L2: Empuraan Twitter Review: ಎಂಪುರಾನ್ ಸಿನಿಮಾ ಟ್ವಿಟ್ಟರ್ ವಿಮರ್ಶೆ; ಮತ್ತೊಂದು ಹಿಟ್ ಕೊಟ್ರಾ ಮೋಹನ್ ಲಾಲ್, ಪೃಥ್ವಿರಾಜ್?
ಮಲಯಾಳಂ ಸ್ಟಾರ್ ಮೋಹನ್ ಲಾಲ್, ಪೃಥ್ವಿರಾಜ್ ಸುಕುಮಾರನ್, ಮಂಜು ವಾರಿಯರ್, ಟೋವಿನೋ ಥಾಮಸ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಪ್ಯಾನ್ ಇಂಡಿಯನ್ ಎಲ್ 2; ಎಂಪುರಾನ್ ಸಿನಿಮಾ ವಿಶ್ವದಾದ್ಯಂತ ಬಿಡುಗಡೆ ಆಗಿದ್ದು, ಇಲ್ಲಿದೆ ಈ ಚಿತ್ರದ ಟ್ವಿಟ್ಟರ್ ವಿಮರ್ಶೆ.

Empuraan Twitter Review: ಮಲಯಾಳಂ ಸೂಪರ್‌ಸ್ಟಾರ್ ಮೋಹನ್ ಲಾಲ್ ಮತ್ತು ಸ್ಟಾರ್ ಹೀರೋ ಮತ್ತು ನಿರ್ದೇಶಕ ಪೃಥ್ವಿರಾಜ್ ಸುಕುಮಾರನ್ ಕಾಂಬಿನೇಷನ್ L2: ಎಂಪುರಾನ್ ಸಿನಿಮಾ ಇಂದು (ಮಾ. 27) ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗಿದೆ. ಲೂಸಿಫರ್ ಚಿತ್ರದ ಮುಂದುವರಿದ ಭಾಗವಾದ ಎಂಪುರಾನ್ ಸಿನಿಮಾದಲ್ಲಿ ಮೋಹನ್ ಲಾಲ್, ಪೃಥ್ವಿರಾಜ್ ಸುಕುಮಾರನ್, ಮಂಜು ವಾರಿಯರ್, ಟೋವಿನೋ ಥಾಮಸ್, ಅಭಿಮನ್ಯು ಸಿಂಗ್, ಸಾಯಿಕುಮಾರ್, ಸೂರಜ್ ವೆಂಜರಾಮಡು, ಫಾಜಿಲ್, ಸಚಿನ್ ಖೇಡ್ಕರ್, ಸಾನಿಯಾ ಅಯ್ಯಪ್ಪನ್ ಮತ್ತು ಗೇಮ್ ಆಫ್ ಥ್ರೋನ್ಸ್ ಖ್ಯಾತಿಯ ಜೆರೋಮ್ ಫ್ಲಿನ್ ಮುಂತಾದವರು ನಟಿಸಿದ್ದಾರೆ. ಸುಜಿತ್ ವಾಸುದೇವ್ ಛಾಯಾಗ್ರಹಣ ಮತ್ತು ದೀಪಕ್ ದೇವ್ ಸಂಗೀತ ಚಿತ್ರಕ್ಕಿದೆ.
ಶ್ರೀ ಗೋಕುಲಂ ಮೂವೀಸ್, ಆಶೀರ್ವಾದ್ ಸಿನಿಮಾಸ್ ಪ್ರೈವೇಟ್ ಲಿಮಿಟೆಡ್ ಮತ್ತು ಲೈಕಾ ಪ್ರೊಡಕ್ಷನ್ಸ್ ಬ್ಯಾನರ್‌ಗಳ ಅಡಿಯಲ್ಲಿ ಆಂಟೋನಿ ಪೆರುಂಬವೂರ್ ಮತ್ತು ಗೋಕುಲಂ ಗೋಪಾಲನ್ ಜಂಟಿಯಾಗಿ ಎಂಪುರಾನ್ ಚಿತ್ರವನ್ನು ನಿರ್ಮಿಸಿದ್ದಾರೆ. ಇಂದು (ಮಾರ್ಚ್ 27) ಚಿತ್ರವು ಅದ್ದೂರಿಯಾಗಿ ಬಿಡುಗಡೆಯಾಗಿದೆ. ಒಂದು ದಿನ ಮುಂಚಿತವಾಗಿ ಅಂದರೆ ಮಾರ್ಚ್ 26ರಂದು ಚಿತ್ರದ ಪೇಡ್ ಪ್ರೀಮಿಯರ್ ವೀಕ್ಷಿಸಿದ್ದ ಪ್ರೇಕ್ಷಕ, ಸೋಷಿಯಲ್ ಮೀಡಿಯಾದಲ್ಲಿ ಬಗೆಬಗೆ ಕಾಮೆಂಟ್ ಮೂಲಕ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇಲ್ಲಿದೆ ಟ್ವಿಟ್ಟರ್ ವಿಮರ್ಶೆ.
ಎಂಪುರಾನ್‌ಗೆ ಸಿಕ್ತು ಪ್ರೇಕ್ಷಕನ ಬಹುಪರಾಕ್
“ನಾನು ಎಂಪುರಾನ್ ಸಿನಿಮಾ ನೋಡುತ್ತಿದ್ದೇನೆ. ಸಯೀದ್ ನ ಫ್ಲಾಶ್ ಬ್ಯಾಕ್ ಮೊದಲ 30 ನಿಮಿಷಗಳಲ್ಲಿ ಕೊನೆಗೊಂಡಿತು. ಮುರಳಿ ಗೋಪಿಯವರ ಸಂಭಾಷಣೆಗಳು ಅದ್ಭುತವಾಗಿವೆ. ಮೋಹನ್‌ಲಾಲ್ ಅವರ ಸ್ಕ್ರೀನ್ ಪ್ರೆಸೆನ್ಸ್ ಚೆನ್ನಾಗಿದೆ” ಎಂದಿ ನೆಟ್ಟಿಗರು ಎಂಪುರಾನ್ ಸಿನಿಮಾ ಬಗ್ಗೆ ಕಾಮೆಂಟ್ ಮಾಡಿ, ಚಿತ್ರವನ್ನು ಅತ್ಯುತ್ತಮ ಮತ್ತು ನಿಜವಾದ ಕ್ಲಾಸಿಕ್ ಎಂದು ಕರೆದಿದ್ದಾರೆ.
"ಎಂಪುರಾನ್ ಶೋ ಶುರುವಾಗಿದೆ. ಕಥೆ ಇರಾಕ್‌ನಲ್ಲಿ ಪ್ರಾರಂಭವಾಗುತ್ತದೆ. ಅಲ್ಲಿನ ಧಾರ್ಮಿಕ ಗಲಭೆಗಳನ್ನು ಬಹಳ ಕ್ರೂರವಾಗಿ ಚಿತ್ರಿಸಲಾಗಿದೆ. "ಈ ಚಿತ್ರ ಬ್ಲಾಕ್‌ಬಸ್ಟರ್ ಆಗುವುದು ಗ್ಯಾರಂಟಿ ಎಂದು ನಾನು ಭಾವಿಸುತ್ತೇನೆ" ಎಂದು ಮೊದಲ ಶೋ ಪ್ರಾರಂಭವಾದ ಬಳಿಕ ನೆಟ್ಟಿಗರೊಬ್ಬರು ಟ್ವೀಟ್ ಮಾಡಿದ್ದಾರೆ.
"ಎಂಪುರಾನ್ ಫಸ್ಟ್ ಹಾಫ್ - ಮ್ಯಾಕ್ಸಿಮಮ್ ಫೈರ್. ಇಂಟರ್ವಲ್ ಬ್ಲಾಕ್ ಸೂಪರ್. ಪೃಥ್ವಿರಾಜ್ ಸುಕುಮಾರನ್ ಅವರ ಮೇಕಿಂಗ್ ಸ್ಟೈಲ್, ಸಿನಿಮಾ ದೃಶ್ಯಗಳು ಈ ಹಿಂದೆಂದೂ ಮಾಲಿವುಡ್ ಸಿನಿಮಾಗಳಲ್ಲಿ ಕಂಡಿಲ್ಲ. ಮೋಹನ್ ಲಾಲ್ ಮತ್ತೆ ಮಿಂಚಿದ್ದಾರೆ" ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
"ಮೊದಲಾರ್ಧವನ್ನು ವೀಕ್ಷಿಸುವ ಮೂಲಕ.. ನಾನು ಖಂಡಿತವಾಗಿಯೂ ಒಂದು ವಿಷಯವನ್ನು ಹೇಳಬಲ್ಲೆ..! ದೊಡ್ಡ ಹಿಟ್‌ನ ಮುನ್ಸೂಚನೆ.. L (ಲೂಸಿಫರ್) ಹುಡುಗರು ಕುಳಿತು ಬೇಟೆಯನ್ನು ಆನಂದಿಸಿ.. 100% ಇಂಡಸ್ಟ್ರಿ ಹಿಟ್"
ಎಂಪುರಾನ್ ಸಿನಿಮಾ ಬಿಡುಗಡೆಯಾದ ಹಿನ್ನೆಲೆಯಲ್ಲಿ ಸೂಪರ್ ಸ್ಟಾರ್ ಮಮ್ಮುಟ್ಟಿ ಟ್ವೀಟ್ ಮಾಡಿದ್ದಾರೆ. "ಎಂಪುರಾನ್ ಚಿತ್ರದ ಐತಿಹಾಸಿಕ ಗೆಲುವಿಗೆ ನನ್ನ ಶುಭಾಶಯಗಳು! ಇದು ಪ್ರಪಂಚದಾದ್ಯಂತದ ಗಡಿಗಳನ್ನು ದಾಟಿ ಇಡೀ ಮಲಯಾಳಂ ಚಿತ್ರೋದ್ಯಮವನ್ನು ಹೆಮ್ಮೆಪಡುವಂತೆ ಮಾಡುತ್ತದೆ ಎಂದು ಆಶಿಸುತ್ತೇನೆ" ಎಂದು ಮಮ್ಮುಟ್ಟಿ ಟ್ವೀಟ್ ಮಾಡಿದ್ದಾರೆ.
