Ponniyin Selvan: ಪೊನ್ನಿಯನ್ ಸೆಲ್ವನ್‌ಗೆ ಸರಣಿ ಪ್ರಶಸ್ತಿ, ಮಣಿರತ್ನಂ ಸಿನಿಮಾಗೆ ಅವಾರ್ಡ್‌ಗಳ ಸುರಿಮಳೆ
70th National Film Awards: 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆಯಾಗಿದ್ದು, ಮಣಿರತ್ನಂ ನಿರ್ದೇಶನದ ʼಪೊನ್ನಿಯಿಲ್ ಸೆಲ್ವನ್ʼ ಸಿನಿಮಾ 4 ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಅತ್ಯುತ್ತಮ ತಮಿಳು ಸಿನಿಮಾ, ಅತ್ಯುತ್ತಮ ಸಂಗೀತ ನಿರ್ದೇಶನ, ಅತ್ಯುತ್ತಮ ಸೌಂಡ್ ಡಿಸೈನ್ ಹಾಗೂ ಅತ್ಯುತ್ತಮ ಸಿನಿಮಾಟೋಗ್ರಫರ್ ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ ಈ ಸಿನಿಮಾ.
70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ((70th National Film Awards 2024) ಘೋಷಣೆಯಾಗಿದ್ದು, ತಮಿಳಿನ ಪೊನ್ನಿಯಿನ್ ಸೆಲ್ವನ್ ಸಿನಿಮಾ (ponniyin selvan movie) ಪ್ರಾಬಲ್ಯ ಸಾಧಿಸಿದೆ, ಈ ಸಿನಿಮಾವು ಸರಣಿ ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ. ಮಣಿರತ್ನಂ ನಿರ್ದೇಶನದ ಪೊನ್ನಿಯಿನ್ ಸೆಲ್ವನ್-1 ಅತ್ಯುತ್ತಮ ತಮಿಳು ಚಿತ್ರ ಪ್ರಶಸ್ತಿ ಪಡೆದುಕೊಂಡರೆ, ಪೊನ್ನಿಯಿನ್ ಸೆಲ್ವನ್-2 ಚಿತ್ರಕ್ಕಾಗಿ ಎಆರ್ ರೆಹಮಾನ್ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಒಟ್ಟು 4 ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ ಪೊನ್ನಿಯಿನ್ ಸೆಲ್ವನ್.
ಧನುಷ್ ಅಭಿನಯದ 'ತಿರುಚಿತ್ರಾಂಬಲಂ' ಎರಡು ಪ್ರಶಸ್ತಿಗಳನ್ನು ಪಡೆದರೆ, 'ಕಾಂತಾರ' ಚಿತ್ರಕ್ಕಾಗಿ ರಿಷಬ್ ಶೆಟ್ಟಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದಾರೆ.
'ಪೊನ್ನಿಯಿನ್ ಸೆಲ್ವನ್ 1' ಸಿನಿಮಾವು ಅತ್ಯುತ್ತಮ ತಮಿಳು ಚಿತ್ರ, ಅತ್ಯುತ್ತಮ ಧ್ವನಿ ವಿನ್ಯಾಸ, ಅತ್ಯುತ್ತಮ ಛಾಯಾಗ್ರಹಣ (ರವಿ ವರ್ಮನ್), ಮತ್ತು ಅತ್ಯುತ್ತಮ ಸಂಗೀತ ನಿರ್ದೇಶಕ (ಎಆರ್ ರೆಹಮಾನ್) ಪ್ರಶಸ್ತಿಯನ್ನು ಬಾಚಿಕೊಂಡಿದೆ.
ಕಲ್ಕಿಯವರ ಕಾದಂಬರಿಯನ್ನು ಆಧರಿಸಿ, ಚೋಳ ಸಾಮ್ರಾಜ್ಯದ ಕುರಿತಾದ ಐತಿಹಾಸಿಕ ಸಿನಿಮಾ ಇದಾಗಿದ್ದು, ವಿಕ್ರಮ್, ಕಾರ್ತಿ, ಐಶ್ವರ್ಯ ರೈ, ಜಯಂ ರವಿ ಮತ್ತು ತ್ರಿಷಾ ಸೇರಿದಂತೆ ಬಹುತಾರಾಗಣವನ್ನು ಸಿನಿಮಾದಲ್ಲಿ ನೋಡಬಹುದಾಗಿದೆ. ಈ ಚಿತ್ರವು ಎ ಆರ್ ರೆಹಮಾನ್ (ಅತ್ಯುತ್ತಮ ಸಂಯೋಜಕ), ರವಿವರ್ಮನ್ (ಅತ್ಯುತ್ತಮ ಛಾಯಾಗ್ರಾಹಕ) ಮತ್ತು ಆನಂದ್ ಕೃಷ್ಣಮೂರ್ತಿ (ಅತ್ಯುತ್ತಮ ಧ್ವನಿ ವಿನ್ಯಾಸ) ಪ್ರಶಸ್ತಿಗಳನ್ನು ಪಡೆದುಕೊಂಡಿದೆ.
ಹೀರೋಪಂತಿಗಾಗಿ ಹಾಡು ಸಂಯೋಜಿಸಿದ್ದ ರೆಹಮಾನ್
ಪೊನ್ನಿಯಿನ್ ಸೆಲ್ವನ್‌ನ ಚಿತ್ರದ ಒಂದು ಹಾಡನ್ನು ಟೈಗರ್ ಶ್ರಾಫ್ ಅವರ ಹೀರೋಪಂತಿ- 2ಗಾಗಿ ಸಂಯೋಜನೆ ಮಾಡಿದ್ದರು ಎಆರ್ ರೆಹಮಾನ್. ಈ ವಿಚಾರವನ್ನು ಅವರು ಕಳೆದ ವರ್ಷ ಟ್ವಿಟರ್‌ನಲ್ಲಿ ಬಹಿರಂಗ ಮಾಡಿದ್ದರು. ಪೊನ್ನಿಯಿನ್ ಸೆಲ್ವನ್ ಹಾಗೂ ಹೀರೋಪಂತಿ ಎರಡೂ ಸಿನಿಮಾಗಳು 2022 ರಲ್ಲಿ ಒಂದು ತಿಂಗಳ ನಂತರ ಒಂದು ಬಿಡುಗಡೆಯಾದವು. ಪೊನ್ನಿಯನ್ ಸೆಲ್ವನ್ ಸಿನಿಮಾವು ಎರಡು ಭಾಗಗಳಲ್ಲಿ ಬಿಡುಗಡೆಯಾಗಿತ್ತು. ಈ ಸಿನಿಮಾದ ಮೊದಲ ಭಾಗದ ಹಾಡು ಸಾಯಾ ಸಂಜಲೆ ಹಾಡನ್ನು ಹೀರೋಪಂತಿ 2 ಗಾಗಿ ಸಂಯೋಜಿಸಿದ್ದು ಎಂಬುದನ್ನು ಹೇಳಿಕೊಂಡಿದ್ದರು.
ಪೊನ್ನಿಯನ್ ಸೆಲ್ವನ್-1 ಸಿನಿಮಾದ ಜನಪ್ರಿಯ 'ಸೊಲ್' ಹಾಡು ಇಲ್ಲಿ ಕೇಳಿ
ಪೊನ್ನಿಯನ್ ಸೆಲ್ವನ್ -2 ಸಿನಿಮಾದ 'ವೀರ ರಾಜ ವೀರ' ಹಾಡು ಇಲ್ಲಿ ಕೇಳಿ
ಪೊನ್ನಿಯನ್ ಸೆಲ್ವನ್ 2022ರ, ಸೆಪ್ಟೆಂಬರ್ 30 ರಂದು ಬಿಡುಗಡೆಯಾದ ಸಿನಿಮಾ. ಇದು ಕಲ್ಕಿ ಕೃಷ್ಣಮೂರ್ತಿ ಅವರ ʼಪೊನ್ನಿಯನ್ ಸೆಲ್ವನ್ʼ ಕಾದಂಬರಿ ಆಧಾರಿತ ಸಿನಿಮಾವಾಗಿದೆ. ಈ ಸಿನಿಮಾವು ಬಾಕ್ಸ್ ಆಫೀಸ್‌ನಲ್ಲಿ 450 ರಿಂದ 500 ಕೋಟಿ ಬಾಚಿಕೊಂಡಿತ್ತು. ಈ ಸಿನಿಮಾವನ್ನು ನೀವು ಅಮೆಜಾನ್ ಒಟಿಟಿ ಫ್ಲ್ಯಾಟ್‌ಫ್ಲಾರಂನಲ್ಲೂ ವೀಕ್ಷಿಸಬಹುದು. ಪೊನ್ನಿಯನ್ ಸೆಲ್ವನ್- 2 ಸಿನಿಮಾವು 2023ರ ಏಪ್ರಿಲ್ 28 ರಂದು ಬಿಡುಗಡೆಯಾಗಿತ್ತು. ಈ ಸಿನಿಮಾವು ಬಾಕ್ಸ್ ಆಫೀಸ್‌ನಲ್ಲಿ 350 ಕೋಟಿ ಬಾಚಿಕೊಂಡಿತ್ತು.
ವಿಭಾಗ