OTT Malayalam Movies: ಈ ವಾರ ಒಟಿಟಿಗೆ ಬಂದಿವೆ ನಾಲ್ಕು ಮಲಯಾಳಂ ಹಿಟ್ ಸಿನಿಮಾಗಳು; ಕನ್ನಡದಲ್ಲೂ ವೀಕ್ಷಣೆಗೆ ಲಭ್ಯ
OTT Malayalam Movies: ಈ ವಾರ ನಾಲ್ಕು ಮಲಯಾಳಂ ಸಿನಿಮಾಗಳು ಏಕಕಾಲದಲ್ಲಿ ಒಟಿಟಿ ಅಂಗಳ ಪ್ರವೇಶಿಸಿವೆ. ಕ್ರೈಮ್ ಥ್ರಿಲ್ಲರ್ ಜತೆಗೆ ನಗು ಉಕ್ಕಿಸುವ ಸಿನಿಮಾಗಳೂ ಸ್ಟ್ರೀಮಿಂಗ್ ಆರಂಭಿಸಿವೆ. ಆ ಪೈಕಿ ಎರಡೂ ಸಿನಿಮಾಗಳು ಕನ್ನಡದಲ್ಲಿಯೂ ಡಬ್ ಆಗಿ ನೋಡುಗರಿಂದ ಮೆಚ್ಚುಗೆ ಪಡೆದಿವೆ. ಈ ವಾರ ಒಟಿಟಿಗಳಲ್ಲಿ ಹಿಟ್ ಆದ ಮಲಯಾಳಂ ಸಿನಿಮಾಗಳು ಹೀಗಿವೆ.
OTT Malayalam Movies: ನೀವು ಒಟಿಟಿಯಲ್ಲಿ ಹೆಚ್ಚು ಸಿನಿಮಾ ವೀಕ್ಷಣೆ ಮಾಡ್ತೀರಾ? ಅದರಲ್ಲೂ ಮಲಯಾಳಂ ಸಿನಿಮಾ ಪ್ರಿಯರಾ? ಒಟಿಟಿಗಳಲ್ಲಿ ಮಲಯಾಳಂ ಸಿನಿಮಾ ಹುಡುಕಾಡುತ್ತಿದ್ದೀರಾ? ಹಾಗಾದರೆ, ಈ ವಾರ ನಾಲ್ಕು ಮಲಯಾಳಂ ಸಿನಿಮಾಗಳು ಒಟಿಟಿ ಅಂಗಳ ಪ್ರವೇಶಿಸಿವೆ. ಈಗಾಗಲೇ ಸ್ಟ್ರೀಮಿಂಗ್ ಆರಂಭಿಸಿದ್ದು, ನೋಡುಗರ ಗಮನ ಸೆಳೆಯುತ್ತಿವೆ. ವಿಶೇಷ ಏನೆಂದರೆ ಆ ಸಿನಿಮಾಗಳು ಕನ್ನಡದಲ್ಲಿಯೂ ಡಬ್ ಆಗುತ್ತಿವೆ. ಕಾಮಿಡಿ ಜತೆಗೆ ಕ್ರೈಂ ಥ್ರಿಲ್ಲರ್ ಸಿನಿಮಾಗಳು ಈ ಪಟ್ಟಿಯಲ್ಲಿವೆ.
ಥಳವನ್
ಮಲಯಾಳಂ ಕ್ರೈಮ್ ಥ್ರಿಲ್ಲರ್ ಸಿನಿಮಾ ಥಳವನ್ ಈ ಮಂಗಳವಾರ (ಸೆಪ್ಟೆಂಬರ್ 10) Sonyliv ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ. ಮಲಯಾಳಂ ಜೊತೆಗೆ ತೆಲುಗು, ತೆಲುಗು, ಹಿಂದಿ, ತಮಿಳು, ಕನ್ನಡ, ಮರಾಠಿ, ಬೆಂಗಾಲಿ ಭಾಷೆಗಳಲ್ಲಿ ಈ ಸಿನಿಮಾ ವೀಕ್ಷಣೆ ಮಾಡಬಹುದು. ಚಿತ್ರವು ಮೇ 24 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಪಾಸಿಟಿವ್ ಟಾಕ್ ಜತೆಗೆ ಹಿಟ್ ಪಟ್ಟಿ ಸೇರಿತು. ಸುಮಾರು 80 ದಿನಗಳ ನಂತರ ಇದು ಒಟಿಟಿಗೆ ಆಗಮಿಸಿತ್ತು. ಥಳವನ್ ಚಿತ್ರದಲ್ಲಿ ಬಿಜು ಮೆನನ್ ಮತ್ತು ಆಸಿಫ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಝಿಸ್ ಜಾಯ್ ಈ ಸಿನಿಮಾ ನಿರ್ದೇಶಿಸಿದ್ದಾರೆ.
ನುನಕುಳಿ
ಕ್ರೈಮ್ ಕಾಮಿಡಿ ಥ್ರಿಲ್ಲರ್ ಚಿತ್ರ 'ನುನಕುಳಿ' ಶುಕ್ರವಾರ (ಸೆಪ್ಟೆಂಬರ್ 13) Zee5 ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ. ಮಲಯಾಳಂ ಜೊತೆಗೆ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಚಿತ್ರ ವೀಕ್ಷಣೆ ಮಾಡಬಹುದು. ನುನಕುಳಿಯಲ್ಲಿ ಬೇಸಿಲ್ ಜೋಸೆಫ್, ಗ್ರೇಸ್ ಆಂಟೋನಿ, ಸಿದ್ದಿಕಿ, ಬೈಜು ಸಂತೋಷ್, ನಿಖಿಲಾ ವಿಮಲ್ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ದೃಶ್ಯಂ ಸೇರಿದಂತೆ ಹಲವು ಹಿಟ್ ಸಿನಿಮಾಗಳನ್ನು ನಿರ್ದೇಶಿಸಿರುವ ನಿರ್ದೇಶಕ ಜಿತು ಜೋಸೆಫ್ ನುನಕುಳಿ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ಚಿತ್ರದ ಕಥೆಯು ಐಟಿ ಅಧಿಕಾರಿಯ ಲ್ಯಾಪ್‌ಟಾಪ್ ವಶಕ್ಕೆ ಪಡೆದಾಗ, ಆತ ಅದರಲ್ಲಿನ ಅಶ್ಲೀಲ ವಿಡಿಯೋಗಳನ್ನು ಹೇಗೆ ಯಾರಿಗೂ ಗೊತ್ತಾಗದ ಹಾಗೆ ತೆಗೆದುಹಾಕುತ್ತಾನೆ ಎಂಬುದೇ ಕಥೆ.
ಪಟ್ಟಾಪಕಲ್
ಪಟ್ಟಾಪಕಲ್ ಚಿತ್ರವು ಈ ವಾರ Amazon Prime Video ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ. ಈ ಹಿಂದೆ ಸಿನಾಪ್ಲೇ ಒಟಿಟಿಯಲ್ಲಿ ಬಿಡುಗಡೆಯಾದ ಈ ಚಿತ್ರವು ಈಗ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಈ ಡಾರ್ಕ್ ಕಾಮಿಡಿ ಚಿತ್ರವು ಆಗಸ್ಟ್ 27 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ನೋಡುಗರಿಂದ ಮೆಚ್ಚುಗೆ ಪಡೆದ ಈ ಸಿನಿಮಾ, ಪಾಸಿಟಿವ್ ರಿವ್ಯೂವ್ ಗಿಟ್ಟಿಸಿಕೊಂಡಿತ್ತು. ಪಟ್ಟಪಾಕಲ್ ಚಿತ್ರದಲ್ಲಿ ಜಾನಿ ಅಮಟೋನಿ, ಆಶಿಕಾ ಅಶೋಕನ್, ಕೃಷ್ಣ ಶಂಕರ್, ರಮೇಶ್ ಪಿಶಾರೋಡಿ ಮತ್ತು ಸುಧಿ ಕೊಪ್ಪ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಜೀರ್ ಸದಾಫ್ ಈ ಸಿನಿಮಾ ನಿರ್ದೇಶಿಸಿದ್ದಾರೆ.
ವಿಶೇಷಂ
ಮಲಯಾಳಂ ಫ್ಯಾಮಿಲಿ ಕಾಮಿಡಿ ಡ್ರಾಮಾ ಚಿತ್ರ 'ವಿಶೇಷಂ' ಈ ಮಂಗಳವಾರ ಅಮೆಜಾನ್ ಪ್ರೈಮ್ ವಿಡಿಯೋ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ. ಈ ಸಿನಿಮಾ ಕೇವಲ ಮಲಯಾಳಂನಲ್ಲಿ ಮಾತ್ರ ಸ್ಟ್ರೀಮ್ ಆಗುತ್ತಿದೆ. ಇಂಗ್ಲೀಷ್ ಉಪಶೀರ್ಷಿಕೆಗಳು ಲಭ್ಯವಿದೆ. ವಿಶೇಷಂ ಚಿತ್ರದಲ್ಲಿ ಆನಂದ್, ಮಧುಸೂಧನ್, ಚಿನ್ನು ಚಾಂದಿನಿ, ಬೈಜು ಜಾನ್ಸನ್, ಅಲ್ತಾಫ್ ಸಲೀಂ, ಜಾನಿ ಆಂಟೋನಿ ಮತ್ತು ಪಿಪಿ ಕುನ್ನಿಕೃಷ್ಣಂ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರವನ್ನು ಸೂರಜ್ ಟಾಮ್ ನಿರ್ದೇಶಿಸಿದ್ದಾರೆ. ವಿಶೇಷಂ ಚಿತ್ರ ಜುಲೈ 19 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಸುಮಾರು 50 ದಿನಗಳ ನಂತರ, ಚಿತ್ರವು ಈಗ ಅಮೆಜಾನ್ ಪ್ರೈಮ್ ವಿಡಿಯೋ ಒಟಿಟಿಗೆ ಪ್ರವೇಶಿಸಿದೆ.