ಒಟಿಟಿಯಲ್ಲಿ ಸ್ಟ್ರೀಮ್ ಆಗಲಿದೆ 3 ವರ್ಷಗಳ ಹಿಂದೆ ತೆರೆ ಕಂಡ ನಯನತಾರಾ ಅಭಿನಯದ ಮಿಸ್ಟರಿ ಥ್ರಿಲ್ಲರ್ ಸಿನಿಮಾ
ನಯನತಾರಾ ಅಭಿನಯದ ಮಿಸ್ಟರಿ ಥ್ರಿಲ್ಲರ್ ಸಿನಿಮಾ ಸುಮಾರು 3 ವರ್ಷಗಳ ನಂತರ ಒಟಿಟಿಯಲ್ಲಿ ತೆರೆ ಕಾಣುತ್ತಿದೆ. ನಿಜಾಲ್ ಚಿತ್ರದಲ್ಲಿ ಕುಂಚಕೋ ಬೋಬನ್ ನಾಯಕನಾಗಿ ನಟಿಸುತ್ತಿದ್ದಾರೆ. ಚಿತ್ರಕ್ಕೆ ಅಪ್ಪು ಎನ್ ಭಟ್ಟತ್ರಿ ಆಕ್ಷನ್ ಕಟ್ ಹೇಳಿದ್ದಾರೆ.
ಇತ್ತೀಚೆಗೆ ತೆರೆ ಕಂಡ ಅನೇಕ ಸಿನಿಮಾಗಳು ಚಿತ್ರಮಂದಿರದಿಂದ ನೇರವಾಗಿ ಒಟಿಟಿಗೆ ಬರುತ್ತಿವೆ. ಆದರೆ ಬಹುತೇಕ ಸಿನಿಮಾಗಳು ತೆರೆ ಕಂಡು ಬಹಳ ವರ್ಷಗಳ ನಂತರ ಒಟಿಟಿ ಅಂಗಳಕ್ಕೆ ಲಗ್ಗೆ ಇಡುತ್ತಿವೆ. 3 ವರ್ಷಗಳ ಹಿಂದೆ ತೆರೆ ಕಂಡ ನಯನತಾರಾ ಅಭಿನಯದ ಸಿನಿಮಾವೊಂದು ಈಗ ಒಟಿಟಿಯಲ್ಲಿ ಸ್ಟ್ರೀಮ್ ಆಗಲಿದೆ.
ನಯನತಾರಾ ನಾಯಕಿಯಾಗಿ ನಟಿಸಿರುವ ಮಲಯಾಳಂನ ಹಾರರ್ ಥ್ರಿಲ್ಲರ್ ಸಿನಿಮಾ ನಿಜಾಲ್, ಬಿಡುಗಡೆಯಾದ ಮೂರು ವರ್ಷಗಳ ನಂತರ ಒಟಿಟಿಗೆ ಬರುತ್ತಿದೆ. 2021 ರಲ್ಲಿ ಬಿಡುಗಡೆಯಾದ ಈ ಮಲಯಾಳಂ ಚಿತ್ರದಲ್ಲಿ ಕುಂಚಕೋಬೋಬನ್ ನಾಯಕನಾಗಿ ನಟಿಸಿದ್ದರು. ಈ ಚಿತ್ರಕ್ಕೆ ಮಲಯಾಳಂನಲ್ಲಿ ಮಿಶ್ರ ಪ್ರತಿಕ್ರಿಯೆ ದೊರೆತಿದೆ. ಚಿತ್ರವನ್ನು ಅಪ್ಪು ಎನ್ ಭಟ್ಟತ್ರಿ ನಿರ್ದೇಶಿಸಿದ್ದಾರೆ.
ಆಗಸ್ಟ್ 30 ರಿಂದ ಸ್ಟ್ರೀಮ್ ಆಗಲಿರುವ ನಿಜಾಲ್
ನಿಜಾಲ್ ಚಿತ್ರವು ಒಟಿಟಿಯಲ್ಲಿ ಮಾಯಾ ನಿಜಾಲ್ ಎಂಬ ಹೆಸರಿನಲ್ಲಿ ತಮಿಳಿನಲ್ಲಿ ಬಿಡುಗಡೆಯಾಗುತ್ತಿದೆ. ಈ ಮಿಸ್ಟರಿ ಥ್ರಿಲ್ಲರ್ ಚಲನಚಿತ್ರವು ಆಹಾ ತಮಿಳು OTT ನಲ್ಲಿ ಆಗಸ್ಟ್ 30 ರಿಂದ ಸ್ಟ್ರೀಮ್ ಆಗಲಿದೆ. ಆಹಾ ತಮಿಳು OTT ಇದನ್ನು ಅಧಿಕೃತವಾಗಿ ಬಹಿರಂಗಪಡಿಸಿದೆ. ಚಿತ್ರದ ಟೀಸರ್ ಅನ್ನು ಹಂಚಿಕೊಂಡಿದೆ. ಚಿತ್ರದಲ್ಲಿ ಜಾನ್ ಎಂಬ ನ್ಯಾಯವಾದಿ ಪಾತ್ರದಲ್ಲಿ ಕುಂಚಕೋ ಬೋಬನ್ ನಟಿಸಿದ್ದಾರೆ.
ಅಪಘಾತವಾದ್ದರಿಂದ ನಾಯಕನು ಮುಖಕ್ಕೆ ಮಾಸ್ಕ್ ಧರಿಸಿಕೊಂಡು ಬದುಕುತ್ತಾನೆ. ಅಪಘಾತದ ನಂತರ ಜಾನ್ ಇಡೀ ಜೀವನ ತಲೆ ಕೆಳಕಾಗುತ್ತದೆ. ತನ್ನ ಕಣ್ಣಮುಂದೆ ನಡೆಯದ ಘಟನೆಗಳನ್ನು ಕಲ್ಪಿಸಿಕೊಳ್ಳುತ್ತಾನೆ. ಮತ್ತೊಂದೆಡೆ ನಿತಿನ್ ಎಂಬ ಬಾಲಕ ತನ್ನ ಶಾಲಾ ಪುಸ್ತಕದಲ್ಲಿ 30 ವರ್ಷಗಳ ಹಿಂದೆ ನಡೆದ ಕೊಲೆ ಪ್ರಕರಣದ ಬಗ್ಗೆ ತನ್ನ ಪುಸ್ತಕದಲ್ಲಿ ಬರೆದುಕೊಂಡಿರುತ್ತಾನೆ.
ಆದರೆ ಪೊಲೀಸ್ ತನಿಖೆ ನಂತರ ನಿಜವಾಗಿಯೂ ಆ ಕೊಲೆ ನಡೆದಿರುವುದು ಬಯಲಾಗುತ್ತದೆ. ಮಗುವಿನ ತಾಯಿ ಶರ್ಮಿಳಾ (ನಯನತಾರಾ) ತನ್ನ ಮಗ ಬರೆದ ಕೊಲೆ ಕಥೆಯನ್ನು ನೋಡಿ ಆಘಾತಕ್ಕೊಳಗಾಗುತ್ತಾಳೆ. ನಿತಿನ್ ಈ ಕೊಲೆಯನ್ನು ಹೇಗೆ ಊಹಿಸಿದ? ಮೃತ ವ್ಯಕ್ತಿ ಯಾರು? 30 ವರ್ಷಗಳ ಹಿಂದೆ ನಡೆದ ಕೊಲೆ ಪ್ರಕರಣವನ್ನು ಜಾನ್ ಭೇದಿಸಿದನೇ? ಈ ಕೊಲೆಗೂ ಶರ್ಮಿಳಾಗೂ ಏನು ಸಂಬಂಧವಿದೆ ಎನ್ನುವುದೇ ಮಾಯಾ ನಿಜಲ್ ಚಿತ್ರದ ಕಥೆ. ಸಿನಿಮಾ ಕಥೆಯೊಂದಿಗೆ ಅಭಿಮಾನಿಗಳು ನಯನ ತಾರಾ ಹಾಗೂ ಕುಂಚಕೋ ಬೋಬನ್ ನಟನೆಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಯನತಾರಾ
ಸದ್ಯಕ್ಕೆ ನಯನತಾರಾ ಸೋಲು ಗೆಲುವುಗಳನ್ನು ಲೆಕ್ಕಿಸದೆ, ಮದುವೆ ನಂತರವೂ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಸದ್ಯಕ್ಕೆ ನಯನತಾರಾ ಕೈಯಲ್ಲಿ 11 ಸಿನಿಮಾಗಳಿವೆ. ಕನ್ನಡದಲ್ಲಿ ಯಶ್ ಟಾಕ್ಸಿಕ್ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಸಲ್ಮಾನ್ ಖಾನ್ ಮತ್ತು ನಿರ್ದೇಶಕ ಮುರುಗದಾಸ್ ಕಾಂಬಿನೇಷನ್‌ನಲ್ಲಿ ಹಿಂದಿಯಲ್ಲಿ ತಯಾರಾಗುತ್ತಿರುವ ಸಿಕಿಂದರ್ ಚಿತ್ರದಲ್ಲಿ ನಯನತಾರಾ ಐಟಂ ಸಾಂಗ್ ಮಾಡುತ್ತಿದ್ದಾರೆ. ಕಳೆದ ವರ್ಷ, ನಯನತಾರಾ ಶಾರುಖ್ ಖಾನ್ ಅವರ ಜವಾನ್ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು.
ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ 1100 ಕೋಟಿ ಕಲೆಕ್ಷನ್ ಮಾಡುವ ಮೂಲಕ ದಾಖಲೆ ನಿರ್ಮಿಸಿದೆ. ಜವಾನ್ ಹಿಟ್‌ನೊಂದಿಗೆ ನಯನತಾರಾಗೆ ಬಾಲಿವುಡ್‌ನಲ್ಲಿ ಸಾಲು ಸಾಲು ಆಫರ್‌ಗಳು ಬರುತ್ತಿದೆ. ನಯನ ತಾರಾ ತೆಲುಗು ಸಿನಿಮಾಗಳಿಂದ ದೂರ ಉಳಿದಿದ್ದಾರೆ. ಕೊನೆಯದಾಗಿ ತೆಲುಗಿನಲ್ಲಿ ಚಿರಂಜೀವಿ ಅವರ ಗಾಡ್‌ಫಾದರ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಮಲಯಾಳಂ ರಿಮೇಕ್ ಸಿನಿಮಾದಲ್ಲಿ ನಾಯಕಿ ಬದಲು ಚಿರಂಜೀವಿ ತಂಗಿಯಾಗಿ ನಯನತಾರಾ ನಟಿಸುತ್ತಿದ್ದಾರೆ.