ಕ್ರಿಕೆಟಿಗ ವಿರಾಟ್ ಕೊಹ್ಲಿ ಬಯೋಪಿಕ್‌ನಲ್ಲಿ ನಟಿಸುತ್ತಾರಾ ತಮಿಳಿನ ಖ್ಯಾತ ನಟ ಸಿಂಬು; ಈ ಗಾಸಿಪ್ ಹರಡಲು ಕಾರಣ ಹೀಗಿದೆ
ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಬಯೋಪಿಕ್ ತೆರೆ ಮೇಲೆ ಬರಲಿದೆ ಎಂಬ ಮಾತು ಹಲವು ದಿನಗಳಿಂದ ಕೇಳಿ ಬರುತ್ತಿದೆ. ಈ ಚಿತ್ರಕ್ಕಾಗಿ ಅವರ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಇದೀಗ ತಮಿಳಿನ ಸ್ಟಾರ್ ನಟ ಸಿಂಬು ವಿರಾಟ್ ಪಾತ್ರ ನಿರ್ವಹಿಸಲಿದ್ದಾರೆ ಎನ್ನಲಾಗುತ್ತಿದೆ. ಈ ಗಾಸಿಪ್ ಹರಡಲು ಕಾರಣ ಹೀಗಿದೆ.

ಕ್ರಿಕೆಟಿಗ ವಿರಾಟ್ ಕೊಹ್ಲಿ ಜೀವನಚರಿತ್ರೆ ಸಿನಿಮಾವಾಗುವ ಬಗ್ಗೆ ಹಲವು ದಿನಗಳಿಂದ ಗಾಸಿಪ್‌ಗಳು ಹರಡುತ್ತಲೇ ಇವೆ. ಇದೀಗ ವಿರಾಟ್ ಬಯೋಪಿಕ್ ಬಗ್ಗೆ ಮತ್ತೆ ಸುದ್ದಿ ಹರಡುತ್ತಿದೆ. ಮಾತ್ರವಲ್ಲ ತಮಿಳಿನ ಸ್ಟಾರ್ ನಟ ಸಿಂಬು ವಿರಾಟ್ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರಂತೆ. ಈ ಗಾಳಿಸುದ್ದಿ ಇದೀಗ ಎಲ್ಲೆಲ್ಲೂ ಜೋರಾಗಿ ಸದ್ದು ಮಾಡುತ್ತಿದೆ.
ವಿರಾಟ್ ಕೊಹ್ಲಿ ಬಯೋಪಿಕ್ ಸಿನಿಮಾದ ಬಗ್ಗೆ ಮತ್ತೆ ಮಾತುಗಳು ಕೇಳಿ ಬರಲು ಹಾಗೂ ಇದರಲ್ಲಿ ಸಿಂಬು ನಟಿಸುತ್ತಾರೆ ಎಂಬ ಮಾತು ಕೇಳಲು ಕಾರಣ ಇತ್ತೀಚೆಗೆ ನಡೆದ ಚಾಟ್ ಶೋವೊಂದರಲ್ಲಿ ಕೊಹ್ಲಿ ಮಾಡಿದ್ದ ಕಾಮೆಂಟ್‌ಗಳು ಮತ್ತು ನಂತರ ನಡೆದ ಬೆಳವಣಿಗೆಗಳು.
ಆ ಹಾಡು ನಂಗೆ ಇಷ್ಟ ಎಂದ ವಿರಾಟ್
ಇತ್ತೀಚೆಗೆ ಚಾಟ್ ಶೋವೊಂದರಲ್ಲಿ ಮಾತನಾಡಿದ ಭಾರತದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ, 'ನೀ ಸಿಂಗಮ್ ದಾನ್' ಹಾಡು ನನಗೆ ತುಂಬಾ ಇಷ್ಟ ಎಂದು ಹೇಳಿದರು. ಈ ಹಾಡನ್ನು ಸಾಮಾಜಿಕ ಮಾಧ್ಯಮದ ರೀಲ್‌ಗಳು ಮತ್ತು ಕ್ರಿಕೆಟ್ ವೀಡಿಯೊಗಳಲ್ಲಿ ಹಲವು ಬಾರಿ ಬಳಸಲಾಗಿದೆ. ಈ ಹಾಡು 'ಪಟ್ಟು ಥಳ' ಚಿತ್ರದದ್ದು. ಈ ಚಿತ್ರದಲ್ಲಿ ಸಿಲಂಬರಸನ್ ಟಿಆರ್ (ಸಿಂಬು) ನಾಯಕ. ಕೊಹ್ಲಿ ಅವರ ಈ ಹೇಳಿಕೆಯ ನಂತರ ಈ ಹಾಡು ಮತ್ತೊಮ್ಮೆ ವೈರಲ್ ಆಗಿದೆ. ಇದಲ್ಲದೆ, ಕೊಹ್ಲಿ ಜೀವನಚರಿತ್ರೆಯಲ್ಲಿ ಸಿಂಬು ನಟಿಸುವ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ.
ಸಿಂಬು ಪ್ರತಿಕ್ರಿಯೆ
‘ನೀ ಸಿಂಗಮ್ ದಾನ್‘ ಹಾಡು ಇಷ್ಟ ಎಂದು ಕೊಹ್ಲಿ ಹೇಳುವ ವಿಡಿಯೊವನ್ನು ಆರ್‌ಸಿಬಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದೆ. ಇದಕ್ಕೆ ಸಿಂಬು ಪ್ರತಿಕ್ರಿಯಿಸಿದ್ದಾರೆ. ‘ನೀ ಸಿಂಗಮ್ ದಾನ್‘ ಎಂದರೆ ‘ನೀನು ನಿಜವಾದ ಸಿಂಹ‘ ಎಂದು ಅವರು ಕಾಮೆಂಟ್ ಮಾಡಿದ್ದಾರೆ. ಇದರೊಂದಿಗೆ ವಿರಾಟ್ ಅಭಿಮಾನಿಗಳು ಸಿಂಬು ಅವರ ಜೀವನ ಚರಿತ್ರೆಯಲ್ಲಿ ನಟಿಸಿದರೆ ಒಳ್ಳೆಯದು ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಸಿಂಬು ಕೂಡ ಇತ್ತೀಚೆಗೆ ವಿರಾಟ್ ತರಹ ಗಡ್ಡ ಬಿಟ್ಟು ಸ್ಟೈಲಿಶ್ ಆಗಿ ಕಾಣುತ್ತಿದ್ದಾರೆ. ಅವರು ತಮ್ಮ ಫಿಟ್ನೆಸ್ ಸಹ ಸುಧಾರಿಸಿಕೊಂಡಿದ್ದಾರೆ. ಈಗಿನ ಅವರ ಲುಕ್ ವಿರಾಟ್ ಕೊಹ್ಲಿಯನ್ನು ನೆನಪಿಸುತ್ತದೆ.
ವಿರಾಟ್ ಕೊಹ್ಲಿ ಬಯೋಪಿಕ್ ಬಗ್ಗೆ ಜೋರಾದ ಚರ್ಚೆ
ಈ ಎಲ್ಲಾ ಬೆಳವಣಿಗೆಗಳ ನಂತರ ವಿರಾಟ್ ಕೊಹ್ಲಿ ಜೀವನ ಚರಿತ್ರೆಯಲ್ಲಿ ಸಿಂಬು ನಟಿಸ್ತಾರಾ ಎನ್ನುವ ಚರ್ಚೆ ಜೋರಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಇತ್ತೀಚೆಗೆ ನಡೆದ ಸಂಭಾಷಣೆಗಳನ್ನು ನೋಡಿದರೆ, ವಿರಾಟ್ ಮತ್ತು ಅನುಷ್ಕಾ ನಿರ್ಮಾಪಕರು ಇದಕ್ಕೆ ಒಪ್ಪಿದ್ದಾರೆ, ಅಂದರೆ ಈ ಜೀವನ ಚರಿತ್ರೆಗೆ ಸಿಂಬು ಆಯ್ಕೆಯಾಗುವ ಸಾಧ್ಯತೆಯಿದೆ.
ವಿರಾಟ್ ಐಪಿಎಲ್ 2025 ರಲ್ಲಿ ಅಬ್ಬರಿಸುತ್ತಿದ್ದರೆ, ಮತ್ತೊಂದೆಡೆ, ಸಿಂಬು ‘ಥಗ್ ಲೈಫ್‘, ‘STR49‘, ‘STR50‘, ಮತ್ತು ‘STR51‘ ಚಿತ್ರಗಳಲ್ಲಿ ಬ್ಯುಸಿ ಆಗಿದ್ದಾರೆ. ನೋಡಲು ಕೊಂಚ ವಿರಾಟ್ ಕೊಹ್ಲಿ ಅವರಂತೆ ಕಾಣುವ ಸಿಂಬು ಅವರ ಬಯೋಪಿಕ್‌ನಲ್ಲಿ ನಟಿಸಿದರೆ ಸೂಪರ್ ಆಗಿರುತ್ತೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.
ವಿಭಾಗ