ಕನ್ನಡ ಸುದ್ದಿ  /  ಮನರಂಜನೆ  /  Ott News: ಒಟಿಟಿಯಲ್ಲಿ ಈ ವಾರ ಸೂಪರ್‌ ಹಿಟ್‌ ಮಲಯಾಳಂ ಸಿನಿಮಾಗಳು ವೀಕ್ಷಣೆಗೆ ಲಭ್ಯ; ಹೀಗಿದೆ ನೋಡಿ ಪಟ್ಟಿ

OTT News: ಒಟಿಟಿಯಲ್ಲಿ ಈ ವಾರ ಸೂಪರ್‌ ಹಿಟ್‌ ಮಲಯಾಳಂ ಸಿನಿಮಾಗಳು ವೀಕ್ಷಣೆಗೆ ಲಭ್ಯ; ಹೀಗಿದೆ ನೋಡಿ ಪಟ್ಟಿ

ಈ ವಾರ ಮತ್ತೆ ಒಟಿಟಿಯಲ್ಲಿ ಮಲಯಾಳಂ ಸಿನಿಮಾಗಳ ಜಾತ್ರೆ ನಡೆಯಲಿದೆ. ಐದು ಹಿಟ್ ಸಿನಿಮಾಗಳು ಏಕಕಾಲದಲ್ಲಿ ಅಮೆಜಾನ್ ಪ್ರೈಮ್, ನೆಟ್‌ಫ್ಲಿಕ್ಸ್, ಸೋನಿಲೈವ್, ಹಾಟ್‌ಸ್ಟಾರ್‌ನಂತಹ ಒಟಿಟಿಯನ್ನು ಪ್ರವೇಶಿಸಲಿವೆ. ಇಲ್ಲಿದೆ ಆ ಸಿನಿಮಾಗಳ ಕುರಿತ ಮಾಹಿತಿ.

OTT News: ಒಟಿಟಿಯಲ್ಲಿ ಈ ವಾರ ಸೂಪರ್‌ ಹಿಟ್‌ ಮಲಯಾಳಂ ಸಿನಿಮಾಗಳು ವೀಕ್ಷಣೆಗೆ ಲಭ್ಯ; ಹೀಗಿದೆ ನೋಡಿ ಪಟ್ಟಿ
OTT News: ಒಟಿಟಿಯಲ್ಲಿ ಈ ವಾರ ಸೂಪರ್‌ ಹಿಟ್‌ ಮಲಯಾಳಂ ಸಿನಿಮಾಗಳು ವೀಕ್ಷಣೆಗೆ ಲಭ್ಯ; ಹೀಗಿದೆ ನೋಡಿ ಪಟ್ಟಿ

Malayalam movies ott releases: ಈ ವರ್ಷ ಸಾಲು ಸಾಲು ಮಲಯಾಳಂ ಸಿನಿಮಾಗಳು ಯಶಸ್ವಿ ಪಟ್ಟ ಅಲಂಕರಿಸಿವೆ. ಕಾಮಿಡಿಯಿಂದ ಕ್ರೈಮ್, ಮಿಸ್ಟರಿ, ಥ್ರಿಲ್ಲರ್ ಹೀಗೆ ಎಲ್ಲ ಪ್ರಕಾರದ ಸಿನಿಮಾಗಳು ಸೂಪರ್‌ ಹಿಟ್‌ ಆಗಿವೆ. ಇದೀಗ ಹಾಗೇ ಥಿಯೇಟರ್‌ಗಳಲ್ಲಿ ಬಿಡುಗಡೆಯಾದ ಕೆಲವು ಮಲಯಾಳಂ ಸಿನಿಮಾಗಳೀಗ ಶೀಘ್ರದಲ್ಲೇ ಒಟಿಟಿ ಅಂಗಳಕ್ಕೂ ಲಗ್ಗೆ ಇಡಲಿವೆ. ಕೆಲವು ಈ ವಾರ ಬಂದರೆ, ಇನ್ನು ಕೆಲವು ಮುಂದಿನ ವಾರ ಒಟಿಟಿಗೆ ಬರಲಿವೆ. ಆ ಸಿನಿಮಾಗಳು ಯಾವವು ಎಂಬುದನ್ನು ನೋಡುವುದಾದರೆ..

ಗುರುವಾಯೂರ್ ಅಂಬಲನಡಾಯಿಲ್ - ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್: ಈ ಗುರುವಾಯೂರ್ ಅಂಬಲನಾಡಾಯಿಲ್ ಕೇರಳದ ಪ್ರಸಿದ್ಧ ಕೃಷ್ಣ ದೇವಾಲಯವಿರುವ ಗುರುವಾಯೂರಿನಲ್ಲಿ ಚಿತ್ರೀಕರಿಸಿದ ಹಾಸ್ಯಮಯ ಚಿತ್ರ ಇದಾಗಿದೆ. ಈ ಕಥೆಯು ವಿನೂ ರಾಮಚಂದ್ರನ್ (ಬೇಸಿಲ್ ಜೋಸೆಫ್), ಆನಂದನ್ (ಪೃಥ್ವಿರಾಜ್ ಸುಕುಮಾರನ್) ಮತ್ತು ಅವರ ಸಹೋದರಿ ಅಂಜಲಿಯ ಸುತ್ತ ಸುತ್ತುತ್ತದೆ. ಮನರಂಜನೆಯ ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ 90 ಕೋಟಿ ರೂಪಾಯಿ ಗಳಿಸಿ ಹಿಟ್‌ ಆಗಿತ್ತು. ಈ ಚಿತ್ರ ಗುರುವಾರದಿಂದ (ಜೂನ್ 27) ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮ್ ಆಗಲಿದೆ.

ಟ್ರೆಂಡಿಂಗ್​ ಸುದ್ದಿ

ನಾಡಿಕರ್ - ನೆಟ್‌ಫ್ಲಿಕ್ಸ್: ಟೋವಿನೋ ಥಾಮಸ್ ಅಭಿನಯದ ಚಿತ್ರ ನಾಡಿಕರ್. ಈ ಸಿನಿಮಾದಲ್ಲಿ ಒಬ್ಬ ಯಶಸ್ವಿ ಸಿನಿಮಾ ಸ್ಟಾರ್ ಹೀರೋ ಸೋಲಿನ ಸುಳಿಗೆ ಸಿಲುಕುತ್ತಾನೆ. ಬಳಿಕ ತನ್ನ ಸ್ಟಾರ್ ಪಟ್ಟವನ್ನು ಬದಿಗಿಟ್ಟು ನಟನಾಗಿ ಮರುಹುಟ್ಟು ಪಡೆಯುತ್ತಾನೆ. ಈ ನಾಡಿಕರ್ ಚಿತ್ರವು ಗುರುವಾರದಿಂದ (ಜೂನ್ 27) ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗಲಿದೆ.

ಟರ್ಬೊ - ಸೋನಿಲೈವ್: ಮಲಯಾಳಂನ ಮೆಗಾಸ್ಟಾರ್ ಮಮ್ಮುಟ್ಟಿ ಅಭಿನಯದ ಟರ್ಬೊ ಚಿತ್ರ ಕೂಡ ಶೀಘ್ರದಲ್ಲೇ ಒಟಿಟಿಗೆ ಬರಲಿದೆ. ಈ ಆಕ್ಷನ್ ಡ್ರಾಮಾ ಜುಲೈ ಮೊದಲ ವಾರದಿಂದ ಸೋನಿ ಲೈವ್ ಒಟಿಟಿಯಲ್ಲಿ ಪ್ರಸಾರವಾಗಲಿದೆ ಎಂದು ಹೇಳಲಾಗಿದೆ. ಅಧಿಕೃತ ಘೋಷಣೆ ಇನ್ನಷ್ಟೇ ಬರಬೇಕಿದೆ.

ಮಲಯಾಳಿ ಫ್ರಂ ಇಂಡಿಯಾ - ಸೋನಿ ಲಿವ್: ಮಲಯಾಳಿ ಫ್ರಂ ಇಂಡಿಯಾ ಸಿನಿಮಾ ಇದೊಂದು ಭಾವನಾತ್ಮಕ ಕಾಮಿಡಿ ಡ್ರಾಮಾ. ನಿವಿನ್ ಪೌಲಿ ಅಭಿನಯದ ಚಿತ್ರ ಜುಲೈ 5ರಿಂದ ಸೋನಿ ಲೀವ್ ಒಟಿಟಿಯಲ್ಲಿ ಸ್ಟ್ರೀಮ್ ಆಗಲಿದೆ. ಈ ಚಿತ್ರಕ್ಕೆ ಥಿಯೇಟರ್‌ಗಳಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದರಿಂದ ಜನರು ಒಟಿಟಿ ರಿಲೀಸ್‌ಗಾಗಿ ಕಾತರದಿಂದ ಕಾಯುತ್ತಿದ್ದಾರೆ.

ಇದಲ್ಲದೆ, ಈ ವರ್ಷ ಬಿಡುಗಡೆಯಾದ ಅನೇಕ ಹಿಟ್ ಮಲಯಾಳಂ ಸಿನಿಮಾಗಳು ಈಗಾಗಲೇ ಒಟಿಟಿಗಳಲ್ಲಿ ಸ್ಟ್ರೀಮ್‌ ಆಗಿ ಮೋಡಿ ಮಾಡುತ್ತಿವೆ. ಆ ಪೈಕಿ ಮಂಜುಮ್ಮೆಲ್ ಬಾಯ್ಸ್ ಮತ್ತು ಪ್ರೇಮುಲು ಮುಂತಾದ ಚಲನಚಿತ್ರಗಳು ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮ್ ಆಗುತ್ತಿದ್ದರೆ. ಫಹಾದ್ ಫಾಜಿಲ್ ಅಭಿನಯದ ಅವೇಷಂ ಚಿತ್ರವು ಅಮೆಜಾನ್‌ ಪ್ರೈಮ್ ವಿಡಿಯೋದಲ್ಲಿದೆ.