ಧಾರಾವಾಹಿಯಲ್ಲಿ ತಾಯಿ ಮಗ... ಆದರೆ, ನಿಜ ಜೀವನದಲ್ಲಿ ಗಂಡ ಹೆಂಡತಿ... ಇದು ಬಿಗ್ ಬಾಸ್ ಪ್ರೇಮಕಥೆ
ನಟನೆಯಲ್ಲಿ ತಾಯಿ ಮತ್ತು ಮಗ, ಆದರೆ, ನಿಜ ಜೀವನದಲ್ಲಿ ಗಂಡ ಹೆಂಡತಿಯಾಗಿರುವ ನಟಿನಟ ಯಾರೆಂದು ಗೊತ್ತೆ? ಧಾರಾವಾಹಿಯಲ್ಲಿ ತಾಯಿ ಮತ್ತು ಮಗನಾಗಿ ನಟಿಸಿದ್ದ ಕಿಶ್ವರ್ ಮರ್ಚೆಂಟ್ ಮತ್ತು ಸುಯಾಶ್ ರಾಯ್ ನಿಜ ಜೀವನದಲ್ಲಿ ಪತಿ-ಪತ್ನಿಯಾಗಿದ್ದಾರೆ. ಅವರಿಗೆ ಒಬ್ಬ ಮಗನೂ ಇದ್ದಾನೆ. ಬಿಗ್ ಬಾಸ್ ಹಿಂದಿ ಸೀಸನ್ 9ರಲ್ಲಿ ಇವರು ಭಾಗವಹಿಸಿದ್ದರು

ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಚಿತ್ರರಂಗದಲ್ಲಿ ಹಲವು ನಟಿಯರು ರಿಯಲ್ ಲೈಫ್‌ನಲ್ಲಿ ಗಂಡ ಹೆಂಡತಿಯಾಗಿರಬಹುದು. ಆದರೆ, ಸಿನಿಮಾ ಅಥವಾ ಸೀರಿಯಲ್‌ಗಳಲ್ಲಿ ಬೇರೆ ಸಂಬಂಧಗಳ ಪಾತ್ರದಲ್ಲಿ ನಟಿಸಿರಬಹುದು. ಚಿತ್ರರಂಗದಲ್ಲಿ ಇದೆಲ್ಲವೂ ತುಂಬಾ ಸಾಮಾನ್ಯ. ಆದರೆ, ತಾಯಿ ಮತ್ತು ಮಗನಂತೆ ನಟಿಸಿದವರು ನಿಜವಾಗಿಯೂ ಗಂಡ ಮತ್ತು ಹೆಂಡತಿಯಾದರು ಎನ್ನುವ ಸುದ್ದಿ ಕೇಳಿದ್ರೆ ಸಾಕಷ್ಟು ಜನರಿಗೆ ಅಚ್ಚರಿಯಾಗಬಹುದು. ಧಾರಾವಾಹಿಯಲ್ಲಿ ತಾಯಿ ಮಗನಾಗಿ ನಟಿಸಿದ್ದ ಇಬ್ಬರು ನಿಜ ಜೀವನದಲ್ಲಿ ಗಂಡ ಹೆಂಡತಿಯಾದರು. ಅವರು ಕಿಶ್ವರ್ ಮರ್ಚೆಂಟ್ (44) ಮತ್ತು ಸುಯಾಶ್ ರಾಯ್ (36). ಇವರಿಬ್ಬರು ಹಿಂದಿ ಟಿವಿ ನಟರು ಮತ್ತು ರೂಪದರ್ಶಿಗಳು.
ಎಂಟು ವರ್ಷದ ಮಗು
ಕಿಶ್ವರ್ ಮರ್ಚೆಂಟ್ ಸುಯಶ್ ರಾಯ್ ಅವರಿಗಿಂತ 8 ವರ್ಷ ದೊಡ್ಡವರು. ಆದರೆ, ಅನೇಕ ಸವಾಲುಗಳನ್ನು ಎದುರಿಸಿದರೂ, ಕಿಶ್ವರ್ ಮತ್ತು ಸುಯಾಶ್ ರಾಯ್ ನಿಜ ಜೀವನದಲ್ಲಿ ದಂಪತಿಗಳಾದರು. ಪ್ರೀತಿಗೆ ಯಾವುದೇ ಅಡ್ಡಿಯಲ್ಲ ಎಂದು ಸಾಬೀತುಪಡಿಸಿದರು. ಅವರಿಗೆ ನಿರ್ವೈರ್ ಎಂಬ ಮಗನೂ ಇದ್ದಾನೆ. ಬಾಲಿವುಡ್ ಮಾಡೆಲ್ ಕಿಶ್ವರ್ ಮರ್ಚೆಂಟ್ ಹಲವಾರು ಟಿವಿ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.
ಕಿಶ್ವರ್ ಮರ್ಚೆಂಟ್ ಧಾರಾವಾಹಿಗಳು, ಚಲನಚಿತ್ರಗಳು
ಶಕ್ತಿಮಾನ್, ಹಿಪ್ ಹಾಪ್ ಹುರೇ, ಏಕ್ ಹಸೀನಾ ಥಿ, ಇತ್ನಾ ಕರೋ ನಾ ಮುಜೆ ಪ್ಯಾರ್, ಪ್ಯಾರ್ ಕಿ ಯೇ ಏಕ್ ಕಹಾನಿ, ಕೈಸಿ ಯೇ ಯಾರಿಯಾನ್, ಧಡ್ಕನ್, ಕಮ್ಮಲ್, ಕ್ಯಾ ಹಡ್ಸಾ ಕ್ಯಾ ಹಖೀಕತ್, ಕಾಸಂ ದ 2 ಚಿತ್ರಗಳಲ್ಲಿ ನಟಿಸಿರುವ ಕಿಶ್ವರ್ ಮರ್ಚಂಟ್, ಹಿಪ್ ಹಾಪ್ ಹುರ್ರೆ, ಏಕ್ ಹಸೀನಾ ತಿ, ಮುಂತಾದ ಹಿಂದಿ ಸೀರಿಸ್, ಧಾರಾವಾಹಿಗಳಲ್ಲಿ ವಿವಿಧ ಪಾತ್ರಗಳಲ್ಲಿ ನಟಿಸಿದ್ದಾರೆ.
ಸುಯಾಶ್ ರಾಯ್ ಧಾರಾವಾಹಿಗಳು
ಸುಯಾಶ್ ರಾಯ್ ಅವರು ಡೇಂಜರಸ್ ಒಟಿಟಿ ವೆಬ್ ಸರಣಿ, ಪ್ಯಾರ್ ಕಿ ಯೇ ಏಕ್ ಕಹಾನಿ, ಕ್ಯಾ ಹುವಾ ತೇರಿ ವಾಡಾ, ಯೇ ಹೈ ಆಶಿಕಿ, ಕೈಸೇ ಹೈ ಇಷ್ಕ್ ಹೈ.. ಅಜಬ್ ಸಾ ರಿಸ್ಕ್ ಹೈ, ಪಿರ್ ಬಿ ನಾ ಮಾನೆ ಬತ್ತಮಿಜ್ ದಿಲ್, ಏಕ್ ಥಾ ರಾಜಾ ಏಕ್ ಥಿ ರಾನಿ ಮತ್ತು ಹಲವು ಟಿವಿ ಶೋಗಳಲ್ಲಿ ನಟಿಸಿದ್ದಾರೆ.
ತಾಯಿ ಮತ್ತು ಮಗನಾಗಿ
2010ರಲ್ಲಿ ಪ್ರಾರಂಭವಾದ ಪ್ಯಾರ್ ಕಿ ಯೇ ಕಹಾನಿ ಧಾರಾವಾಹಿಯಲ್ಲಿ, ಕಿಶ್ವರ್ ಮರಾಂತ್ ತಾಯಿಯ ಪಾತ್ರವನ್ನು ನಿರ್ವಹಿಸಿದರೆ, ಸುಯಾಶ್ ರಾಯ್ ಅವರ ಮಗನ ಪಾತ್ರವನ್ನು ನಿರ್ವಹಿಸಿದರು. ಪರದೆಯ ಮೇಲೆ ಪೋಷಕರ ಪಾತ್ರ ವಹಿಸಿದ್ದ ಈ ಇಬ್ಬರು 2016ರಲ್ಲಿ ವಿವಾಹವಾದರು. ಇದು ಆ ಸಮಯದಲ್ಲಿ ಅನೇಕ ಜನರನ್ನು ಅಚ್ಚರಿಗೊಳಿಸಿತು. ಸೋಷಿಯಲ್ ಮೀಡಿಯಾದಲ್ಲಿ ಇವರ ಮದುವೆ ಕುರಿತು ನೆಗೆಟಿವ್ ಕಾಮೆಂಟ್‌ಗಳು ಹೆಚ್ಚಿದ್ದವು. ಇವರಿಬ್ಬರು ಇಂತಹ ಕಾಮೆಂಟ್‌ಗಳನ್ನು ನಿರ್ಲಕ್ಷಿಸಿದರು.
2015ರಲ್ಲಿ ಕಿಶ್ವರ್ ಮರ್ಚೆಂಟ್ ಮತ್ತು ಸುಯಾಶ್ ರಾಯ್ ಬಿಗ್ ಬಾಸ್ ಹಿಂದಿ ಸೀಸನ್ 9ರಲ್ಲಿ ಸ್ಪರ್ಧಿಗಳಾಗಿ ಪ್ರವೇಶಿಸಿದರು. ಧಾರಾವಾಹಿಗಳಲ್ಲಿ ಒಟ್ಟಿಗೆ ನಟಿಸಿದ ನಂತರ ಮತ್ತು ಬಿಗ್ ಬಾಸ್ ನಂತಹ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ ಇವರು ಒಬ್ಬರನೊಬ್ಬರು ಲವ್ ಮಾಡುತ್ತಿದ್ದರು. ಆ ಪ್ರೇಮಕಥೆಯು ಮದುವೆಯ ಹಂತವನ್ನು ತಲುಪಿತು ಮತ್ತು ಕಿಶ್ವರ್-ಸುಯಾಶ್ ಪತಿ-ಪತ್ನಿಯರಾದರು.