Dasara 100cr Club:ತೆರೆ ಕಂಡ 6 ದಿನಗಳಲ್ಲೇ ಶತಕೋಟಿ ಬಾಚಿದ 'ದಸರಾ'.. ನಾನಿ ಕೆರಿಯರ್‌ನಲ್ಲಿ ಇಷ್ಟು ಲಾಭ ಮಾಡಿದ ಮೊದಲ ಚಿತ್ರ ಎಂಬ ಹೆಗ್ಗಳಿಕೆ
ನಾನಿಯ ಮೊದಲ ಪ್ಯಾನ್ ಇಂಡಿಯಾ ಸಿನಿಮಾವಾಗಿರುವ 'ದಸರಾ'ಗೆ ಯುವ ಪ್ರತಿಭೆ ಶ್ರೀಕಾಂತ್ ಒಡೆಲಾ ಆಕ್ಷನ್ ಕಟ್ ಹೇಳಿದ್ದಾರೆ. ಈ ಸಿನಿಮಾ ನೂರು ಕೋಟಿ ಕ್ಲಬ್ ಸೇರಿದ ನಾನಿ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.
ಕಳೆದ ಗುರುವಾರ (ಮಾ.30) ರಂದು ತೆರೆ ಕಂಡ ನ್ಯಾಚುರಲ್ ಸ್ಟಾರ್ ನಾನಿ ಅಭಿನಯದ 'ದಸರಾ' ಸಿನಿಮಾ ಅದ್ದೂರಿ ಪ್ರದರ್ಶನ ಕಾಣುತ್ತಿದೆ. ಬಿಡುಗಡೆಯಾಗಿ 6 ದಿನಗಳಿಗೆ ಈ ಸಿನಿಮಾ 100 ಕೋಟಿ ರೂಪಾಯಿ ಕ್ಲಬ್ ಸೇರಿದೆ. ಶ್ರೀರಾಮ ನವಮಿ ಪ್ರಯುಕ್ತ ವಿಶ್ವಾದ್ಯಂತ ತೆರೆಕಂಡ 'ದಸರಾ' ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾ ನೂರು ಕೋಟಿ ಕ್ಲಬ್ ಸೇರಿದ ನಾನಿ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.
ನಾನಿಯ ಮೊದಲ ಪ್ಯಾನ್ ಇಂಡಿಯಾ ಸಿನಿಮಾವಾಗಿರುವ 'ದಸರಾ'ಗೆ ಯುವ ಪ್ರತಿಭೆ ಶ್ರೀಕಾಂತ್ ಒಡೆಲಾ ಆಕ್ಷನ್ ಕಟ್ ಹೇಳಿದ್ದಾರೆ. ಕಲ್ಲಿದ್ದಲು ಗಣಿಯ ಸುತ್ತ ನಡೆಯುವ ಗ್ರಾಮೀಣ ಸೊಗಡಿನ ಕತೆಯಲ್ಲಿ ರಾಷ್ಟ್ರಪ್ರಶಸ್ತಿ ವಿಜೇತ ನಟಿ ಕೀರ್ತಿ ಸುರೇಶ್ ನಾಯಕಿಯಾಗಿ ನಟಿಸಿದ್ದಾರೆ. ವಿಶ್ವಾದ್ಯಂತ ಅದ್ಭುತ ಪ್ರದರ್ಶನ ಕಾಣುತ್ತಿರುವ ದಸರಾ ಚಿತ್ರವನ್ನು ಎಸ್ ಎಸ್ ರಾಜಮೌಳಿ, ಮಹೇಶ್ ಬಾಬು ಹಾಗೂ ಪ್ರಭಾಸ್ ಕೂಡಾ ಮೆಚ್ಚಿಕೊಂಡಿದ್ದಾರೆ. ಚಿತ್ರದಲ್ಲಿ ಕನ್ನಡಿಗ ದೀಕ್ಷಿತ್ ಶೆಟ್ಟಿ ಕೂಡಾ ನಟಿಸಿದ್ದಾರೆ.
ಚಿತ್ರವನ್ನು ಎಸ್.ಎಲ್. ವಿ ಕ್ರಿಯೇಷನ್ಸ್ ಬ್ಯಾನರ್ ಅಡಿ ಸುಧಾಕರ್ ಚೆರುಕೂರಿ ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದಾರೆ. ಚಿತ್ರ ಅಭೂತಪೂರ್ವ ಯಶಸ್ಸು ಕಂಡಿರುವ ಖುಷಿಯಲ್ಲಿರುವ ನಿರ್ಮಾಪಕರು ಇತ್ತೀಚೆಗೆ ಹೈದರಾಬಾದ್ ಹಾಗೂ ಕರೀಮ್ ನಗರದಲ್ಲಿ ಸಕ್ಸಸ್ ಕಾರ್ಯಕ್ರಮ ಆಯೋಜಿಸಿದ್ದರು. ಈ ಕಾರ್ಯಕ್ರಮದಲ್ಲಿ ನಿರ್ದೇಶಕ ಶ್ರೀಕಾಂತ್ ಒಡೆಲಾಗೆ ದುಬಾರಿ ಮೊತ್ತದ ಬಿಎಂಡಬ್ಲ್ಯೂ ಕಾರು ಗಿಫ್ಟ್ ನೀಡಿದ್ದು, ದಸರಾಗೆ ಕೆಲಸ ಮಾಡಿದ ಇಡೀ ತಂಡಕ್ಕೆ ತಲಾ 10 ಗ್ರಾಂ ಚಿನ್ನದ ನಾಣ್ಯವನ್ನು ವಿತರಿಸಲಾಗಿದೆ.
'ದಸರಾ' ಕುರಿತಾದ ಮತ್ತಷ್ಟು ಸುದ್ದಿಗಳು ಇಲ್ಲಿವೆ
ಕೀರ್ತಿ ಸುರೇಶ್ ವಿಭಿನ್ನ ಸ್ಟೆಪ್ಸ್‌ಗೆ ಮೆಚ್ಚುಗೆ.. ವೆನ್ನೆಲಾಗೆ ಅವಾರ್ಡ್ ಗ್ಯಾರಂಟಿ ಎಂದ ಫ್ಯಾನ್ಸ್
ನಾನಿ, ಕೀರ್ತಿ ಸುರೇಶ್, ಕನ್ನಡಿಗ ದೀಕ್ಷಿತ್ ಶೆಟ್ಟಿ ನಟಿಸಿರುವ ಪ್ಯಾನ್ ಇಂಡಿಯಾ ಸಿನಿಮಾ ದಸರಾ ಯಶಸ್ಸು ಕಂಡಿದೆ. ರಿಲೀಸ್ ಆದ 4 ದಿನಗಳಲ್ಲಿ 87 ಕೋಟಿ ರೂಪಾಯಿ ಲಾಭ ಮಾಡಿದೆ. ಚಿತ್ರಕಥೆ, ಹಾಡುಗಳು, ಮೇಕಿಂಗ್, ಕಲಾವಿದರ ನಟನೆ ಎಲ್ಲದಕ್ಕೂ ಅಭಿಮಾನಿಗಳು ಫುಲ್ ಮಾರ್ಕ್ಸ್ ನೀಡಿದ್ದಾರೆ. ಚಿತ್ರತಂಡ ಕೀರ್ತಿ ಸುರೇಶ್ ಡ್ಯಾನ್ಸ್ ತುಣುಕೊಂದನ್ನು ಯೂಟ್ಯೂಬ್‌ನಲ್ಲಿ ಬಿಡುಗಡೆ ಮಾಡಿದ್ದು ಕೀರ್ತಿ ಸ್ಟೆಪ್ಸ್ ನೋಡಿ ಸಿನಿಪ್ರಿಯರು ಫಿದಾ ಆಗಿದ್ದಾರೆ. ಕೀರ್ತಿ ಸುರೇಶ್ ಡ್ಯಾನ್ಸ್ ನೋಡಲು ಇಲ್ಲಿ ಕ್ಲಿಕ್ ಮಾಡಿ.
ಅಂಗನವಾಡಿ ಕಾರ್ಯಕರ್ತೆಯರ ಕೆಂಗಣ್ಣಿಗೆ ಗುರಿಯಾದ 'ದಸರಾ' ಸಿನಿಮಾ.. ಅಂತದ್ದೇನಿದೆ ಚಿತ್ರದಲ್ಲಿ?
ದಸರಾ, ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು ತೆಲುಗು, ಕನ್ನಡ, ಹಿಂದಿ, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ತಯಾರಾಗಿದೆ. ನಾನಿ, ಹಿಂದೆಂದೂ ಕಾಣದ ಅವತಾರದಲ್ಲಿ ಈ ಚಿತ್ರದಲ್ಲಿ ಸಿನಿಪ್ರಿಯರಿಗೆ ದರ್ಶನ ನೀಡಿದ್ದಾರೆ. ಚಿರಂಜೀವಿ ಸಿನಿಮಾಗಳು 2 ದಿನಗಳಲ್ಲಿ ಗಳಿಸಿದ ದಾಖಲೆಯನ್ನೂ ಹಿಂದಿಕ್ಕಿ 'ದಸರಾ' ನಾಗಲೋಟದಲ್ಲಿ ಸಾಗುತ್ತಿದೆ. ಈ ನಡುವೆ ಚಿತ್ರದ ದೃಶ್ಯವೊಂದು ವಿವಾದಕ್ಕೆ ಸಿಲುಕಿದೆ. ಈ ದೃಶ್ಯಗಳನ್ನು ಸಿನಿಮಾದಿಂದ ತೆಗೆಯಬೇಕು ಎಂದು ಕೆಲವರು ಆಗ್ರಹಿಸಿದ್ದಾರೆ. ಏನಿದು ವಿವಾದ? ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ