Crime Thriller OTT: ಈ ಒಟಿಟಿಯಲ್ಲಿ ಟ್ರೆಂಡಿಂಗ್‌ನಲ್ಲಿದೆ ಮಲಯಾಳಂ ಕ್ರೈಂ ಥ್ರಿಲ್ಲರ್‌ 1000 ಬೇಬಿಸ್‌ ವೆಬ್‌ಸಿರೀಸ್‌
ಕನ್ನಡ ಸುದ್ದಿ  /  ಮನರಂಜನೆ  /  Crime Thriller Ott: ಈ ಒಟಿಟಿಯಲ್ಲಿ ಟ್ರೆಂಡಿಂಗ್‌ನಲ್ಲಿದೆ ಮಲಯಾಳಂ ಕ್ರೈಂ ಥ್ರಿಲ್ಲರ್‌ 1000 ಬೇಬಿಸ್‌ ವೆಬ್‌ಸಿರೀಸ್‌

Crime Thriller OTT: ಈ ಒಟಿಟಿಯಲ್ಲಿ ಟ್ರೆಂಡಿಂಗ್‌ನಲ್ಲಿದೆ ಮಲಯಾಳಂ ಕ್ರೈಂ ಥ್ರಿಲ್ಲರ್‌ 1000 ಬೇಬಿಸ್‌ ವೆಬ್‌ಸಿರೀಸ್‌

ಒಟಿಟಿಯಲ್ಲಿ '1000 ಬೇಬೀಸ್' ವೆಬ್ ಸೀರೀಸ್ ಟ್ರೆಂಡಿಂಗ್‌ನಲ್ಲಿದೆ. ಈ ಸರಣಿಯು ಏಳು ಭಾಷೆಗಳಲ್ಲಿ ಪ್ರಸಾರವಾಗುತ್ತಿದೆ. ಈ ಸರಣಿ ಕೇವಲ ಒಂದೇ ದಿನದಲ್ಲಿ ಒಟಿಟಿಯಲ್ಲಿ ಟ್ರೆಂಡಿಂಗ್ ಆರಂಭಿಸಿದೆ.

Crime Thriller OTT: ಒಟಿಟಿಯಲ್ಲಿ ಟ್ರೆಂಡಿಂಗ್‌ನಲ್ಲಿದೆ ಮಲಯಾಳಂ ಕ್ರೈಂ ಥ್ರಿಲ್ಲರ್‌ 1000 ಬೇಬಿಸ್‌ ವೆಬ್‌ಸಿರೀಸ್‌
Crime Thriller OTT: ಒಟಿಟಿಯಲ್ಲಿ ಟ್ರೆಂಡಿಂಗ್‌ನಲ್ಲಿದೆ ಮಲಯಾಳಂ ಕ್ರೈಂ ಥ್ರಿಲ್ಲರ್‌ 1000 ಬೇಬಿಸ್‌ ವೆಬ್‌ಸಿರೀಸ್‌

1000 Babies Wedseries: ಇತ್ತೀಚೆಗಷ್ಟೇ ಸ್ಟ್ರೀಮಿಂಗ್‌ ಆರಂಭಿಸಿರುವ ಮಲಯಾಳಂನ '1000 ಬೇಬೀಸ್' ವೆಬ್ ಸಿರೀಸ್‌, ಅತಿ ಕಡಿಮೆ ಸಮಯದಲ್ಲಿ ಟ್ರೆಂಡಿಂಗ್‌ ಪಟ್ಟಿ ಸೇರಿದೆ. ಮಲಯಾಳಂ ನಟ ರೆಹಮಾನ್ ಮತ್ತು ಬಾಲಿವುಡ್ ಹಿರಿಯ ನಟಿ ನೀನಾ ಗುಪ್ತಾ ಈ ವೆಬ್‌ಸಿರೀಸ್‌ನಲ್ಲಿ ಮುಖ್ಯ ಪಾತ್ರದಲ್ಲಿದ್ದಾರೆ. ಸೈಕಲಾಜಿಕಲ್ ಕ್ರೈಮ್ ಥ್ರಿಲ್ಲರ್ ಸರಣಿಯು ಆರಂಭದಿಂದಲೂ ಕುತೂಹಲ ಕೆರಳಿಸಿತ್ತು. ಫಸ್ಟ್ ಲುಕ್ ಟ್ರೈಲರ್‌ನಿಂದ ನೋಡುಗರ ಗಮನ ಸೆಳೆದಿತ್ತು.

ಒಂದೇ ದಿನದಲ್ಲಿ ಟ್ರೆಂಡಿಂಗ್..

ಅಕ್ಟೋಬರ್ 18ರ ಶುಕ್ರವಾರ 1000 ಬೇಬೀಸ್ ವೆಬ್ ಸರಣಿ ಡಿಸ್ನಿ ಪ್ಲಸ್‌ ಹಾಟ್‌ ಸ್ಟಾರ್‌ನಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ. ಒಂದೇ ದಿನದೊಳಗೆ, ಈ ಸರಣಿಯು ಹಾಟ್‌ಸ್ಟಾರ್‌ ಒಟಿಟಿಯಲ್ಲಿ ಟಾಪ್‌ ಟ್ರೆಂಡಿಂಗ್ ತಲುಪಿದೆ. 1000 ಬೇಬೀಸ್ ಮೂಲ ಮಲಯಾಳಂನಲ್ಲಿ ತಯಾರಾದ ವೆಬ್ ಸರಣಿಯಾಗಿದೆ. ಆದರೆ ಈ ಸರಣಿಯು ಏಳು ಭಾಷೆಗಳಲ್ಲಿ ಸ್ಟ್ರೀಮಿಂಗ್‌ಗೆ ಲಭ್ಯವಿದೆ. ಮಲಯಾಳಂ ಜೊತೆಗೆ, ಹಾಟ್‌ಸ್ಟಾರ್ OTT ನಲ್ಲಿ ತೆಲುಗು, ಹಿಂದಿ, ತಮಿಳು, ಕನ್ನಡ, ಮರಾಠಿ ಮತ್ತು ಬೆಂಗಾಲಿ ಭಾಷೆಗಳಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.

ನಜೀಮ್ ಕೋಯಾ 1000 ಬೇಬೀಸ್ ಸರಣಿಯನ್ನು ನಿರ್ದೇಶಿಸಿದ್ದಾರೆ. ರೆಹಮಾನ್ ಮತ್ತು ನೀನಾ ಜೊತೆಗೆ ಸಂಜು ಶಿವಂ, ಜಾಯ್ ಮ್ಯಾಥ್ಯೂ, ಆದಿಲ್ ಇಬ್ರಾಹಿಂ, ಅಶ್ವಿನ್ ಕುಮಾರ್ ಮತ್ತು ಡೈನ್ ಡೇವಿಸ್ ಈ ಸರಣಿಯಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಆಗಸ್ಟ್ ಸಿನಿಮಾ ಬ್ಯಾನರ್ ಅಡಿಯಲ್ಲಿ ಶಾದಿ ನಡೇಸನ್ ಆರ್ಯ ಈ ಸರಣಿಯನ್ನು ನಿರ್ಮಿಸಿದ್ದಾರೆ.1000 ಬೇಬೀಸ್ ಸರಣಿಯು ಸೋಷಿಯಲ್‌ ಮೀಡಿಯಾದಲ್ಲಿ ಪಾಸಿಟಿವ್‌ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಅದರಲ್ಲೂ ಈ ಸೀರಿಸ್‌ನ ಕಲಾವಿದರ ಅಭಿನಯಕ್ಕೂ ಪೂರ್ಣಾಂಕ ಸಿಕ್ಕಿದೆ.

ಟ್ರೆಂಡಿಂಗ್‌ನಲ್ಲಿ ತಮಿಳಿನ ವಾಳೈ ಸಿನಿಮಾ

ತಮಿಳಿನ ಚಿತ್ರ ವಾಳೈ ಕೂಡ ಹಾಟ್‌ಸ್ಟಾರ್ ಒಟಿಟಿಯಲ್ಲಿ ಟಾಪ್-3 ನಲ್ಲಿ ಟ್ರೆಂಡಿಂಗ್‌ನಲ್ಲಿದೆ. ಈ ಚಿತ್ರವನ್ನು ಮಾರಿ ಸೆಲ್ವರಾಜ್ ನಿರ್ದೇಶಿಸಿದ್ದಾರೆ. ಹಾಟ್‌ಸ್ಟಾರ್ ಒಟಿಟಿಯಲ್ಲಿ ಅಕ್ಟೋಬರ್ 11 ರಂದು ತಮಿಳು, ತೆಲುಗು, ಹಿಂದಿ, ಮಲಯಾಳಂ, ಕನ್ನಡ, ಬೆಂಗಾಲಿ ಮತ್ತು ಮರಾಠಿ ಭಾಷೆಗಳಲ್ಲಿ ಈ ಸಿನಿಮಾ ಸ್ಟ್ರೀಮಿಂಗ್‌ ಆರಂಭಿಸಿದೆ. ವಾಲೈ ಚಿತ್ರದಲ್ಲಿ ಪೊನ್ವೆಲ್, ರಘುಲ್, ಕಲೈಯರಸನ್, ನಿಖಿಲ್ ಮತ್ತು ವಿಮಲ್ ಮುಖ್ಯ ಭೂಮಿಕೆಯಲ್ಲಿದ್ದಾರೆ.