MP Home Minister about Adipurush teaser: ಆದಿಪುರುಷ್‌ ಚಿತ್ರತಂಡಕ್ಕೆ ಪತ್ರ ಬರೆಯುತ್ತಿದ್ದೇನೆ...ನರೋತ್ತಮ್‌ ಮಿಶ್ರಾ
ಕನ್ನಡ ಸುದ್ದಿ  /  ಮನರಂಜನೆ  /  Mp Home Minister About Adipurush Teaser: ಆದಿಪುರುಷ್‌ ಚಿತ್ರತಂಡಕ್ಕೆ ಪತ್ರ ಬರೆಯುತ್ತಿದ್ದೇನೆ...ನರೋತ್ತಮ್‌ ಮಿಶ್ರಾ

MP Home Minister about Adipurush teaser: ಆದಿಪುರುಷ್‌ ಚಿತ್ರತಂಡಕ್ಕೆ ಪತ್ರ ಬರೆಯುತ್ತಿದ್ದೇನೆ...ನರೋತ್ತಮ್‌ ಮಿಶ್ರಾ

ಆದಿಪುರುಷ್‌ ಸಿನಿಮಾವನ್ನು ಈ ರೀತಿ ಚಿತ್ರಿಸಿರುವುದು ರಾಮಾಯಣಕ್ಕೆ ಹಾಗೂ ಹಿಂದೂ ಧರ್ಮಕ್ಕೆ ಮಾಡಿರುವ ಅವಮಾನ. ಈ ವಿಚಾರವಾಗಿ ನಾನು ಚಿತ್ರತಂಡಕ್ಕೆ ಪತ್ರ ಬರೆಯುತ್ತಿದ್ದೇನೆ. ಆಕ್ಷೇಪಾರ್ಹ ದೃಶ್ಯಗಳನ್ನು ತೆಗೆದುಹಾಕದಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

<p>'ಆದಿಪುರುಷ್‌' ಟೀಸರ್‌ಗೆ ವಿರೋಧ ವ್ಯಕ್ತಪಡಿಸಿದ ನರೋತ್ತಮ್‌ ಮಿಶ್ರಾ</p>
'ಆದಿಪುರುಷ್‌' ಟೀಸರ್‌ಗೆ ವಿರೋಧ ವ್ಯಕ್ತಪಡಿಸಿದ ನರೋತ್ತಮ್‌ ಮಿಶ್ರಾ

ಇತ್ತೀಚೆಗೆ ಬಿಡುಗಡೆಯಾದ ಪ್ರಭಾಷ್‌ ಅಭಿನಯದ 'ಆದಿಪುರುಷ್‌ ' ಚಿತ್ರದ ಟೀಸರ್‌ಗೆ ಮೆಚ್ಚುಗೆಗಿಂತ ನೆಗೆಟಿವ್‌ ಕಮೆಂಟ್‌ಗಳೇ ಹೆಚ್ಚಾಗುತ್ತಿವೆ. ಇದಕ್ಕೆ ಕಾರಣ, ಟೀಸರ್‌ನಲ್ಲಿ ರಾಮಾಯಣ ಪಾತ್ರಧಾರಿಗಳನ್ನು ತಮಗೆ ತೋಚಿದಂತೆ ತೋರಿಸಿರುವುದು. ಅದರಲ್ಲೂ ಸೈಫ್‌ ಅಲಿ ಖಾನ್‌ ಮಾಡಿರುವ ರಾವಣ ಪಾತ್ರಧಾರಿಯನ್ನಂತೂ ಮುಸ್ಲಿಂ ದೊರೆಯಂತೆ ಚಿತ್ರಿಸಲಾಗಿದೆ.

ಟೀಸರ್‌ನಲ್ಲಿ ಸೈಫ್‌ ಅಲಿ ಖಾನ್‌ ನೋಡುತ್ತಿದ್ದರೆ ಆತ ರಾವಣನ ಪಾತ್ರವನ್ನು ಮಾಡುತ್ತಿದ್ದಾರೆ ಎಂದು ಯಾವ ಆಂಗಲ್‌ನಲ್ಲೂ ಹೇಳಲು ಸಾಧ್ಯವಿಲ್ಲ. ರಾವಣನ ಪಾತ್ರಧಾರಿಯ ಒಂದು ಅಂಶ ಸೈಫ್‌ ಅಲಿ ಖಾನ್‌ರಲ್ಲಿ ಕಾಣುತ್ತಿಲ್ಲ. ಜೊತೆಗೆ ರಾವಣ ವಾಸ ಮಾಡುವ ಅರಮನೆ ಯಾವುದೋ ಹಂಟ್‌ ಹೌಸ್‌ನಂತೆ ಇದ್ದು ಅದೂ ಕೂಡಾ ಟ್ರೋಲ್‌ ಆಗುತ್ತಿದೆ. ಇನ್ನು ಹನುಮಂತನ ಪಾತ್ರಧಾರಿಗಳಿಗೆ ಲೆದರ್‌ ಬಟ್ಟೆ ತೊಡಿಸಿರುವುದು ಕೂಡಾ ವಿರೋಧಕ್ಕೆ ಕಾರಣವಾಗುತ್ತಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶ ಗೃಹಸಚಿವ ನರೋತ್ತಮ್‌ ಮಿಶ್ರಾ ಕೂಡಾ ಆದಿಪುರುಷ್‌ ಟೀಸರ್‌ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಆದಿಪುರುಷ್‌ ಸಿನಿಮಾವನ್ನು ಈ ರೀತಿ ಚಿತ್ರಿಸಿರುವುದು ರಾಮಾಯಣಕ್ಕೆ ಹಾಗೂ ಹಿಂದೂ ಧರ್ಮಕ್ಕೆ ಮಾಡಿರುವ ಅವಮಾನ. ಈ ವಿಚಾರವಾಗಿ ನಾನು ಚಿತ್ರತಂಡಕ್ಕೆ ಪತ್ರ ಬರೆಯುತ್ತಿದ್ದೇನೆ. ಆಕ್ಷೇಪಾರ್ಹ ದೃಶ್ಯಗಳನ್ನು ತೆಗೆದುಹಾಕದಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಮಧ್ಯಪ್ರದೇಶದ ಗೃಹಮಂತ್ರಿ ಮಾತ್ರವಲ್ಲದೆ ಬಹುತೇಕ ಎಲ್ಲರೂ ಈ ಚಿತ್ರದ ಟೀಸರ್‌ಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಟೀಸರ್‌ ನೋಡಿದರೆ ಕಾರ್ಟೂನ್‌ ನೋಡಿದಂತೆ ಆಗುತ್ತದೆ ಎಂದು ಕೂಡಾ ಅಭಿಪ್ರಾಯಗಳು ವ್ಯಕ್ತವಾಗಿವೆ.

ಚಿತ್ರತಂಡ ಈಗಾಗಲೇ ನೂರಾರು ಕೋಟಿ ರೂಪಾಯಿ ಖರ್ಚು ಮಾಡಿದೆ. ಈ ಟ್ರೋಲ್‌ ನಡುವೆ ಮತ್ತೆ ವಿಎಫ್‌ಎಕ್ಸ್‌ ಬದಲಾಯಿಸಲು ಇನ್ನಷ್ಟು ಖರ್ಚು ಮಾಡಬೇಕಿದೆ. ಈಗಾಗಲೇ ಬಾಯ್‌ಕಾಟ್‌ ಆದಿಪುರುಷ್‌ ಟ್ರೆಂಡ್‌ ಶುರುವಾಗಿದೆ. ಪ್ರಭಾಸ್‌ಗೆ ಮತ್ತೊಮ್ಮೆ ಸೋಲಿನ ಭೀತಿ ಎದುರಾಗಿದೆ. ಸ್ಯಾಂಡಲ್‌ವುಡ್‌ ನಟಿ, ಬಿಜೆಪಿ ನಾಯಕಿ ಮಾಳವಿಕಾ ಅವಿನಾಶ್‌ ಕೂಡಾ ಟೀಸರ್‌ ಬಗ್ಗೆ ವಿರೋಧ ವ್ಯಕ್ತಪಡಿಸಿ, ಬಾಲಿವುಡ್ ನವರಿಗೆ ಅದೆಷ್ಟು ಅಸಡ್ಡೆ ಮಿನಿಮಮ್ ರಿಸರ್ಚ್ ಮಾಡಬೇಕಲ್ಲವೇ ಎಂದು ಬೇಸರ ವ್ಯಕ್ತಪಡಿಸಿದ್ದರು.

'ಆದಿಪುರುಷ್‌' ಸಿನಿಮಾದಲ್ಲಿ ಪ್ರಭಾಸ್ ರಾಮನಾಗಿ ನಟಿಸುತ್ತಿದ್ದರೆ, ಕೃತಿ ಸನನ್ ಜಾನಕಿ ದೇವಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬಾಲಿವುಡ್ ಸ್ಟಾರ್ ಸೈಫ್ ಅಲಿ ಖಾನ್ ರಾವಣಾಸುರನಾಗಿ ಕಾಣಿಸಿಕೊಳ್ಳಲಿದ್ದಾರೆ. 3ಡಿ ಮೋಷನ್ ಕ್ಯಾಪ್ಚರ್ ತಂತ್ರಜ್ಞಾನದೊಂದಿಗೆ ಸಿನಿಮಾ ಮುಂದಿನ ವರ್ಷ ಜನವರಿ 12 ಕ್ಕೆ ಪ್ರೇಕ್ಷಕರ ಮುಂದೆ ಬರಲಿದೆ ಎಂದು ಚಿತ್ರತಂಡ ಈಗಾಗಲೇ ಘೋಷಿಸಿದೆ. ಟಿ ಸೀರೀಸ್‌ ಫಿಲ್ಮ್ಸ್‌ ನಿರ್ಮಾಣದ ಈ ಚಿತ್ರವನ್ನು ಓಂ ರಾವತ್‌ ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ.

Whats_app_banner