ಒಟಿಟಿಯಲ್ಲಿ ಎರಡೇ ದಿನಗಳಲ್ಲಿ ಒಟ್ಟು 20 ಸಿನಿಮಾ, ವೆಬ್‌ಸಿರೀಸ್‌ಗಳ ಆಗಮನ; ಇಲ್ಲಿದೆ ಕಂಪ್ಲೀಟ್ ಲಿಸ್ಟ್
ಕೇವಲ ಎರಡು ದಿನಗಳಲ್ಲಿ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್, ಜಿಯೋ ಹಾಟ್‌ಸ್ಟಾರ್, ಆಹಾ ಮತ್ತು ಜೀ5 ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ 20ಕ್ಕೂ ಅಧಿಕ ಸಿನಿಮಾ, ವೆಬ್‌ಸಿರೀಸ್‌ಗಳು ಬಿಡುಗಡೆಯಾಗಿವೆ. ಆ ಸಿನಿಮಾಗಳ ಕುರಿತ ಕಂಪ್ಲೀಟ್ ಲಿಸ್ಟ್ ಇಲ್ಲಿದೆ.

ಎರಡು ದಿನಗಳ ಅವಧಿಯಲ್ಲಿ ಹಲವು ಒಟಿಟಿಗಳಲ್ಲಿ 20ಕ್ಕೂ ಅಧಿಕ ಸಿನಿಮಾಗಳು ಸ್ಟ್ರೀಮಿಂಗ್ ಆರಂಭಿಸಿವೆ. ಆ ಪೈಕಿ ಈ ವಾರಾಂತ್ಯಕ್ಕೆ ನೋಡಬಹುದಾದ ಸಿನಿಮಾ ಮತ್ತು ವೆಬ್‌ಸಿರೀಸ್‌ಗಳ ಕಂಪ್ಲೀಟ್ ಲಿಸ್ಟ್ ಇಲ್ಲಿದೆ.
ನೆಟ್‌ಫ್ಲಿಕ್ಸ್ ಒಟಿಟಿ
- ನಾಸ್ಕರ್ ಫುಲ್ ಸ್ಪೀಡ್ ಸೀಸನ್ 2 (ಇಂಗ್ಲಿಷ್ ಸ್ಪೋರ್ಟ್ಸ್ ಡಾಕ್ಯುಮೆಂಟರಿ ವೆಬ್ ಸರಣಿ)- ಮೇ 08
- ಗುಡ್ ಬ್ಯಾಡ್ ಅಗ್ಲಿ (ತಮಿಳು ಆಕ್ಷನ್ ಥ್ರಿಲ್ಲರ್ ಚಿತ್ರ)- ಮೇ 08
- ಜಾಕ್ (ತೆಲುಗು ರೊಮ್ಯಾಂಟಿಕ್ ಕಾಮಿಡಿ ಆಕ್ಷನ್ ಥ್ರಿಲ್ಲರ್ ಚಿತ್ರ)- ಮೇ 08
- ಫಾರೆವರ್ (ಇಂಗ್ಲಿಷ್ ರೊಮ್ಯಾಂಟಿಕ್ ವೆಬ್ ಸರಣಿ) - ಮೇ 08
- ಬ್ಲಡ್ ಆಫ್ ಜೀಸಸ್ ಸೀಸನ್ 3 (ಇಂಗ್ಲಿಷ್ ಅನಿಮೇಟೆಡ್ ಆಕ್ಷನ್ ಥ್ರಿಲ್ಲರ್ ವೆಬ್ ಸರಣಿ)- ಮೇ 08
- ದಿ ಡಿಪ್ಲೊಮ್ಯಾಟ್ (ಹಿಂದಿ ಪೊಲಿಟಿಕಲ್ ಮಿಸ್ಟರಿ ಥ್ರಿಲ್ಲರ್ ಚಿತ್ರ)- ಮೇ 09
- ದಿ ರಾಯಲ್ಸ್ (ಹಿಂದಿ ರೊಮ್ಯಾಂಟಿಕ್ ಫ್ಯಾಮಿಲಿ ಕಾಮಿಡಿ ಡ್ರಾಮಾ ವೆಬ್ ಸರಣಿ)- ಮೇ 09
- ನೊನ್ನಾಸ್ (ಅಮೇರಿಕನ್ ಕಾಮಿಡಿ ಫಿಲ್ಮ್)- ಮೇ 09
- ಎ ಡೆಡ್ಲಿ ಅಮೆರಿಕನ್ ಮ್ಯಾರೇಜ್ (ಇಂಗ್ಲಿಷ್ ಡಾಕ್ಯುಮೆಂಟರಿ ಫಿಲ್ಮ್)- ಮೇ 09
- ಮಾಲಾ ಇನ್ಫ್ಲುಯೆನ್ಸಿಯಾ (ಸ್ಪ್ಯಾನಿಷ್ ರೊಮ್ಯಾಂಟಿಕ್ ಥ್ರಿಲ್ಲರ್ ಚಿತ್ರ)- ಮೇ 09
ಇದನ್ನೂ ಓದಿ: ನೆಟ್‌ಫ್ಲಿಕ್ಸ್ ಒಟಿಟಿಯಲ್ಲಿ ಟಾಪ್ 10 ಟ್ರೆಂಡಿಂಗ್ ಸಿನಿಮಾಗಳಿವು; ಆ ಹತ್ತರಲ್ಲಿ ನೋಡಲೇಬೇಕಾದ 5 ಚಿತ್ರಗಳ ವಿವರ ಇಲ್ಲಿದೆ
ಅಮೆಜಾನ್ ಪ್ರೈಂ ಒಟಿಟಿ
- ಓದೆಲ್ಲ 2 (ತೆಲುಗು ಮೈಥಲಾಜಿಕಲ್)- ಮೇ 09
- ಟೆನ್ ಅವರ್ಸ್ (ತಮಿಳು ಕ್ರೈಮ್ ಆಕ್ಷನ್ ಥ್ರಿಲ್ಲರ್ ಚಿತ್ರ) - ಮೇ 08
- ಗ್ರಾಮ್ ಚಿಕಿತ್ಸಾಲಯ್ (ಹಿಂದಿ ಕಾಮಿಡಿ ವೆಬ್ ಸರಣಿ)- ಮೇ 09
ಅಕ್ಕಡ ಅಮ್ಮಾಯಿ ಇಕ್ಕಡ ಅಬ್ಬಾಯಿ (ತೆಲುಗು ರೊಮ್ಯಾಂಟಿಕ್ ಕಾಮಿಡಿ ಚಿತ್ರ)- ಈಟಿವಿ ವಿನ್ ಒಟಿಟಿ - ಮೇ 08
ಕಾಲಮೆಗಾ ಕರಿಗಿಂದಿ? (ತೆಲುಗು ರೊಮ್ಯಾಂಟಿಕ್ ಡ್ರಾಮಾ ಚಿತ್ರ)- ಸನ್ ನೆಕ್ಸ್ಟ್ ಒಟಿಟಿ - ಮೇ 09
ಬಹುರೂಪಿ (ಬಂಗಾಳಿ ಆಕ್ಷನ್ ಥ್ರಿಲ್ಲರ್ ಚಿತ್ರ)- ಜೀ5 ಒಟಿಟಿ - ಮೇ 09
ಅಸ್ತ್ರಂ (ತಮಿಳು ಕ್ರೈಮ್ ಥ್ರಿಲ್ಲರ್ ಚಿತ್ರ)- ಆಹಾ ತಮಿಳು ಒಟಿಟಿ - ಮೇ 09
ಪೋಕರ್ ಫೇಸ್ (ಇಂಗ್ಲಿಷ್ ವೆಬ್ ಸರಣಿ)- ಜಿಯೋ ಹಾಟ್ಸ್ಟಾರ್ ಒಟಿಟಿ - ಮೇ 09
ಲಾಂಗ್ ವೇ ಹೋಮ್ (ಇಂಗ್ಲಿಷ್ ರೋಡ್ ಜರ್ನಿ ವೆಬ್ ಸರಣಿ) - ಆಪಲ್ ಪ್ಲಸ್ ಟಿವಿ ಒಟಿಟಿ - ಮೇ 09
ಗುರುವಾರ (ಮೇ 8) ಮತ್ತು ಶುಕ್ರವಾರ (ಮೇ 9) ಎರಡು ದಿನಗಳಲ್ಲಿ ಒಟ್ಟು 20 ಚಿತ್ರ ಮತ್ತು ವೆಬ್‌ಸಿರೀಸ್‌ಗಳು ಒಟಿಟಿಯಲ್ಲಿ ಸ್ಟ್ರೀಮಿಂಗ್ ಆರಂಭಿಸಿವೆ. ಇವುಗಳಲ್ಲಿ ತಮನ್ನಾ ಭಾಟಿಯಾ ಅವರ ಓದೆಲ್ಲಾ 2, ಸಿದ್ದು ಜೊನ್ನಲಗಡ್ಡ ನಟನೆಯ ಜಾಕ್, ಅಜಿತ್ ಕುಮಾರ್ ಅವರ ಗುಡ್ ಬ್ಯಾಡ್ ಅಗ್ಲಿ, ಪ್ರದೀಪ್ ಮಾಚಿರಾಜು ಅಕ್ಕಡ ಅಬ್ಬಾಯಿ ಇಕ್ಕಡ ಅಮ್ಮಾಯಿ ಸಿನಿಮಾಗಳು ತುಂಬ ವಿಶೇಷ ಎನಿಸಿವೆ.