New OTT Release: ಈ ವಾರ ಒಟಿಟಿಯಲ್ಲಿ ಬಿಡುಗಡೆಯಾಗುವ ಹೊಸ ಕನ್ನಡ, ತೆಲುಗು, ತಮಿಳು, ಮಲಯಾಳಂ ಸಿನಿಮಾಗಳ ವಿವರ
New OTT Release This Week: ಈ ವಾರ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್, ಜೀ5, ಜಿಯೋಹಾಟ್‌ಸ್ಟಾರ್ ಇತ್ಯಾದಿ ಒಟಿಟಿಗಳಲ್ಲಿ ಕನ್ನಡ, ತೆಲುಗು, ಮಲಯಾಳಂ, ತಮಿಳು ಸಿನಿಮಾಗಳು ಬಿಡುಗಡೆಯಾಗಲಿವೆ. ಮಝಾಕ, ಯುಐ, ಅನ್ಪೋಡಿ ಕಣ್ಮಣಿ ಸೇರಿದಂತೆ ಈ ವಾರ ಬಿಡುಗಡೆಯಾಗುವ (ಕೆಲವು ಬಿಡುಗಡೆಯಾಗಿವೆ) ಹೊಸ ಒಟಿಟಿ ಸಿನಿಮಾಗಳ ವಿವರ ಇಲ್ಲಿದೆ.

New OTT Release This Week: ದಕ್ಷಿಣ ಭಾರತದ ಸಿನಿಮಾಗಳನ್ನು ನೋಡಲು ದೇಶ ವಿದೇಶಗಳ ಒಟಿಟಿ ವೀಕ್ಷಕರು ಕಾಯುತ್ತಿರುತ್ತಾರೆ. ಈ ವಾರ ಅಂದರೆ ಮಾರ್ಚ್ 23ರಿಂದ ಮಾರ್ಚ್ 30ರ ತನಕ ಹಲವು ಸಿನಿಮಾಗಳು ಒಟಿಟಿಯಲ್ಲಿ ಬಿಡುಗಡೆಯಾಗಲಿವೆ. ಈ ವಾರ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್, ಜೀ5, ಜಿಯೋಹಾಟ್‌ಸ್ಟಾರ್ ಇತ್ಯಾದಿ ಒಟಿಟಿಗಳಲ್ಲಿ ಕನ್ನಡ, ತೆಲುಗು, ಮಲಯಾಳಂ, ತಮಿಳು ಸಿನಿಮಾಗಳು ಬಿಡುಗಡೆಯಾಗಲಿವೆ. ಮಝಾಕ, ಯುಐ, ಅನ್ಪೋಡಿ ಕಣ್ಮಣಿ ಸೇರಿದಂತೆ ಈ ವಾರದ ಒಟಿಟಿ ಸಿನಿಮಾಗಳ ವಿವರ ಇಲ್ಲಿದೆ.
ಅನ್ಪೋದ್ ಕಣ್ಮಣಿ (ಮಲಯಾಳಂ)
ಈ ಮಲಯಾಳಂ ಸಿನಿಮಾ ಅಮೆಜಾನ್ ಪ್ರೈಮ್ ವಿಡಿಯೋ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ. ಈ ವರ್ಷ ಬಿಡುಗಡೆಯಾಗುತ್ತಿರುವ ಅರ್ಜುನ್ ಅಶೋಕನ್ ಅವರ ಮೂರನೇ ಸಿನಿಮಾ ಇದಾಗಿದೆ. ಈ ಚಿತ್ರದಲ್ಲಿ ಅನಘಾ ನಾರಾಯಣನ್ ನಾಯಕಿಯಾಗಿ ನಟಿಸಿದ್ದಾರೆ. ಈ ಸಿನಿಮಾ ಮಾರ್ಚ್ 26ರಂದು ಒಟಿಟಿಯಲ್ಲಿ ಬಿಡುಗಡೆಯಾಗಲಿದೆ.
ಮಝಾಕ (ತೆಲುಗು)
ಜೀ5 ಒಟಿಟಿಯಲ್ಲಿ ಮಝಾಕ ಎಂಬ ತೆಲುಗು ಸಿನಿಮಾ ಬಿಡುಗಡೆಯಾಗಲಿದೆ. ಇದು ಮಾರ್ಚ್ 28ರಂದು ಬಿಡುಗಡೆಯಾಗಲಿದೆ. ಇದು ಸಂದೀಪ್ ಕಿಶಾನ್ ಮುಖ್ಯ ಪಾತ್ರದಲ್ಲಿ ನಟಿಸಿರುವ ರೊಮ್ಯಾಂಟಿಕ್ ಕಾಮಿಡಿ ಸಿನಿಮಾವಾಗಿದೆ. ಈ ಸಿನಿಮಾದಲ್ಲಿ ರಿತು ವರ್ಮಾ ಮತ್ತು ರಾವ್ ರಮೇಶ್ ಕೂಡ ನಟಿಸಿದ್ದಾರೆ. ತ್ರಿನಾದ ರಾವ್ ನಿರ್ದೇಶನದ ಈ ಸಿನಿಮಾದಲ್ಲಿ ಅಪ್ಪ ಮತ್ತು ಮಗ ಒಂದೇ ಕುಟುಂಬದ ಮಹಿಳೆಯರ ಪ್ರೇಮಕ್ಕೆ ಬೀಳುವ ಕಥೆಯಿದೆ.
ಮಿಸ್ಟರ್ ಹೌಸ್ ಕೀಪಿಂಗ್ (ತಮಿಳು)
ಆಹಾ ತಮಿಳು ಒಟಿಟಿಯಲ್ಲಿ ಈ ತಮಿಳು ಸಿನಿಮಾ ಮಾರ್ಚ್ 25ರಂದು ಬಿಡುಗಡೆಯಾಗಲಿದೆ. ಇದು ರೊಮ್ಯಾಂಟಿಕ್ ಕಾಮಿಡಿ ಸಿನಿಮಾ. ಹರಿ ಭಾಸ್ಕರ್‌ಮತ್ತು ಹರಿ ಭಾಸ್ಕರ್ ಮತ್ತು ಲೋಸ್ಲಿಯಾ ಮರಿಯನ್ಸನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅರುಣ್ ರವಿಚಂದ್ರನ್ ನಿರ್ದೇಶನವಿರುವ ಈ ಚಿತ್ರದಲ್ಲಿ ಇಲವರಸು, ಶಾರಾ ಮತ್ತು ರಾಯನ್ ಕೂಡ ನಟಿಸಿದ್ದಾರೆ.
ಅಘಾಟಿಯಾ
ಸನ್‌ನೆಕ್ಸ್ಟ್ ಒಟಿಟಿಯಲ್ಲಿ ಮಾರ್ಚ್ 28ರಂದು ಈ ಸಿನಿಮಾ ಬಿಡುಗಡೆಯಾಗಲಿದೆ. ಫ್ಯಾಂಟಸಿ, ಹಾರರ್ ಮತ್ತು ಸಾಹಸಮಯ ಅಂಶಗಳನ್ನು ಒಳಗೊಂಡಿರುವ ತಮಿಳು ಸಿನಿಮಾ ಇದಾಗಿದೆ. ಜೀವ ಇಲ್ಲಿ ಡಬಲ್ ಆಕ್ಟಿಂಗ್‌ಮಾಡಿದ್ದಾರೆ. ಗೀತರಚನೆಕಾರ ಪಾ ವಿಜಯ್ ಅವರ ಮೂರನೇ ನಿರ್ದೇಶನದ ಸಿನಿಮಾ ಇದಾಗಿದೆ. ಅರ್ಜುನ್ ಸರ್ಜಾ ಮತ್ತು ರಾಶಿ ಖನ್ನಾ ಇತರ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
