ಮದರ್ಸ್ ಡೇ: ಅಮ್ಮನ ದಿನದಂದು ಒಟಿಟಿಯಲ್ಲಿ ಈ 6 ಸಿನಿಮಾ ನೋಡಿದ್ರೆ ಭಾವುಕರಾಗದೆ ಇರಲಾರಿರಿ
ಮೇ 11 ಭಾನುವಾರ ಮದರ್ಸ್ ಡೇ ವಿಶಸ್‌ಗಳಿಂದ ನಿಮ್ಮ ಮೊಬೈಲ್ ತುಂಬಿ ಹೋಗಿರಬಹುದು. ಅಮ್ಮನ ಜತೆ ಇಂದು ನೀವು ಒಟಿಟಿಯಲ್ಲಿ ಸಿನಿಮಾ ನೋಡಲು ಬಯಸಿದರೆ ಇಲ್ಲೊಂದಿಷ್ಟು ಸಿನಿಮಾಗಳ ವಿವರ ನೀಡಲಾಗಿದೆ.

ಮದರ್ಸ್ ಡೇ ಸಿನಿಮಾಗಳು: ಮೇ 11 ಭಾನುವಾರ ಮದರ್ಸ್ ಡೇ ವಿಶಸ್‌ಗಳಿಂದ ನಿಮ್ಮ ಮೊಬೈಲ್ ತುಂಬಿ ಹೋಗಿರಬಹುದು. ಅಮ್ಮನ ಜತೆ ಇಂದು ನೀವು ಒಟಿಟಿಯಲ್ಲಿ ಸಿನಿಮಾ ನೋಡಲು ಬಯಸಿದರೆ ಇಲ್ಲೊಂದಿಷ್ಟು ಸಿನಿಮಾಗಳ ವಿವರ ನೀಡಲಾಗಿದೆ. ಇವು ನಿಮ್ಮನ್ನು ಭಾವುಕಗೊಳಿಸಬಹುದು. ನಿಮ್ಮ ಅಮ್ಮನ ಕುರಿತಾದ ಪ್ರೀತಿ ಹೆಚ್ಚಿಸಬಹುದು. ಅಮ್ಮನನ್ನು ಒಂದು ಬಾರಿ ಹಗ್ ಮಾಡಬೇಕೆನಿಸಬಹುದು. ಅಮ್ಮಂದಿರ ದಿನದಂದು ತಪ್ಪದೇ ನೋಡಬೇಕಾದ ಒಟಿಟಿ ಸಿನಿಮಾಗಳ ವಿವರ ಇಲ್ಲಿದೆ.
ಮಾಯಿ
ಈ ಹಿಂದಿ ಚಿತ್ರದಲ್ಲಿ ಜನಪ್ರಿಯ ಹಿರಿಯ ಗಾಯಕಿ ಆಶಾ ಬೋಸ್ಲೆ ನಟಿಸಿದ್ದಾರೆ. ಇದು ಇವರು ನಟಿಸಿದ ಮೊದಲ ಚಿತ್ರವೂ ಹೌದು. ಅಲ್ಜೆಮಿರ್ ಕಾಯಿಲೆಯಿಂದ ಬಳಲವು ಅಮ್ಮನ ಕಥೆಯಿದು. ಈ ವೃದ್ಧ ತಾಯಿಯನ್ನು ಮಕ್ಕಳು ತ್ಯಜಿಸುತ್ತಾರೆ. ಒಂದಿಷ್ಟು ಭಾವುಕಗೊಳಿಸುವ ಆಪ್ತ ಸಿನಿಮಾ ಇದಾಗಿದೆ. ನೆಟ್‌ಫ್ಲಿಕ್ಸ್, ಒಟಿಟಿ ಪ್ಲೇಯಲ್ಲಿ ಈ ಸಿನಿಮಾ ನೋಡಬಹುದು.
ಇಂಗ್ಲಿಷ್ ವಿಂಗ್ಲಿಷ್
ಈ ಸಿನಿಮಾದಲ್ಲಿ ಗೃಹಿಣಿ ಮತ್ತು ತಾಯಿಯಾಗಿ ಶ್ರೀದೇವಿ ನಟಿಸಿದ್ದಾರೆ. ಇದು ಸ್ಪೂರ್ತಿದಾಯಕ ಸಿನಿಮಾವಾಗಿದೆ. ಇಂಗ್ಲಿಷ್ ಮಾತನಾಡಲು ಗೊತ್ತಿಲ್ಲವೆಂದು ಮೊದಲಿಸುತ್ತಿದ್ದ ಕುಟುಂಬದಲ್ಲಿ ಈಕೆ ಪಟ್ಟ ಪಾಡು ಮತ್ತು ಇಂತಹ ಮೊದಲಿಕೆಯಿಂದ ಹೊರಬಂದ ರೀತಿ ಸ್ಪೂರ್ತಿದಾಯಕವಾಗಿದೆ.
ನೀಲ್ ಬ್ಯಾಟೆ ಸನ್ನಾಟಾ
ಅಶ್ವಿನಿ ಅಯ್ಯರ್ ತಿವಾರಿ ನಿರ್ದೇಶಕಿಯಾಗಿ ಚೊಚ್ಚಲ ಪ್ರಯತ್ನ ಮಾಡಿದ ಸಿನಿಮಾವಿದು. ಪ್ರೌಢಶಾಲೆಯನ್ನು ತೊರೆದ ಸೇವಕಿ (ಸ್ವರ ಭಾಸ್ಕರ್)ಯ ಕಥೆಯನ್ನು ಇದು ಹೊಂದಿದೆ. ಸಮಾಜದ ಪಕ್ಷಪಾತ ನೀತಿ ವಿರುದ್ಧ ಹೋರಾಡುವ ಮಹಿಳೆಯ ಪಾತ್ರದಲ್ಲಿ ನಟಿಸಿದ್ದಾರೆ.
ವಾರಣೆ ಅವಶ್ಯಮುಂದ್
ಅನೂಪ್ ಸತ್ಯನ್ ಅವರ ಚೊಚ್ಚಲ ನಿರ್ದೇಶನದ ಈ ಸಿನಿಮಾದಲ್ಲಿ ದುಲ್ಕರ್ ಸಲ್ಮಾನ್, ಸುರೇಶ್ ಗೋಪಿ, ಶೋಭನಾ ಮತ್ತು ಕಲ್ಯಾಣಿ ಪ್ರಿಯದರ್ಶನ್ ಮುಂತಾದವರು ನಟಿಸಿದ್ದಾರೆ. ಚೆನ್ನೈನಲ್ಲಿ ಫ್ರೆಂಚ್ ಬೋಧಕಿಯಾಗಿ ಕೆಲಸ ಮಾಡುವ ಒಂಟಿ ತಾಯಿಯ ಕಥೆಯನ್ನು ಇದು ಹೊಂದಿದೆ. ಆಕೆಯ ಮಗಳು ತನಗಾಗಿ ಸೂಕ್ತವಾದ ವರನನ್ನು ಹುಡುಕುತ್ತಾಳೆ. ಮಾಜಿ ಸೇನಾ ಮೇಜರ್ ಮತ್ತು ಆಕರ್ಷಕ ಹುಡುಗ ಪಕ್ಕದ ಮನೆಯ ನೆರೆಹೊರೆಯವರಾಗಿ ಬಂದಾಗ ಅವರ ಜೀವನವು ಆಹ್ಲಾದಕರ ತಿರುವು ಪಡೆಯುತ್ತದೆ.
ಮದರ್ ಇಂಡಿಯಾ
ಮೆಹಬೂಬ್ ಖಾನ್ ಅವರ ಔರತ್ ಸಿನಿಮಾವನ್ನು ಆಧರಿಸಿದ ಈ ಸಿನಿಮಾದಲ್ಲಿ ಬಡತನ ಮತ್ತು ಸಾಲದ ನಡುವೆ ತನ್ನ ಮಕ್ಕಳನ್ನು ಬೆಳೆಸಲು ಹೆಣಗಾಡುವ ಒಂಟಿ ತಾಯಿಯ ಕಥೆಯಿದೆ. ಕೌಟುಂಬಿಕ ಪ್ರೀತಿ, ತಾಯ್ತನ, ದಂಗೆ ಮತ್ತು ನೈತಿಕತೆಯ ಈ ಹೃದಯಸ್ಪರ್ಶಿ ಕಥೆಯನ್ನು ಹೊಂದಿರುವ ಜನಪ್ರಿಯ ಸಿನಿಮಾವಿದು. ಇದರ ಹಾಡುಗಳು ಕೂಡ ಖ್ಯಾತಿ ಪಡೆದಿವೆ. ನರ್ಗಿಸ್, ಸುನಿಲ್ ದತ್ ಮತ್ತು ರಾಜೇಂದ್ರ ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಕನ್ನಡ ಸಿನಿಮಾಗಳು
ದುನಿಯಾ ವಿಜಯ್, ಶ್ರುತಿ ನಟನೆಯ ಅವ್ವ ಎಂಬ ಸಿನಿಮಾವನ್ನು ತಾಯಂದಿರ ದಿನದಂದು ನೋಡಬಹುದು. ಇದು ಪಿ ಲಂಕೇಶ್ ಅವರ ಮುಸ್ಸಂಜೆಯ ಕಥಾ ಪ್ರಸಂಗ ಆಧರಿಸಿದೆ. ಕನ್ನಡದಲ್ಲಿ ತಾಯಿ ಸೆಂಟಿಮೆಂಟ್‌ನ ಸಾಕಷ್ಟು ಸಿನಿಮಾಗಳು ಬಂದಿವೆ. ಜೋಗಿಯಂತಹ ಸಿನಿಮಾಗಳಲ್ಲಿ ತಾಯಿ ಸೆಂಟಿಮೆಂಟ್‌ನ ಕಥೆ ಮತ್ತು ಹಾಡುಗಳು ಜನಪ್ರಿಯತೆ ಪಡೆದಿವೆ.