Thandel Twitter Review: ಬಿಡುಗಡೆಯಾಯ್ತು ನಾಗ ಚೈತನ್ಯ ಹಾಗೂ ಸಾಯಿ ಪಲ್ಲವಿ ಅಭಿನಯದ ‘ತಾಂಡೇಲ್’ ಸಿನಿಮಾ; ನೋಡಿದವರು ಹೀಗಂತಾರೆ
Thandel Twitter Review: ನಾಗ ಚೈತನ್ಯ ಹಾಗೂ ಸಾಯಿ ಪಲ್ಲವಿ ಅಭಿನಯದ ‘ತಾಂಡೇಲ್’ ಸಿನಿಮಾ ಇಂದು (ಫೆ 7) ಬಿಡುಗಡೆಯಾಗಿದೆ. ಈ ಸಿನಿಮಾ ನೋಡಿದವರು ಏನಂತಾರೆ? ಇಲ್ಲಿದೆ ನೋಡಿ ಟ್ವಿಟರ್ ವಿಮರ್ಶೆ.

ನಾಗ ಚೈತನ್ಯ ಮತ್ತು ಸಾಯಿ ಪಲ್ಲವಿ ಅಭಿನಯದ ‘ತಾಂಡೇಲ್' ಸಿನಿಮಾದ ಬಗ್ಗೆ ಟ್ವಿಟರ್‌ನಲ್ಲಿ ಸಾಕಷ್ಟು ಜನ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಚಂದು ಮೊಂಡೆಟಿ ನಿರ್ದೇಶನದ ಈ ಸಿನಿಮಾ ಇಂದು (ಫೆ 7) ಬಿಡುಗಡೆಯಾಗಿದೆ. ಎಕ್ಸ್ ಬಳಕೆದಾರರ ಅಭಿಪ್ರಾಯಗಳ ಪ್ರಕಾರ ಸಿನಿಮಾ ಹೇಗಿದೆ ಎಂಬುದನ್ನು ನಾವಿಲ್ಲಿ ನೀಡಿದ್ದೇವೆ. ಇತ್ತೀಚೆಗೆ ಬಿಡುಗಡೆಯಾದ ಹಾಡುಗಳು, ಟೀಸರ್‌ಗಳು ಮತ್ತು ಟ್ರೇಲರ್‌ಗಳನ್ನು ನೋಡಿದ ನಂತರ ಹಲವರು ಈ ಸಿನಿಮಾವನ್ನು ನೋಡಲೇಬೇಕು ಎಂದು ಕಾದಿದ್ದರು. ಭಾರಿ ನಿರೀಕ್ಷೆಗಳ ನಡುವೆ ಬಿಡುಗಡೆಯಾದ ಈ ಚಿತ್ರದಲ್ಲಿ ನಾಗಚೈತನ್ಯ ಮೀನುಗಾರನಾಗಿ ಕಾಣಿಸಿಕೊಂಡಿದ್ದಾರೆ.
ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಯು/ಎ ಪ್ರಮಾಣಪತ್ರ ಸಿಕ್ಕಿದೆ. ಅಲ್ಲು ಅರವಿಂದ್ ಪ್ರಸ್ತುತಪಡಿಸುತ್ತಿರುವ ಈ ಚಿತ್ರವನ್ನು ಬನ್ನಿ ವಾಸು ದೊಡ್ಡ ಮಟ್ಟದಲ್ಲಿ ನಿರ್ಮಿಸಿದ್ದಾರೆ ಮತ್ತು ದೇವಿ ಶ್ರೀ ಪ್ರಸಾದ್ ಸಂಗೀತ ನೀಡಿದ್ದಾರೆ.
ವಿಮರ್ಶೆಗಳು ಹೀಗಿವೆ
ನಾನು ಈಗಷ್ಟೇ ತಾಂಡೇಲ್ ಸಿನಿಮಾ ನೋಡಿದೆ. ಈ ಸಿನಿಮಾ ನಾಗಚೈತನ್ಯಗೆ ಕಮ್ ಬ್ಯಾಕ್ ಸಿನಿಮಾ. ಅವರ ನಟನೆ ಅದ್ಭುತವಾಗಿದೆ. ಮಜಿಲಿ ಸಿನಿಮಾದ ನಂತರ ಈ ಸಿನಿಮಾದಲ್ಲಿ ಅವರು ಅದ್ಭುತವಾಗಿ ನಟಿಸಿದ್ದಾರೆ.. ಸಿನಿಮಾದ ಮೊದಲ ಭಾಗ ಕೂಡ ಅದ್ಭುತವಾಗಿದೆ ಮತ್ತು ಎರಡನೇ ಭಾಗ ಕೂಡ ಚೆನ್ನಾಗಿದೆ.. ಸಂಗೀತ ನಿರ್ದೇಶಕ ದೇವಿ ಶ್ರೀ ಪ್ರಸಾದ್ ಅವರ ಸಂಗೀತ ಈ ಸಿನಿಮಾದ ಜೀವಾಳ ಎಂದು ಎಕ್ಸ್ ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ.
ಇನ್ನೊಬ್ಬ ಬಳಕೆದಾರರು ಉತ್ಸಾಹದಿಂದ ನಾಗ ಚೈತನ್ಯ ಅವರು ತೆರೆಯಮೇಲೆ ಬಂದಾಗ ಅಭಿಮಾನಿಗಳು ಅಬ್ಬರಿಸಿದ ದೃಶ್ಯವನ್ನು ಹಂಚಿಕೊಂಡಿದ್ಧಾರೆ.
ಇನ್ನೊಬ್ಬರು ಈ ಸಿನಿಮಾ ನೈಜ ಘಟನೆಯನ್ನು ಆಧರಿಸಿದ ಸಿನಿಮಾ. ನಿರ್ದೇಶನ, ಸ್ಕ್ರೀನ್‌ಪ್ಲೇ ಮತ್ತು ಎಲ್ಲಾ ಕ್ಯಾರೆಕ್ಟರ್‍ಗಳೂ ಸೂಪರ್ ಆಗಿದೆ ಎಂದು ಬರೆದುಕೊಂಡಿದ್ದಾರೆ. ಸಾಯಿ ಪಲ್ಲವಿ ಅವರನ್ನು ಬುಜ್ಜಿ ತಲ್ಲಿ ಎಂದು ಸಿನಿಮಾದಲ್ಲಿ ಕರೆದಿರುವುದು ಇಷ್ಟವಾಗುವಂತಿದೆ ಎಂದು ಬರೆದುಕೊಂಡಿದ್ದಾರೆ. ಕುಟುಂಬದೊಂದಿಗೆ ಸಿನಿಮಾ ನೋಡಿ ಎಂದು ಬರೆದುಕೊಂಡಿದ್ಧಾರೆ
ಚಿತ್ರದ ಹಾಡಿನ ಬಗ್ಗೆ ಸಾಕಷ್ಟು ಜನ ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 5 ವರ್ಷಗಳ ಬಳಿಕ ನಾಗಚೈತನ್ಯ ಕಮ್‌ಬ್ಯಾಕ್ ಮಾಡಿದ್ದಾರೆ ಎಂದು ಇನ್ನೊಬ್ಬ ಬಳಕೆದಾರರು ಬರೆದುಕೊಂಡಿದ್ಧಾರೆ. 3.5/5 ರೇಟಿಂಗ್ ನೀಡಿದ್ದಾರೆ.
