R Madhavan: ಟೆಸ್ಟ್ ನೆಟ್‌ಫ್ಲಿಕ್ಸ್ ಸಿನಿಮಾದಲ್ಲಿ ಆರ್ ಮಾಧವನ್‌ಗೆ ವಿಜ್ಞಾನಿ ಪಾತ್ರ; ಸಿದ್ಧಾರ್ಥ್, ನಯನತಾರಾ ನಟಿಸಿರುವ ಚಿತ್ರವಿದು
Test OTT release: ನೆಟ್‌ಫ್ಲಿಕ್ಸ್‌ನಲ್ಲಿ ಏಪ್ರಿಲ್ 4ರಂದು ಬಿಡುಗಡೆಯಾಗಲಿರುವ ಟೆಸ್ಟ್ ಎಂಬ ಸಿನಿಮಾದಲ್ಲಿ ಆರ್. ಮಾಧವನ್ ಪಾತ್ರ ಪರಿಚಯ ಮಾಡಲಾಗಿದೆ. ತೊಂದರೆಯಲ್ಲಿರುವ ವಿಜ್ಞಾನಿ ಪಾತ್ರದಲ್ಲಿ ಇವರು ನಟಿಸಿದ್ದಾರೆ. ನಯನತಾರಾ ಕುಮುದಾ ಪಾತ್ರದಲ್ಲಿ, ಸಿದ್ಧಾರ್ಥ್ ಕ್ರಿಕೆಟಿಗ ಅರ್ಜುನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Test OTT release: ನೆಟ್‌ಫ್ಲಿಕ್ಸ್‌ನಲ್ಲಿ ಏಪ್ರಿಲ್ 4ರಂದು ಬಿಡುಗಡೆಯಾಗಲಿರುವ ಟೆಸ್ಟ್ ಎಂಬ ಸಿನಿಮಾದಲ್ಲಿ ಆರ್. ಮಾಧವನ್ ಪಾತ್ರ ಪರಿಚಯ ಮಾಡಲಾಗಿದೆ. ತೊಂದರೆಯಲ್ಲಿರುವ ವಿಜ್ಞಾನಿ ಪಾತ್ರದಲ್ಲಿ ಇವರು ನಟಿಸಿದ್ದಾರೆ. ನಯನತಾರಾ ಕುಮುದಾ ಪಾತ್ರದಲ್ಲಿ, ಸಿದ್ಧಾರ್ಥ್ ಕ್ರಿಕೆಟಿಗ ಅರ್ಜುನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನೆಟ್‌ಫ್ಲಿಕ್ಸ್ ಕಳೆದ ಎರಡು ದಿನ ಇವರಿಬ್ಬರ ಪಾತ್ರ ಪರಿಚಯಿಸಿತ್ತು. ಇಂದು ಆರ್ ಮಾಧವನ್ ನಿರ್ವಹಿಸಿದ ಶರವಣನ್ ಪಾತ್ರದ ಪರಿಚಯ ಮಾಡಲಾಗಿದೆ. ಚಿತ್ರದಲ್ಲಿ ಪ್ರತಿಭಾನ್ವಿತ ಆದರೆ ಹೋರಾಟ ನಡೆಸುತ್ತಿರುವ ವಿಜ್ಞಾನಿಯ ಪಾತ್ರದಲ್ಲಿ ಆರ್. ಮಾಧವನ್ ನಟಿಸಿದ್ದಾರೆ.
ಟೆಸ್ಟ್ ಸಿನಿಮಾದಲ್ಲಿ ಆರ್ ಮಾಧವನ್ ಪಾತ್ರ
ನೆಟ್‌ಫ್ಲಿಕ್ಸ್‌ನ ಟೆಸ್ಟ್ ಸಿನಿಮಾದಲ್ಲಿ ಮಾಧವನ್ ಅವರು ಶರವಣನ್ ಎಂಬ ಪಾತ್ರದಲ್ಲಿ ನಟಿಸಿದ್ದಾರೆ. ಇವರು ಪ್ರತಿಭಾನ್ವಿತ, ಆದರೆ ತೊಂದರೆಯಲ್ಲಿರುವ ವಿಜ್ಞಾನಿ. ಇವರ ಮಹಾನ್ ಗುರಿ ಈಡೇರುವುದು ಕಷ್ಟವಾಗುತ್ತದೆ. ಒಟ್ಟಾರೆ, ಈ ಸಿನಿಮಾದಲ್ಲಿ ಅರ್ಜುನ್‌ಗೆ ಕ್ರಿಕೆಟ್ ಟೆಸ್ಟ್, ನಯನಾತಾರಾಳಿಗೆ ಕೌಟುಂಬಿಕ ಸಮಸ್ಯೆಗಳ ಪರೀಕ್ಷೆ ಮತ್ತು ಮಾಧವನ್‌ಗೆ ಇನ್ನೊಂದು ಬಗೆಯ ಪರೀಕ್ಷೆ ಇರಲಿದೆ. ಈ ಜೀವನದ ವಿವಿಧ ಟೆಸ್ಟ್‌ಗಳನ್ನು ನೆಟ್‌ಫ್ಲಿಕ್ಸ್‌ನ ಒಟಿಟಿ ಸಿನಿಮಾದಲ್ಲಿ ಕಟ್ಟಿಕೊಟ್ಟಿರುವ ನಿರೀಕ್ಷೆಯಿದೆ. ಟೆಸ್ಟ್ ಸಿನಿಮಾಕ್ಕೆ ಎಸ್. ಶಶಿಕಾಂತ್ ನಿರ್ದೇಶನವಿದೆ. ನೆಟ್‌ಫ್ಲಿಕ್ಸ್‌ನಲ್ಲಿ ಏಪ್ರಿಲ್ 4ರಂದು ಬಿಡುಗಡೆಯಾಗಲಿದೆ. ಯಾವುದೇ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗದೆ ನೇರವಾಗಿ ಒಟಿಟಿ ಮೂಲಕ ಪ್ರೇಕ್ಷಕರನ್ನು ತಲುಪಲಿದೆ.
ಶರವಣನ್ ವಿಜ್ಞಾನಿ. ಅವರಲ್ಲಿ ಮಹಾನ್ ಯೋಜನೆಯಿದೆ. ಆದರೆ, ಅದಕ್ಕೆ ಬೇಕಾದ ಬೆಂಬಲ ದೊರಕುವುದಿಲ್ಲ. ಈ ಸಂದರ್ಭದ ಹೋರಾಟ, ಬೇಸರ, ನಿಟ್ಟುಸಿರುಗಳನ್ನು ಈ ಟೀಸರ್‌ನಲ್ಲಿ ತೋರಿಸಲಾಗಿದೆ. ಶರವಣನ್ ತನ್ನ ದೃಷ್ಟಿಕೋನವನ್ನು ವಾಸ್ತವಕ್ಕೆ ತಿರುಗಿಸಲು ಹೋರಾಡುತ್ತಿರುವುದನ್ನು ಟೀಸರ್ ತೋರಿಸುತ್ತದೆ. ನಿರೀಕ್ಷೆಯ ಭಾರ ಮತ್ತು ಸಮಯದ ವಿರುದ್ಧದ ಹೋರಾಟದೊಂದಿಗೆ ಅವರ ಪ್ರಯಾಣವು ರೋಮಾಂಚಕವಾಗಿದೆ ಮತ್ತು ಹೃದಯವಿದ್ರಾವಕವಾಗಿದೆ. ಇದು ಪರಿಶ್ರಮ, ಉತ್ಸಾಹ ಮತ್ತು ಪ್ರತಿಭೆಯ ಬೆಲೆಯ ಕಥೆ ಎಂದು ನೆಟ್‌ಫ್ಲಿಕ್ಸ್ ಕ್ಯಾಪ್ಷನ್ ನೀಡಿದೆ.
ಆರ್. ಮಾಧವನ್ ತನ್ನ ಕ್ಯಾರೆಕ್ಟರ್ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಬರೆದಿದ್ದಾರೆ. "ಶರವಣನ್ ಒಬ್ಬ ವ್ಯಕ್ತಿ. ಆತನ ಪ್ರತಿಭೆ ಶಕ್ತಿಯೂ ಹೌದು, ಸವಾಲೂ ಹೌದು. ಆತನ ಪ್ರಯಾಣವು ಮಹತ್ವಾಕಾಂಕ್ಷೆ, ತ್ಯಾಗ ಮತ್ತು ಕನಸಿನ ನಿರಂತರ ಅನ್ವೇಷಣೆ. ಅದಕ್ಕೆ ಬೆಲೆ ತೆರಬೇಕಾಗುತ್ತದೆ. ಈ ಪಾತ್ರದಲ್ಲಿ ನಟಿಸುವ ಸಂದರ್ಭದಲ್ಲಿ ಉತ್ಸಾಹವು ವ್ಯಕ್ತಿಯೊಬ್ಬರನ್ನು ಎಷ್ಟು ದೂರ ಕೊಂಡೊಯ್ಯಬಹುದು ಎಂದು ಆಲೋಚಿಸುವಂತೆ ನನ್ನ ಮಾಡಿತು" ಎಂದು ಆರ್. ಮಾಧವನ್ ಬರೆದಿದ್ದಾರೆ.
ಟೆಸ್ಟ್ ಸಿನಿಮಾ ಒಟಿಟಿ ಬಿಡುಗಡೆ ವಿವರ
ಎಸ್ ಶಶಿಕಾಂತ್ ನಿರ್ದೇಶನದ ಚೊಚ್ಚಲ ಚಿತ್ರ ಇದಾಗಿದೆ. ಟೆಸ್ಟ್ ಈ ವರ್ಷ ಸ್ಟ್ರೀಮ್ ಆಗುತ್ತಿರುವ ತಮಿಳು ನೆಟ್‌ಫ್ಲಿಕ್ಸ್ ಒರಿಜಿನಲ್ ಸಿನಿಮಾಗಳಲ್ಲಿ ಮೊದಲನೆಯದು. ವೈನಾಟ್ ಸ್ಟುಡಿಯೋಸ್ ಅಡಿಯಲ್ಲಿ ರಾಮಚಂದ್ರ ಮತ್ತು ಎಸ್. ಶಶಿಕಾಂತ್ ಈ ಚಿತ್ರಕ್ಕೆ ಸಪೋರ್ಟ್ ನೀಡಿದ್ದಾರೆ.
ಆರ್. ಮಾಧವನ್, ನಯನತಾರಾ, ಸಿದ್ಧಾರ್ಥ್, ಮೀರಾ ಜಾಸ್ಮಿನ್ ಇತರರು ಟೆಸ್ಟ್ ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವು ಏಪ್ರಿಲ್ 4 ರಂದು ನೆಟ್‌ಫ್ಲಿಕ್ಸ್‌ನಲ್ಲಿ ಪ್ರಥಮ ಪ್ರದರ್ಶನಗೊಳ್ಳಲಿದೆ. ಟೆಸ್ಟ್ ಒಂದು ಕ್ರಿಕೆಟ್ ಆಧರಿತ ನಾಟಕವಾಗಿದೆ. ಇದರಲ್ಲಿ ಸಿದ್ಧಾರ್ಥ್ ಫಾರ್ಮ್ ಕಳೆದುಕೊಂಡ ಮತ್ತು ಮತ್ತೆ ಫಾರ್ಮ್‌ಗೆ ಮರಳಲು ಹೆಣಗಾಡುತ್ತಿರುವ ಅನುಭವಿ ಬ್ಯಾಟ್ಸ್‌ಮನ್ ಅರ್ಜುನ್ ಪಾತ್ರವನ್ನು ನಿರ್ವಹಿಸಲಿದ್ದಾರೆ. ನಯನತಾರಾ ಶಾಲಾ ಶಿಕ್ಷಕಿ ಮತ್ತು ಮಾಧವನ್ ಅವರ ಸಂಗಾತಿಯಾಗಿ ಕುಮುದಾ ಪಾತ್ರದಲ್ಲಿ ನಟಿಸಿದ್ದಾರೆ.
