್ಲಿ ಕಳೆದ ತಿಂಗಳು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಸಿನಿಮಾಗಳ ಪೈಕಿ ನಾಲ್ಕು ಚಿತ್ರಗಳು ಇನ್ನೇನು ಒಟಿಟಿ ಅಂಗಳಕ್ಕೆ ಪ್ರವೇಶಿಸುವ ಸನಿಹದಲ್ಲಿವೆ. ಆ ಚಿತ್ರಗಳ ಕುರಿತು ಹೀಗಿದೆ ಅಪ್‌ಡೇಟ್‌.

ಫೆಬ್ರವರಿಯಲ್ಲಿ ಸ್ಟ್ರೀಮಿಂಗ್‌ ಆರಂಭಿಸಲಿರುವ ಅಪ್‌ಕಮಿಂಗ್‌ ಮಲಯಾಳಂ ಸಿನಿಮಾಗಳು
ಫೆಬ್ರವರಿಯಲ್ಲಿ ಸ್ಟ್ರೀಮಿಂಗ್‌ ಆರಂಭಿಸಲಿರುವ ಅಪ್‌ಕಮಿಂಗ್‌ ಮಲಯಾಳಂ ಸಿನಿಮಾಗಳು (IMDb)

OTT Malayalam Movies: ಮಲಯಾಳಂ ಸಿನಿಮಾಗಳಿಗೆ ಒಟಿಟಿ ವೇದಿಕೆಗಳಲ್ಲಿ ದೊಡ್ಡ ಮಟ್ಟದ ಕ್ರೇಜ್‌ ಇದೆ. ಕೇವಲ ಮಲಯಾಳಿಗಳಷ್ಟೇ ಅಲ್ಲದೆ, ಬೇರೆ ಬೇರೆ ಭಾಷೆಯ ಸಿನಿಮಾ ಪ್ರೇಕ್ಷಕರೂ ಮಲಯಾಳಂ ಸಿನಿಮಾಗಳತ್ತ ದೃಷ್ಟಿನೆಟ್ಟಿದ್ದಾರೆ. ಹೊಸ ಹೊಸ ಸಿನಿಮಾಗಳು ಯಾವೆಲ್ಲ ಒಟಿಟಿಗೆ ಬರುತ್ತಿವೆ ಎಂದೂ ಅತ್ತ ಕಡೆ ಒಂದು ಕಣ್ಣಿಟ್ಟಿದ್ದಾರೆ. ಈಗ ಇನ್ನೇನು ಶೀಘ್ರದಲ್ಲಿ ಬಹುನಿರೀಕ್ಷಿತ ನಾಲ್ಕು ಥ್ರಿಲ್ಲರ್‌ ಸಿನಿಮಾಗಳು ಒಟಿಟಿ ಅಂಗಳಕ್ಕೆ ಎಂಟ್ರಿಕೊಡಲಿವೆ. ಆ ನಾಲ್ಕು ಸಿನಿಮಾಗಳಲ್ಲಿ ಎರಡು ಬ್ಲಾಕ್‌ ಬಸ್ಟರ್‌ ಎನಿಸಿಕೊಂಡರೆ, ಇನ್ನೆರಡು ಎವರೇಜ್‌ ಪಟ್ಟ ಪಡೆದಿವೆ.

ಐಡೆಂಟಿಟಿ

ಐಡೆಂಟಿಟಿ ಮೂವಿ ಜನವರಿ 31ರಂದು ಜೀ 5 ಒಟಿಟಿ ವೇದಿಕೆಯಲ್ಲಿ ಪ್ರಸಾರವಾಗಲಿದೆ. ಇದು ಮಲಯಾಳಂ, ತೆಲುಗು, ಕನ್ನಡ ಮತ್ತು ತಮಿಳು ಭಾಷೆಗಳಲ್ಲಿ ಸ್ಟ್ರೀಮಿಂಗ್‌ಗೆ ಲಭ್ಯವಿರುತ್ತದೆ. ಈ ಮಲಯಾಳಂ ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ಟೊವಿನೊ ಥಾಮಸ್ ಮತ್ತು ತ್ರಿಷಾ ಮುಖ್ಯ ಪಾತ್ರಗಳಲ್ಲಿದ್ದಾರೆ. ಈ ಚಿತ್ರವು ಕೊಲೆ ಪ್ರಕರಣದ ತನಿಖೆಯ ಸುತ್ತ ಸುತ್ತುತ್ತದೆ. ಐಡೆಂಟಿಟಿ ಚಿತ್ರವನ್ನು ಅಖಿಲ್ ಪಾಲ್ ಮತ್ತು ಅನಾಸ್ ಖಾನ್ ನಿರ್ದೇಶಿಸಿದ್ದಾರೆ. ಈ ಚಿತ್ರವು ಜನವರಿ 2ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ 18 ಕೋಟಿ ರೂ. ಕಲೆಕ್ಷನ್‌ ಮಾಡಿದೆ. ಇದೀಗ ಥಿಯೇಟರ್‌ಗಳಲ್ಲಿ ಬಿಡುಗಡೆಯಾದ ಒಂದು ತಿಂಗಳೊಳಗೆ ಜೀ 5 ಒಟಿಟಿ ವೇದಿಕೆಗೆ ಆಗಮಿಸುತ್ತಿದೆ.

ಮಾರ್ಕೊ

ಮಲಯಾಳಿ ನಟ ಉನ್ನಿಮುಕುಂದನ್ ಅಭಿನಯದ ಮಾರ್ಕೊ ಚಿತ್ರಮಂದಿರಗಳಲ್ಲಿ ಸೂಪರ್ ಹಿಟ್ ಪಟ್ಟ ಪಡೆದಿದೆ. ಕಲೆಕ್ಷನ್‌ ವಿಚಾರದಲ್ಲಿ 120 ಕೋಟಿ ರೂ.ಗಳ ಗಡಿ ದಾಟಿದ ಈ ಸಿನಿಮಾ ಬ್ಲಾಕ್‌ ಬಸ್ಟರ್‌ ಆಗಿದೆ. ಡಿಸೆಂಬರ್ 20ರಂದು ಮಲಯಾಳಂನಲ್ಲಿ ಬಿಡುಗಡೆಯಾದ ಈ ಚಿತ್ರ ವಿಮರ್ಶೆ ದೃಷ್ಟಿಯಿಂದ ಮೆಚ್ಚುಗೆ ಪಡೆದು, ಎರಡು ವಾರಗಳ ನಂತರ ಕನ್ನಡದಲ್ಲಿಯೂ ಡಬ್‌ ಆಗಿ ಚಿತ್ರಮಂದಿರಗಳಲ್ಲಿ ತೆರೆಕಂಡಿತ್ತು. ಸದ್ಯ ಮಾರ್ಕೊ ಸಿನಿಮಾ ಫೆಬ್ರವರಿ ತಿಂಗಳಲ್ಲಿ ಒಟಿಟಿಗೆ ಬರುವ ಸಾಧ್ಯತೆಯಿದೆ. ಸದ್ಯದ ಮಾಹಿತಿ ಪ್ರಕಾರ ಮಾರ್ಕೊ ಚಿತ್ರದ ಒಟಿಟಿ ಹಕ್ಕನ್ನು ಸೋನಿ ಲಿವ್ ಪಡೆದುಕೊಂಡಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಇನ್ನಷ್ಟೇ ಅಧಿಕೃತ ಘೋಷಣೆ ಆಗಬೇಕಿದೆ. ಅಂದಹಾಗೆ ಮಾರ್ಕೊ ಚಿತ್ರವನ್ನು ಹನೀಫ್ ಅದಾನಿ ನಿರ್ದೇಶಿಸಿದ್ದಾರೆ.

ರೇಖಾಚಿತ್ರಂ

ಮಲಯಾಳಂ ಮಿಸ್ಟರಿ ಕ್ರೈಮ್ ಥ್ರಿಲ್ಲರ್ ಸಿನಿಮಾ ರೇಖಾಚಿತ್ರ ಇದೀಗ ಒಟಿಟಿಗೆ ಆಗಮಿಸುವ ಸನಿಹದಲ್ಲಿದೆ. 6 ಕೋಟಿ ರೂ.ಗಳ ಬಜೆಟ್‌ನಲ್ಲಿ ನಿರ್ಮಿಸಲಾದ ಈ ಸಿನಿಮಾ ಕಲೆಕ್ಷನ್‌ ವಿಚಾರದಲ್ಲಿ ಗೆದ್ದು ಬೀಗಿತ್ತು. 50 ಕೋಟಿ ರೂ. ಗಳಿಕೆ ಕಂಡು ಬ್ಲಾಕ್ ಬಸ್ಟರ್ ಆಗಿತ್ತು. ಈ ಚಿತ್ರದಲ್ಲಿ ಆಸಿಫ್ ಅಲಿ ಮತ್ತು ಅನಸ್ವರ ರಾಜನ್ ಮುಖ್ಯ ಪಾತ್ರಗಳಲ್ಲಿ ನಟಿಸಿದರೆ, ಹಿರಿಯ ನಟ ಮಮ್ಮುಟ್ಟಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆತ್ಮಹತ್ಯೆ ಪ್ರಕರಣದ ಸುತ್ತ ಸುತ್ತಿವ ಈ ಸಿನಿಮಾ, ಇನ್ವೆಸ್ಟಿಗೇಟಿವ್‌ ಥ್ರಿಲ್ಲರ್‌ ಚಿತ್ರವಾಗಿದೆ. ಈ ಚಿತ್ರವನ್ನು ಜೋಫಿನ್ ಟಿ ಚಾಕೋ ನಿರ್ದೇಶಿಸಿದ್ದಾರೆ. ರೇಖಾಚಿತ್ರಂ ಫೆಬ್ರವರಿಯಲ್ಲಿ ಒಟಿಟಿಗೆ ಬರುವ ನಿರೀಕ್ಷೆಯಿದೆ. ಸೋನಿ ಲಿವ್ ಒಟಿಟಿ ಪ್ಲಾಟ್ಫಾರ್ಮ್ ಚಿತ್ರದ ಒಟಿಟಿ ಹಕ್ಕುಗಳನ್ನು ಪಡೆದುಕೊಂಡಿದೆ. ಶೀಘ್ರದಲ್ಲಿ ಅಧಿಕೃತ ಘೋಷಣೆ ಆಗಿಲಿದೆ.

ರುಧಿರಂ

ಮಲಯಾಳಂ ಸೈಕಲಾಜಿಕಲ್‌ ಥ್ರಿಲ್ಲರ್ ಚಿತ್ರ 'ರುಧಿರ' ಡಿಸೆಂಬರ್ 13ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ವಿಮರ್ಶೆ ದೃಷ್ಟಿಯಿಂದ ಮಿಶ್ರ ಪ್ರತಿಕ್ರಿಯೆ ಪಡೆದ ಈ ಸಿನಿಮಾ, ಕಲೆಕ್ಷನ್‌ ವಿಚಾರದಲ್ಲಿ ಸೋತಿತು. ಮಲಯಾಳಂ ಚಿತ್ರದಲ್ಲಿ ಕನ್ನಡದ ಸ್ಟಾರ್ ನಟ ರಾಜ್ ಬಿ ಶೆಟ್ಟಿ ಮತ್ತು ಅಪರ್ಣಾ ಬಾಲಮುರಳಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ಜಿಶೋ ಲಾನ್ ಆಂಟನಿ ನಿರ್ದೇಶಿಸಿದ್ದಾರೆ. ರುಧಿರಂ ಸಿನಿಮಾ ಫೆಬ್ರವರಿಯಲ್ಲಿ ಒಟಿಟಿಗೆ ಬರುವ ಸಾಧ್ಯತೆ ಇದೆ.

Whats_app_banner