ಕಾರಿನಿಂದಿಳಿದು ವೀಲ್‌ಚೇರ್‌ನಲ್ಲಿ ಏರ್‌ಪೋರ್ಟ್‌ಗೆ ಬಂದ ರಶ್ಮಿಕಾ ಮಂದಣ್ಣ; ಶೂಟಿಂಗ್ ಅಲ್ಲ, ನಡೆಯೋಕೂ ಆಗದ ಸ್ಥಿತಿಯಲ್ಲಿದ್ದಾಳೆ ಶ್ರೀವಲ್ಲಿ
ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಇಂದು (ಜನವರಿ 22) ಹೈದ್ರಾಬಾದ್ ಏರ್‌ಪೋರ್ಟ್‌ನಿಂದ ಮುಂಬೈಗೆ ಪ್ರಯಾಣ ಬೆಳೆಸಿದ್ದಾರೆ. ಈ ವೇಳೆ ಕಾರಿನಿಂದಿಳಿದು ವೀಲ್‌ಚೇರ್‌ನಲ್ಲಿ ಅವರು ಕುಳಿತಿರುವ ವಿಡಿಯೋ ವೈರಲ್ ಆಗುತ್ತಿದೆ.

ನ್ಯಾಷನಲ್ ಕ್ರಶ್ ರಶ್ಮಿಕಾ ಜಿಮ್‌ನಲ್ಲಿ ಗಾಯ ಮಾಡಿಕೊಂಡಿದ್ದರು ಎಂದು ಈ ಹಿಂದೆ ಸುದ್ದಿಯಾಗಿತ್ತು. ಅಷ್ಟೇ ಅಲ್ಲ ಅವರೇ ಸ್ವತಃ ತಾವು ಕಾಲಿಗೆ ಪೆಟ್ಟು ಮಾಡಿಕೊಂಡು ವಿಚಾರವಾಇ ಫೋಟೋ ಸಮೇತ ಒಂದು ಪೋಸ್ಟ್ ಮಾಡಿದ್ದರು. ಆದರೆ ಅದರ ತೀವ್ರತೆ ಅರ್ಥವಾಗಿರಲಿಲ್ಲ. ಆದರೆ ಇಂದು (ಜನವರಿ 22) ಬೆಳಗ್ಗೆ ಮುಂಬೈಗೆ ತೆರಳುತ್ತಿದ್ದ ನಟಿ ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಅದರೆ ಅವರ ಬಳಿ ನಡೆಯಲು ಆಗದೇ ಕುಂಟುತ್ತಲೇ ಕಾರಿನಿಂದಿಳಿದು ವೀಲ್‌ಚೇರ್ ಮೇಲೆ ಕುಳಿತುಕೊಂಡಿದ್ದಾರೆ. ಯಾರ ಸಹಾಯವೂ ಇಲ್ಲದೆ ಅವರು ನಡೆಯಲು ಸಾಧ್ಯವಾಗದ ಸ್ಥಿತಿಯಲ್ಲಿದ್ದಾರೆ. ಪಕ್ಕದಲ್ಲಿರುವವರ ಕೈ ಹಿಡಿದು ನಂತರ ವೀಲ್‌ಚೇರ್ ಮೇಲೆ ಕುಳಿತುಕೊಂಡಿದ್ದಾರೆ. ರಶ್ಮಿಕಾ ಅವರ ಇತ್ತೀಚಿನ ಗಾಯವು 'ಸಿಕಂದರ್' ಸೇರಿದಂತೆ ಅವರ ಹಲವಾರು ಯೋಜನೆಗಳ ಚಿತ್ರೀಕರಣವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.
ಕುಂಟುತ್ತಲೇ ಬಂದ ರಶ್ಮಿಕಾ ಮಂದಣ್ಣ
ಕೆಲವು ದಿನಗಳ ಹಿಂದೆ ಜಿಮ್‌ನಲ್ಲಿ ವ್ಯಾಯಾಮ ಮಾಡುವಾಗ ಕಾಲಿಗೆ ತೀವ್ರ ಗಾಯವಾಗಿತ್ತು. ಅದಾದ ನಂತರ ಅವರು ಚಿತ್ರೀಕರಣಕ್ಕೆ ಹೋಗಿರಲಿಲ್ಲ. ಆದರೆ ಈಗ ಮುಖ್ಯವಾದ ಪ್ರಚಾರ ಕಾರ್ಯದ ನಿಮಿತ್ತ ಅವರು ಮುಂಬೈಗೆ ತೆರಳಬೇಕಾಗಿ ಬಂದಿತ್ತು. ಅವರು ಇಂದು (ಜನವರಿ 22) ಬೆಳಿಗ್ಗೆ ಹೈದ್ರಾಬಾದ್‌ನಲ್ಲಿ ವಿಮಾನ ಹತ್ತಿದ್ದಾರೆ. ಆ ಸಂದರ್ಭದ ವಿಡಿಯೋ ತುಣುಕೊಂದು ವೈರಲ್ ಆಗುತ್ತಿದೆ. ತಮ್ಮ ಮುಖ ಕಾಣದಂತೆ ಮಾಸ್ಕ್ ಧರಿಸಿದ್ದಾರೆ. ಅಷ್ಟೇ ಅಲ್ಲ ಒಂದು ಕಪ್ಪು ಬಣ್ಣದ ಟೋಪಿಯನ್ನೂ ಹಾಕಿಕೊಂಡಿದ್ದಾರೆ. ಅವರ ಸಹಾಯಕರು ವೀಲ್‌ಚೇರ್‍ನಲ್ಲಿ ಕುಳಿತ ಅವರನ್ನು ಮುಂದೆ ಕರೆದುಕೊಂಡು ಹೋಗಿದ್ದಾರೆ.
ಜಿಮ್‌ನಲ್ಲಿ ಗಾಯಗೊಂಡಿದ್ದ ರಶ್ಮಿಕಾ
ರಶ್ಮಿಕಾ ಇತ್ತೀಚೆಗೆ ಜಿಮ್‌ನಲ್ಲಿ ಗಾಯಗೊಂಡಿದ್ದಾರೆ. ಆ ಕಾರಣದಿಂದ ಅವರಿಗೆ ಶೂಟಿಂಗ್‌ಗೆ ಹೋಗಲು ಸಾಧ್ಯವಾಗುತ್ತಿಲ್ಲ. ವಿಶ್ರಾಂತಿ ಪಡೆಯುವ ಮೂಲಕ ಚೇತರಿಸಿಕೊಳ್ಳುತ್ತಿದ್ದಾರೆ. ಈ ಕಾರಣದಿಂದ ಅವರ ಮುಂಬರುವ ಸಿನಿಮಾದ ಚಿತ್ರೀಕರಣ ಮಾಡಲು ಸಾಧ್ಯವಾಗುತ್ತಿಲ್ಲ. ಅವರು ವಿರಾಮ ತೆಗೆದುಕೊಂಡು ಶೀಘ್ರದಲ್ಲೇ ಮತ್ತೆ ಚೇತರಿಸಿಕೊಂಡು ಚಿತ್ರೀಕರಣಕ್ಕೆ ಮರಳಲಿದ್ದಾರೆ ಎನ್ನಲಾಗಿದೆ. ಈಗ ಮೊದಲಿಗಿಂತ ಅವರು ಸುಧಾರಿಸಿಕೊಂಡಿದ್ದಾರೆ. ಶೂಟಿಂಗ್ ಸೆಟ್‌ಗೆ ಮರಳಲಿದ್ದಾರೆ. ಆದರೆ, ಅವರು ಗಾಯಗೊಂಡಿದ್ದಾರೆ ಎಂಬ ವಿಷಯ ಕೇಳಿ ಅಭಿಮಾನಿಗಳಿಗೆ ಆತಂಕವಾಗಿದೆ. ಆದರೆ ಅವರಿಗೆ ನಡೆಯಲೂ ಸಾಧ್ಯವಾಗುತ್ತಿಲ್ಲ ಎಂಬುದನ್ನು ತಿಳಿದ ನಂತರ ಶೂಟಿಂಗ್ ಇನ್ನೆಷ್ಟು ದಿನ ವಿಳಂಬವಾಗಬಹುದು ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ..
ಈ ಹಿಂದೆ ಅವರು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ತಾನು ಜಿಮ್‌ನಲ್ಲಿ ಗಾಯಗೊಂಡ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ಚಿತ್ರೀಕರಣಗಳಿಗೆ ಹೋಗಲಾಗುತ್ತಿಲ್ಲ. ಹೊಸ ವರ್ಷಕ್ಕೆ ದೇವರು ನನಗೆ ಈ ರೀತಿ ಉಡುಗೊರೆ ನೀಡಿದ್ದಾನೆ ಎಂಬರ್ಥದಲ್ಲಿ ಪೋಸ್ಟ್ ಮಾಡಿದ್ದರು. ಆದರೆ ಇದೀಗ ವಿಮಾನ ನಿಲ್ದಾಣದಲ್ಲಿ ರಶ್ಮಿಕಾ ಕಾಣಿಸಿಕೊಂಡ ರೀತಿಯನ್ನು ನೋಡಿ. ಎಷ್ಟು ನೋವಾಗಿರಬಹುದು ಎಂದು ಅಭಿಮಾನಿಗಳು ಆಶ್ಚರ್ಯ ಪಡುತ್ತಿದ್ದಾರೆ. ನಡೆಯಲೂ ಆಗದೆ ರಶ್ಮಿಕಾ ಒದ್ದಾಡುತ್ತಿದ್ದಾರೆ.

ವಿಭಾಗ