ಬರ್ಲಿನ್ ಚಿತ್ರೋತ್ಸವಕ್ಕೆ ಕನ್ನಡದ ವಾಘಚಿಪಾಣಿ ಸಿನಿಮಾ ಆಯ್ಕೆ; ಖುಷಿಯಲ್ಲಿ ತೇಲಿದ ನಿರ್ದೇಶಕ ನಟೇಶ್ ಹೆಗ್ಡೆ
ಫೆ. 13ರಿಂದ 23ರವರೆಗೆ ಒಟ್ಟು ಹತ್ತು ದಿನಗಳ ಕಾಲ ನಡೆಯುವ ಬರ್ಲಿನ್ ಸಿನಿಮೋತ್ಸವದಲ್ಲಿ ನಟೇಶ್ ಹೆಗ್ಡೆ ನಿರ್ದೇಶನದ ಕನ್ನಡದ ವಾಘಚಿಪಾಣಿ ಸಿನಿಮಾ ಪ್ರದರ್ಶನಗೊಳ್ಳಲಿದೆ. ಈ ವಿಭಾಗದಲ್ಲಿ ಒಟ್ಟು ಐದು ಖಂಡಗಳ 30 ಸಿನಿಮಾಗಳು ಸ್ಪರ್ಧೆಯಲ್ಲಿವೆ.

Vaghachipani: ಈ ಹಿಂದೆ ಪೆದ್ರೋ ಸಿನಿಮಾ ನಿರ್ದೇಶನ ಮಾಡಿ, ಜಾಗತಿಕ ಮಟ್ಟದ ಸಿನಿಮೋತ್ಸವಗಳಿಗೆ ಕೊಂಡೊಯ್ದಿದ್ದರು ನಿರ್ದೇಶಕ ನಟೇಶ್ ಹೆಗ್ಡೆ. ಇದೀಗ ಇದೇ ನಟೇಶ್, ವಾಘಚಿಪಾಣಿ ಮೂಲಕ ಮತ್ತೆ ಆಗಮಿಸಿದ್ದಾರೆ. ಬಾಲಿವುಡ್‌ನ ಅನುರಾಗ್ ಕಶ್ಯಪ್ ನಿರ್ಮಾಣ ಮಾಡಿರುವ ಈ ಸಿನಿಮಾ ಇದೀಗ ಬರ್ಲಿನ್ ಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ. ಈ ಚಿತ್ರೋತ್ಸವಕ್ಕೆ ಆಯ್ಕೆಯಾದ ಮೊದಲ ಕನ್ನಡ ಸಿನಿಮಾ ಇದಾಗಿದೆ.
ಫೆ. 13ರಿಂದ 23ರವರೆಗೆ ಒಟ್ಟು ಹತ್ತು ದಿನಗಳ ಕಾಲ ನಡೆಯುವ ಬರ್ಲಿನ್ ಸಿನಿಮೋತ್ಸವದಲ್ಲಿ ನಟೇಶ್ ಹೆಗ್ಡೆ ನಿರ್ದೇಶನದ ಕನ್ನಡದ ವಾಘಚಿಪಾಣಿ ಸಿನಿಮಾ ಪ್ರದರ್ಶನಗೊಳ್ಳಲಿದೆ. ಈ ವಿಭಾಗದಲ್ಲಿ ಒಟ್ಟು ಐದು ಖಂಡಗಳ 30 ಸಿನಿಮಾಗಳು ಸ್ಪರ್ಧೆಯಲ್ಲಿವೆ. ಕಥೆಗಾರ ಅಮರೇಶ್ ನುಗಡೋಣಿ ಅವರ ದಲಿತ ಮಹಿಳೆ ಕುರಿತು ಈ ಸಿನಿಮಾದ ಕಥೆ ಸಾಗಲಿದೆ.
ವಾಘಚಿಪಾಣಿ ಚಿತ್ರದಲ್ಲಿ ಮಲಯಾಳಂನ ಖ್ಯಾತ ನಟ, ನಿರ್ದೇಶಕ ದಿಲೀಶ್ ಪೋಥನ್ ಹಾಗೂ ಸ್ಯಾಂಡಲ್‌ವುಡ್ ನಟ ಅಚ್ಯುತ್ ಕುಮಾರ್ ಹಾಗೂ ಗೋಪಾಲ ಹೆಗಡೆ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಶಿರಸಿ ಹಾಗೂ ಸುತ್ತಮುತ್ತ 35 ದಿನಗಳ ಚಿತ್ರೀಕರಣ ನಡೆದಿದೆ.
ಅಷ್ಟಕ್ಕೂ ವಾಘಚಿಪಾಣಿ ಸಿನಿಮಾಕ್ಕೆ ಚಾಲನೆ ನೀಡಿ, ನಿರ್ಮಾಣ ಮಾಡಿದ್ದು ಸ್ಯಾಂಡಲ್‌ವುಡ್ ನಟ, ನಿರ್ದೇಶಕ ರಿಷಬ್ ಶೆಟ್ಟಿ. ಆದರೆ, ಅವರು ಹಲವು ಪ್ರಾಜೆಕ್ಟ್‌ಗಳಲ್ಲಿ ಭಾಗವಹಿಸಿದ್ದರಿಂದ, ಈ ಸಿನಿಮಾದ ಕಡೆ ಹೆಚ್ಚು ಗಮನಹರಿಸಲು ಸಾಧ್ಯವಾಗಿರಲಿಲ್ಲ. ಆ ಒಂದು ಕಾರಣಕ್ಕೆ ಬಾಲಿವುಡ್ ನಟ, ನಿರ್ದೇಶಕ ಅನುರಾಗ್ ಕಶ್ಯಪ್ ವಾಘಚಪಾಣಿ ಸಿನಿಮಾ ಖರೀದಿಸಿದ್ದರು.
