Pranita Subhash Instagram Post: ಒಲ್ಲದ ಮನಸ್ಸಿನಿಂದ ಏಕೆ ಫೋಟೋ ಹಾಕ್ತೀರ..ಪ್ರಣಿತಾ ವಿರುದ್ಧ ನೆಟಿಜನ್ಸ್‌ ಗರಂ
ಕನ್ನಡ ಸುದ್ದಿ  /  ಮನರಂಜನೆ  /  Pranita Subhash Instagram Post: ಒಲ್ಲದ ಮನಸ್ಸಿನಿಂದ ಏಕೆ ಫೋಟೋ ಹಾಕ್ತೀರ..ಪ್ರಣಿತಾ ವಿರುದ್ಧ ನೆಟಿಜನ್ಸ್‌ ಗರಂ

Pranita Subhash Instagram Post: ಒಲ್ಲದ ಮನಸ್ಸಿನಿಂದ ಏಕೆ ಫೋಟೋ ಹಾಕ್ತೀರ..ಪ್ರಣಿತಾ ವಿರುದ್ಧ ನೆಟಿಜನ್ಸ್‌ ಗರಂ

ಇತ್ತೀಚೆಗೆ ಕೂಡಾ ಪ್ರಣಿತಾ ಸುಭಾಷ್‌ ಮಗುವಿನೊಂದಿಗೆ ಇರುವ ಮೂರು ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಆದರೆ ಇಲ್ಲೂ ಕೂಡಾ ಅವರು ಮಗುವಿನ ಮುಖವನ್ನು ಎಮೋಜಿಗಳೊಂದಿಗೆ ಕವರ್‌ ಮಾಡಿದ್ದಾರೆ. ಇದು ನೆಟಿಜನ್ಸ್‌ ಆಕ್ರೋಶಕ್ಕೆ ಕಾರಣವಾಗಿದೆ.

ಬಹುಭಾಷಾ ನಟಿ ಪ್ರಣಿತಾ ಸುಭಾಷ್‌
ಬಹುಭಾಷಾ ನಟಿ ಪ್ರಣಿತಾ ಸುಭಾಷ್‌ (PC: Pranita Subhash Instagram)

ಬೆಂಗಳೂರಿನ ಹುಡುಗಿ ಪ್ರಣಿತಾ ಸುಭಾಷ್‌, ಕನ್ನಡ ಚಿತ್ರರಂಗದ ಜೊತೆಗೆ ತಮಿಳು, ತೆಲುಗು, ಹಿಂದಿಯಲ್ಲಿ ಕೂಡಾ ಹೆಸರು ಮಾಡಿದ್ದಾರೆ. ಕಳೆದ ವರ್ಷ ಲಾಕ್‌ಡೌನ್‌ ಸಮಯದಲ್ಲಿ ಸರಳವಾಗಿ ಮದುವೆಯಾಗಿದ್ದ ಪ್ರಣಿತಾ, ಇದೇ ವರ್ಷ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಕೆಲವು ದಿನಗಳ ಕಾಲ ರೆಸ್ಟ್‌ನಲ್ಲಿದ್ದ ಈ 'ಪೊರ್ಕಿ' ಚೆಲುವೆ ಮತ್ತೆ ಮೊದಲಿನಂತೆ ಫಿಟ್‌ ಅಂಡ್‌ ಫೈನ್‌ ಆಗಿದ್ದಾರೆ.

ಪ್ರಣಿತಾ ಸುಭಾಷ್‌, ಸೋಷಿಯಲ್‌ ಮೀಡಿಯಾದಲ್ಲಿ ಆಕ್ಟಿವ್‌ ಇದ್ದಾರೆ. ಮದುವೆಗೂ ಮುನ್ನ ತಮ್ಮ ಸಿನಿಮಾಗೆ ಸಂಬಂಧಿಸಿದ ಫೋಟೋ, ವಿಡಿಯೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದ ಪ್ರಣಿತಾ, ಈಗ ತಮ್ಮ ವೈಯಕ್ತಿಕ ಬದುಕಿಗೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. ಎಲ್ಲಾ ಹಬ್ಬಗಳನ್ನು ಆಚರಿಸುವ ಪ್ರಣಿತಾ ಆ ಫೋಟೋಗಳನ್ನು ಕೂಡಾ ಹಂಚಿಕೊಳ್ಳುತ್ತಲೇ ಬಂದಿದ್ದಾರೆ. ಆದರೆ ತಮ್ಮ ಪತಿ ಹಾಗೂ ಮಗುವಿನ ಫೋಟೋ ಅಪ್‌ಲೋಡ್‌ ಮಾಡುವಾಗ ಸ್ವಲ್ಪ ಅಲರ್ಟ್‌ ಆಗುತ್ತಾರೆ. ಇದುವರೆಗೂ ಪ್ರಣಿತಾ, ತಮ್ಮ ಪತಿ ಜೊತೆಗೆ ಇರುವ ಕೆಲವೊಂದು ಫೋಟೋಗಳನ್ನು ಷೇರ್‌ ಮಾಡಿದ್ದಾರೆ. ಆದರೆ ಯಾವುದೂ ಕ್ಲಿಯರ್‌ ಇಲ್ಲ. ಯಾವ ಫೋಟೋದಲ್ಲಿ ಅವರ ಮುಖವನ್ನು ಸರಿಯಾಗಿ ತೋರಿಸಿಲ್ಲ.

ಹಾಗೇ ಮೊದಲ ಬಾರಿ ತಮ್ಮ ಮಗುವಿನ ಫೋಟೋ ಹಂಚಿಕೊಂಡಾಗ ಕೂಡಾ ಮುಖ ತೋರಿಸದೆ, ಲವ್‌ ಎಮೋಜಿ ಅಥವಾ ಇನ್ನಿತರ ಎಮೋಜಿಗಳ ಮೂಲಕ ಮುಚ್ಚಿರುತ್ತಿದ್ದರು. ಇತ್ತೀಚೆಗೆ ಕೂಡಾ ಪ್ರಣಿತಾ ಮಗುವಿನೊಂದಿಗೆ ಇರುವ ಮೂರು ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಆದರೆ ಇಲ್ಲೂ ಕೂಡಾ ಅವರು ಮಗುವಿನ ಮುಖವನ್ನು ಎಮೋಜಿಗಳೊಂದಿಗೆ ಕವರ್‌ ಮಾಡಿದ್ದಾರೆ. ಇದು ನೆಟಿಜನ್ಸ್‌ ಆಕ್ರೋಶಕ್ಕೆ ಕಾರಣವಾಗಿದೆ. ಕೆಲವು ಸೆಲೆಬ್ರಿಟಿಗಳು ತಮ್ಮ ಮಕ್ಕಳನ್ನು ಸಾರ್ವಜನಿಕವಾಗಿ ತೋರಿಸಲು ಇಷ್ಟಪಡುವುದಿಲ್ಲ ಎಂಬುದನ್ನು ನಾವೂ ಒಪ್ಪಿಕೊಳ್ಳುತ್ತೇವೆ. ಆದರೆ ನಿಮಗೆ, ಮಗುವಿನ ಮುಖ ತೋರಿಸುವ ಆಸಕ್ತಿ ಇಲ್ಲದಿದ್ದರೆ ಆ ಫೋಟೋಗಳನ್ನು ಹಂಚಿಕೊಳ್ಳುವ ಅವಶ್ಯಕತೆ ಆದರೂ ಏನಿದೆ...? ಇನ್ಮುಂದೆ ಮಗುವಿನ ಫೋಟೋ ಹಾಕದಿದ್ದರೂ ನಡೆಯುತ್ತೆ, ಒಂದು ವೇಳೆ ಷೇರ್‌ ಮಾಡಿದ್ರೂ ಎಮೋಜಿಗಳಿಂದ ಮುಖ ಮುಚ್ಚದೆ ನಮಗೆ ತೋರಿಸಿ ಎಂದು ಕಮೆಂಟ್‌ ಮಾಡುತ್ತಿದ್ದಾರೆ.

ಸಂತೂರ್‌ ಮಮ್ಮಿ ಪ್ರಣಿತಾ ಸುಭಾಷ್‌

ಮಗುವಿಗೆ ಜನ್ಮ ನೀಡಿದ ಬಳಿಕ ಸಿನಿಮಾದಿಂದ ಕೊಂಚ ದೂರ ಉಳಿದಿರುವ ಪ್ರಣಿತಾ, ಫಿಟ್ನೆಸ್‌ ವಿಚಾರದಲ್ಲಿ ಮಾತ್ರ ಹಿಂದೆ ಬಿದ್ದಿಲ್ಲ. ಇತ್ತೀಚೆಗೆ ಪತಿಯೊಂದಿಗೆ ಪ್ರಣಿತಾ ಮಾಲ್ಡೀವ್ಸ್‌ಗೆ ಭೇಟಿ ನೀಡಿದ್ದರು. ಅಲ್ಲಿ ಸ್ವಿಮ್ಮಿಂಗ್‌ ಪೂಲ್‌ನಲ್ಲಿ ಇಬ್ಬರೂ ಈಜಾಡುತ್ತಿರುವ ಫೋಟೋ, ಸ್ವಿಮ್‌ ಡ್ರೆಸ್‌, ಪೂಲ್‌ ಪಾರ್ಟಿಯ ಫೋಟೋಗಳನ್ನು ಹಂಚಿಕೊಂಡಿದ್ದರು. ಈ ಫೋಟೋಗಳನ್ನು ನೋಡಿ ನೆಟಿಜನ್ಸ್‌ ಆಶ್ವರ್ಯ ವ್ಯಕ್ತಪಡಿಸಿದ್ದರು. ಇತ್ತೀಚೆಗೆ ಮಗುವಿಗೆ ಜನ್ಮ ನೀಡಿದ ಪ್ರಣಿತಾ ನೀವೇನಾ..? ಎಂದು ಪ್ರಶ್ನಿಸುತ್ತಿದ್ದಾರೆ. ನೇರಳೆ ಬಣ್ಣದ ಔಟ್‌ಫಿಟ್‌ನಲ್ಲಿ ತೆಗೆಸಿದ್ದ ಫೋಟೋಗಳನ್ನು ಹಂಚಿಕೊಂಡಿದ್ದ ಪ್ರಣಿತಾ, ಬಹಳ ಆಕರ್ಷಕವಾಗಿ ಕಾಣುತ್ತಿದ್ದರು. ''ನೀವು ಪ್ರಯತ್ನಿಸದ ಹೊರತು ಜೀವನ ಸುಂದರವಾಗಿರುವುದಿಲ್ಲ'' ಎಂದು ಕ್ಯಾಪ್ಷನ್‌ ನೀಡಿದ್ದರು.

ಕಳೆದ ವರ್ಷದ ಮೇ ತಿಂಗಳಲ್ಲಿ ಸರಳವಾಗಿ ಉದ್ಯಮಿ ನಿತಿನ್‌ ರಾಜು ಎಂಬುವವರನ್ನು ವಿವಾಹವಾಗಿದ್ದ ಪ್ರಣಿತಾ , ಪತಿಯ ಜನ್ಮದಿನದಂದೇ ತಾವು ತಾಯಿಯಾಗುತ್ತಿರುವ ವಿಚಾರವನ್ನು ಹೇಳಿಕೊಂಡಿದ್ದರು. ಕೆಲ ದಿನಗಳ ಹಿಂದಷ್ಟೇ ಸೀಮಂತ ಕಾರ್ಯವನ್ನೂ ನೆರವೇರಿಸಿಕೊಂಡು, ಪತಿ ಜತೆಗೆ ಬೇಬಿ ಬಂಪ್‌ ಫೋಟೋ ಶೂಟ್‌ ಮಾಡಿಸಿದ್ದರು. ಜೂನ್ 10 ರಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಪ್ರಣಿತಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಪ್ರಣಿತಾ ಅವರ ತಾಯಿ ಡಾ. ಜಯಶ್ರೀ ಕೂಡಾ ಸ್ತ್ರೀರೋಗ ತಜ್ಞೆ ಆಗಿರುವುದರಿಂದ ಅವರ ಆಪ್ತ ವೈದ್ಯರ ಸಮ್ಮುಖದಲ್ಲಿಯೇ ಮಗಳ ಹೆರಿಗೆಯನ್ನು ಮಾಡಿಸಿದ್ದರು.

ಪ್ರಣಿತಾ ಸುಭಾಷ್, 2010 ರಲ್ಲಿ ಬಿಡುಗಡೆಯಾದ 'ಪೊರ್ಕಿ' ಚಿತ್ರದ ಮೂಲಕ ಸ್ಯಾಂಡಲ್​​ವುಡ್​​​ಗೆ ಕಾಲಿಟ್ಟರು. ದರ್ಶನ್ ಜೊತೆ ನಾಯಕಿಯಾಗಿ ನಟಿಸಿದ್ದ ಪ್ರಣಿತಾ ಈ ಸಿನಿಮಾ ನಂತರ ತೆಲುಗು, ತಮಿಳು ಸಿನಿಮಾಗಳಲ್ಲಿ ಕೂಡಾ ಅವಕಾಶ ಪಡೆದರು. ಇತ್ತೀಚೆಗೆ ಪ್ರಣಿತಾ ಬಾಲಿವುಡ್​ಗೆ ಕೂಡಾ ಕಾಲಿರಿಸಿದ್ಧಾರೆ. ಕನ್ನಡದ ಭೀಮಾ ತೀರದಲ್ಲಿ, ಸ್ನೇಹಿತರು, ವಿಶಲ್, ಬ್ರಹ್ಮ, ಸೆಕೆಂಡ್ ಹ್ಯಾಂಡ್ ಲವರ್, ಜಗ್ಗುದಾದಾ, ತೆಲುಗಿನ ಅತ್ತಾರಿಂಟಿಕಿ ದಾರೇದಿ, ರಭಸ, ಡೈನಮೇಟ್, ಬ್ರಹ್ಮೋತ್ಸವಂ, ತಮಿಳಿನ ಉದಯನ್, ಸಗುನಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯಕ್ಕೆ ಕನ್ನಡದ 'ರಾಮನ ಅವತಾರ' ಚಿತ್ರವನ್ನು ಪ್ರಣಿತಾ ಒಪ್ಪಿಕೊಂಡಿದ್ದು ಕೆಲವೇ ದಿನಗಳಲ್ಲಿ ಮತ್ತೆ ಶೂಟಿಂಗ್​​​​​​ಗೆ ಹಾಜರಾಗಲಿದ್ದಾರೆ.

Whats_app_banner