Nayanthara vs Tamannaah: ನಯನತಾರಾ ಒಪ್ಪಲಿಲ್ಲ, ತಮನ್ನಾ ರಸ್ತೆ ಬದಿಯಲ್ಲಿಯೇ ಬಟ್ಟೆ ಬದಲಾಯಿಸಿದ್ರು; ಚಿತ್ರತಂಡದಿಂದ ಬಹಿರಂಗ
Nayanthara vs Tamannaah: ಶೂಟಿಂಗ್ ಸಮಯದಲ್ಲಿ ನಟಿಯರು ಬಟ್ಟೆ ಬದಲಾಯಿಸಲು ಕ್ಯಾರಾವಾನ್, ದುಬಾರಿ ಹೋಟೆಲ್‌ಗಳನ್ನು ಬಯಸುವುದು ಸಹಜ. ಸಿನಿಮಾವೊಂದರಲ್ಲಿ ನಯನಾತಾರ ನಟಿಸಲು ಈ ಬೇಡಿಕೆ ಇಟ್ಟಿದ್ದರು. ಆದರೆ, ತಮನ್ನಾ ರಸ್ತೆ ಬದಿಯಲ್ಲಿಯೇ ಬಟ್ಟೆ ಬದಲಾಯಿಸಲು ಒಪ್ಪಿದರು ಎಂದು ಚಿತ್ರತಂಡ ತಿಳಿಸಿದೆ. ಏನಿದು ಘಟನೆ ಎನ್ನುವಿರಾ? ಇಲ್ಲಿದೆ ವಿವರ.

Nayanthara vs Tamannaah: ಶೂಟಿಂಗ್ ಸಮಯದಲ್ಲಿ ನಟಿಯರು ಬಟ್ಟೆ ಬದಲಾಯಿಸಲು ಕ್ಯಾರಾವಾನ್, ದುಬಾರಿ ಹೋಟೆಲ್‌ಗಳನ್ನು ಬಯಸುವುದು ಸಹಜ. ಸಿನಿಮಾವೊಂದರಲ್ಲಿ ನಯನಾತಾರ ನಟಿಸಲು ಈ ಬೇಡಿಕೆ ಇಟ್ಟಿದ್ದರು. ಆದರೆ, ತಮನ್ನಾ ರಸ್ತೆ ಬದಿಯಲ್ಲಿಯೇ ಬಟ್ಟೆ ಬದಲಾಯಿಸಲು ಒಪ್ಪಿದರು ಎಂದು ಚಿತ್ರತಂಡ ತಿಳಿಸಿದೆ. ದಕ್ಷಿಣ ಭಾರತದಲ್ಲಿ ಸ್ಟಾರ್ ನಟಿಯಾಗಿ ಹೆಸರು ಮಾಡಿಕೊಂಡಿರುವ ಮಿಲ್ಕಿ ಬ್ಯೂಟಿ ತಮನ್ನಾ ಬಾಲಿವುಡ್‌ನಲ್ಲೂ ಹಲವು ಚಿತ್ರಗಳಲ್ಲಿ ನಟಿಸಿ ತನ್ನದೇ ಆದ ಛಾಪು ಮೂಡಿಸಿದ್ದಾರೆ. ಮಂಚು ಮನೋಜ್ ಅವರ ‘ಶ್ರೀ’ ಚಿತ್ರದ ಮೂಲಕ ಟಾಲಿವುಡ್‌ಗೆ ನಾಯಕಿಯಾಗಿ ಪದಾರ್ಪಣೆ ಮಾಡಿರುವ ತಮನ್ನಾ ಹ್ಯಾಪಿ ಡೇಸ್ ಚಿತ್ರದ ಮೂಲಕ ಜನಪ್ರಿಯತೆ ಹೆಚ್ಚಿಸಿಕೊಂಡರು.
‘ಹ್ಯಾಪಿ ಡೇಸ್’ ಚಿತ್ರದಲ್ಲಿ ಮಧು ಪಾತ್ರದ ಮೂಲಕ ತೆಲುಗು ಪ್ರೇಕ್ಷಕರ ಮನಗೆದ್ದ ತಮನ್ನಾ ನಂತರ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಲವು ಖ್ಯಾತ ನಟರ ಜತೆ ನಟಿಸಿ ಸ್ಟಾರ್ ನಟಿಯಾಗಿ ಜನಪ್ರಿಯತೆ ಪಡೆದಿದ್ದಾರೆ. ನಾಯಕಿಯಾಗಿ ತನ್ನ ವೃತ್ತಿಜೀವನ ಆರಂಭಿಸಿದ ಐದು ವರ್ಷಗಳ ನಂತರ, ತಮನ್ನಾ ತಮಿಳು ಸ್ಟಾರ್ ಹೀರೋ ಕಾರ್ತಿ ಅವರೊಂದಿಗೆ ‘ಅವಾರಾ’ ಚಿತ್ರದಲ್ಲಿ ನಟಿಸಿದ್ದಾರೆ.
ಇಂದಿಗೂ ಅವಾರಾ ಚಿತ್ರದ ಹಾಡುಗಳು ಟ್ರೆಂಡಿಂಗ್‌ನಲ್ಲಿವೆ. ಆದರೆ, ಆ ‘ಅವಾರಾ’ ಸಿನಿಮಾದಲ್ಲಿ ಲೇಡಿ ಸೂಪರ್ ಸ್ಟಾರ್ ಎಂದು ಕರೆಯಲ್ಪಡುವ ನಯನತಾರ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಲು ನಿರ್ಮಾಪಕರು ಯೋಚಿಸಿದ್ದರಂತೆ. ಆದರೆ, ಈಗಾಗಲೇ ಸ್ಟಾರ್ ನಟಿಯಾಗಿರುವ ನಯನತಾರಾ ಆ ಚಿತ್ರದಲ್ಲಿ ನಟಿಸಲು ನಿರ್ಮಾಪಕರಿಗೆ ಹಲವು ಷರತ್ತುಗಳನ್ನು ವಿಧಿಸಿದ್ದರಂತೆ.
ರೊಮ್ಯಾಂಟಿಕ್ ಆಕ್ಷನ್ ಥ್ರಿಲ್ಲರ್ ಆಗಿ ನಿರ್ಮಾಣವಾಗಿರುವ ‘ಅವಾರಾ’ ಚಿತ್ರದಲ್ಲಿ ಹೆಚ್ಚಿನ ದೃಶ್ಯಗಳು ರಸ್ತೆ ಮತ್ತು ಹೆದ್ದಾರಿಗಳಲ್ಲಿ ಚಿತ್ರೀಕರಿಸಲ್ಪಟ್ಟಿವೆ. ಈ ಸಿನಿಮಾದ ಬಹುತೇಕ ಶೂಟಿಂಗ್‌ಗಳು ರಸ್ತೆ ಮತ್ತು ಹೆದ್ದಾರಿಗಳಲ್ಲಿಯೇ ನಡೆಯಬೇಕಿತ್ತು. ಆದರೆ, ನಯನತಾರಾ ಈ ಸಂದರ್ಭದಲ್ಲಿ ನನಗೆ ದುಬಾರಿ ಹೋಟೆಲ್ ಅಥವಾ ಕ್ಯಾರಾವಾನ್ ಬೇಕೆಂದು ಷರತ್ತುಗಳನ್ನು ವಿಧಿಸಿದ್ರಂತೆ. ಇದು ರಸ್ತೆ ಬದಿ ನಡೆಯುವ ಚಿತ್ರೀಕರಣ, ಹೀಗಾಗಿ ಇಂತಹ ಸವಲತ್ತುಗಳನ್ನು ಒದಗಿಸಲು ಸಾಧ್ಯವಿಲ್ಲ ಎಂದು ಚಿತ್ರತಂಡ ತಿಳಿಸಿತ್ತಂತೆ.
ನಟಿ ಹೋಟೆಲ್‌ನಲ್ಲಿ ಇದ್ದರೆ ಶೂಟಿಂಗ್ ವೆಚ್ಚ ಅಧಿಕವಾಗುತ್ತದೆ. ಹೀಗಾಗಿ, ನಯನತಾರಾ ಬದಲು ತಮನ್ನಾ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಲಾಯಿತು ಎಂದು ಚಿತ್ರತಂಡ ತಿಳಿಸಿದೆ. ತಮನ್ನಾ ಅವರು ಚಿತ್ರತಂಡಕ್ಕೆ ನಿರಾಶೆ ಪಡಿಸಲಿಲ್ಲ. ರಸ್ತೆ ಬದಿಯಲಿ ನಿರ್ಮಿಸಿದ ತಾತ್ಕಾಲಿಕ ವ್ಯವಸ್ಥೆಗಳಲ್ಲಿಯೇ ಬಟ್ಟೆ ಬದಲಾಯಿಸಿ ಶೂಟಿಂಗ್ ಸುಸೂತ್ರವಾಗಿ ನಡೆಯಲು ನೆರವಾದರು ಎಂದು ‘ಅವಾರಾ’ ಸಿನಿಮಾದ ನಿರ್ದೇಶಕರಾದ ಲಿಂಗುಸ್ವಾಮಿ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.
ಮೂರು ಸೀರೆ ಕಟ್ಟಿ ಗೋಡೆ ನಿರ್ಮಾಣ
ಹೆದ್ದಾರಿ ಬದಿಗಳಲ್ಲಿ ಶೂಟಿಂಗ್ ಮಾಡುವಾಗ ತಮನ್ನಾ ಬಟ್ಟೆ ಬದಲಾಯಿಸುವ ಸಲುವಾಗಿ ಮೂರು ಸೀರೆಯಿಂದ ಗೋಡೆ ನಿರ್ಮಿಸಲಾಗುತ್ತಿತ್ತಂತೆ. ಸೀರೆಗಳಿಂದ ಕಟ್ಟಿದ ತಾತ್ಕಾಲಿಕ ತಡೆಗೋಡೆಗಳ ನಡುವೆ ನಟಿ ತಮನ್ನಾ ಬಟ್ಟೆ ಬದಲಾಯಿಸಿ ಶೂಟಿಂಗ್‌ಗೆ ಸಿದ್ಧವಾಗುತ್ತಿದ್ದರಂತೆ. ಅವಾರಾ ಸಿನಿಮಾದ ಶೂಟಿಂಗ್‌ನಲ್ಲಿ ತಮನ್ನಾ ಅವರ ಸಹಕಾರ ಅದ್ಭುತವಾಗಿತ್ತು ಎಂದು ನಿರ್ದೇಶಕ ಲಿಂಗುಸ್ವಾಮಿ ಸಂದರ್ಶನದಲ್ಲಿ ಹೇಳಿದ್ದಾರೆ. ಈ ವಿಷಯ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ತಮನ್ನಾ ಅವರು ದೀರ್ಘ ವಿರಾಮದ ಬಳಿಕ ತೆಲುಗು ಚಿತ್ರ ಓದೆಲ 2ನಲ್ಲಿ ನಟಿಸಿದ್ದಾರೆ. ಏಪ್ರಿಲ್ 17ರಂದು ಓದೆಲ 2 ಸಿನಿಮಾವು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಅಜನೀಶ್ ಲೋಕ್‌ನಾಥ್ ಸಂಗೀತ ಸಂಯೋಜಿಸಿರುವ ಈ ಚಿತ್ರದಲ್ಲಿ ತಮನ್ನಾ ಜೊತೆಗೆ ಹೆಬ್ಬಾ ಪಟೇಲ್, ವಶಿಷ್ಠ ಎನ್ ಸಿಂಹಾ, ಮುರಳಿ ಶರ್ಮ, ದಯಾನಂದ್ ರೆಡ್ಡಿ, ಶ್ರೀಕಾಂತ್ ಅಯ್ಯಂಗಾರ್ ಮುಂತಾದವರು ನಟಿಸಿದ್ದಾರೆ.
