ಕನ್ನಡ ಸುದ್ದಿ  /  Entertainment  /  My Daughter Is Young, She Is Not Doing A Film With Yuva Rajkumar Says Priyanka Upendra

Priynaka Upendra on Aishwarya: ನನ್ನ ಮಗಳು ಚಿಕ್ಕವಳು, ಅವಳು ಯುವ ರಾಜ್‌ಕುಮಾರ್‌ ಜತೆ ಸಿನಿಮಾ ಮಾಡ್ತಿಲ್ಲ; ಪ್ರಿಯಾಂಕಾ ಉಪೇಂದ್ರ

ನನ್ನ ಮಗಳಿನ್ನೂ ಚಿಕ್ಕವಳು. ಅವಳನ್ನೂ ಸಿನಿಮಾಕ್ಕೆ ಕರೆತರುವ ಪ್ಲಾನ್‌ ಇದೆ. ಹಾಗಂತ ಇಷ್ಟು ಚಿಕ್ಕವಯಸ್ಸಿನಲ್ಲಿ ನಾವು ಆ ಕೆಲಸ ಮಾಡಲ್ಲ. ಅವಳಿನ್ನೂ ಓದಬೇಕು.

ನನ್ನ ಮಗಳು ಚಿಕ್ಕವಳು, ಅವಳು ಯುವ ರಾಜ್‌ಕುಮಾರ್‌ ಜತೆ ಸಿನಿಮಾ ಮಾಡ್ತಿಲ್ಲ; ಪ್ರಿಯಾಂಕಾ ಉಪೇಂದ್ರ
ನನ್ನ ಮಗಳು ಚಿಕ್ಕವಳು, ಅವಳು ಯುವ ರಾಜ್‌ಕುಮಾರ್‌ ಜತೆ ಸಿನಿಮಾ ಮಾಡ್ತಿಲ್ಲ; ಪ್ರಿಯಾಂಕಾ ಉಪೇಂದ್ರ

Priynaka Upendra on Aishwarya: ರಿಯಲ್‌ ಸ್ಟಾರ್‌ ಉಪೇಂದ್ರ ಮತ್ತು ಪ್ರಿಯಾಂಕಾ ದಂಪತಿಯ ಮಗಳು ಐಶ್ವರ್ಯಾ ಸ್ಯಾಂಡಲ್‌ವುಡ್‌ಗೆ ಆಗಮಿಸುತ್ತಿರುವ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಪುಕಾರೆದ್ದಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ನಟಿ ಪ್ರಿಯಾಂಕಾ ಉಪೇಂದ್ರ ಸ್ಪಷ್ಟನೆ ನೀಡಿದ್ದು, ಸದ್ಯಕ್ಕೆ ಐಶ್ವರ್ಯಾ ನಟನೆಗೆ ಬರುವುದಿಲ್ಲವಂತೆ.

ಸ್ಯಾಂಡಲ್‌ವುಡ್‌ನಲ್ಲಿ ಸಿನಿಮಾ ಕುಟುಂಬದ ಹಿನ್ನೆಲೆಯಿಂದ ಬಂದ ಮಕ್ಕಳು ಚಿತ್ರರಂಗಕ್ಕೆ ಬರುತ್ತಿರುವುದು ಹೊಸದೇನಲ್ಲ. ಈಗಾಗಲೇ ಸಾಕಷ್ಟು ಮಂದಿ ಬಂದು ನೆಲೆ ಕಂಡುಕೊಂಡಿದ್ದಾರೆ. ಇನ್ನು ಕೆಲವರು ಆ ಪ್ರಯತ್ನದಲ್ಲಿದ್ದಾರೆ. ಫ್ರೆಶ್‌ ಉದಾಹರಣೆ ಹೇಳಬೇಕೆಂದರೆ, ನೆನಪಿರಲಿ ಪ್ರೇಮ್‌ ಪುತ್ರಿ ಅಮೃತಾ ಸಹ ಧನಂಜಯ್‌ ನಿರ್ಮಾಣದ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಪ್ರವೇಶ ಪಡೆದಿದ್ದಾರೆ. ಅದೇ ರೀತಿ ಉಪೇಂದ್ರ ಪುತ್ರಿಯೂ ಚಂದನವನಕ್ಕೆ ಬರುತ್ತಿದ್ದಾರೆ ಎಂಬ ವದಂತಿ ಹಬ್ಬಿತ್ತು.

ಈ ಹಿಂದೆ ಪ್ರಿಯಾಂಕಾ ಉಪೇಂದ್ರ ನಟನೆಯ ದೇವಕಿ ಸಿನಿಮಾದಲ್ಲಿ ನಟಿಸಿದ್ದ ಐಶ್ವರ್ಯಾ, ಇದೀಗ ಡಾ. ರಾಜ್‌ ಕುಟುಂಬದ ಕುಡಿ ಯುವ ರಾಜ್‌ಕುಮಾರ್‌ ನಾಯಕನಾಗಿ ನಟಿಸಲಿರುವ ಮತ್ತು ಸಂತೋಷ್‌ ಆನಂದ್‌ ರಾಮ್‌ ನಿರ್ದೇಶನದ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನಲಾಗಿತ್ತು. ಇದಕ್ಕೆ ಪ್ರಿಯಾಂಕಾ ಪ್ರತಿಕ್ರಿಯೆ ನೀಡಿದ್ದಾರೆ.

"ನನ್ನ ಮಗಳಿನ್ನೂ ಚಿಕ್ಕವಳು. ಅವಳನ್ನೂ ಸಿನಿಮಾಕ್ಕೆ ಕರೆತರುವ ಪ್ಲಾನ್‌ ಇದೆ. ಹಾಗಂತ ಇಷ್ಟು ಚಿಕ್ಕವಯಸ್ಸಿನಲ್ಲಿ ನಾವು ಆ ಕೆಲಸ ಮಾಡಲ್ಲ. ಅವಳಿನ್ನೂ ಓದಬೇಕು. ಒಂದು ವೇಳೆ ಅವಳನ್ನು ಚಿತ್ರರಂಗಕ್ಕೆ ಕರೆತರುವುದೇ ಆಗಿದ್ದರೆ, ದೊಡ್ಡ ಮಟ್ಟದಲ್ಲಿಯೇ ಅವಳನ್ನು ಪರಿಚಯಿಸುವ ಕೆಲಸ ಆಗಲಿದೆ. ಆದರೆ, ಇದೀಗ ಯುವ ರಾಜ್‌ಕುಮಾರ್‌ ಜತೆಗಿನ ಸಿನಿಮಾದಲ್ಲಿ ಐಶ್ವರ್ಯಾ ನಟಿಸಲಿದ್ದಾಳೆ ಎಂಬ ವಿಚಾರ ಸುಳ್ಳು" ಎಂದು ಪ್ರಿಯಾಂಕಾ ತಿಳಿಸಿದ್ದಾರೆ.

IPL_Entry_Point