ಕೈಗೆಟುಕುವ ದರದಲ್ಲಿ ಕನ್ನಡಿಗರಿಗೆ ಹೊಸ ಒಟಿಟಿ ಪರಿಚಯ, ಲೋಕಾರ್ಪಣೆ ಆಯ್ತು ಒಟಿಟಿ ಪ್ಲೇಯರ್
ಇತ್ತೀಚಿನ ದಿನಗಳಲ್ಲಿ ಚಿತ್ರಮಂದಿರಗಳಿಗೆ ಹೋಗಿ ಸಿನಿಮಾ ನೋಡುವವರ ಸಂಖ್ಯೆ ತುಂಬ ಕಡಿಮೆಯಾಗಿದೆ. ಇತ್ತ ಒಟಿಟಿ ಪ್ಲಾಟ್ ಫಾರ್ಮ್‌ಗಳಿಗೆ ಬೇಡಿಕೆ ಬಂದಿದೆ. ಚಿತ್ರಪ್ರೇಮಿಗಳ ಬೇಡಿಕೆಗೆ ಅನುಗುಣವಾಗಿ, ಸಾಕಷ್ಟು ಒಟಿಟಿ ವೇದಿಕೆಗಳು ಈಗಾಗಲೇ ನೋಡುಗರನ್ನು ರಂಜಿಸುತ್ತಿವೆ. ಇವೆಲ್ಲವುಗಳ ನಡುವೆಯೇ ಗ್ರಾಹಕ ಬಜೆಟ್ ಫ್ರೆಂಡ್ಲಿ ಒಟಿಟಿಯಾಗಿ ಒಟಿಟಿ ಪ್ಲೇಯರ್ ಪ್ರಾರಂಭವಾಗಿದೆ.
OTT Player Launched: ಕನ್ನಡದಲ್ಲಿ ಕನ್ನಡಿಗರದ್ದೇ ಆದ ಒಟಿಟಿ ವೇದಿಕೆ ಇಲ್ಲ. ಕೆಲವೊಂದಿಷ್ಟು ಒಟಿಟಿ ಇವೆಯಾದರೂ, ಅವುಗಳೂ ಇದೀಗ ಮಂಕಾಗಿವೆ. ಮತ್ತೊಂದೆಡೆ ಕನ್ನಡದ ಸಿನಿಮಾಗಳನ್ನು ದೈತ್ಯ ಒಟಿಟಿಗಳು ಖರೀದಿಸಲು ಮೀನಮೇಷ ಎಣಿಸುತ್ತಿವೆ. ಈ ನಡುವೆ, ಇದೀಗ ಕನ್ನಡದ ಸಿನಿಮಾ ಮೇಕರ್‌ಗಳಿಗೆ, ನಿರ್ಮಾಪಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿಯೇ ಹೊಸದೊಂದು ಒಟಿಟಿ ವೇದಿಕೆ ಲೋಕಾರ್ಪಣೆಗೊಂಡಿದೆ. ಅದರ ಹೆಸರು ಒಟಿಟಿ ಪ್ಲೇಯರ್.
ಇತ್ತೀಚಿನ ದಿನಗಳಲ್ಲಿ ಚಿತ್ರಮಂದಿರಗಳಿಗೆ ಹೋಗಿ ಸಿನಿಮಾ ನೋಡುವವರ ಸಂಖ್ಯೆ ತುಂಬ ಕಡಿಮೆಯಾಗಿದೆ. ಇತ್ತ ಒಟಿಟಿ ಪ್ಲಾಟ್ ಫಾರ್ಮ್‌ಗಳಿಗೆ ಬೇಡಿಕೆ ಬಂದಿದೆ. ಚಿತ್ರಪ್ರೇಮಿಗಳ ಬೇಡಿಕೆಗೆ ಅನುಗುಣವಾಗಿ, ಸಾಕಷ್ಟು ಒಟಿಟಿ ವೇದಿಕೆಗಳು ಈಗಾಗಲೇ ನೋಡುಗರನ್ನು ರಂಜಿಸುತ್ತಿವೆ. ಇವೆಲ್ಲವುಗಳ ನಡುವೆಯೇ ಗ್ರಾಹಕ ಬಜೆಟ್ ಫ್ರೆಂಡ್ಲಿ ಒಟಿಟಿಯಾಗಿ ಒಟಿಟಿ ಪ್ಲೇಯರ್ ಪ್ರಾರಂಭವಾಗಿದೆ. ಇದು ಆ್ಯಪ್ ಅಲ್ಲ, ಹಾರ್ಲೀ ಎಂಟರ್ ಟೈನ್ ಮೆಂಟ್ ಮೀಡಿಯಾ ಸಂಸ್ಥೆಯಡಿ ಗೀತಾ ಕೃಷ್ಣನ್ ರಾವ್ ಹಾಗೂ ಮುರಳಿರಾವ್ ಅವರು ಅಭಿವೃದ್ದಿಪಡಿಸಿರುವ ವೆಬ್ ಸೈಟ್. ಇದರ ಮೂಲಕ ಯಾವುದೇ ಅಡೆತಡೆಗಳಿಲ್ಲದೆ, ಜಾಹೀರಾತು ಮುಕ್ತವಾಗಿ ತಮ್ಮ ನೆಚ್ಚಿನ ಸಿನಿಮಾಗಳನ್ನು ವೀಕ್ಷಿಸಬಹುದಾಗಿದೆ.
ಈ ಹೊಸ ಒಟಿಟಿ ಬಗ್ಗೆ ಮಾಹಿತಿ ನೀಡಿದ ಈ ಸಂಸ್ಥೆಯ ನಿರ್ದೇಶಕ ಮುರಳಿರಾವ್, ಇದೊಂದು ಪ್ರಯೋಗ, ಪ್ರಯತ್ನ. ನಿರ್ಮಾಪಕರೊಬ್ಬರು ನಮ್ಮನ್ನು ಭೇಟಿ ಮಾಡಿ ತಮ್ಮ ಕಷ್ಟ ಹೇಳಿಕೊಂಡಾಗ ಈ ಆಲೋಚನೆ ಬಂತು. ಈಗ ಎಲ್ಲರೂ ಒಟಿಟಿಯಲ್ಲಿ ಚಿತ್ರ ಯಾವಾಗ ಬರುತ್ತೆ ಅಂತ ಕಾಯುತ್ತಾರೆ. ನಮ್ಮ ವೆಬ್‌ಸೈಟ್‌ಗೆ ಲಾಗಿನ್ ಆಗಿ ಅಲ್ಪದರ ಪಾವತಿಸಿ ಹೊಸ ಚಿತ್ರಗಳನ್ನು ನೋಡಬಹುದು. ಇದನ್ನು ಆನ್‌ಲೈನ್ ಥೇಟರ್ ಅನ್ನಬಹುದು. ಬಂದ ಹಣದಲ್ಲಿ ನಿರ್ಮಾಪಕರಿಗೆ 70% ಶೇರ್ ಕೊಡುತ್ತೇವೆ. ಅಲ್ಲದೆ ಉತ್ತಮ ಕಿರು ಚಿತ್ರಗಳನ್ನು ಕೂಡ ನಮ್ಮ ವೆಬ್‌ಸೈಟ್‌ನಲ್ಲಿ ಹಾಕುತ್ತೇವೆ ಎಂದು ವಿವರಿಸಿದರು.
ಹಿರಿಯ ನಿರ್ದೇಶಕ, ನಿರ್ಮಾಪಕ ಓಂ ಸಾಯಿಪ್ರಕಾಶ್ ಮಾತನಾಡಿ, ರೆಗ್ಯುಲರ್ ಒಟಿಟಿಗಿಂತ ಇದು ವಿಭಿನ್ನವಾಗಿದೆ. ಎಲ್ಲಾ ಭಾಷೆಯ ಚಿತ್ರಗಳನ್ನು ನೋಡುವ ಅವಕಾಶ ಸಿಗುತ್ತದೆ. ಯಾವುದೇ ಹೊಸ ಸಿನಿಮಾ ಬಂದ ಕೂಡಲೇ ನಾನು ನೋಡುತ್ತೇನೆ. ಇದೊಂದು ಬಂಟಿಂಗ್ ಸ್ಟೇಜ್, ನಂತರ ಸಕ್ಸಸ್ ಆಗುತ್ತದೆ. ಇದರ ಬಗ್ಗೆ ಕ್ರೇಜ್ ಹುಟ್ಟಬೇಕಂದ್ರೆ ಒಳ್ಳೊಳ್ಳೆ ಸಿನಿಮಾ ಬರಬೇಕು ಎಂದು ಹೇಳಿದರು. ಹಿರಿಯ ನಿರ್ಮಾಪಕ ಚಿನ್ನೇಗೌಡ್ರು ಮಾತನಾಡಿ, ಇಂಥ ಪ್ರಯತ್ನಗಳು ನಡೆದರೆ ಬಡ ನಿರ್ಮಾಪಕರಿಗೆ ಒಂದಷ್ಟು ಅನುಕೂಲವಾಗುತ್ತದೆ ಎಂದು ಹೇಳಿದರು.