OTT News: ಒಟಿಟಿಗೆ ಬಂತು ಮಲಯಾಳಂನ ರೊಮ್ಯಾಂಟಿಕ್ ಹಿಟ್ ಸಿನಿಮಾ ಲಿಟಲ್ ಹಾರ್ಟ್ಸ್; ವೀಕ್ಷಣೆ ಎಲ್ಲಿ?
ಮಾಲಿವುಡ್‌ನಲ್ಲಿ ಜೂನ್ ತಿಂಗಳಲ್ಲಿ ತೆರೆಕಂಡಿದ್ದ ಲಿಟಲ್ ಹಾರ್ಟ್ಸ್ ಸಿನಿಮಾ ಇದೀಗ ಒಟಿಟಿ ಅಂಗಳ ಪ್ರವೇಶಿಸಿದೆ. ಚಿತ್ರಮಂದಿರದಲ್ಲಿ ನೋಡುಗರಿಂದ ಮೆಚ್ಚುಗೆ ಪಡೆದ ಈ ಚಿತ್ರವನ್ನು ನೀವೀಗ ಈ ಒಟಿಟಿಯಲ್ಲಿ ವೀಕ್ಷಣೆ ಮಾಡಬಹುದು.
OTT Malayalam Romantic Comedy: ಈಗ ಮತ್ತೊಂದು ಮಲಯಾಳಂ ಹಿಟ್ ಚಿತ್ರ OTTಗೆ ಆಗಮಿಸಿದೆ. ಎರಡು ತಿಂಗಳ ಹಿಂದೆ ಅಂದರೆ ಜೂನ್ 7 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿ ಪಾಸಿಟಿವ್ ಪ್ರತಿಕ್ರಿಯೆ ಪಡೆದ ಮಲಯಾಳಂನ ಲಿಟಲ್ ಹಾರ್ಟ್ಸ್ ಚಿತ್ರ ಮಂಗಳವಾರದಿಂದ (ಆಗಸ್ಟ್ 13) ಒಟಿಟಿಯಲ್ಲಿ ಸ್ಟ್ರೀಮ್ ಆಗುತ್ತಿದೆ. ಶೇನ್ ನಿಗಮ್ ಮತ್ತು ಮಹಿಮಾ ನಂಬಿಯಾರ್ ಅಭಿನಯದ ಈ ಚಿತ್ರಕ್ಕೆ ಚಿತ್ರಮಂದಿರದಲ್ಲಿ ಭರಪೂರ ಚಪ್ಪಾಳೆ ಸಿಕ್ಕಿತ್ತು. ಇದೀಗ ಒಟಿಟಿ ಪ್ರೇಕ್ಷಕರನ್ನೂ ಮೆಚ್ಚಿಸಿದೆ.
ಲಿಟಲ್ ಹಾರ್ಟ್ಸ್ OTT ಸ್ಟ್ರೀಮಿಂಗ್
ಮಾಲಿವುಡ್‌ನ ಲಿಟಲ್ ಹಾರ್ಟ್ಸ್ ಚಿತ್ರವನ್ನು ಆಂಥೋ ಜೋಸ್ ಪಿರೇರಾ ಮತ್ತು ಅಬಿ ತೆರೆಸಾ ಪಾಲ್ ಜಂಟಿಯಾಗಿ ನಿರ್ದೇಶಿಸಿದ್ದಾರೆ. ಚಿತ್ರದ OTT ಸ್ಟ್ರೀಮಿಂಗ್ ಅನ್ನು ನಿರ್ಮಾಪಕರು ಸಾಮಾಜಿಕ ಮಾಧ್ಯಮದ ಮೂಲಕ ಬಹಿರಂಗಪಡಿಸಿದ್ದಾರೆ. "ನಮ್ಮ ಸಿನಿಮಾ ಒಟಿಟಿಗೆ ಬರುತ್ತಿದೆ. ಇಂದು (ಸೋಮವಾರ) ಮಧ್ಯರಾತ್ರಿ 12 ರಿಂದ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಲಿಟಲ್ ಹಾರ್ಟ್ಸ್ ಸ್ಟ್ರೀಮಿಂಗ್ ಆಗಲಿದೆ." ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ಇದು ಲಿಟಲ್ ಹಾರ್ಟ್ಸ್ ಕಥೆ
ಸಿನಿಮಾದ ಕಥೆಯ ವಿಚಾರಕ್ಕೆ ಬಂದರೆ, ಈ ಸಿನಿಮಾದ ಸಂಪೂರ್ಣ ಕಥೆ ಮೂರು ಪ್ರೇಮಕಥೆಗಳ ಸುತ್ತ ಸುತ್ತುತ್ತದೆ. ಈ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿರುವ ಸಿಬಿ ಮತ್ತು ಸೋಷಾ ಅವರ ಪ್ರೇಮಕಥೆ.. ಅವರ ಜೊತೆಗೆ ಸಿಬಿಯ ತಂದೆಯ ಪ್ರೇಮಕಥೆ ಮತ್ತು ಸೋಷಾ ಅವರ ಅಣ್ಣನ ಪ್ರೇಮಕಥೆಯೂ ಇದೆ. ಈ ಮೂರು ಲವ್‌ಸ್ಟೋರಿಯಲ್ಲಿ ಏನೆಲ್ಲ ತೊಡಕುಗಳು ಬರುತ್ತವೆ? ಅದರಿಂದ ಹೇಗೆ ಈ ಮೂರು ಜೋಡಿ ಪಾರಾಗುತ್ತವೆ ಎಂಬುದನ್ನು ಭಾವನಾತ್ಮಕ ಹಾಗೂ ಹಾಸ್ಯ ದೃಶ್ಯಗಳೊಂದಿಗೆ ತೋರಿಸಲಾಗಿದೆ.
ಈ ಚಿತ್ರಕ್ಕೆ IMDbಯಿಂದ 8.2 ರೇಟಿಂಗ್ ಸಿಕ್ಕಿದೆ. ಮೂಲ ಮಲಯಾಳಂ ಭಾಷೆಯಲ್ಲಿ ಮಾತ್ರ ಈ ಸಿನಿಮಾ ಒಟಿಟಿಗೆ ಬಂದಿದ್ದು, ಬೇರೆ ಭಾಷೆಗಳಿಗೆ ಡಬ್ ಆಗಿಲ್ಲ. ಇಂಗ್ಲಿಷ್ ಸಬ್ ಟೈಟಲ್‌ಗಳ ಜತೆಗೆ ಮಲಯಾಳಂನಲ್ಲಿ ಪ್ರೈಂನಲ್ಲಿ ನೋಡಬೇಕಷ್ಟೇ.
ಆಗಸ್ಟ್ 15ಕ್ಕೆ ಮನೋರಥಂಗಳ್
ಮನೋರಥಂಗಳ್ ವೆಬ್ ಸರಣಿಯು ಆಗಸ್ಟ್ 15 ರಂದು ಜೀ5 OTT ಯಲ್ಲಿ ಸ್ಟ್ರೀಮ್ ಆಗಲಿದೆ. ಇದು ಮಲಯಾಳಂ ಅಲ್ಲದೆ, ತೆಲುಗು, ಹಿಂದಿ, ತಮಿಳು ಮತ್ತು ಕನ್ನಡ ಭಾಷೆಗಳಲ್ಲಿ ಲಭ್ಯವಿರುತ್ತದೆ. ಈ ಆಂಥಾಲಜಿ ಸರಣಿಯಲ್ಲಿ ಸೂಪರ್‌ಸ್ಟಾರ್‌ಗಳಾದ ಕಮಲ್ ಹಾಸನ್, ಮಮ್ಮುಟ್ಟಿ, ಮೋಹನ್ ಲಾಲ್ ಮತ್ತು ಫಹಾದ್ ಫಾಜಿಲ್ ನಟಿಸಿದ್ದಾರೆ. ಇನ್ನು ಕೆಲವು ಸ್ಟಾರ್ ನಟರೂ ಇದ್ದಾರೆ. ಈ ಸರಣಿಯು 9 ಕಥೆಗಳನ್ನು ಒಳಗೊಂಡಿದೆ. 8 ನಿರ್ದೇಶಕರು ಈ ಸರಣಿಯನ್ನು ನಿರ್ದೇಶಿಸಿದ್ದಾರೆ. ಸ್ವಾತಂತ್ರ್ಯ ದಿನದಂದು ಜೀ OTT ಯಲ್ಲಿ ಪ್ರಸಾರವಾಗಲಿದೆ.
ಥಳವನ್ ರಿಲೀಸ್ ದಿನಾಂಕ ಹೀಗಿದೆ..
ಮಾಲಿವುಡ್‌ನ ಆಸಿಫ್ ಅಲಿ ಮತ್ತು ಬಿಜು ಮೆನನ್ ಅಭಿನಯದ ಇನ್ವೆಸ್ಟಿಗೇಟಿವ್ ಕ್ರೈಂ ಥ್ರಿಲ್ಲರ್ ಥಳವನ್ ಸಿನಿಮಾ ಮೇ 24 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ, ಹಿಟ್ ಪಟ್ಟ ಪಡೆದಿತ್ತು. ಜಿಸ್ ಜಾಯ್ ನಿರ್ದೇಶನದ ಈ ಸಿನಿಮಾ ಕಲೆಕ್ಷನ್ ವಿಚಾರದಲ್ಲೂ ಒಳ್ಳೆಯ ಕಮಾಯಿಯನ್ನೇ ಮಾಡಿತ್ತು. ಇತ್ತೀಚೆಗಷ್ಟೇ ಈ ಚಿತ್ರದ ಬಿಡುಗಡೆ ದಿನಾಂಕ ಅಧಿಕೃತವಾಗಿದೆ. ಸೆಪ್ಟೆಂಬರ್ 12 ರಂದು ಸೋನಿಲಿವ್ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮ್ ಆಗಲಿದೆ. ಮಲಯಾಳಂ ಜೊತೆಗೆ ತೆಲುಗು, ಹಿಂದಿ, ತಮಿಳು, ಕನ್ನಡ, ಮರಾಠಿ ಮತ್ತು ಬೆಂಗಾಲಿ ಭಾಷೆಗಳಲ್ಲಿ ಲಭ್ಯವಾಗಲಿದೆ.