ರಾಮ್ ಚರಣ್ ಸಿನಿಮಾ ಪೆದ್ದಿ ಪೋಸ್ಟರ್ ಹಾಗೂ ಪುಷ್ಪ ಸಿನಿಮಾ ಲುಕ್ ಎರಡನ್ನೂ ಹೋಲಿಕೆ ಮಾಡಿದ ನೆಟ್ಟಿಗರು; ಕಾಮೆಂಟ್‌ನಲ್ಲಿ ಭಾರೀ ಚರ್ಚೆ
ರಾಮ್ ಚರಣ್ ಅವರ ಹುಟ್ಟುಹಬ್ಬದಂದು ಅವರ ಹೊಸ ಸಿನಿಮಾ ‘ಪೆದ್ದಿ’ ಫಸ್ಟ್ ಲುಕ್ ಬಿಡುಗಡೆಯಾಗಿದೆ. ರಾಮ್ ಚರಣ್ ಹೊಸ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸಾಕಷ್ಟು ಜನರು ಈ ಪೋಸ್ಟ್‌ರ್ ಪುಷ್ಟ ಸಿನಿಮಾ ಲುಕ್ ಹೊಂದಿದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ನಟ ರಾಮ್ ಚರಣ್ ಮಾರ್ಚ್ 27 ರಂದು 40ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ರಾಮ್ ಚರಣ್ ಅಭಿಮಾನಿಗಳಿಗೆ ಸಂತಸವಾಗುವ ರೀತಿಯಲ್ಲಿ ಅವರ ಮುಂಬರುವ ಸಿನಿಮಾ ‘ಪೆದ್ದಿ’ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಈ ಹಿಂದೆ ರಂಗಸ್ಥಲ ಸಿನಿಮಾದಲ್ಲಿ ರಾಮ್ ಚರಣ್ ಹಳ್ಳಿಗಾಡಿನ ವ್ಯಕ್ತಿಯ ರೀತಿಯ ಪಾತ್ರವನ್ನು ನಿರ್ವಹಿಸಿದ್ದರು. ಇದೀಗ ಮತ್ತೆ ಈ ಸಿನಿಮಾದಲ್ಲೂ ಹಳ್ಳಿ ಯುವಕನ ಪಾತ್ರದಲ್ಲಿ ರಾಮ್ ಚರಣ್ ಕಾಣಿಸಿಕೊಳ್ಳಲಿದ್ದಾರೆ. ಫಸ್ಟ್ ಲುಕ್‌ನಲ್ಲಿಯೇ ಈ ಬಗ್ಗೆ ಮಾಹಿತಿ ಲಭ್ಯವಾಗಿದೆ. ಆದರೆ, ಈಗ ಚರ್ಚೆಯಾಗುತ್ತಿರುವ ಮೂಲ ಸಂಗತಿ ಏನೆಂದರೆ ಪುಷ್ಪಾ: ದಿ ರೈಸ್ ಚಿತ್ರದ ಅಲ್ಲು ಅರ್ಜುನ್ ಅವರ ನೋಟದೊಂದಿಗೆ ರಾಮ್ ಚರಣ್ ಅವರ ಈ ಸಿನಿಮಾ ನೋಟ ಕೂಡ ಹೋಲಿಕೆಯಾಗುತ್ತಿದೆ.
‘ಪೆದ್ದಿ’ ಚಿತ್ರದ ರಾಮ್ ಚರಣ್ ಅವರ ಫಸ್ಟ್ ಲುಕ್‌ಅನ್ನು ಪುಷ್ಪಕ್ಕೆ ಹೋಲಿಕೆ ಮಾಡಲಾಗಿದೆ
ಪೆದ್ದಿ ಚಿತ್ರದ ರಾಮ್ ಅವರ ಫಸ್ಟ್ ಲುಕ್‌ನ ಎರಡು ಪೋಸ್ಟರ್‍ಗಳನ್ನು ಅವರ ಹುಟ್ಟು ಹಬ್ಬದಂದು ಗುರುವಾರ ಬಿಡುಗಡೆ ಮಾಡಲಾಗಿದೆ. ಒಂದು ಪೋಸ್ಟರ್‍ನಲ್ಲಿ ಅವರು ಬೀಡಿ ಹೊತ್ತಿಸಿಕೊಂಡು ಕ್ಯಾಮೆರಾವನ್ನು ನೋಡುತ್ತಿರುವುದನ್ನು ಕಾಣಬಹುದು. ಎರಡನೇ ಪೋಸ್ಟರ್‍ನಲ್ಲಿ ಅವರು ಹರಿದ ಶರ್ಟ್ ಧರಿಸಿ ಕ್ರಿಕೆಟ್ ಬ್ಯಾಟ್ ಹಿಡಿದಿರುವುದನ್ನು ಕಾಣಬಹುದು. ಅಭಿಮಾನಿಗಳು ಅವರ ಈ ನೋಟವನ್ನು ಇಷ್ಟಪಟ್ಟರೂ ಸಹ ಇದನ್ನು ಮೊದಲೇ ನೋಡಿದಂತಿದೆ ಎಂದಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಎಲ್ಲ ಪೋಸ್ಟರ್‍ಗಳು ಒಂದೇ ರೀತಿ ಕಾಣಿಸುತ್ತಿವೆ. ಎಲ್ಲದರಲ್ಲೂ ಒಂದೇ ರೀತಿಯ ಲುಕ್ ಇದೆ. ಒಂದು ಸಿನಿಮಾ ಫೇಮಸ್ ಆದ ತಕ್ಷಣ ಅದನ್ನೇ ಹೋಲುವ ಸಿನಿಮಾಗಳು ಬರಲು ಆರಂಭವಾಗಿ ಬಿಡುತ್ತವೆ ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ. ಅಷ್ಟೇ ಅಲ್ಲ ಸಿನಿಮಾದ ಪೋಸ್ಟರ್‍ಗಳಲ್ಲೂ ಸಾಮ್ಯತೆ ಇರುವುದನ್ನು ಜನರು ಗುರುತಿಸುತ್ತಿದ್ಧಾರೆ. ಈ ಬಗ್ಗೆ ಅಲ್ಲಲ್ಲೇ ಕಾಮೆಂಟ್ ಕೂಡ ಮಾಡಿ “ನನಗೊಬ್ಬನಿಗೆ ಹೀಗನಿಸುತ್ತಾ? ಅಥವಾ ಎಲ್ಲರಿಗೂ ಹೀಗೆ ಅನಿಸುತ್ತಾ?” ಎಂದು ಪ್ರಶ್ನೆ ಮಾಡಿದವರೂ ಇದ್ದಾರೆ.
ಇನ್ನು ಕೆಲವರಂತು ತಾವೇ ಸಿನಿಮಾದ ಪೋಸ್ಟರ್‍ಗಳನ್ನು ಒಟ್ಟಾಗಿ ಎಡಿಟ್ ಮಾಡಿ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಆ ಫೋಟೋಗಳನ್ನು ನೋಡಿದರೆ ಎಂತವನಿಗಾದರೂ ಒಮ್ಮೆ ಆಶ್ಚರ್ಯ ಆಗಲೇಬೇಕು ಆ ರೀತಿಯಾಗಿದೆ.
ಎಕ್ಸ್ ಬಳಕೆದಾರರೊಬ್ಬರು ಎರಡೂ ಪೋಸ್ಟರ್ ಗಳನ್ನು ಪೋಸ್ಟ್ ಮಾಡಿ, ಸೇಮ್ ಸೇಮ್ ಬಟ್ ಡಿಫರೆಂಟ್ ಎಂದು ಬರೆದುಕೊಂಡಿದ್ದಾರೆ.
ಗ್ರಾಮೀಣ ಹಿನ್ನೆಲೆಯ ಸಿನಿಮಾ
ಪೆದ್ದಿ ಚಿತ್ರದ ಕ್ರೀಡೆ ಹಿನ್ನೆಲೆಯಲ್ಲಿ ಸಾಗುವ ಸಿನಿಮಾ. ಇದಕ್ಕೆ ಗ್ರಾಮೀಣ ಭಾಗದ ಟಚ್ ಕೂಡ ಇರಲಿದೆ. ಈ ಹಿಂದೆ ಉಪ್ಪೇನ ಸಿನಿಮಾ ನಿರ್ದೇಶನ ಮಾಡಿದ್ದ ಬುಚ್ಚಿಬಾಬು ಸನಾ ಈ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರದಲ್ಲಿ ರಾಮ್‌ಚರಣ್‌ಗೆ ಜೋಡಿಯಾಗಿ ಬಾಲಿವುಡ್ ನಟಿ ಜಾನ್ವಿ ಕಪೂರ್ ನಟಿಸುತ್ತಿದ್ದಾರೆ. ಸ್ಯಾಂಡಲ್‌ವುಡ್ ನಟ ಶಿವರಾಜ್‌ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇನ್ನುಳಿದಂತೆ ದಿವ್ಯೇಂದ್ರ ಶರ್ಮಾ, ಜಗಪತಿಬಾಬು ಪ್ರಮುಖ ಪಾತ್ರಗಳಲ್ಲಿದ್ದಾರೆ. ಪ್ರಸ್ತುತ ಈ ಚಿತ್ರದ ಚಿತ್ರೀಕರಣ ಹೈದರಾಬಾದ್‌ನಲ್ಲಿ ನಡೆಯುತ್ತಿದೆ.
ರಾಮ್ ಚರಣ್ ಅಭಿನಯದ ಗೇಮ್ ಚೇಂಜರ್
ರಾಮ್‌ಚರಣ್ ಅವರ ಕೊನೆಯ ಚಿತ್ರ 'ಗೇಮ್ ಚೇಂಜರ್' ಹೀನಾಯವಾಗಿ ಸೋತಿತ್ತು. ರಾಜಕೀಯ ಥ್ರಿಲ್ಲರ್ ಆಗಿ ನಿರ್ಮಾಣವಾದ ಈ ಚಿತ್ರಕ್ಕೆ ಶಂಕರ್ ನಿರ್ದೇಶನ ಮಾಡಿದ್ದರು. ಸುಮಾರು 350 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಾಣವಾದ ಈ ಚಿತ್ರ 150 ಕೋಟಿ ರೂಪಾಯಿಗಿಂತ ಕಡಿಮೆ ಕಲೆಕ್ಷನ್ ಮಾಡಿ ಮಕಾಡೆ ಮಲಗಿತ್ತು. 'ಪೆದ್ದಿ' ನಂತರ ಪುಷ್ಪ 2 ನಿರ್ದೇಶಕ ಸುಕುಮಾರ್ ಅವರೊಂದಿಗೆ ರಾಮ್‌ಚರಣ್ ಚಿತ್ರ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.

ವಿಭಾಗ