ದಿ ಕೇರಳ ಸ್ಟೋರಿ ಸಿನಿಮಾ ಈ ದಿನ ಒಟಿಟಿಗೆ ಆಗಮನ; ಥಿಯೇಟರ್‌ನಲ್ಲಿ ನೋಡಿಲ್ವ ಮನೆಯಲ್ಲೇ ನೋಡಿ ಅಂದ್ರು ಅದಾ ಶರ್ಮಾ
The kerala story ott release date 2024: ಅದಾ ಶರ್ಮಾ ನಟನೆಯ ದಿ ಕೇರಳ ಸ್ಟೋರಿ ಶೀಘ್ರದಲ್ಲೇ ಜೀ 5 ನಲ್ಲಿ ಲಭ್ಯವಾಗಲಿದೆ. ಈ ಚಿತ್ರವನ್ನು ಸುದೀಪ್ತೋ ಸೇನ್ ನಿರ್ದೇಶಿಸಿದ್ದಾರೆ. ಶಾಲಿನಿ, ನೀಮಾ, ಗೀತಾಂಜಲಿ ಎಂಬ ಮೂವರು ಹೆಣ್ಣು ಮಕ್ಕಳ ಬದುಕಿನ ಕಥೆಯನ್ನು ಒಳಗೊಂಡ ಈ ಸಿನಿಮಾ ಫೆಬ್ರವರಿ 16ರಂದು ಬಿಡುಗಡೆಯಾಗಲಿದೆ.
ಬೆಂಗಳೂರು: ಸಾಕಷ್ಟು ಚರ್ಚೆ ಹುಟ್ಟು ಹಾಕಿದ ದಿ ಕೇರಳ ಸ್ಟೋರಿ ಸಿನಿಮಾವುದಿ ಕೇರಳ ಸ್ಟೋರಿ ಸಿನಿಮಾ ಫೆಬ್ರವರಿ 16ರಂದು ಒಟಿಟಿಗೆ ಆಗಮನ ಇದೀಗ ಒಟಿಟಿಯಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ. ಅದ ಶಾರ್ಮಾ ನಟನೆಯ ಈ ಚಿತ್ರದ ಒಟಿಟಿ ಬಿಡುಗಡೆ ವಿವರವನ್ನು ಅದಾ ಶರ್ಮಾ ತನ್ನ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸುದೀಪ್ತೋ ಸೇನ್ ನಿರ್ದೇಶನದ ಈ ಚಿತ್ರವನ್ನು ವಿಪುಲ್ ಶಾ ನಿರ್ಮಾಣ ಮಾಡಿದ್ದಾರೆ. ಕಳೆದ ವರ್ಷ ಈ ಚಿತ್ರ ಬಿಡುಗಡೆಯಾಗುವ ಸಂದರ್ಭದಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು.
ದಿ ಕೇರಳ ಸ್ಟೋರಿ: ಒಟಿಟಿ ಬಿಡುಗಡೆ ವಿವರ
"ಅಂತಿಮವಾಗಿ, ಅಚ್ಚರಿಯ ಸಂಗತಿ, ಬಹುನಿರೀಕ್ಷಿತ ದಿ ಕೇರಳ ಸ್ಟೋರಿ ಸಿನಿಮಾ ಶೀಘ್ರದಲ್ಲಿ ಝೀ 5 ನಲ್ಲಿ ಬರಲಿದೆ. #TheKeralaStory ಫೆಬ್ರವರಿ 16 ರಂದು ಪ್ರಥಮ ಪ್ರದರ್ಶನಗೊಳ್ಳಲಿದೆ" ಎಂದು ಅದಾ ಶರ್ಮಾ ಇನ್‌ಸ್ಟಾಗ್ರಾಂನಲ್ಲಿ ಮಾಹಿತಿ ನೀಡಿದ್ದಾರೆ.
ಶಾಲಿನಿ (ಅದಾ ಶರ್ಮಾ), ನಿಮಾ (ಯೋಗಿತಾ ಬಿಹಾನಿ) ಮತ್ತು ಗೀತಾಂಜಲಿ (ಸಿದ್ಧಿ ಇದ್ನಾನಿ) ಎಂಬ ಮೂವರು ಹುಡುಗಿಯರ ಕಥೆಯನ್ನು ಕೇರಳ ಸ್ಟೋರಿ ಹೊಂದಿದ್ದಾರೆ. ಇವರು ಮೂವರನ್ನು ಅವರ ರೂಮ್ ಮೇಟ್ ಆಸಿಫಾ (ಸೋನಿಯಾ ಬಲಾನಿ) ಮತ್ತೊಂದು ಧರ್ಮಕ್ಕೆ ಮತಾಂತರಗೊಳಿಸಲು ಪ್ರಯತ್ನಿಸುವ ವಿಷಯದ ಕುರಿತು ಸಿನಿಮಾ ಮಾತನಾಡುತ್ತದೆ.
ಈ ಸಿನಿಮಾ ಎರಡು ಭಾಗಗಳನ್ನು ಹೊಂದಿದೆ. ಮೊದಲ ಭಾಗದಲ್ಲಿ ಒಂದು ಧರ್ಮದ ಯುವತಿಯರನ್ನು ಕುಶಲತೆಯಿಂದ ಹೇಗೆ ಮತ್ತೊಂದು ಧರ್ಮಕ್ಕೆ ಮತಾಂತರಗೊಳಿಸಲಾಯಿತು ಎಂದು ತೋರಿಸಲಾಗಿದೆ. ಮತ್ತೊಂದು ಭಾಗದಲ್ಲಿ ಇದೇ ಶಾಲಿನಿ ಭಯೋತ್ಪದಕ ಗುಂಪಿನ ಸದಸ್ಯೆ ಫಾತಿಮಾ ಬಾ ಆಗಿರುವುದನ್ನು ಮತ್ತು ಆಕೆಯ ಅಫ್ಘಾನಿಸ್ತಾನದ ಸೆರೆವಾಸದ ಚಿತ್ರಣವನ್ನು ನೀಡುತ್ತದೆ. ಪ್ರೀತಿಯ ಹೆಸರಿನಲ್ಲಿ ಕೇರಳದ ಹಿಂದೂ ಮತ್ತು ಕ್ರಿಶ್ಚಿಯನ್ ಮಹಿಳೆಯರನ್ನು ಸೆಳೆಯಲು, ಮತಾಂತರಗೊಳಿಸಲು, ಯುದ್ಧವಲಯಗಳಿಗೆ ಸೇರಿಸಲು ಪುರುಷರನ್ನು ಹೇಗೆ ಬ್ರೈನ್‌ವಾಶ್ ಮಾಡಲಾಗುತ್ತದೆ ಇತ್ಯಾದಿ ವಿವರವನ್ನು ಈ ಚಿತ್ರದಲ್ಲಿ ನೀಡಲಾಗಿದೆ.
ಒಟಿಟಿ ಬಿಡುಗಡೆ ವಿವರ ನೀಡಿದ ಅದಾ ಶರ್ಮಾ
"ದಿ ಕೇರಳ ಸ್ಟೋರಿ ಎಂಬ ಸಿನಿಮಾವನ್ನು ಧೈರ್ಯವಾಗಿ ತೆರೆಗೆ ತಂದ ವಿಫುಲ್ ಶಾ ಮತ್ತು ಸುದೀಪ್ತೋ ಸೇನ್ ಅವರು ಪ್ರಶಂಸೆಗೆ ಅರ್ಹರು. ಬಾಕ್ಸ್ ಆಫೀಸ್‌ನಲ್ಲಿ ಅದ್ಭುತ ಯಶಸ್ಸು ಪಡೆದ ಬಳಿಕ ಈ ಸಿನಿಮಾ ಸಾಕಷ್ಟು ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಇದು ಜಾಗತಿಕವಾಗಿಯೂ ಗಲ್ಲಾಪೆಟ್ಟಿಗೆಯಲ್ಲಿ ಇತಿಹಾಸ ಸೃಷ್ಟಿಸಿದೆ. ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆಯ ಮಹಿಳಾ ಪ್ರಧಾನ ಚಿತ್ರವಾಗಿದೆ. ಇದೀಗ ನಾವು ದಿ ಕೇರಳ ಸ್ಟೋರಿ ಸಿನಿಮಾವು ಝೀ 5 ಒಟಿಟಿಯಲ್ಲಿ ಬಿಡುಗಡೆಯಾಗುವುದನ್ನು ನಿರೀಕ್ಷಿಸುತ್ತಿದ್ದೇವೆ. ಈ ಮೂಲಕ ಹೆಚ್ಚು ಜನರಿಗೆ ದಿ ಕೇರಳ ಸ್ಟೋರಿ ತಲುಪಲಿದೆ. ಚಿತ್ರಮಂದಿರದಲ್ಲಿ ಚಿತ್ರ ನೋಡುವ ಅವಕಾಶ ಸಿಗದ ಪ್ರೇಕ್ಷಕರು ಒಟಿಟಿ ಮೂಲಕ ಸದ್ಯದಲ್ಲಿಯೇ ದಿ ಕೇರಳ ಸ್ಟೋರಿ ಸಿನಿಮಾ ಕಣ್ತುಂಬಿಕೊಳ್ಳಬಹುದು" ಎಂದು ಅದಾ ಶರ್ಮಾ ಹೇಳಿದ್ದಾರೆ.
2016 ರಲ್ಲಿ ಉತ್ತರ ಕೇರಳದ 21 ಜನರು ನಾಪತ್ತೆಯಾಗಿರುವ ಘಟನೆಗೆ ಥಳಕು ಹಾಕಿಕೊಂಡಿದೆ. ನಾಪತ್ತೆಯಾಗಿರುವವರು ಸಿರಿಯಾ ಮತ್ತು ಅಫ್ಘಾನಿಸ್ತಾನದ ಇಸ್ಲಾಮಿಕ್ ಸ್ಟೇಟ್ ಹಿಡಿತದ ಪ್ರದೇಶಗಳಿಗೆ ಹೋಗಿ ಅಲ್ಲಿ ಉಗ್ರ ಸಂಘಟನೆಗಳಿಗೆ ಸೇರಿರುವ ಘಟನೆಯನ್ನು ಈ ಚಿತ್ರದ ಮೂಲಕ ತಿಳಿಸಲಾಗಿದೆ. ಇದೀಗ ಈ ದಿ ಕೇರಳ ಸ್ಟೋರಿ ಒಟಿಟಿಗೆ ಆಗಮಿಸುತ್ತಿದ್ದು, ಚಿತ್ರಮಂದಿರಗಳಲ್ಲಿ ನೋಡದವರು ಝೀ 5ನಲ್ಲಿ ನೋಡಬಹುದಾಗಿದೆ.
ಟ್ರೈಲರ್ ಬಿಡುಗಡೆಯಾದಾಗಿನಿಂದ ಕೇರಳ ಸ್ಟೋರಿ ಕುರಿತು ದೇಶದಲ್ಲಿ ಚರ್ಚೆ ನಡೆಯುತ್ತಿದೆ. ಕೇರಳದಿಂದ 32,000 ಮಹಿಳೆಯರು ಕಾಣೆಯಾಗಿದ್ದಾರೆ ಎಂದು ಚಿತ್ರದ ಟ್ರೈಲರ್ ಹೇಳಿತ್ತು. ಇದಕ್ಕೆ ಆಕ್ಷೇಪ ವ್ಯಕ್ತವಾಗಿತ್ತು. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇದನ್ನು ವಿಕೃತ ಕಥೆ ಎಂದಿದ್ದರು. ಚಿತ್ರದ ಪ್ರದರ್ಶನದ ಮೇಲಿನ ನಿಷೇಧವನ್ನು ತೆಗೆದುಹಾಕುವಂತೆ ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚಿಸಿದ ಬಳಿಕ ಈ ಚಿತ್ರ ಪ್ರದರ್ಶನ ಕಂಡಿತ್ತು.