ಮಲಯಾಳಂನ ಸೂಪರ್‌ಹಿಟ್ ʻಅಲಪ್ಪುಝ ಜಿಂಖಾನಾʼ ಸಿನಿಮಾ ಯಾವ ಒಟಿಟಿಯಲ್ಲಿ, ಯಾವಾಗ ವೀಕ್ಷಿಸಬಹುದು?
'ಅಲಪ್ಪುಝ ಜಿಂಖಾನಾ' ಚಿತ್ರ ಒಟಿಟಿಗೆ ಆಗನಿಸಲು ಸಿದ್ಧವಾಗಿದೆ. ಥಿಯೇಟರ್‌ಗಳಲ್ಲಿ ಯಶಸ್ವಿಯಾಗಿ ಪ್ರದರ್ಶನಕಂಡ ಈ ಚಿತ್ರ. ಒಟ್ಟು ಐದು ಭಾಷೆಗಳಲ್ಲಿ ಸ್ಟ್ರೀಮಿಂಗ್ ಆಗಲಿದೆ.

ಮಲಯಾಳಂನ ಸೂಪರ್‌ಹಿಟ್ ʻಪ್ರೇಮಲುʼ ಸಿನಿಮಾ ಖ್ಯಾತಿಯ ನೆಸ್ಲನ್ ಗಫೂರ್ ನಟನೆಯ ಸಿನಿಮಾಗಳಿಗೆ ಚಿತ್ರಮಂದಿಗಳ ಜತೆಗೆ ಒಟಿಟಿಯಲ್ಲಿಯೂ ಬೇಡಿಕೆ ಇದೆ. ಅದರಂತೆ, ನೆಸ್ಲನ್ ನಾಯಯಕನಾಗಿ ನಟಿಸಿದ ʻಅಲಪ್ಪುಝ ಜಿಂಖಾನಾʼ ಸಿನಿಮಾ ಇದೀಗ ಒಟಿಟಿಗೆ ಆಗಮಿಸುವ ಸನಿಹದಲ್ಲಿದೆ.
ಕ್ರೀಡಾ ಹಿನ್ನೆಲೆಯ ಈ ಸಿನಿಮಾ ಏಪ್ರಿಲ್ 10ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿತ್ತು. ಚಿತ್ರಮಂದಿರಗಳಲ್ಲಿಯೂ ಯಶಸ್ವಿಯಾಗಿದ್ದ ಈ ಸಿನಿಮಾ, ಏಪ್ರಿಲ್ 25ರಂದು ತೆಲುಗು ಭಾಷೆಗೂ ಡಬ್ ಆಗಿ ರಿಲೀಸ್ ಆಗಿತ್ತು. ಹೀಗೆ ಎಲ್ಲ ಕಡೆಯಿಂದ ಮೆಚ್ಚುಗೆ ಪಡೆದ 'ಅಲಪ್ಪುಝ ಜಿಂಖಾನಾ' ಸಿನಿಮಾ ಇದೀಗ ಒಟ್ಟು ಐದು ಭಾಷೆಗಳಲ್ಲಿ ಒಟಿಟಿಯಲ್ಲಿ ರಿಲೀಸ್ ಆಗಲು ಸಜ್ಜಾಗಿದೆ. ಮೂಲ ಮಲಯಾಳಂ ಜತೆಗೆ ಕನ್ನಡ, ತೆಲುಗು, ಹಿಂದಿ, ತಮಿಳಿನಲ್ಲಿಯೂ ಈ ಸಿನಿಮಾ ಒಟಿಟಿಗೆ ಆಗಮಿಸಲಿದೆ.
ಸ್ಟ್ರೀಮಿಂಗ್ ಯಾವಾಗ?
ʻಅಲಪ್ಪುಝ ಜಿಂಖಾನಾʼ ಚಿತ್ರದ ಡಿಜಿಟಲ್ ಸ್ಟ್ರೀಮಿಂಗ್ ಹಕ್ಕುಗಳನ್ನು ಸೋನಿಲಿವ್ ಒಟಿಟಿ ಪ್ಲಾಟ್‌ಫಾರ್ಮ್ ಪಡೆದುಕೊಂಡಿದೆ. ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತರುವ ಮಾಹಿತಿ ಪ್ರಕಾರ, ಈ ಚಿತ್ರವು ಜೂನ್ 5 ರಂದು ಸ್ಟ್ರೀಮಿಂಗ್ ಆಗಲಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಒಟಿಟಿ ವೇದಿಕೆಯಿಂದ ಅಧಿಕೃತ ಘೋಷಣೆ ಹೊರಬೀಳಬೇಕಿದೆ.
ಐದು ಭಾಷೆಗಳಲ್ಲಿ..
ʻಅಲಪ್ಪುಝ ಜಿಂಖಾನಾʼ ಚಿತ್ರವು ಸೋನಿಲೀವ್ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಮಲಯಾಳಂ, ತೆಲುಗು, ತಮಿಳು, ಕನ್ನಡ ಮತ್ತು ಹಿಂದಿಯಲ್ಲಿ ಸ್ಟ್ರೀಮಿಂಗ್ ಆಗಲಿದೆ. ಈಗಾಗಲೇ ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿರುವ ಈ ಸಿನಿಮಾ, ಒಟಿಟಿಯಲ್ಲಿಯೂ ಒಳ್ಳೆಯ ರೆಸ್ಪಾನ್ಸ್ ಪಡೆಯುವ ಸಾಧ್ಯತೆ ಇದೆ.
ಸ್ಪೋರ್ಟ್ಸ್ ಡ್ರಾಮಾ ಸಿನಿಮಾ ʻಅಲಪ್ಪುಝ ಜಿಂಖಾನಾʼ ಕಥೆ ಏನೆಂದರೆ, ಪರೀಕ್ಷೆಯಲ್ಲಿ ಫೇಲ್ ಆದ ಕೆಲವು ಪಿಯುಸಿ ವಿದ್ಯಾರ್ಥಿಗಳು ಕ್ರೀಡಾ ಕೋಟಾದ ಮೂಲಕ ಕಾಲೇಜಿನಲ್ಲಿ ಪ್ರವೇಶ ಪಡೆಯಲು ಮಾಡುವ ಪ್ರಯತ್ನದ ಸುತ್ತ ಇಡೀ ಸಿನಿಮಾ ಕಥೆ ಸಾಗುತ್ತದೆ. ಬಾಕ್ಸಿಂಗ್ ಕ್ರೀಡೆಯ ಹಿನ್ನೆಲೆಯ ಈ ಸಿನಿಮಾ ಹಾಸ್ಯ ಮಿಶ್ರಿತವಾಗಿ ನೋಡುಗರನ್ನು ಸೆಳೆದಿತ್ತು. ʻಅಲಪ್ಪುಝ ಜಿಂಖಾನಾʼ ಚಿತ್ರದಲ್ಲಿ ನೆಸ್ಲನ್ ಜೊತೆಗೆ ಲುಕ್ಮನ್ ಅವರನ್, ಗಣಪತಿ, ಸಂದೀಪ್ ಪ್ರದೀಪ್, ಹಬೀಶ್, ಫ್ರಾಂಕೋ ಫ್ರಾನ್ಸಿಸ್, ಶಿವ ಹರಿಹರಣ್, ವಿಶ್ವಜೀತ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ ವಿಷ್ಣು ವಿಜಯ್ ಸಂಗೀತ ಸಂಯೋಜನೆ ಮಾಡಿದ್ದಾರೆ.
ಈ ಸಿನಿಮಾದ ಕಲೆಕ್ಷನ್ ಎಷ್ಟು?
ಸುಮಾರು ರೂ.12 ಕೋಟಿ ಬಜೆಟ್‌ನಲ್ಲಿ ನಿರ್ಮಾಣಗೊಂಡ ʻಅಲಪ್ಪುಝ ಜಿಂಖಾನಾʼ ಚಿತ್ರವು ಒಟ್ಟು 56 ಕೋಟಿ ಕಲೆಕ್ಷನ್ ಕಂಡಿದೆ. ಈ ಚಿತ್ರವನ್ನು ಪ್ಲಾನ್ ಬಿ ಮೋಷನ್ ಪಿಕ್ಚರ್ಸ್ ಮತ್ತು ರಿಯಲಿಸ್ಟಿಕ್ ಸ್ಟುಡಿಯೋಸ್ ಬ್ಯಾನರ್‌ಗಳ ಅಡಿಯಲ್ಲಿ ನಿರ್ದೇಶಕ ಖಾಲಿದ್ ರಹಮಾನ್, ಜಾಬಿನ್ ಜಾರ್ಜ್, ಸಮೀರ್ ಕಾರತ್ ಮತ್ತು ಸುಬೀಶ್ ನಿರ್ಮಿಸಿದ್ದಾರೆ. ಜಿಮ್ಷಿ ಖಾಲಿದ್ ಛಾಯಾಗ್ರಹಣ ಮತ್ತು ನಿಷಾದ್ ಯೂಸುಫ್ ಸಂಪಾದನೆ ಮಾಡಿದ್ದಾರೆ.