ಕನ್ನಡ ಸುದ್ದಿ  /  ಮನರಂಜನೆ  /  Turbo Thalavan Ott: ಟರ್ಬೊ, ಥಳವನ್ ಬಿಡುಗಡೆ ದಿನಾಂಕ ಖಚಿತಗೊಳಿಸಿದ ಒಟಿಟಿ ಪಾಟ್ನರ್‌; ರಾಜ್‌ ಬಿ ಶೆಟ್ಟಿ ಸಿನಿಮಾ ಮನೆಯಲ್ಲೇ ನೋಡಿ

Turbo Thalavan OTT: ಟರ್ಬೊ, ಥಳವನ್ ಬಿಡುಗಡೆ ದಿನಾಂಕ ಖಚಿತಗೊಳಿಸಿದ ಒಟಿಟಿ ಪಾಟ್ನರ್‌; ರಾಜ್‌ ಬಿ ಶೆಟ್ಟಿ ಸಿನಿಮಾ ಮನೆಯಲ್ಲೇ ನೋಡಿ

Turbo, Thalavan OTT release dates: ಮಮ್ಮುಟ್ಟಿ ನಟನೆಯ ಟರ್ಬೊ ಮತ್ತು ಬಿಜು ಮೆನನ್‌ ನಟನೆಯ ಥಳವನ್‌ ಸಿನಿಮಾಗಳ ಒಟಿಟಿ ಬಿಡುಗಡೆ ದಿನಾಂಕವನ್ನು ಒಟಿಟಿ ಪಾಟ್ನರ್‌ ಸೋನಿ ಲಿವ್‌ ಖಚಿತಪಡಿಸಿದೆ. ಇದರೊಂದಿಗೆ ಒಟಿಟಿಯಲ್ಲಿ ಮಲಯಾಳಿ ಫ್ರಮ್‌ ಇಂಡಿಯಾ ಸಿನಿಮಾ ಕೂಡ ಬಿಡುಗಡೆಗೆ ಸಜ್ಜಾಗಿದೆ.

Turbo Thalavan OTT: ಟರ್ಬೊ, ಥಳವನ್ ಬಿಡುಗಡೆ ದಿನಾಂಕ ಖಚಿತಗೊಳಿಸಿದ ಒಟಿಟಿ ಪಾಟ್ನರ್‌
Turbo Thalavan OTT: ಟರ್ಬೊ, ಥಳವನ್ ಬಿಡುಗಡೆ ದಿನಾಂಕ ಖಚಿತಗೊಳಿಸಿದ ಒಟಿಟಿ ಪಾಟ್ನರ್‌

ಬೆಂಗಳೂರು: ಮಮ್ಮುಟ್ಟಿ ನಟನೆಯ ಟರ್ಬೊ ಮತ್ತು ಬಿಜು ಮೆನನ್‌ ನಟನೆಯ ಥಳವನ್‌ ಸಿನಿಮಾಗಳ ಒಟಿಟಿ ಬಿಡುಗಡೆ ದಿನಾಂಕವನ್ನು ಒಟಿಟಿ ಪಾಟ್ನರ್‌ ಸೋನಿ ಲಿವ್‌ ಖಚಿತಪಡಿಸಿದೆ. ಸೋನಿ ಲೈವ್‌ ಈ ಎರಡು ಸಿನಿಮಾಗಳಿಗೆ ಡಿಜಿಟಲ್‌ ಹಕ್ಕು ಪಡೆದುಕೊಂಡಿದೆ ಎಂದು ಈ ಹಿಂದೆಯೇ ವರದಿಯಾಗಿತ್ತು. ಇದೀಗ ಯಾವಾಗ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ ಎನ್ನುವುದೂ ಪಕ್ಕಾ ಆಗಿದೆ. ಟರ್ಬೊ ಸಿನಿಮಾದಲ್ಲಿ ಕನ್ನಡ ನಟ ರಾಜ್‌ ಬಿ ಶೆಟ್ಟಿ ಇರುವುದರಿಂದ ಮತ್ತು ರಾಜ್‌ ಬಿ ಶೆಟ್ಟಿ ವಿಲನ್‌ ರೋಲ್‌ನಲ್ಲಿ ಅಬ್ಬರಿಸಿರುವ ಸಿನಿಮಾವಾಗಿರುವುದರಿಂದ ಕನ್ನಡಿಗರಿಗೂ ಸಿನಿಮಾದ ಮೇಲೆ ನಿರೀಕ್ಷೆಯಿದೆ.

ಮಲಯಾಳಿ ಫ್ರಮ್‌ ಇಂಡಿಯಾ ಎಂಬ ಸಿನಿಮಾವು ಸೋನಿ ಲಿವ್‌ನಲ್ಲಿ ಜುಲೈ 5ರಂದು ಬಿಡುಗಡೆಯಾಗಿದೆ. ಇದೇ ಸಮಯದಲ್ಲಿ ಮಮ್ಮುಟ್ಟಿ ನಟನೆಯ ಟರ್ಬೊ ಸಿನಿಮಾ ಒಟಿಟಿಯಲ್ಲಿ ಆಗಸ್ಟ್‌ ತಿಂಗಳಲ್ಲಿ ಬಿಡುಗಡೆಯಾಗುವುದಾಗಿ ಅಧಿಕೃತವಾಗಿ ತಿಳಿಸಿದೆ. ಆದರೆ, ಥಳವನ್‌ ಸಿನಿಮಾ ಒಟಿಟಿಗೆ ಆಗಮಿಸಲು ಇನ್ನಷ್ಟು ದಿನ ಕಾಯಬೇಕು. ಥಳವನ್‌ ಸಿನಿಮಾ ಸೆಪ್ಟೆಂಬರ್‌ ತಿಂಗಳಲ್ಲಿ ಒಟಿಟಿಗೆ ಆಗಮಿಸಲಿದೆ. ನಿಖರ ದಿನಾಂಕ ಇನ್ನೂ ಖಚಿತವಾಗಿಲ್ಲ.

ಟ್ರೆಂಡಿಂಗ್​ ಸುದ್ದಿ

ಈ ಸಿನಿಮಾಗಳ ಒಟಿಟಿ ಹಕ್ಕುಗಳನ್ನು ಸೋನಿ ಲಿವ್‌ ತನ್ನದಾಗಿಸಿಕೊಂಡಿದೆ. ಸೋನಿ ಲಿವ್‌ನಲ್ಲಿ ಹಲವು ಮಲಯಾಳಂ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಪ್ರಣವ್‌ ಮೋಹನ್‌ಲಾಲ್‌ ಮತ್ತು ಧ್ಯಾನ್‌ ಶ್ರೀನಿವಾಸನ್‌ ನಟನೆಯ ವರ್ಷಂಲ್ಕು ಸಿನಿಮಾವು ಜೂನ್‌ ತಿಂಗಳಲ್ಲಿ ಬಿಡುಗಡೆಯಾಗಿತ್ತು. ಪ್ರತಿ ತಿಂಗಳು ಒಂದಾದರೂ ಹೊಸ ಮಲಯಾಳಂ ಸಿನಿಮಾ ಈ ಒಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ ಎಂದು ಎಚ್‌ಟಿ ಕನ್ನಡದ ಸಹೋದರಿ ತಾಣ ಒಟಿಟಿ ಪ್ಲೇ ವರದಿಯಲ್ಲಿ ತಿಳಿಸಿದೆ.

ಟರ್ಬೊ ಸಿನಿಮಾದ ಕುರಿತು

ಮಮ್ಮಟ್ಟಿ ನಟನೆಯ ಟರ್ಬೊ ಸಿನಿಮಾವು ಟರ್ಬೊ ಜೋಸ್‌ ಎಂದು ಕರೆಯಲ್ಪಡುವ ಅರುವಿಪುರುತು ಜೋಸ್‌ನ ಸಾಹಸಮಯ ಕಥೆಯನ್ನು ಹೊಂದಿದೆ. ಈ ಜೋಸ್‌ನ ಪಾತ್ರದಲ್ಲಿ ಮಮ್ಮುಟ್ಟಿ ನಟಿಸಿದ್ದಾರೆ. ತನ್ನ ಸ್ನೇಹಿತ ಜೆರ್ರಿ ಮತ್ತು ಇಂದುಲೇಖಾ ಎಂಬ ಮಹಿಳೆಯ ಜತೆ ಚೆನ್ನೈಗೆ ಜೋಸ್‌ ಹೋಗುತ್ತಾರೆ. ಇದಾದ ಬಳಿಕ ಸಾಕಷ್ಟು ಘಟನೆಗಳು ನಡೆಯುತ್ತವೆ. ಚೆನ್ನೈಗೆ ಆಗಮಿಸುವ ಸಂದರ್ಭದಲ್ಲಿ ಖಳನಾಯಕನ ಕಡೆಯಿಂದ ತೊಂದರೆಯಾಗುತ್ತದೆ. ಖಳನಾಯಕ ಯಾರೆಂದುಕೊಂಡಿರಿ, ನಮ್ಮ ರಾಜ್‌ ಬಿ ಶೆಟ್ಟಿ. ಈಗಾಗಲೇ ಗರುಡ ಗಮನ ವೃಷಭ ವಾಹನ ಸಿನಿಮಾದಲ್ಲಿ ರಗಡ್‌ ಲುಕ್‌ನಲ್ಲಿ ಎಲ್ಲರನ್ನೂ ರಂಜಿಸಿದ ರಾಜ್‌ ಬಿ ಶೆಟ್ಟಿ ಈ ಸಿನಿಮಾದಲ್ಲಿ ಭಯಂಕರ ವಿಲನ್‌ ಆಗಿ ನಟಿಸಿದ್ದಾರೆ.

ಈ ಮಲಯಾಳ ಸಿನಿಮಾದಲ್ಲಿ ಮಮ್ಮುಟ್ಟಿಯ ನಟನೆಯೊಂದಿಗೆ ಪ್ಯಾನ್‌ ಇಂಡಿಯಾ ಪ್ರೇಕ್ಷಕರಿಗೆ ರಾಜ್‌ ಬಿ ಶೆಟ್ಟಿ ಇಷ್ಟವಾಗಿದ್ದಾರೆ. ಕನ್ನಡದ ಒಂದು ಮೊಟ್ಟೆಯ ಕಥೆ ಖ್ಯಾತಿಯ ರಾಜ್‌ ಬಿ ಶೆಟ್ಟಿಯ ವಿಲನ್‌ ರೋಲ್‌ಗೆ ಮೆಚ್ಚುಗೆಯ ಮಹಾಪೂರ ಬಂದಿದೆ. ಈಗಾಗಲೇ ಟೋಬಿ, ಗರುಡ ಗಮನ ವೃಷಭ ವಾಹನದಂತಹ ಚಿತ್ರಗಳಿಂದ ರಾಜ್‌ ಬಿ ಶೆಟ್ಟಿ ಪ್ಯಾನ್‌ ಇಂಡಿಯಾ ಪ್ರೇಕ್ಷಕರನ್ನು ಸೆಳೆದಿದ್ದಾರೆ. ಕನ್ನಡ ನಟ ರಾಜ್‌ ಬಿ ಶೆಟ್ಟಿ ಈಗಾಗಲೇ ತನ್ನ ವಿಶಿಷ್ಟ ಪ್ರತಿಭೆ ಮೂಲಕ ಎಲ್ಲರ ಸೆಳೆದಿದ್ದಾರೆ. ಇವರು ನಿರ್ದೇಶಿಸಿ ನಟಿಸಿದ ಒಂದು ಮೊಟ್ಟೆಯ ಕಥೆಯಂತೂ ಹಲವು ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಗರುಡ ಗಮನ ವೃಷಭ ವಾಹನ ಚಿತ್ರದಲ್ಲಿ ಇವರು ಬೇರೆ ರೀತಿಯಾಗಿಯೇ ನಟಿಸಿದ್ದರು. ರಾಜ್‌ ಬಿ ಶೆಟ್ಟಿ ನಟನೆಯ ಟರ್ಬೊ ಸಿನಿಮಾ ಮುಂದಿನ ತಿಂಗಳು ಒಟಿಟಿಗೆ ಆಗಮಿಸಲಿದ್ದು, ಥಿಯೇಟರ್‌ನಲ್ಲಿ ನೋಡದೆ ಇರುವವರು ಈ ಚಿತ್ರವನ್ನು ಮನೆಯಲ್ಲಿಯೇ ಕುಳಿತು ಕಣ್ತುಂಬಿಕೊಳ್ಳಬಹುದು.