ಅಗ್ರಸ್ಥಾನಕ್ಕೆ ನಾ ನಿನ್ನ ಬಿಡಲಾರೆ Vs ಅಣ್ಣಯ್ಯ ಪೈಪೋಟಿ; ಟಿಆರ್‌ಪಿ ಲಿಸ್ಟ್‌ನಲ್ಲಿ ಜೀ ಕನ್ನಡದ ಟಾಪ್‌ 9 ಧಾರಾವಾಹಿಗಳು ಹೀಗಿವೆ
ಕನ್ನಡ ಸುದ್ದಿ  /  ಮನರಂಜನೆ  /  ಅಗ್ರಸ್ಥಾನಕ್ಕೆ ನಾ ನಿನ್ನ ಬಿಡಲಾರೆ Vs ಅಣ್ಣಯ್ಯ ಪೈಪೋಟಿ; ಟಿಆರ್‌ಪಿ ಲಿಸ್ಟ್‌ನಲ್ಲಿ ಜೀ ಕನ್ನಡದ ಟಾಪ್‌ 9 ಧಾರಾವಾಹಿಗಳು ಹೀಗಿವೆ

ಅಗ್ರಸ್ಥಾನಕ್ಕೆ ನಾ ನಿನ್ನ ಬಿಡಲಾರೆ Vs ಅಣ್ಣಯ್ಯ ಪೈಪೋಟಿ; ಟಿಆರ್‌ಪಿ ಲಿಸ್ಟ್‌ನಲ್ಲಿ ಜೀ ಕನ್ನಡದ ಟಾಪ್‌ 9 ಧಾರಾವಾಹಿಗಳು ಹೀಗಿವೆ

Kannada Serials TRP: ಲಕ್ಷ್ಮೀ ನಿವಾಸ, ಶ್ರಾವಣಿ ಸುಬ್ರಮಣ್ಯ, ಅಮೃತಧಾರೆ, ಅಣ್ಣಯ್ಯ, ನಾ ನಿನ್ನ ಬಿಡಲಾರೆ, ಪುಟ್ಟಕ್ಕನ ಮಕ್ಕಳು, ಸೀತಾ ರಾಮ, ಬ್ರಹ್ಮಗಂಟು, ಶ್ರೀರಸ್ತು ಶುಭಮಸ್ತು ಸೀರಿಯಲ್‌ಗಳ ಪೈಕಿ 10ನೇ ವಾರದ ಟಿಆರ್‌ಪಿಯಲ್ಲಿ ಯಾವ ಸೀರಿಯಲ್‌ ಟಾಪ್‌ ಸ್ಥಾನದಲ್ಲಿದೆ? ಇಲ್ಲಿದೆ ವಿವರ

ಅಗ್ರಸ್ಥಾನಕ್ಕೆ ನಾ ನಿನ್ನ ಬಿಡಲಾರೆ Vs ಅಣ್ಣಯ್ಯ ಪೈಪೋಟಿ; ಟಿಆರ್‌ಪಿ ಲಿಸ್ಟ್‌ನಲ್ಲಿ ಜೀ ಕನ್ನಡದ ಟಾಪ್‌ 9 ಧಾರಾವಾಹಿಗಳು
ಅಗ್ರಸ್ಥಾನಕ್ಕೆ ನಾ ನಿನ್ನ ಬಿಡಲಾರೆ Vs ಅಣ್ಣಯ್ಯ ಪೈಪೋಟಿ; ಟಿಆರ್‌ಪಿ ಲಿಸ್ಟ್‌ನಲ್ಲಿ ಜೀ ಕನ್ನಡದ ಟಾಪ್‌ 9 ಧಾರಾವಾಹಿಗಳು (Zee Kannada)

Zee Kannada Serial TRP: ಜೀ ಕನ್ನಡದ 10ನೇ ವಾರದ ಟಿಆರ್‌ಪಿ ರೇಟಿಂಗ್ಸ್‌ ಹೊರಬಿದ್ದಿದೆ. ಆ ಪೈಕಿ ಲಕ್ಷ್ಮೀ ನಿವಾಸ, ಶ್ರಾವಣಿ ಸುಬ್ರಮಣ್ಯ, ಅಮೃತಧಾರೆ, ಅಣ್ಣಯ್ಯ, ನಾ ನಿನ್ನ ಬಿಡಲಾರೆ, ಪುಟ್ಟಕ್ಕನ ಮಕ್ಕಳು, ಸೀತಾ ರಾಮ, ಬ್ರಹ್ಮಗಂಟು, ಶ್ರೀರಸ್ತು ಶುಭಮಸ್ತು ಸೀರಿಯಲ್‌ಗಳ ಪೈಕಿ 10ನೇ ವಾರದ ಟಿಆರ್‌ಪಿಯಲ್ಲಿ ಯಾವ ಸೀರಿಯಲ್‌ ಟಾಪ್‌ ಸ್ಥಾನದಲ್ಲಿದೆ? ಹೆಚ್ಚು ಟಾಪ್‌ 9ರಲ್ಲಿ ಯಾವೆಲ್ಲ ಸೀರಿಯಲ್‌ಗಳಿವೆ ಎಂಬ ಮಾಹಿತಿ ಇಲ್ಲಿದೆ.

ನಾ ನಿನ್ನ ಬಿಡಲಾರೆ: ವಾರದಿಂದ ವಾರಕ್ಕೆ ಹೆಚ್ಚೆಚ್ಚು ವೀಕ್ಷಕರನ್ನು ಸೆಳೆಯುತ್ತಿದೆ ನಾ ನಿನ್ನ ಬಿಡಲಾರೆ ಧಾರಾವಾಹಿ. ಟಿಆರ್‌ಪಿಯಲ್ಲಿಯೂ ಮುಂದಡಿ ಇರಿಸಿರುವ ಈ ಸೀರಿಯಲ್‌, 10ನೇ ವಾರದ ಟಿಆರ್‌ಪಿಯಲ್ಲಿ ನಂಬರ್‌ 1 ಸ್ಥಾನ ಅಲಂಕರಿಸಿದೆ. ಅದರಂತೆ, 8.2 ಟಿಆರ್‌ಪಿ ಪಡೆದು ಮೊದಲ ಸ್ಥಾನದಲ್ಲಿದೆ.

ಅಣ್ಣಯ್ಯ: ಅಣ್ಣಯ್ಯ ಸೀರಿಯಲ್‌ 10ನೇ ವಾರಕ್ಕೆ 8.2 ಟಿಆರ್‌ಪಿ ಪಡೆದು ಎರಡನೇ ಸ್ಥಾನದಲ್ಲಿದೆ. ನಾ ನಿನ್ನ ಬಿಡಲಾರೆ ಧಾರಾವಾಹಿ ಅರ್ಬನ್‌ ಪ್ರದೇಶದಲ್ಲಿ ಅಣ್ಣಯ್ಯನಿಗಿಂತ ಮುಂದಿದೆ. ಗ್ರಾಮೀಣ ಮತ್ತು ನಗರ ಪ್ರದೇಶದ ಟಿವಿಆರ್‌ನಲ್ಲಿ ನಾ ನಿನ್ನ ಬಿಡಲಾರೆ ಮುಂದಿದೆ.

ಶ್ರಾವಣಿ ಸುಬ್ರಮಣ್ಯ: ಶ್ರಾವಣಿ ಸುಬ್ರಮಣ್ಯ ಸೀರಿಯಲ್‌, ಇದೀಗ ಹತ್ತನೇ ವಾರ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಈ ಸೀರಿಯಲ್‌ಗೆ 7.6 ಟಿಆರ್‌ಪಿ ಸಿಕ್ಕಿದೆ. ನಗರ ಪ್ರದೇಶದಲ್ಲಿ ಈ ಸೀರಿಯಲ್‌ 6.9 ಟಿಆರ್‌ಪಿ ಪಡೆದಿದೆ.

ಲಕ್ಷ್ಮೀ ನಿವಾಸ: ಜೀ ಕನ್ನಡದ ಮೆಗಾ ಧಾರಾವಾಹಿ ಲಕ್ಷ್ಮೀ ನಿವಾಸ. ಈ ಸೀರಿಯಲ್‌ 10ನೇ ವಾರದ ಟಿಆರ್‌ಪಿಯಲ್ಲಿ 7.4 ಟಿಆರ್‌ಪಿ ಪಡೆದು, ನಾಲ್ಕನೇ ಸ್ಥಾನದಲ್ಲಿದೆ.

ಅಮೃತಧಾರೆ: ಅಮೃತಧಾರೆ ಸೀರಿಯಲ್‌ 9ನೇ ವಾರಕ್ಕೆ ಹೋಲಿಕೆ ಮಾಡಿದರೆ, ಕೊಂಚ ಏರಿಕೆ ಕಂಡಿದೆ. ಒಂಬತ್ತನೇ ವಾರ 6.0 ಟಿಆರ್‌ಪಿ ಪಡೆದು, ಆರನೇ ಸ್ಥಾನದಲ್ಲಿದ್ದ ಈ ಸೀರಿಯಲ್‌ 10ನೇ ವಾರಕ್ಕೆ 7.3 ಟಿಆರ್‌ಪಿ ಮೂಲಕ ಐದನೇ ಸ್ಥಾನಕ್ಕೆ ಬಂದಿದೆ.

ಬ್ರಹ್ಮಗಂಟು: ಬ್ರಹ್ಮಗಂಟು ಸೀರಿಯಲ್‌,10ನೇ ವಾರದ ಟಿಆರ್‌ಪಿಯಲ್ಲಿ ಕಮಾಲ್‌ ಮಾಡಿದೆ. ಇದೀಗ ಟಾಪ್‌ ಐದರ ಅಂಗಳಕ್ಕೆ ಕಾಲಿರಿಸಿ, 6.6 ಟಿಆರ್‌ಪಿ ಪಡೆದು ಆರನೇ ಸ್ಥಾನಕ್ಕೆ ಬಂದಿದೆ. 9ನೇ ವಾರಕ್ಕಿಂತಲೂ ಟಿಆರ್‌ಪಿಯಲ್ಲಿ ಏರಿಕೆ ಕಂಡಿದೆ.

ಪುಟ್ಟಕ್ಕನ ಮಕ್ಕಳು: ಜೀ ಕನ್ನಡದ ಪುಟ್ಟಕ್ಕನ ಮಕ್ಕಳು ಸೀರಿಯಲ್‌, ಹೊಸ ಸೀರಿಯಲ್‌ಗಳ ಹೆಚ್ಚು ಸದ್ದು ಮಾಡುತ್ತಿಲ್ಲ. ಈ ಸೀರಿಯಲ್‌ 4.6 ಟಿಆರ್‌ಪಿ ರೇಟಿಂಗ್‌ ಪಡೆದು ಏಳನೇ ಸ್ಥಾನದಲ್ಲಿದೆ.

ಶ್ರೀರಸ್ತು ಶುಭಮಸ್ತು: ಶ್ರೀರಸ್ತು ಶುಭಮಸ್ತು ಸೀರಿಯಲ್‌ ಆರಕ್ಕೇರದೇ, ಮೂರಕ್ಕಿಳಿಯದ ಸ್ಥಿತಿಯಲ್ಲಿದೆ. 10ನೇ ವಾರ 2.9 ಟಿಆರ್‌ಪಿ ಪಡೆದು, ಎಂಟನೇ ಸ್ಥಾನದಲ್ಲಿ ಮುಂದುವರಿಯುತ್ತಿದೆ.

ಸೀತಾ ರಾಮ: ಸಮಯ ಬದಲಾವಣೆ ಬಳಿಕ ಕುಸಿತದ ಹಾದಿಯಲ್ಲಿರುವ ಸೀತಾರಾಮ ಸೀರಿಯಲ್‌, ಟಿಆರ್‌ಪಿಯಲ್ಲಿ ಕೊನೇ ಸ್ಥಾನದಲ್ಲಿದೆ. 10ನೇ ವಾರ ಕೇವಲ 2.2 ಟಿಆರ್‌ಪಿ ಪಡೆದು, 9ನೇ ಸ್ಥಾನದಲ್ಲಿದೆ.

Manjunath B Kotagunasi

TwittereMail
ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.
Whats_app_banner