ಲಕ್ಷ್ಮೀ ನಿವಾಸ ಕಲಾವಿದರಿಂದ ಸಂಗೀತ ಪ್ರಸ್ತುತಿ; ವೀಣಾ ಗಾಯನಕ್ಕೆ ವಾದನಗಳ ಮೂಲಕ ಸಾತ್ ನೀಡಿದ ಶ್ರೀನಿವಾಸ್, ಸಂತೋಷ್
Zee Kannada: ಜೀ ಕನ್ನಡದಲ್ಲಿ ವಾರಾಂತ್ಯದಲ್ಲಿ ಪ್ರಸಾರಗೊಂಡ ಜೀ ಎಂರ್ಟಟೈನ್ಮೆಂಟ್ ಕಾರ್ಯಕ್ರಮದಲ್ಲಿ ‘ಲಕ್ಷ್ಮೀ ನಿವಾಸ’ ಧಾರಾವಾಹಿಯ ಕಲಾವಿದರು ಹಾಡಿನ ಮೂಲಕ ಎಲ್ಲರ ಮನ ಸೆಳೆದಿದ್ದಾರೆ.

Zee Kannada: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿ ‘ಲಕ್ಷ್ಮೀ ನಿವಾಸ’ ಈ ಧಾರಾವಾಹಿಯಲ್ಲಿ ಅಭಿನಯಿಸುತ್ತಿರುವ ಕಲಾವಿದರು ಜೀ ಎಂರ್ಟಟೈನ್ಮೆಂಟ್ ಕಾರ್ಯಕ್ರಮದಲ್ಲಿ, ತಮ್ಮ ಪ್ರತಿಭಾ ಪ್ರದರ್ಶನ ಮಾಡಿದ್ದಾರೆ. ಯಾರೂ ಅಂದುಕೊಂಡಿರದ ರೀತಿಯಲ್ಲಿ ಮೂವರು ತಮ್ಮ ಕಲಾ ಪ್ರದರ್ಶನ ನೀಡಿದ್ದಾರೆ. 'ಲಕ್ಷ್ಮೀ ನಿವಾಸ' ಧಾರಾವಾಹಿಯಲ್ಲಿ ಮುಖ್ಯಪಾತ್ರದಲ್ಲಿ ಅಭಿನಯಿಸುತ್ತಿರುವ ಭಾವನಾಳ ತಂದೆ ಶ್ರೀನಿವಾಸ್ ತಬಲಾ ನುಡಿಸಿದ್ದಾರೆ. ಜೀ ಕನ್ನಡ ವೇದಿಕೆಯಲ್ಲಿ ಲೈವ್ ಸಂಗೀತ ಕಾರ್ಯಕ್ರಮ ನೀಡಿದ್ದಾರೆ.
ಕಲಾವಿದರಿಂದ ಸಂಗೀತ ಪ್ರಸ್ತುತಿ
ಇವರೆಲ್ಲರಲ್ಲಿ ಇಂತಹ ಒಬ್ಬ ಕಲಾವಿದನಿದ್ದಾನೆ ಎಂದು ಯಾರೂ ಅಂದಾಜು ಮಾಡಲೂ ಸಾಧ್ಯವಿಲ್ಲ. ಆ ರೀತಿಯಲ್ಲಿ ತಮ್ಮ ಪ್ರತಿಭೆ ತೋರ್ಪಡಿಸಿದ್ದಾರೆ. ವೀಣಾ ತುಂಬಾ ಸುಶ್ರಾವ್ಯವಾಗಿ ಹಾಡು ಹಾಡಿದ್ದಾರೆ. “ಬಾನ ತೊರೆದು ನೀಲಿ ಮರೆಯಾಯಿತೇತಕೆ ಕರಗೀತೆ ಈ ಮೋಡ ನಿಟ್ಟುಸಿರ ಶಾಖಕೆ” ಎಂಬ ಹಾಡನ್ನು ಹಾಡಿ ಎಲ್ಲರನ್ನೂ ಭಾವನಾಲೋಕಕ್ಕೆ ಕೊಂಡೊಯ್ದಿದ್ದಾರೆ. ಸಂತೋಷ್ ಅವರಿಗೆ ಹಾರ್ಮೋನಿಯಂ ನುಡಿಸುವ ಮೂಲಕ ಸಾತ್ ನೀಡಿದ್ದಾರೆ. ಈ ಮೂವರ ಸಂಯೋಜನೆಯಲ್ಲಿ ಹಾಡು ಇಂಪಾಗಿ ಕೇಳಿಬಂದಿದೆ.
ಇವರ ಪ್ರತಿಭೆಯನ್ನು ಗಮನಿಸಿದ ವೀಕ್ಷಕರು “ಬಹುಮುಖ ಪ್ರತಿಭೆಯುಳ್ಳ ಕಲಾವಿದರು” ಎಂದು ಹೊಗಳಿದ್ದಾರೆ. ನಟನೆ ಮಾತ್ರವಲ್ಲದೇ ಇತರ ಕ್ಷೇತ್ರಗಳಲ್ಲೂ ಈ ಕಲಾವಿದರು ತೊಡಗಿಸಿಕೊಂಡಿದ್ದಾರೆ ಎಂಬುದಕ್ಕೆ ಈ ಸಂಗೀತ ಸಾಕ್ಷಿಯಾಗಿತ್ತು.
ಕಲಾವಿದರ ಹೆಸರು
ವೀಣಾ ಪಾತ್ರಧಾರಿ ಲಕ್ಷ್ಮೀ ಹೆಗಡೆ ಗಾಯನ
ಶ್ರೀನಿವಾಸ್ ಪಾತ್ರಧಾರಿ ಅಶೋಕ್ ಜೆಂಬೆ ತಬಲಾ
ಸಂತೋಷ್ ಪಾತ್ರಧಾರಿ ಮಧು ಹೆಗಡೆ ಹಾರ್ಮೋನಿಯಂ ನುಡಿಸಿದ್ದಾರೆ.
ವೇದಿಯಲ್ಲಿ ಇನ್ನೂ ಹಲವು ಕಲಾವಿದರಿದ್ದರೂ ಎಲ್ಲರೂ ಇವರ ಸಂಗೀತ ಕೇಳಿ ಆಶ್ಚರ್ಯಪಟ್ಟಿದ್ದಾರೆ. ಎಲ್ಲರ ಮುಖದಲ್ಲಿ ಮಂದಹಾಸ ಮೂಡಿದೆ. ಸಾಕಷ್ಟು ಜನರಿಗೆ ಆಶ್ಚರ್ಯವಾಗಿದ್ದು ಇಡೀ ಹಾಡನ್ನು ಮನಸಾರೆ ಕೇಳಬೇಕು ಎಂಬಂತಿತ್ತು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.
ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲೂ ಈ ಎಲ್ಲ ಕಲಾವಿದರು ಉತ್ತಮ ಪ್ರದರ್ಶನ ನೀಡುತ್ತಿದ್ದು. ಟಿಆರ್‍ಪಿ ಓಟದಲ್ಲೂ ಈ ಧಾರಾವಾಹಿ ಸ್ಥಾನ ಪಡೆದುಕೊಂಡಿತ್ತು. ಸಾಕಷ್ಟು ಜನ ಈ ಧಾರಾವಾಹಿ ವೀಕ್ಷಿಸುತ್ತಾರೆ. ಜಯಂತ್ ಹಾಗೂ ಜಾನ್ನವಿ ಜೋಡಿಯನ್ನು ಆಗಾಗ ಟ್ರೋಲ್ ಕೂಡ ಮಾಡುತ್ತಿರುತ್ತಾರೆ.
ಲಕ್ಷ್ಮೀ ನಿವಾಸ ಧಾರಾವಾಹಿ ಪಾತ್ರಧಾರಿಗಳು
ಸಿದ್ದೇಗೌಡ್ರು- ಧನಂಜಯ
ಭಾವನಾ- ದಿಶಾ ಮದನ್
ಲಕ್ಷ್ಮೀ- ನಟಿ ಶ್ವೇತಾ
ಶ್ರೀನಿವಾಸ್ - ಅಶೋಕ್ ಜೆಂಬೆ
ಹರೀಶ್ - ಅಜಯ್ ರಾಜ್
ಸಿಂಚನ - ರೂಪಶ್ರೀ
ಜಾಹ್ನವಿ - ಚಂದನ ಆನಂತಕೃಷ್ಣ
ಜಯಂತ್ - ದೀಪಕ್ ಸುಬ್ರಮಣ್ಯ
ಸಂತೋಷ್ - ಮಧು ಹೆಗಡೆ
ವೀಣಾ - ಲಕ್ಷ್ಮೀ ಹೆಗಡೆ
