RDX OTT release: ಒಟಿಟಿಯಲ್ಲಿ ಬಿಡುಗಡೆಗೊಂಡ ಆರ್‌ಡಿಎಕ್ಸ್‌, ಮಲಯಾಳಂ ಸಿನಿಪ್ರಿಯರಿಗೆ ಬ್ಲಾಕ್‌ಬಸ್ಟರ್‌ ಸಿನಿಮಾದ ರಸದೌತಣ
ಕನ್ನಡ ಸುದ್ದಿ  /  ಮನರಂಜನೆ  /  Rdx Ott Release: ಒಟಿಟಿಯಲ್ಲಿ ಬಿಡುಗಡೆಗೊಂಡ ಆರ್‌ಡಿಎಕ್ಸ್‌, ಮಲಯಾಳಂ ಸಿನಿಪ್ರಿಯರಿಗೆ ಬ್ಲಾಕ್‌ಬಸ್ಟರ್‌ ಸಿನಿಮಾದ ರಸದೌತಣ

RDX OTT release: ಒಟಿಟಿಯಲ್ಲಿ ಬಿಡುಗಡೆಗೊಂಡ ಆರ್‌ಡಿಎಕ್ಸ್‌, ಮಲಯಾಳಂ ಸಿನಿಪ್ರಿಯರಿಗೆ ಬ್ಲಾಕ್‌ಬಸ್ಟರ್‌ ಸಿನಿಮಾದ ರಸದೌತಣ

OTT Latest Updates: ಒಟಿಟಿಯಲ್ಲಿ ಬಿಡುಗಡೆಗೊಂಡಿರುವ ಮಲಯಾಳಂ ಬ್ಲಾಕ್‌ಬಸ್ಟರ್‌ ಸಿನಿಮಾ "ಆರ್‌ಡಿಎಕ್ಸ್‌: ರಾಬರ್ಟ್ ಡೋನಿ ಕ್ಸೇವಿಯರ್" ಸಿನಿಮಾವು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದೆ. ಥಿಯೇಟರ್‌ನಲ್ಲಿ ಉತ್ತಮ ಗಳಿಕೆ ಮಾಡುತ್ತಿರುವ ಸಂದರ್ಭದಲ್ಲಿಯೇ ಇದು ಒಟಿಟಿಗೆ ಆಗಮಿಸಿದ್ದು, ಈ ಕುರಿತ ರಿಪೋರ್ಟ್‌ ಕಾರ್ಡ್‌ ಇಲ್ಲಿದೆ.

RDX OTT release: ಒಟಿಟಿಯಲ್ಲಿ ಬಿಡುಗಡೆಗೊಂಡ ಬ್ಲಾಕ್‌ಬಸ್ಟರ್‌ ಸಿನಿಮಾ ಆರ್‌ಡಿಎಕ್ಸ್‌
RDX OTT release: ಒಟಿಟಿಯಲ್ಲಿ ಬಿಡುಗಡೆಗೊಂಡ ಬ್ಲಾಕ್‌ಬಸ್ಟರ್‌ ಸಿನಿಮಾ ಆರ್‌ಡಿಎಕ್ಸ್‌

ಬೆಂಗಳೂರು: ಒಟಿಟಿಯಲ್ಲಿ ಮಲಯಾಳಂ ಸಿನಿಮಾಗಳಿಗೆ ದೊಡ್ಡ ಪ್ರೇಕ್ಷಕ ವರ್ಗವಿದೆ. ಆರ್‌ಡಿಎಕ್ಸ್‌: ರಾಬರ್ಟ್ ಡೋನಿ ಕ್ಸೇವಿಯರ್ ಸಿನಿಮಾವು ಈಗಾಗಲೇ ಅಂದರೆ ಸೆಪ್ಟೆಂಬರ್‌ 23ರಂದು ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಥಿಯೇಟರ್‌ಗಳಲ್ಲಿ ಆಗಸ್ಟ್‌ 25ರಂದು ಬಿಡುಗಡೆಯಾದ ಈ ಸಿನಿಮಾವು ಇದೀಗ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದ್ದು, ಸಾಕಷ್ಟು ಜನರು ಸೂಪರ್‌ ಸಿನಿಮಾವೆಂದು ಹೇಳುತ್ತಿದ್ದಾರೆ. ಥಿಯೇಟರ್‌ನಲ್ಲಿ ಬಿಡುಗಡೆಗೊಂಡಾಗ ಇದು ಬ್ಲಾಕ್‌ಬಸ್ಟರ್‌ ಸಿನಿಮಾವೆಂದು ಪ್ರಚಾರ ಪಡೆದಿತ್ತು.

ನಹಾಸ್ ಹಿದಾಯತ್ ಅವರ ಚೊಚ್ಚಲ ನಿರ್ದೇಶನದ ಈ ಸಿನಿಮಾವು ಒಟಿಟಿಯಲ್ಲಿ ನೋಡಲು ಬಯಸುವವರಿಗೆ ಒಂದಿಷ್ಟು ಮಾಹಿತಿ ಇಲ್ಲಿ ನೀಡಲಾಗಿದೆ. ಸೆಪ್ಟೆಂಬರ್ 23 ರ ಮಧ್ಯರಾತ್ರಿ ನೆಟ್‌ಫ್ಲಿಕ್ಸ್‌ನಲ್ಲಿ 'ಆರ್‌ಡಿಎಸ್‌' ಬಿಡುಗಡೆಯಾಗಿತ್ತು. ಸೆಪ್ಟೆಂಬರ್‌ 24ರಂದು ಒಟಿಟಿಯಲ್ಲಿ ನೋಡಿರುವ ಸಾಕಷ್ಟು ಜನರು ಈ ಸಿನಿಮಾದ ಕುರಿತು ಸಕಾರಾತ್ಮಕ ಪ್ರತಿಕ್ರಿಯೆಗಳನ್ನು ಮಾಡುತ್ತಿದ್ದಾರೆ.

ತನ್ನ ಡಿಜಿಟಲ್ ಸ್ಟ್ರೀಮಿಂಗ್‌ಗೆ ಸಜ್ಜಾಗುತ್ತಿದೆ, ರಾತ್ರಿಯ ನಂತರ, ಚಲನಚಿತ್ರ ಪ್ರೇಮಿಗಳು ತಮ್ಮ ಹೋಮ್ ಸ್ಕ್ರೀನ್‌ಗಳಲ್ಲಿ ಕ್ರಿಯೆಯನ್ನು ವೀಕ್ಷಿಸಲು ಉತ್ಸುಕರಾಗಿದ್ದಾರೆ. ಈಗಾಗಲೇ ಸಿನಿಮಾ ಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿರುವ ಆರ್‌ಡಿಎಕ್ಸ್‌ ಸಿನಿಮಾವನ್ನು ಇಷ್ಟು ಬೇಗ ಒಟಿಟಿಯಲ್ಲಿ ಏಕೆ ಬಿಡುಗಡೆ ಮಾಡಲಾಗಿದೆ ಎಂಬ ಪ್ರಶ್ನೆಯೂ ಸಹಜವಾಗಿ ಮೂಡಿದೆ. ಇದು ಥಿಯೇಟರ್‌ ಆದಾಯದ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆಯೂ ಇದೆ.

ಆರ್‌ಡಿಎಕ್ಸ್‌ ಬಿಡುಗಡೆಯಾದ ಒಂದು ತಿಂಗಳಲ್ಲಿ ಉತ್ತಮ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ಪಡೆಯುತ್ತಿದೆ. ದುಲ್ಕರ್ ಸಲ್ಮಾನ್ ಅವರ ಅತ್ಯಂತ ನಿರೀಕ್ಷಿತ ಸಾಹಸ ಚಿತ್ರ 'ಕಿಂಗ್ ಆಫ್ ಕೋಥಾʼ ಮತ್ತು ನಿವಿನ್ ಪಾಲಿ ಅವರ 'ರಾಮಚಂದ್ರ ಬಾಸ್ & ಕಂ' ಚಿತ್ರಗಳಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ಪಡೆಯುತ್ತಿದೆ.

ಆರ್‌ಡಿಎಕ್ಸ್‌ ಹಲವು ಪ್ರಮುಖ ಸಿನಿಪ್ರತಿಭೆಗಳನ್ನು ಒಳಗೊಂಡ ಪ್ರಮುಖ ಚಿತ್ರ. ಇದರಲ್ಲಿ ಶೇನ್ ನಿಗಮ್, ಆಂಟೋನಿ ವರ್ಗೀಸ್ ಮತ್ತು ನೀರಜ್ ಮಾಧವ್ ಮುಂತಾದವರು ನಟಿಸಿದ್ದು, ಲಾಲ್, ಬಾಬು ಆಂಟೋನಿ, ಮಹಿಮಾ ನಂಬಿಯಾರ್, ಐಮಾ ರೋಸ್ಮಿ ಮುಂತಾದವರ ತಾರಾಗಣದಿಂದ ಕೂಡಿದೆ. ಸೆಬಾಸ್ಟಿಯನ್, ಮಾಲಾ ಪಾರ್ವತಿ ಮತ್ತು ಬೈಜು ಮುಂತಾದ ಕಲಾವಿದರು ಈ ಚಿತ್ರಕ್ಕೆ ಜೀವ ತುಂಬಿದ್ದಾರೆ.

ಈ ಸಿನಿಮಾದಲ್ಲಿ ಚಮನ್ ಚಕ್ಕೊ ಅವರ ಸೃಜನಶೀಲ ನಿರೂಪಣೆ, ಸಂಕಲನವಿದೆ. ಆಕ್ಷನ್‌ ದೃಶ್ಯಗಳಲ್ಲಿ ಅಲೆಕ್ಸ್ ಜೆ. ಪುಲಿಕಲ್ ಅವರ ಛಾಯಾಗ್ರಹಣ ಗಮನ ಸೆಳೆಯುತ್ತದೆ. ಆರ್‌ಡಿಎಕ್ಸ್‌ ಸಿನಿಮಾ ಎಲ್ಲಿ ಹೇಗೆ ನೋಡಬಹುದು ಎಂದು ಯೋಚಿಸುತ್ತಿರುವವರು ನೆಟ್‌ಫ್ಲಿಕ್ಸ್‌ ಆನ್‌ ಮಾಡಬಹುದು.

ಓಣಂ ಹಬ್ಬದ ಸಮಯದಲ್ಲಿ ಆರ್‌ಡಿಎಕ್ಸ್‌ ಬೆಳ್ಳಿತೆರೆಗೆ ಆಗಮಿಸಿತ್ತು. ಆ ಸಮಯದಲ್ಲಿ ಅದು ಪ್ರೇಕ್ಷಕರನ್ನು ನಿರಾಶೆಗೊಳಿಸಲಿಲ್ಲ. ಸಿನಿ ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಸಾಕಷ್ಟು ಮೆಚ್ಚುಗೆ ಪಡೆಯಿತು. ಬಾಕ್ಸ್‌ ಆಫೀಸ್‌ನಲ್ಲೂ ಉತ್ತಮ ಕಲೆಕ್ಷನ್‌ ಮಾಡಿತು. ಆರ್‌ಡಿಎಕ್ಸ್‌ ಭರ್ಜರಿ ಯಶಸ್ಸು ಗಳಿಸಿತು. ಕೇರಳದಲ್ಲಿಯೇ 50 ಕೋಟಿ ಆದಾಯ ಗಳಿಸಿದೆ. "ಪುಲಿಮುರುಗನ್," "ಲೂಸಿಫರ್," ಮತ್ತು "2018"ನಂತಹ ಪ್ರಮುಖ ಸಿನಿಮಾಗಳಷ್ಟು ಆದಾಯ ಗಳಿಸಿ ದಾಖಲೆ ಬರೆಯಿತು.

Whats_app_banner