ಮೋಹನ್ ಲಾಲ್, ಪೃಥ್ವಿರಾಜ್ ಲೂಸಿಫರ್ ಪಾರ್ಟ್ 2 ಚಿತ್ರಕ್ಕೆ ಲೈಕಾ ಬಂಡವಾಳ; ಮಾಲಿವುಡ್ಗೆ ಕಾಲಿಟ್ಟ ತಮಿಳಿನ ಖ್ಯಾತ ಚಿತ್ರನಿರ್ಮಾಣ ಸಂಸ್ಥೆ
ಲೂಸಿಫರ್ ಸಿನಿಮಾದ ಸೀಕ್ವೆಲ್ ಸೆಟ್ಟೇರಿದೆ. ದೊಡ್ಡ ಮಟ್ಟದಲ್ಲಿ ನಿರ್ಮಾಣವಾಗಲಿರುವ ಈ ಚಿತ್ರಕ್ಕೀಗ ದೊಡ್ಡ ಚಿತ್ರ ನಿರ್ಮಾಣ ಸಂಸ್ಥೆಯೇ ಕೈ ಜೋಡಿಸಿದೆ.
Lucifer 2: ದಕ್ಷಿಣ ಭಾರತದ ಪ್ರತಿಷ್ಠಿತ ಚಿತ್ರ ನಿರ್ಮಾಣ ಸಂಸ್ಥೆ ಲೈಕಾ, ಮಾಲಿವುಡ್ ಅಂಗಳಕ್ಕೆ ಎಂಟ್ರಿ ಕೊಟ್ಟಿದೆ. ಇಂಡಿಯನ್, ದರ್ಬಾರ್, ಪೊನ್ನಿಯಿನ್ ಸೆಲ್ವನ್ ಸರಣಿ ಸಿನಿಮಾ, 2.0, ಖೈದಿ 150 ಯಂತಹ ಅದ್ಧೂರಿ ಹಾಗೂ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾಗಳನ್ನು ಸಿನಿಮಾರಂಗಕ್ಕೆ ಕೊಡುಗೆಯಾಗಿ ಕೊಟ್ಟಿರುವ ಲೈಕಾ, ಮಾಲಿವುಡ್ ಸೂಪರ್ ಡೂಪರ್ ಹಿಟ್ ಚಿತ್ರ ಲೂಸಿಫರ್ ಪಾರ್ಟ್-2ಗೆ ಬಂಡವಾಳ ಹೂಡುತ್ತಿದೆ.
ಲೈಕಾ ಒಡೆಯ ಸುಭಾಷ್ ಕರಣ್, ಮಾಲಿವುಡ್ ಸೂಪರ್ ಸ್ಟಾರ್ ಮೋಹನ್ಲಾಲ್- ಪೃಥ್ವಿರಾಜ್ ಸುಕುಮಾರನ್ ಜೊತೆ ಕೈ ಜೋಡಿಸಿದ್ದಾರೆ. 2019ರಲ್ಲಿ ರಿಲೀಸ್ ಆಗಿದ್ದ ಪೊಲಿಟಿಕಲ್ ಆಕ್ಷನ್ ಥ್ರಿಲ್ಲರ್ ಲೂಸಿಫರ್ ಸಿನಿಮಾ ಕಮರ್ಷಿಯಲ್ ಹಾಗೂ ವಿಮರ್ಶೆ ದೃಷ್ಟಿಯಿಂದ ಭಾರೀ ಮೆಚ್ಚುಗೆ ಪಡೆದುಕೊಂಡಿತ್ತು. ಮೋಹನ್ ಲಾಲ್ ಫರ್ಫಾಮನ್ಸ್, ಪೃಥ್ವಿರಾಜ್ ಡೈರೆಕ್ಷನ್ ಬಗ್ಗೆ ಸಿನಿಮಾರಸಿಕರು ಚಪ್ಪಾಳೆ ತಟ್ಟಿದ್ದರು. ಇದೀಗ ಲೂಸಿಫರ್ ಪಾರ್ಟ್-2 ನಿರ್ದೇಶಕ ಪೃಥ್ವಿರಾಜ್ ಸುಕುಮಾರನ್ ಸಜ್ಜಾಗಿದ್ದು, ಅವರಿಗೆ ಲೈಕಾ ಸಂಸ್ಥೆ ಜೊತೆಯಾಗಿ ನಿಂತಿದೆ.
ಲೂಸಿಫರ್ ಎರಡನೇ ಅಧ್ಯಾಯಕ್ಕೆ ಎಂಪುರನ್ ಎಂಬ ಟೈಟಲ್ ಇಡಲಾಗಿದೆ. ಮಲಯಾಳಂನ ಖ್ಯಾತ ನಿರ್ಮಾಣ ಸಂಸ್ಥೆ ಆಶೀರ್ವಾದ ಸಿನಿಮಾಸ್ ಜೊತೆಗೂಡಿ ಲೈಕಾ ಈ ಚಿತ್ರ ನಿರ್ಮಾಣ ಮಾಡುತ್ತಿದೆ. ಜಿ.ಕೆ.ಎಂ. ತಮಿಳ್ ಕುಮಾರನ್ ಲೈಕಾ ಪ್ರೊಡಕ್ಷನ್ನ ಮುಖ್ಯಸ್ಥರಾಗಿದ್ದಾರೆ. ಮುರಳಿ ಗೋಪಿ ಈ ಚಿತ್ರಕ್ಕೆ ಚಿತ್ರಕಥೆ ಬರೆಯುತ್ತಿದ್ದಾರೆ, ಸುಜಿತ್ ವಾಸುದೇವ್ ಛಾಯಾಗ್ರಹಣವನ್ನು ನಿಭಾಯಿಸುತ್ತಿದ್ದಾರೆ. ದೀಪಕ್ ದೇವ್ ಸಂಗೀತ ಸಂಯೋಜಿಸಿದ್ದಾರೆ.
ಸುರೇಶ್ ಬಾಲಾಜಿ ಮತ್ತು ಜಾರ್ಜ್ ಪಯಸ್ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು. ಮಲಯಾಳಂ, ತಮಿಳು, ತೆಲುಗು, ಕನ್ನಡ ಮತ್ತು ಹಿಂದಿಯಲ್ಲಿ ಚಿತ್ರ ನಿರ್ಮಾಣವಾಗಿದೆ. ‘ಎಂಪುರನ್’ ಅಧಿಕೃತ ಘೋಷಣೆಯ ಬಗ್ಗೆ ಅಭಿಮಾನಿಗಳು ಉತ್ಸುಕರಾಗಿದ್ದಾರೆ. ವಿಶೇಷವಾಗಿ ಆಶೀರ್ವಾದ್ ಸಿನಿಮಾಸ್ ಆಂಟೋನಿ ಪೆರುಂಬವೂರ್-ಲೈಕಾ ಪ್ರೊಡಕ್ಷನ್ಸ್ ಸುಭಾಸ್ಕರನ್-ಮೋಹನ್ ಲಾಲ್ ಮತ್ತು ಪೃಥ್ವಿರಾಜ್ ಸುಕುಮಾರನ್ ಕಾಂಬೋದ ಲೂಸಿಫರ್-2 ಝಲಕ್ ಪ್ರೇಕ್ಷಕರಲ್ಲಿ ನಿರೀಕ್ಷೆ ಹೆಚ್ಚಿಸಿದೆ.