South Movies: ದಕ್ಷಿಣ ಭಾರತದ 2025ರ ಬಹುನಿರೀಕ್ಷಿತ ಸೀಕ್ವೆಲ್‌ಗಳು; ಕಾಂತಾರ ಚಾಪ್ಟರ್‌ 1ರಿಂದ ಅಖಂಡ 2 ತನಕ
ಕನ್ನಡ ಸುದ್ದಿ  /  ಮನರಂಜನೆ  /  South Movies: ದಕ್ಷಿಣ ಭಾರತದ 2025ರ ಬಹುನಿರೀಕ್ಷಿತ ಸೀಕ್ವೆಲ್‌ಗಳು; ಕಾಂತಾರ ಚಾಪ್ಟರ್‌ 1ರಿಂದ ಅಖಂಡ 2 ತನಕ

South Movies: ದಕ್ಷಿಣ ಭಾರತದ 2025ರ ಬಹುನಿರೀಕ್ಷಿತ ಸೀಕ್ವೆಲ್‌ಗಳು; ಕಾಂತಾರ ಚಾಪ್ಟರ್‌ 1ರಿಂದ ಅಖಂಡ 2 ತನಕ

Most-awaited South sequel Movies of 2025: ಮುಂದಿನ ವರ್ಷ ದಕ್ಷಿಣ ಭಾರತದ ಹಲವು ಸೀಕ್ವೆಲ್‌ ಸಿನಿಮಾಗಳಿಗಾಗಿ ಸಿನಿಮಾ ಜಗತ್ತು ಕಾತರದಿಂದ ಕಾಯುತ್ತಿದೆ. ಅವುಗಳಲ್ಲಿ ಕರ್ನಾಟಕದ ರಿಷಬ್‌ ಶೆಟ್ಟಿಯ ಕಾಂತಾರ ಚಾಪ್ಟರ್‌ 1 ಪ್ರಮುಖ ಸಿನಿಮಾ ಎಂದರೂ ತಪ್ಪಾಗದು.

South Movies: ದಕ್ಷಿಣ ಭಾರತದ 2025ರ ಬಹುನಿರೀಕ್ಷಿತ ಸೀಕ್ವಲ್‌ಗಳು
South Movies: ದಕ್ಷಿಣ ಭಾರತದ 2025ರ ಬಹುನಿರೀಕ್ಷಿತ ಸೀಕ್ವಲ್‌ಗಳು

2025ರ ವರ್ಷವು ದಕ್ಷಿಣ ಭಾರತದ ಸಿನಿರಂಗಕ್ಕೆ ರೋಮಾಂಚನ ಉಂಟು ಮಾಡುವ ವರ್ಷವೆಂದುಕೊಳ್ಳಬಹುದು. ಏಕೆಂದರೆ, ಹಲವು ಜನಪ್ರಿಯ ಸಿನಿಮಾಗಳ ಮುಂದುವರೆದ ಭಾಗಗಳು ಈ ಸಮಯದಲ್ಲಿ ಬಿಡುಗಡೆಯಾಗಲಿವೆ. ಅವುಗಳಲ್ಲಿ ರಿಷಬ್‌ ಶೆಟ್ಟಿಯ ಕಾಂತಾರ ಚಾಪ್ಟರ್‌ 1, ಪೃಥ್ವಿರಾಜ್‌ ಮತ್ತು ಮೋಹನ್‌ಲಾಲ್‌ರ ಎಲ್‌2: ಎಂಪುರಾನ್‌, ಕಮಲ್‌ ಹಾಸನ್‌ರ ಇಂಡಿಯನ್‌ 3 ಸಿನಿಮಾಗಳು ಸೇರಿವೆ.

ಕಾಂತಾರ: ಚಾಪ್ಟರ್‌ 1

2022ರ ಬ್ಲಾಕ್‌ಬಸ್ಟರ್‌ ಸಿನಿಮಾ ಕಾಂತಾರದ ಪ್ರೀಕ್ವೆಲ್ ಸಿನಿಮಾ ಇದಾಗಿದೆ. ಅಂದಿನ ಕಾಂತಾರಕ್ಕಿಂತ ಹಿಂದಿನ ಕಥೆಯನ್ನು ಈ ಸಿನಿಮಾ ಹೊಂದಿರಲಿದೆ. ಪಂಜುರ್ಲಿಯ ಮೂಲ ಕಥೆಯನ್ನು ಇದು ಹೊಂದಿರುವ ಸೂಚನೆಯಿದೆ. ಈ ಸಿನಿಮಾಕ್ಕೆ ರಿಷಬ್‌ ಶೆಟ್ಟಿ ಕಥೆ ಬರೆದಿದ್ದು, ನಿರ್ದೇಶನವೂ ಅವರದ್ದೇ. ಇದರೊಂದಿಗೆ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಕಾಂತಾರ ಸಿನಿಮಾದ ನಟನೆಗಾಗಿ ರಿಷಬ್‌ ಶೆಟ್ಟಿ ನ್ಯಾಷನಲ್‌ ಅವಾರ್ಡ್‌ ಪಡೆದಿದ್ದಾರೆ. ಸದ್ಯ ಅಧಿಕೃತ ಮಾಹಿತಿ ಪ್ರಕಾರ ಕಾಂತಾರ: ಚಾಪ್ಟರ್‌ 1 ಸಿನಿಮಾವು ಅಕ್ಟೋಬರ್‌ 2, 2025ರಂದು ಬಿಡುಗಡೆಯಾಗಲಿದೆ.

ಎಲ್‌2: ಎಂಪುರಾನ್

ಪೃಥ್ವಿರಾಜ್ ಸುಕುಮಾರನ್ ಮತ್ತು ಮೋಹನ್ ಲಾಲ್ ಅವರ ಐಕಾನಿಕ್ ಜೋಡಿಯ ಎಲ್‌2: ಎಂಪುರಾನ್ ಸಿನಿಮಾ ಬಿಡುಗಡೆಗೆ ಎಲ್ಲರೂ ಕಾಯುತ್ತಿದ್ದಾರೆ. ಲೂಸಿಫರ್ ಫ್ರಾಂಚೈಸ್‌ನ ಎರಡನೇ ಕಂತಿನ ಸಿನಿಮಾ ಇದಾಗಿದೆ. 2019ರಲ್ಲಿ ಬಿಡುಗಡೆಯಾದ ಸಿನಿಮಾದಲ್ಲಿ ಸ್ಟೀಫನ್ ನೆಡುಂಪಲ್ಲಿ ಅವರನ್ನು ಖುರೇಷಿ ಅಬ್ರಾಮ್ ಎಂದು ಬಹಿರಂಗಪಡಿಸಿ ಕೊನೆಗೊಂಡಿತು. ಮುಂದಿನ ವರ್ಷ ಬಿಡುಗಡೆಯಾಗುವ ಸಿನಿಮಾದಲ್ಲಿ ಸ್ಟೀಫನ್ ನೆಡುಂಪಲ್ಲಿ ಕಥೆ ಇರುವ ಸೂಚನೆಯಿದೆ. ಮಂಜು ವಾರಿಯರ್, ಟೊವಿನೋ ಥಾಮಸ್ ಮತ್ತು ಇಂದ್ರಜಿತ್ ಸುಕುಮಾರನ್ ಕೂಡ ಈ ಸಿನಿಮಾ ತಂಡದಲ್ಲಿದ್ದಾರೆ.

ಇಂಡಿಯನ್‌ 3

ಕಮಲ್‌ ಹಾಸನ್‌ ನಟನೆಯ ಇಂಡಿಯನ್‌ 2ನ ಸೀಕ್ವೆಲ್‌ ಕೂಡ 2025ರ ಬಹುನಿರೀಕ್ಷಿತ ಸಿನಿಮಾವಾಗಿದೆ.

ಸಲಾರ್ : ಶೌರ್ಯಂಗ ಪರ್ವಂ

ಪ್ರಭಾಸ್ ಮತ್ತು ಪೃಥ್ವಿರಾಜ್ ದಕ್ಷಿಣ ಭಾರತದ ಇಬ್ಬರು ಪ್ರತಿಭಾನ್ವಿತ ನಟರಾಗಿದ್ದಾರೆ. ಸಲಾರ್‌ನಲ್ಲಿ ಡಿಸ್ಟೋಪಿಯನ್ ಸ್ಟೇಟ್ ಖಾನ್ಸಾರ್‌ನ ರೋಮಾಂಚಕ ಕಥೆ ಇತ್ತು. ಭಾಗ 1 - ಕದನ ವಿರಾಮನ ಮುಂದುವರೆದ ಭಾಗಕ್ಕೆ ಅಭಿಮಾನಿಗಳು ಕಾಯುತ್ತಿದ್ದಾರೆ. ಈ ಸಿನಿಮಾದ ಮುಂದಿನ ಭಾಗ ಮುಂದಿನ ವರ್ಷ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಆದಿತ್ಯ 999 ಮ್ಯಾಕ್ಸ್‌

ನಂದಮೂರಿ ಬಾಲಕೃಷ್ಣ ನಟಿಸಿರುವ ಆದಿತ್ಯ 369 ಚಿತ್ರವು 1991ರಲ್ಲಿ ಥಿಯೇಟರ್‌ನಲ್ಲಿ ಬ್ಲಾಕ್‌ಬಸ್ಟರ್‌ ಸಿನಿಮಾವಾಗಿ ಹೊರಹೊಮ್ಮಿತ್ತು. ಆದಿತ್ಯ 999 ಮ್ಯಾಕ್ಸ್‌ನ ಮುಂದುವರಿದ ಭಾಗವು 2025 ರಲ್ಲಿ ತೆರೆಗೆ ಬರಲಿದೆ ಎಂದು ವರದಿಗಳು ಹೇಳಿವೆ. ಈ ಕುರಿತು ಅಧಿಕೃತ ಪ್ರಕಟಣೆ ಇನ್ನೂ ಬಂದಿಲ್ಲ.

ಸರ್ದಾರ್ 2

ಕಾರ್ತಿ ತಮ್ಮ ಸ್ಪೈ ಆಕ್ಷನ್-ಥ್ರಿಲ್ಲರ್ ಸಿನಿಮಾ ಸರ್ದಾರ್ 2ನೊಂದಿಗೆ ಮುಂದಿನ ವರ್ಷ ತೆರೆಯಲ್ಲಿ ಕಾಣಿಸಿಕೊಳ್ಳುವ ಸೂಚನೆ ಇದೆ. ಪಿ. ಎಸ್. ಮಿತ್ರನ್ ನಿರ್ದೇಶನವಿದೆ. ಈ ತಮಿಳು ಚಿತ್ರದಲ್ಲಿ ಮಾಳವಿಕಾ ಮೋಹನನ್, ಆಶಿಕಾ ರಂಗನಾಥ್ ಮತ್ತು ರಜಿಶಾ ವಿಜಯನ್ ಜೊತೆಗೆ ಎಸ್‌ಜೆ ಸೂರ್ಯ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಅಖಂಡ 2: ತಾಂಡವಂ

ನಂದಮೂರಿ ಬಾಲಕೃಷ್ಣ ಅಭಿನಯದ ಮತ್ತೊಂದು ಸೀಕ್ವೆಲ್‌ನ ಕೆಲಸವೂ ನಡೆಯುತ್ತಿದೆ. ಇದನ್ನು ಮಸಾಲಾ ಎಂಟರ್‌ಟೈನರ್ ಎಂದು ಪ್ರಚಾರ ಮಾಡಲಾಗುತ್ತಿದೆ. ಬೋಯಪಾಟಿ ಶ್ರೀನು ನಿರ್ದೇಶನದ ಅಖಂಡದಲ್ಲಿ ನಂದಮೂರಿ ಬಾಲಕೃಷ್ಣ ದ್ವಿಪಾತ್ರದಲ್ಲಿ ನಟಿಸಿದ್ದರು. ಇದರ ಮುಂದುವರೆದ ಭಾಗ ಮುಂದಿನ ವರ್ಷ ಬಿಡುಗಡೆಯಾಗಲಿದೆ.

Whats_app_banner