ಕನ್ನಡ ಸುದ್ದಿ  /  Entertainment  /  Mollywood News Watch Premalu Movie In Ott Watch In Disney Pls Hotstar On April 12 Premalu Digital Streaming Pcp

Premalu OTT: ಮನೆಯಲ್ಲೇ ಪ್ರೇಮಲು ಸಿನಿಮಾ ನೋಡಿ; ಮುಂದಿನ ವಾರ ಮಲಯಾಳಂ ಸೂಪರ್‌ಹಿಟ್‌ ಚಿತ್ರ ಒಟಿಟಿಗೆ ಆಗಮನ

Premalu OTT Release: ನಸ್ಲಾನ್ ಕೆ ಗಫೂರ್ ಮತ್ತು ಮಮಿತಾ ಬೈಜು ಪ್ರಮುಖ ಪಾತ್ರದಲ್ಲಿ ನಟಿಸಿರುವ ಪ್ರೇಮಲು ಸಿನಿಮಾ ಇನ್ನೂ ಒಟಿಟಿಯಲ್ಲಿ ಬಿಡುಗಡೆಯಾಗಿಲ್ಲ. ಪ್ರೇಮಲು ಸಿನಿಮಾವನ್ನು ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ನಲ್ಲಿ ಏಪ್ರಿಲ್‌ 12ರಿಂದ ಪ್ರೇಮಲು ಸಿನಿಮಾವನ್ನು ನೋಡಬಹುದಾಗಿದೆ.

Premalu OTT: ಮುಂದಿನ ವಾರ ಮಲಯಾಳಂ ಸೂಪರ್‌ಹಿಟ್‌ ಚಿತ್ರ ಪ್ರೇಮಲು ಒಟಿಟಿಗೆ ಆಗಮನ
Premalu OTT: ಮುಂದಿನ ವಾರ ಮಲಯಾಳಂ ಸೂಪರ್‌ಹಿಟ್‌ ಚಿತ್ರ ಪ್ರೇಮಲು ಒಟಿಟಿಗೆ ಆಗಮನ

ಬೆಂಗಳೂರು: ಒಟಿಟಿಯಲ್ಲಿ ಪ್ರೇಮಲು ಹೆಸರಿನ ಮಲಯಾಳಂ ಸಿನಿಮಾ ನೋಡಲು ಸಾಕಷ್ಟು ಜನರು ಕಾಯುತ್ತಿದ್ದಾರೆ. ಈ ಹಿಂದಿನ ವರದಿಗಳ ಪ್ರಕಾರ ಮಾರ್ಚ್‌ 28ರಂದು ಒಟಿಟಿಯಲ್ಲಿ ಪ್ರೇಮಲು ಬಿಡುಗಡೆಯಾಗಬೇಕಿತ್ತು. ಆದರೆ, ಅಂದು ಬಿಡುಗಡೆಯಾಗಿರಲಿಲ್ಲ. ಇದೀಗ ಪ್ರೇಮಲು ಚಿತ್ರತಂಡದ ಕುರಿತು ಒಟಿಟಿ ರಿಲೀಸ್‌ ಕುರಿತು ಅಧಿಕೃತ ಅಪ್‌ಡೇಟ್‌ ಬಂದಿದೆ. ನಸ್ಲಾನ್ ಕೆ ಗಫೂರ್ ಮತ್ತು ಮಮಿತಾ ಬೈಜು ಮುಖ್ಯ ಭೂಮಿಕೆಯಲ್ಲಿರುವ ಪ್ರೇಮುಲು ಚಿತ್ರ ಸದ್ಯದಲ್ಲಿಯೇ ಒಟಿಟಿಗೆ ಆಗಮಿಸಲಿದೆ. ಈಗಾಗಲೇ ಮಾಲಿವುಡ್‌ನಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿರುವ ಈ ಸಿನಿಮಾ, ತೆಲುಗು ಮತ್ತು ತಮಿಳಿನಲ್ಲೂ ಡಬ್‌ ಆಗಿ ಬಿಡುಗಡೆ ಆಗಿತ್ತು.

ಪ್ರೇಮಲು ಒಟಿಟಿ ಬಿಡುಗಡೆ ದಿನಾಂಕ

ಗಿರೀಶ್‌ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರದಲ್ಲಿ ನಸ್ಲಾನ್ ಕೆ ಗಫೂರ್ ಮತ್ತು ಮಮಿತಾ ಬೈಜು ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಈ ಸಿನಿಮಾದ ಒಟಿಟಿ ಬಿಡುಗಡೆ ಕುರಿತು ಇದೀಗ ಅಧಿಕೃತ ಮಾಹಿತಿ ದೊರಕಿದೆ. ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ನಲ್ಲಿ ಏಪ್ರಿಲ್‌ 12ರಿಂದ ಪ್ರೇಮಲು ಸಿನಿಮಾವನ್ನು ನೋಡಬಹುದಾಗಿದೆ.

ಮಲಯಾಳಂನಲ್ಲಿ ಇತ್ತೀಚೆಗೆ ಹಲವು ಸೂಪರ್‌ಹಿಟ್‌ ಸಿನಿಮಾಗಳು ಆಗಮಿಸಿವೆ. ಒಂದೆಡೆ ಮಂಜುಮ್ಮೇಲ್‌ ಬಾಯ್ಸ್‌ ಈಗಲೂ ಚಿತ್ರಮಂದಿರಗಳಲ್ಲಿ ತನ್ನ ಸಕ್ಸಸ್‌ ಯಾತ್ರೆ ಮುಂದುವರೆಸಿದೆ. ಪ್ರೇಮಲು ಕೂಡ ಇದೇ ರೀತಿ ಬಾಕ್ಸ್‌ ಆಫೀಸ್‌ನಲ್ಲಿ ಯಶಸ್ಸು ಪಡೆದಿದೆ. ಮೊದಲು ಮಲಯಾಳಂ ಭಾಷೆಯಲ್ಲಿ ಮಾತ್ರ ಈ ಸಿನಿಮಾ ಬಿಡುಗಡೆಯಾಗಿತ್ತು. ಬಳಿಕ ತೆಲುಗು, ತಮಿಳಿನಲ್ಲೂ ಬಿಡುಗಡೆಯಾಗಿ ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಗಳಿಕೆ ಮಾಡಿತ್ತು.

ಚಿತ್ರಮಂದಿರಗಳಲ್ಲಿ ಪ್ರೇಮಲು ಸಿನಿಮಾ ನೋಡಲು ಸಾಧ್ಯವಾಗದೆ ಇರುವವರಿಗೆ ಸದ್ಯದಲ್ಲಿಯೇ ಒಟಿಟಿಯಲ್ಲಿ ನೋಡುವ ಅವಕಾಶ ದೊರಕಲಿದೆ. ರೊಮ್ಯಾಂಟಿಕ್ ಕಾಮಿಡಿ ಶೈಲಿಯ ಪ್ರೇಮಲು ಸಿನಿಮಾವನ್ನು ಕೇವಲ 10 ಕೋಟಿಗೂ ಕಡಿಮೆ ಬಜೆಟ್‌ನಲ್ಲಿ ನಿರ್ಮಿಸಲಾಗಿತ್ತು. ಬಾಕ್ಸ್‌ ಆಫೀಸ್‌ನಲ್ಲಿ ನೂರು ಕೋಟಿಗೂ ಅಧಿಕ ಗಳಿಕೆ ಮಾಡಿದೆ.

ಮಂಜುಮ್ಮೇಲ್‌ ಬಾಯ್ಸ್‌ ಒಟಿಟಿ ಬಿಡುಗಡೆ ದಿನಾಂಕ

ಇದೇ ಸಮಯದಲ್ಲಿ ಮಲಯಾಳಂನ ಮಂಜುಮ್ಮೇಲ್‌ ಬಾಯ್ಸ್‌ ಸಿನಿಮಾವನ್ನು ಒಟಿಟಿಯಲ್ಲಿ ನೋಡಬೇಕೆಂದು ಸಾಕಷ್ಟು ಜನರು ಕಾಯುತ್ತಿದ್ದಾರೆ. ತಮ್ಮ ಹತ್ತಿರದ ಸಿನಿಮಾ ಮಂದಿರಗಳಲ್ಲಿ ರಿಲೀಸ್‌ ಆಗದೆ ಇರುವುದು ಅಥವಾ ಇನ್ನಿತರ ಕಾರಣಗಳಿಂದ ಸಾಕಷ್ಟು ಜನರಿಗೆ ಇನ್ನೂ ಮಂಜುಮ್ಮೇಲ್‌ ಬಾಯ್ಸ್‌ ನೋಡಲು ಸಾಧ್ಯವಾಗದೆ ಇರಬಹುದು. ಮಂಜುಮ್ಮೇಲ್‌ ಬಾಯ್ಸ್‌ ಸಿನಿಮಾದ ನಿರ್ದೇಶಕರು ಏಪ್ರಿಲ್‌ 5ರಂದು ಒಟಿಟಿಯಲ್ಲಿ ರಿಲೀಸ್‌ ಆಗುತ್ತಿಲ್ಲ ಎಂದಿದ್ದಾರೆ. ಈ ಸಿನಿಮಾ ಒಟಿಟಿಯಲ್ಲಿ ಆಗಮಿಸಲು ಮೇ ತಿಂಗಳವರೆಗೆ ಕಾಯಬೇಕು ಎಂದಿದ್ದಾರೆ. ಈಗಲೂ ಈ ಸಿನಿಮಾ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳುತ್ತಿದೆ.

IPL_Entry_Point