ಜಿಮ್‌ನಲ್ಲಿ ಚಂದನ್ ಶೆಟ್ಟಿ ಶರ್ಟ್ ಕಳಚಿ ನಿಂತ್ರೆ, ರೂಮ್‌ನಲ್ಲಿ ಮಾಜಿ ಪತ್ನಿ ನಿವೇದಿತಾ ಗೌಡ ಮೈಮಾಟ ಪ್ರದರ್ಶನ! ನೆಟ್ಟಿಗರು ಗರಂ
Niveditha Gowda: ಸೋಷಿಯಲ್ ಮೀಡಿಯಾದಲ್ಲಿ ನಟಿ ನಿವೇದಿತಾ ಗೌಡ ಒಂದಿಲ್ಲೊಂದು ಫೋಟೋ , ವಿಡಿಯೋ ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ. ಇದೀಗ ಹಾಟ್ ಅವತಾರದಲ್ಲಿ ಮತ್ತೆ ಎದುರಾಗಿದ್ದಾರೆ.

Niveditha Gowda Video: ಸೋಷಿಯಲ್ ಮೀಡಿಯಾದಲ್ಲಿ ಸದಾ ಒಂದಿಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿ ಇರ್ತಾರೆ ಚಂದನ್ ಶೆಟ್ಟಿಯ ಮಾಜಿ ಪತ್ನಿ ನಿವೇದಿತಾ ಗೌಡ. ಪಾಸಿಟಿವ್ ವಿಚಾರಕ್ಕಿಂತ ನೆಗೆಟಿವ್ ವಿಚಾರವಾಗಿಯೇ ನಿವೇದಿತಾ ಸದ್ದು ಮಾಡುತ್ತಿರುತ್ತಾರೆ. ಇನ್‌ಸ್ಟಾಗ್ರಾಂನಲ್ಲಿ ಹಾಟ್ ಎನಿಸುವ ಫೋಟೋ, ವಿಡಿಯೋ ಶೇರ್ ಮಾಡುತ್ತಲೇ ಪಡ್ಡೆಗಳ ಕಣ್ಣು ಕುಕ್ಕುತ್ತಿರುತ್ತಾರೆ. ಬಗೆ ಬಗೆ ಹಾಡುಗಳಿಗೆ ಮಾದಕ ಭಂಗಿಯಲ್ಲಿ ರೀಲ್ಸ್ ಮಾಡುತ್ತಲೇ, ಟೀಕೆಗಳನ್ನೂ ಅದೇ ರೀತಿ ಸ್ವೀಕರಿಸುತ್ತಾರೆ ನಿವೇದಿತಾ.
ಇದೀಗ ಇದೇ ನಿವೇದಿತಾ ಗೌಡ ಇನ್‌ಸ್ಟಾಗ್ರಾಂನಲ್ಲಿ ಇಂಗ್ಲೀಷ್ ಹಾಡಿಗೆ ಬೆಲ್ಲಿ ಕುಣಿಸಿದ್ದಾರೆ. ಈ ಮಾದಕ ವಿಡಿಯೋಕ್ಕೆ ನೆಟ್ಟಿಗರ ವಲಯದಿಂದ ಬಗೆಬಗೆ ಕಾಮೆಂಟ್‌ಗಳ ರಾಶಿಯೇ ಹರಿದು ಬಂದಿದೆ. ಕೆಲವರು ನಿವೇದಿತಾ ಫಿಟ್‌ನೆಸ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಪಾಸಿಟಿವ್ ಪ್ರತಿಕ್ರಿಯೆ ನೀಡಿದರೆ, ಬಹುಪಾಲು ನೆಟ್ಟಿಗರು ನಿವೇದಿತಾ ಗೌಡ ಅವರನ್ನು ಕಟುವಾಗಿ ಟೀಕೆ ಮಾಡಿದ್ದಾರೆ.
"ನಿವೇದಿತಾ ಅವ್ರೆ ನಿಮ್ಗೆ ನಮ್ಮಕಡೆ ಇಂದ ಹೃತ್ಪೂರ್ವಕ ಧನ್ಯವಾದಗಳು ಅರ್ಪಣೆ. ಇ ಥರ ವಿಡಿಯೋ ಗಳು ನೀವ್ ಮಾಡ್ತ ಇರ್ಬೇಕು, ನಾವು ನೋಡ್ತ ಇರ್ಬೇಕು ಇಂತಿ ನಿಮ್ಮ ಅಭಿಮಾನಿ" ಎಂದು ಕೆಲವರು ಕಾಮೆಂಟ್ ಹಾಕುತ್ತಿದ್ದರೆ, ಟ್ರೆಡಿಷನಲ್ ಗೊಂಬೆ ಟು ಟ್ರೆಂಡಿಂಗ್ ಗೊಂಬೆ ಎಂದು ಪ್ರತಿಕ್ರಿಯಿಸುತ್ತಿದ್ದಾರೆ. ಇನ್ನು ಕೆಲವರು ಸನ್ನಿ ಲಿಯೋನ್ ಪಾರ್ಟ್ 2 ಎಂದೂ ಟೀಕಿಸುತ್ತಿದ್ದಾರೆ. ಒಟ್ಟಾರೆಯಾಗಿ, ಸರಣಿ ಟೀಕೆ ಟಿಪ್ಪಣಿಗಳು ಈ ವಿಡಿಯೋಗೆ ಕಾಮನ್ ಆಗಿವೆ.
ಜಿಮ್‌ನಲ್ಲಿ ಚಂದನ್ ಶೆಟ್ಟಿ
ಇನ್ನೊಂದು ಕಡೆ ಚಂದನ್ ಶೆಟ್ಟಿ ನಿವೇದಿತಾ ಗೌಡಗೆ ಡಿವೋರ್ಸ್ ನೀಡಿದ ಬಳಿಕ, ತಾವಾಯ್ತು ತಮ್ಮ ಕೆಲಸಗಳಾಯ್ತು ಎಂದಷ್ಟೇ ಉಳಿದಿದ್ದಾರೆ. ಈ ನಡುವೆ ಇದೀಗ ಇದೇ ಚಂದನ್ ಶೆಟ್ಟಿ ಜಿಮ್‌ಗೆ ಕಾಲಿರಿಸಿದ್ದಾರೆ. ಶರ್ಟ್ ಕಳಚಿ ಬದಲಾವಣೆಯತ್ತ ಮುಖ ಮಾಡಿದ್ದಾರೆ. ಈ ಫೋಟೋಗಳನ್ನು ಶೇರ್ ಮಾಡುತ್ತಿದ್ದಂತೆ, ನೀವು ಈಗಾಗಲೇ ಬದಲಾಗಿದ್ದೀರಿ, ಕೀಪ್ ರಾಕಿಂಗ್ ನಿಮಗೆ ನಮ್ಮ ಬೆಂಬಲ ಯಾವಾಗಲೂ ಇರುತ್ತೆ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಚಂದನ್ ಶೆಟ್ಟಿ ರೆಸ್ಪೆಕ್ಟ್ ಬಟನ್, ಇದೇ ನೀವು ಮಾಡುತ್ತಿರುವ ಒಳ್ಳೆಯ ಕೆಲಸ" ಎಂದೂ ಮೆಚ್ಚುಗೆಯ ಕಾಮೆಂಟ್ ಸಂದಾಯವಾಗುತ್ತಿವೆ.

ವಿಭಾಗ