Muddhu Sose Serial: ʻಅಣ್ಣಯ್ಯʼನಿಗೆ ಟಕ್ಕರ್ ಕೊಡ್ತಾಳಾ ʻಮುದ್ದು ಸೊಸೆʼ? ಇಂದಿನಿಂದ ಕಲರ್ಸ್ ಕನ್ನಡದಲ್ಲಿ ಹೊಸ ಧಾರಾವಾಹಿ
ಜೀ ಕನ್ನಡದಲ್ಲಿ ರಾತ್ರಿ 7:30ಕ್ಕೆ ಅಣ್ಣಯ್ಯ ಸೀರಿಯಲ್ ಪ್ರಸಾರವಾಗುತ್ತಿದೆ. ಕಿರುತೆರೆ ವೀಕ್ಷಕರಿಂದ ಮೆಚ್ಚುಗೆ ಪಡೆದ ಈ ಸೀರಿಯಲ್, ಟಿಆರ್‌ಪಿ ವಿಚಾರದಲ್ಲಿ ಟಾಪ್ ಸ್ಥಾನದಲ್ಲಿದೆ. ಇದೀಗ ಇದೇ ಟೈಮ್ ಸ್ಲಾಟ್‌ಗೆ ಮುದ್ದು ಸೊಸೆ ಸೀರಿಯಲ್ ಪ್ರಸಾರ ಆರಂಭಿಸಲಿದೆ.

Muddhu Sose Serial: ಸಾಲು ಸಾಲು ಹೊಸ ಸೀರಿಯಲ್‌ಗಳನ್ನು ಕರುನಾಡ ಪ್ರೇಕ್ಷಕರಿಗೆ ನೀಡುತ್ತಿದೆ ಕಲರ್ಸ್ ಕನ್ನಡ ವಾಹಿನಿ. ಬಿಗ್ ಬಾಸ್ ಮುಗಿದ ಬಳಿಕ, ವಧು ಮತ್ತು ಯಜಮಾನ ಮೂಲಕ ಎರಡು ಸೀರಿಯಲ್‌ಗಳನ್ನು ಪರಿಚಯಿಸಿದ್ದ ಕಲರ್ಸ್, ಅದಾದ ಮೇಲೆ ಇತ್ತೀಚೆಗಷ್ಟೇ ಭಾರ್ಗವಿ ಎಲ್‌ಎಲ್‌ಬಿ ಸೀರಿಯಲ್ ಜತೆ ಆಗಮಿಸಿತ್ತು. ಇಂತಿಪ್ಪ ಮೂರು ಸೀರಿಯಲ್‌ಗಳ ಬಳಿಕ ಇದೀಗ ಈ ವರ್ಷದ ನಾಲ್ಕನೇ ತಿಂಗಳಷ್ಟೊತ್ತಿಗೆ ನಾಲ್ಕನೇ ಧಾರಾವಾಹಿಯನ್ನು ಹೊತ್ತು ತರುತ್ತಿದೆ. ಅದುವೇ ʻಮುದ್ದು ಸೊಸೆʼ. ಇಂದಿನಿಂದ ರಾತ್ರಿ 7:30ಕ್ಕೆ ಕಲರ್ಸ್ ಕನ್ನಡದಲ್ಲಿ ʻಮುದ್ದು ಸೊಸೆʼ ಪ್ರಸಾರವಾಗಲಿದೆ. ಜೀ ಕನ್ನಡದ ಅಣ್ಣಯ್ಯನ ಎದುರು ಈ ಸೀರಿಯಲ್ ಕಣಕ್ಕಿಳಿಯಲಿದೆ.
ಮುದ್ದು ಸೊಸೆ ಧಾರಾವಾಹಿ ಕಥೆ ಏನು?
ಬಿಗ್ ಬಾಸ್ ಮೂಲಕ ಗಮನ ಸೆಳೆದ ತ್ರಿವಿಕ್ರಮ್ ʻಮುದ್ದು ಸೊಸೆʼ ಸೀರಿಯಲ್ ಮೂಲಕ ನಾಯಕರಾಗಿ ಕಿರುತೆರೆ ಪ್ರವೇಶಿಸಿದ್ದಾರೆ. ನಾಯಕಿಯಾಗಿ ಪ್ರತಿಮಾ ಠಾಕೂರ್ ಕಾಣಿಸಿಕೊಂಡರೆ, ಇನ್ನುಳಿದಂತೆ ಮುನಿ ಮತ್ತು ಹರಿಣಿ ಶ್ರೀಕಾಂತ್ ಮುಖ್ಯಭೂಮಿಕೆಯಲ್ಲಿದ್ದಾರೆ. ಚೆನ್ನಾಗಿ ಓದಿ ಡಾಕ್ಟರ್ ಆಗಬೇಕೆಂಬ ಕನಸು ಹೊತ್ತವಳು ವಿದ್ಯಾ, ಇದೇ ವಿದ್ಯಾ ಶಾಲೆಯ ಬೆಂಚಿಂದ ಹಸೆಮಣೆ ಏರುವ ವಿದ್ಯಾಳ ಬದುಕಿನ ಕತೆಯನ್ನು ಹೇಳುತ್ತದೆ ಈ 'ಮುದ್ದು ಸೊಸೆ' ಧಾರಾವಾಹಿ. ವಿದ್ಯಾಗೆ ವಿದ್ಯೆ ಬೇಕು, ಮನೆಯವರಿಗೆ ಅವಳ ಮದುವೆ ಮಾಡಬೇಕು. ಇದರಾಚೆಗೆ ಆಕೆಯ ಬದುಕು ಹೇಗೆ ಇಕ್ಕಟ್ಟಿಗೆ ಸಿಲುಕುತ್ತದೆ ಎಂಬುದೇ ಈ ಸೀರಿಯಲ್‌ನ ಒಂದೆಳೆ.
ಬಾಲ್ಯ ವಿವಾಹ ವಿದ್ಯಾಳ ಕನಸುಗಳಿಗೆ ಅಡ್ಡಿಯಾಗುತ್ತದೆಯೇ? ತಂದೆ ಶಿವರಾಮೇಗೌಡನ ಆದೇಶಗಳಿಗೆ ತಲೆಬಾಗುವ ಭದ್ರಗೌಡ, ವಿದ್ಯಾಳ ಕನಸುಗಳನ್ನು ಅರಿತಾಗ ತಂದೆಯ ವಿರೋಧ ಕಟ್ಟಿಕೊಂಡು ವಿದ್ಯಾಳನ್ನು ಓದಿಸುವನೇ? ಅವಳ ಮನದ ಒಳಗಿನ ನೋವನ್ನು ಅರ್ಥಮಾಡಿಕೊಳ್ಳುತ್ತಾನೆಯೇ? ಭದ್ರ ಮತ್ತು ವಿದ್ಯಾಳ ದಾಂಪತ್ಯವು ಆಕೆಯ ಭವಿಷ್ಯಕ್ಕೆ ಸಹಾಯ ಮಾಡುತ್ತದೆಯೇ? ಹೀಗೆ ಒಂದಷ್ಟು ಕೌತುಕದಲ್ಲಿಯೇ ಮುದ್ದು ಸೊಸೆ ಧಾರಾವಾಹಿ ಸಾಗಲಿದೆ. ಎಸ್ಟ್ರೆಲ್ಲಾ ಸ್ಟೋರೀಸ್ ನಿರ್ಮಿಸುತ್ತಿರುವ ‘ಮುದ್ದು ಸೊಸೆ’ ಧಾರಾವಾಹಿಯ ಬಹುತೇಕ ಶೂಟಿಂಗ್ ಮಂಡ್ಯ ಸುತ್ತಮುತ್ತ ಚಿತ್ರೀಕರಿಸಲಾಗುತ್ತಿದೆ.
ಆಸೆ, ಅಣ್ಣಯ್ಯ ಸೀರಿಯಲ್‌ಗೆ ಸ್ಪರ್ಧೆಯೊಡ್ಡುತ್ತಾ?
ಜೀ ಕನ್ನಡದಲ್ಲಿ ರಾತ್ರಿ 7:30ಕ್ಕೆ ಅಣ್ಣಯ್ಯ ಸೀರಿಯಲ್ ಪ್ರಸಾರವಾಗುತ್ತಿದೆ. ಕಿರುತೆರೆ ವೀಕ್ಷಕರಿಂದ ಮೆಚ್ಚುಗೆ ಪಡೆದ ಈ ಸೀರಿಯಲ್, ಟಿಆರ್‌ಪಿ ವಿಚಾರದಲ್ಲಿ ಟಾಪ್ ಸ್ಥಾನದಲ್ಲಿದೆ. 13ನೇ ವಾರದ ಟಿಆರ್‌ಪಿ ರೇಟಿಂಗ್‌ನಲ್ಲಿ 7.2 ಟಿವಿಆರ್ ಪಡೆದು ಮೂರನೇ ಸ್ಥಾನದಲ್ಲಿದೆ. ಇದೀಗ ಇದೇ ಸೀರಿಯಲ್ ಎದುರು ಸೆಣೆಸಲು ಕಲರ್ಸ್ ಕನ್ನಡದ ʻಮುದ್ದು ಸೊಸೆʼಯ ಆಗಮನವಾಗಿದೆ. ಅಂದರೆ, 7:30ರ ಸ್ಲಾಟ್‌ನಲ್ಲಿ ಕಿಂಗ್ ಯಾರು ಎಂಬುದು ಮುಂದಿನ ದಿನಗಳಲ್ಲಿಯೇ ತಿಳಿದು ಬರಲಿದೆ. ಬರೀ ಇದೊಂದೆ ಅಲ್ಲ, ಸ್ಟಾರ್ ಸುವರ್ಣ ವಾಹಿನಿಯಲ್ಲಿನ ʻಆಸೆʼ ಸೀರಿಯಲ್‌ಗೂ ದೊಡ್ಡ ಅಭಿಮಾನಿ ಬಳಗವಿದೆ. ಆ ಧಾರಾವಾಹಿಯೂ 7:30ಕ್ಕೆ ಪ್ರಸಾರವಾಗುತ್ತಿದೆ.

ವಿಭಾಗ