ಕನ್ನಡ ಸುದ್ದಿ  /  ಮನರಂಜನೆ  /  ಬೆತ್ತಲಾಗಿ ನಟಿಸೋದು ನನಗೆ ಹೊಸದಲ್ಲ, ವಿಷಾದವೂ ಇಲ್ಲ, ಆ ಚಿತ್ರಗಳಲ್ಲಿ ನಟಿಸಲು ನಾನು ಈಗಲೂ ಸಿದ್ಧ; ಶ್ವೇತಾ ಮೆನನ್‌

ಬೆತ್ತಲಾಗಿ ನಟಿಸೋದು ನನಗೆ ಹೊಸದಲ್ಲ, ವಿಷಾದವೂ ಇಲ್ಲ, ಆ ಚಿತ್ರಗಳಲ್ಲಿ ನಟಿಸಲು ನಾನು ಈಗಲೂ ಸಿದ್ಧ; ಶ್ವೇತಾ ಮೆನನ್‌

ಮಾಲಿವುಡ್‌ ನಟಿ ಶ್ವೇತಾ ಮೆನನ್‌ ತಮ್ಮ ಬೋಲ್ಡ್‌ ಅವತಾರದ ಮೂಲಕವೇ ಹೆಚ್ಚು ಸುದ್ದಿಯಲ್ಲಿರುತ್ತಾರೆ. ಅದೇ ರೀತಿ ಅವರ ಬೋಲ್ಡ್‌ ಹೇಳಿಕೆಗಳೂ ಆಗಾಗ ಮುನ್ನೆಲೆಗೆ ಬರುತ್ತಿರುತ್ತವೆ. ಇದೀಗ ಬೆತ್ತಲಾಗಿ ನಟಿಸುವ ಬಗ್ಗೆ, ಬಿಕಿನಿಯಲ್ಲಿ ಕಾಣಿಸಿಕೊಳ್ಳುವ ಬಗ್ಗೆಯೂ ಹೇಳಿಕೆ ನೀಡಿ ಸುದ್ದಿಯಲ್ಲಿದ್ದಾರೆ.

ಬೆತ್ತಲಾಗಿ ನಟಿಸೋದು ನನಗೆ ಹೊಸದಲ್ಲ, ವಿಷಾದವೂ ಇಲ್ಲ, ಆ ಚಿತ್ರಗಳಲ್ಲಿ ನಟಿಸಲು ನಾನು ಈಗಲೂ ಸಿದ್ಧ; ಶ್ವೇತಾ ಮೆನನ್‌
ಬೆತ್ತಲಾಗಿ ನಟಿಸೋದು ನನಗೆ ಹೊಸದಲ್ಲ, ವಿಷಾದವೂ ಇಲ್ಲ, ಆ ಚಿತ್ರಗಳಲ್ಲಿ ನಟಿಸಲು ನಾನು ಈಗಲೂ ಸಿದ್ಧ; ಶ್ವೇತಾ ಮೆನನ್‌

Swetha Menon bold Statement: ಮಾಲಿವುಡ್‌ ನಟಿ ಶ್ವೇತಾ ಮೆನನ್‌ ಕೇವಲ ಮಲಯಾಳಂ ಚಿತ್ರೋದ್ಯಮಕ್ಕೆ ಸೀಮಿತವಾಗಿ ಉಳಿದಿಲ್ಲ. ಹಿಂದಿ, ತೆಲುಗು, ತಮಿಳು ಸಿನಿಮಾಗಳಲ್ಲೂ ಮೋಡಿ ಮಾಡಿದ್ದಾರೆ. ಅದರಲ್ಲೂ ಬಾಲಿವುಡ್‌ನ ಸಾಕಷ್ಟು ಸಿನಿಮಾಗಳಲ್ಲಿ ಡಾನ್ಸರ್‌ ಆಗಿ ಮಿಂಚು ಹರಿಸಿದ್ದಾರೆ. ಬೋಲ್ಡ್‌ ಪಾತ್ರಗಳ ಮೂಲಕವೇ ತೆರೆಮೇಲೆ ಕಂಗೊಳಿಸಿದ್ದಾರೆ. ಐಟಂ ಡಾನ್ಸ್‌ಗಳಿಗೆ ಹೇಳಿ ಮಾಡಿಸಿದ ಈ ಬೆಡಗಿ, ವಯಸ್ಸೀಗ 50ರ ಸನಿಹ ಬಂದರೂ ಇಂದಿಗೂ ಅದೇ ಮೈಮಾಟದೊಂದಿಗೆ ಆಗಾಗ ಕಿಚ್ಚು ಹಚ್ಚುತ್ತಿರುತ್ತಾರೆ. ಇದರ ಜತೆಗೆ ಬೋಲ್ಡ್‌ ಸ್ಟೇಟ್‌ಮೆಂಟ್‌ಗೂ ಶ್ವೇತಾಗೂ ಅವಿನಾಭಾವ ನಂಟು!

ಟ್ರೆಂಡಿಂಗ್​ ಸುದ್ದಿ

ಮಾಡೆಲಿಂಗ್‌ ಕ್ಷೇತ್ರದಲ್ಲಿ ಮಿಂಚಿದ್ದ ಶ್ವೇತಾ ಮೆನನ್‌ 1991ರಲ್ಲಿ ಅನಸ್ವರಂ ಸಿನಿಮಾ ಮೂಲಕ ಮಾಲಿವುಡ್‌ಗೆ ಕಾಲಿಟ್ಟರು. ಅಲ್ಲಿಂದ ಹಿಂದೆ ತಿರುಗಿ ನೋಡದ ಈ ನಟಿ ಸಾಲು ಸಾಲು ಮಲಯಾಳಂ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದರು. ತೆಲುಗು, ತಮಿಳು ಹಿಂದಿಯಲ್ಲೂ ಗುರುತಿಸಿಕೊಂಡರು. ಬೋಲ್ಡ್‌ ಪಾತ್ರಗಳ ಮೂಲಕವೇ ಗಮನ ಸೆಳೆದರು. ಟಿಚಿ ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಯಾದರು, ಅದಾದ ಬಳಿಕ ಟಿವಿ ನಿರೂಪಕಿಯಾಗಿಗೂ ಕೆಲಸ ಮಾಡಿದರು. ಇಂದಿಗೂ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಶ್ವೇತಾ ಇದೀಗ ಬೋಲ್ಡ್‌ ಸ್ಟೇಟ್‌ಮೆಂಟ್‌ ಮೂಲಕ ಬಂದಿದ್ದಾರೆ.

ಕಾಮಸೂತ್ರದಲ್ಲಿ ನಟಿಸಲು ನಾನು ಈಗಲೂ ಸಿದ್ಧ

ನಾನು ಈಗಲೂ ರತಿ ನಿರ್ವೇದಂ ಮತ್ತು ಕಾಮಸೂತ್ರ ಸಿನಿಮಾಗಳಲ್ಲಿ ನಟಿಸಲು ಸಿದ್ಧಳಿದ್ದೇನೆ ಎಂದಿರುವ ಶ್ವೇತಾ ಮೆನನ್‌, ಈ ಹೇಳಿಕೆಯ ಮೂಲಕವೇ ಮಾಲಿವುಡ್‌ನಲ್ಲಿ ಹಲ್‌ಚಲ್‌ ಸೃಷ್ಟಿಸಿದ್ದಾರೆ. ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ಶ್ವೇತಾ, ನಾನು ಹಿಂದೆ ಮಾಡಿದ್ದರ ಬಗ್ಗೆ ತಿರುಗಿ ನೋಡಲ್ಲ. ಅದು ಒಳ್ಳೆಯದೋ ಕೆಟ್ಟದೋ ನನಗದು ಗೊತ್ತಿಲ್ಲ. ಆ ಬಗ್ಗೆ ನನಗೆ ವಿಷಾದವೂ ಇಲ್ಲ. ನನಗೆ ಅನಿಸಿದಂತೆ, ನಾನು ಎಲ್ಲವನ್ನೂ ಪ್ರಜ್ಞಾಪೂರ್ವಕವಾಗಿ ಮಾಡಿದ್ದೇನೆ" ಎಂದಿದ್ದಾರೆ ಶ್ವೇತಾ.

ಆ ರೀತಿ ನಟಿಸಿದ್ದಕ್ಕೆ ನನಗೆ ವಿಷಾದವಿಲ್ಲ

"ನಾನು ಇಲ್ಲಿಯವರೆಗೂ ಯಾವೆಲ್ಲ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದೇನೋ ಆ ಬಗ್ಗೆ ನನಗೆ ಪಶ್ಚಾತ್ತಾಪವೂ ಇಲ್ಲ. ಪ್ರಜ್ಞೆ ಇಲ್ಲದೆ ಏನನ್ನೂ ಮಾಡಿಲ್ಲ. ಇಂದಿಗೂ ಯಾರಾದರೂ ಕರೆದು ಬಿಕಿನಿಯಲ್ಲಿ ನಟಿಸು ಎಂದರೆ ನಾನು ಒಲ್ಲೆ ಎನ್ನಲ್ಲ. ಪಾತ್ರ ಏನನ್ನು ಬೇಡುತ್ತೋ ಅದನ್ನು ಕೊಡಲು ನಾನು ರೆಡಿ. ಬೆತ್ತಲಾಗಿ ನಟಿಸು ಎಂದರೂ ಆ ಪಾತ್ರಕ್ಕೂ ನಾನು ಸೈ. ನಾನು ಈಗಲೂ ರತಿ ನಿರ್ವೇದಂ ಮತ್ತು ಕಾಮಸೂತ್ರ ಸಿನಿಮಾಗಳಲ್ಲಿ ನಟಿಸಲು ಸಿದ್ಧಳಿದ್ದೇನೆ" ಎನ್ನುವ ಮೂಲಕ 49ರ ಹರೆಯದಲ್ಲೂ ಬೋಲ್ಡ್‌ ಹೇಳಿಕೆಯ ಮೂಲಕವೇ ಮತ್ತೆ ಸುದ್ದಿ ಅಂಗಳದ ಮುನ್ನೆಲೆಗೆ ಬಂದಿದ್ದಾರೆ ಶ್ವೇತಾ ಮೆನನ್.‌

ಕಾಮಸೂತ್ರ ಕಾಂಡೋಮ್‌ ಜಾಹೀರಾತಲ್ಲಿ ಶ್ವೇತಾ

ಸಿನಿಮಾರಂಗದ ಜತೆಗೆ ಮಾಡೆಲಿಂಗ್‌ನಲ್ಲಿಯೇ ಹೆಚ್ಚು ಗುರುತಿಸಿಕೊಂಡಿದ್ದ ಶ್ವೇತಾ ಮೆನನ್‌ ಕಾಮಸೂತ್ರ ಕಾಂಡೋಮ್‌ ಜಾಹೀರಾತಿನಲ್ಲಿ ಕಾಣಿಸಿದ್ದೇ ತಡ. ದೊಡ್ಡ ಮಟ್ಟದಲ್ಲಿ ಸುದ್ದಿಯಾದರು. ದಶಕಗಳ ಹಿಂದೆ ಕಾಮಸೂತ್ರ ಜಾಹೀರಾತಿನಲ್ಲಿ ಪ್ರತ್ಯಕ್ಷರಾದ ಬಳಿಕ ಶ್ವೇತಾ ಅವರ ಚಹರೆಯೇ ಬದಲಾಯ್ತು. ಏಕೆಂದರೆ 2007-08ರ ಸಂದರ್ಭದಲ್ಲಿ ಕಾಂಡೋಮ್‌ ಬಗ್ಗೆ ಯಾರೂ ಮುಕ್ತವಾಗಿ ಮಾತನಾಡುತ್ತಿರಲಿಲ್ಲ. ಆದರೆ, ಈ ರೀತಿಯ ಜಾಹೀರಾತಲ್ಲಿ ನಟಿಸುತ್ತಿದ್ದೇನೆ ಎಂದಾಗ ಮನೆಯಿಂದಲೂ ಅವರಿಗೆ ಬೆಂಬಲ ಸಿಕ್ಕಿತ್ತು ಎಂಬುದನ್ನು ಈ ಹಿಂದೆ ಹೇಳಿಕೊಂಡಿದ್ದಾರೆ.

ಶ್ವೇತಾ ಮೆನನ್‌ ಸಿನಿಮಾ ಜರ್ನಿ

1991ರಲ್ಲಿ ಅನಸ್ವರಂ ಸಿನಿಮಾ ಮೂಲ ಮಾಲಿವುಡ್‌ಗೆ ಎಂಟ್ರಿ ಕೊಟ್ಟ ಶ್ವೇತಾ ಮೆನನ್‌, ಅದಾದ ಮೇಲೆ ಮಲಯಾಳಂನ ವೆಲ್‌ಕಮ್‌ ಕೊಡೈಕೆನಲ್‌, ನಕ್ಷತ್ರಕೊಂಡರಂ, ಕೌಶಲಂ ಸಿನಿಮಾಗಳಲ್ಲಿ ನಟಿಸಿದರು. 1995ರಲ್ಲಿ ಟಾಲಿವುಡ್‌ನಲ ದೇಶದ್ರೋಹಲು ಸಿನಿಮಾ ಮೂಲಕ ತೆಲುಗು ಸಿನಿಮಾ ರಂಗ ಪ್ರವೇಶಿಸಿದರು. 1997ರಲ್ಲಿ ಪೃಥ್ವಿ ಸಿನಿಮಾ ಮೂಲಕ ಬಾಲಿವುಡ್‌ಗೂ ಕಾಲಿಟ್ಟರು. ಪ್ರಸ್ತುತ ಮಾಲಿವುಡ್‌ನಲ್ಲಿಯೇ ಹಲವು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ ಶ್ವೇತಾ.

ಟಿ20 ವರ್ಲ್ಡ್‌ಕಪ್ 2024