New Year OTT Movies: ಹೊಸ ವರ್ಷದ ಮೊದಲ ವಾರ ಒಟಿಟಿಯಲ್ಲಿ ಸಾಲು ಸಾಲು ಸಿನಿಮಾ, ವೆಬ್‌ಸಿರೀಸ್‌ಗಳು; ಇಲ್ಲಿದೆ ಫುಲ್‌ ಲಿಸ್ಟ್‌
ಕನ್ನಡ ಸುದ್ದಿ  /  ಮನರಂಜನೆ  /  New Year Ott Movies: ಹೊಸ ವರ್ಷದ ಮೊದಲ ವಾರ ಒಟಿಟಿಯಲ್ಲಿ ಸಾಲು ಸಾಲು ಸಿನಿಮಾ, ವೆಬ್‌ಸಿರೀಸ್‌ಗಳು; ಇಲ್ಲಿದೆ ಫುಲ್‌ ಲಿಸ್ಟ್‌

New Year OTT Movies: ಹೊಸ ವರ್ಷದ ಮೊದಲ ವಾರ ಒಟಿಟಿಯಲ್ಲಿ ಸಾಲು ಸಾಲು ಸಿನಿಮಾ, ವೆಬ್‌ಸಿರೀಸ್‌ಗಳು; ಇಲ್ಲಿದೆ ಫುಲ್‌ ಲಿಸ್ಟ್‌

OTT Releases This Week: ಹೊಸ ವರ್ಷದ ಪ್ರಯುಕ್ತ ಒಟಿಟಿಯಲ್ಲಿ ಸಾಲು ಸಾಲು ಹಾಲಿವುಡ್‌ ಮತ್ತು ಭಾರತೀಯ ಸಿನಿಮಾ, ವೆಬ್‌ಸಿರೀಸ್‌ಗಳು ಬಿಡುಗಡೆ ಆಗುತ್ತಿವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದ ಸಿನಿಮಾಗಳೂ ಈ ವಾರ ಒಟಿಟಿ ಅಂಗಳ ಪ್ರವೇಶಿಸುತ್ತಿವೆ. ಅಂಥ ಸಿನಿಮಾ ಮತ್ತು ವೆಬ್‌ಸಿರೀಸ್‌ಗಳ ಕುರಿತ ಮಾಹಿತಿ ಇಲ್ಲಿದೆ.

ಈ ವಾರ ಒಟಿಟಿಯಲ್ಲಿ ಸಾಲು ಸಾಲು ಸಿನಿಮಾ, ವೆಬ್‌ಸಿರೀಸ್‌ಗಳು
ಈ ವಾರ ಒಟಿಟಿಯಲ್ಲಿ ಸಾಲು ಸಾಲು ಸಿನಿಮಾ, ವೆಬ್‌ಸಿರೀಸ್‌ಗಳು (IMDb)

New Year OTT Movies: ಚಿತ್ರಮಂದಿರಗಳಲ್ಲಿ ಸ್ಟಾರ್‌ ಸಿನಿಮಾಗಳ ಹಬ್ಬ ನಡೆಯುತ್ತಿದೆ. ರಿಯಲ್‌ ಸ್ಟಾರ್‌ ಉಪೇಂದ್ರ ಅವರ UI ಸಿನಿಮಾ ಇಂದಿಗೂ ತನ್ನ ಓಟವನ್ನು ಮುಂದುವರಿಸಿದರೆ, ಇತ್ತ ಅದಾದ ಮೇಲೆ ತೆರೆಗೆ ಬಂದ ಕಿಚ್ಚ ಸುದೀಪ್‌ ಅವರ ಮ್ಯಾಕ್ಸ್‌ ಸಿನಿಮಾ ಕಲೆಕ್ಷನ್‌ನಲ್ಲಿ ಕಿಂಗ್‌ ಎನಿಸಿಕೊಳ್ಳುತ್ತಿದೆ. ಈ ಸಿನಿಮಾಗಳ ನಡುವೆ ಕರ್ನಾಟಕದಲ್ಲಿ ಪರಭಾಷೆಯ ಸಿನಿಮಾಗಳೂ ಬಿಡುಗಡೆ ಆಗಿ ಸದ್ದು ಮಾಡುತ್ತಿವೆ. ಇದು ಚಿತ್ರಮಂದಿರದ ಕಥೆಯಾದರೆ, ಹೊಸ ವರ್ಷದ ಸಂದರ್ಭದಲ್ಲಿ ಒಟಿಟಿಯಲ್ಲಿಯೂ ಒಂದಷ್ಟು ಹೊಸ ಹೊಸ ಕಂಟೆಂಟ್‌ಗಳು ಆಗಮಿಸುತ್ತಿವೆ. ಆ ಸಿನಿಮಾ ಮತ್ತು ವೆಬ್‌ಸಿರೀಸ್‌ಗಳು ಯಾವವು? ಹೀಗಿದೆ ಮಾಹಿತಿ.

ಒಂದಷ್ಟು ಸಿನಿಮೋತ್ಸವಗಳಲ್ಲಿ ಭಾಗವಹಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡ ಆಲ್‌ ವಿ ಇಮ್ಯಾಜಿನ್‌ ಆಸ್‌ ಲೈಟ್‌ ಸಿನಿಮಾ ಜನವರಿ 3ರಂದು ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆ ಆಗುತ್ತಿದೆ. ಈ ಸಿನಿಮಾವನ್ನು ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಕೂಡ ಮೆಚ್ಚಿಕೊಂಡಿದ್ದಾರೆ. ಕನಿ ಕುಶ್ರುತಿ ಮತ್ತು ದಿವ್ಯ ಪ್ರಭಾ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಸಿನಿಮಾ, ಮುಂಬೈನ ಇಬ್ಬರು ನರ್ಸ್‌ಗಳ ಕಥೆಯನ್ನು ಆಧರಿಸಿದೆ. ಈ ಸಿನಿಮಾದ ಜತೆಗೆ ಹಾಲಿವುಡ್‌ನ ಗ್ಲಾಡಿಯೇಟರ್ 2 ಜೊತೆಗೆ ಇನ್ನೂ ಹಲವು ಇಂಗ್ಲಿಷ್ ಸಿನಿಮಾ, ವೆಬ್‌ಸಿರೀಸ್‌ಗಳು ಡಿಜಿಟಲ್‌ ಸ್ಟ್ರೀಮಿಂಗ್ ಆಗಲಿವೆ.

ಅಮೆಜಾನ್ ಪ್ರೈಮ್ ವಿಡಿಯೋ ಒಟಿಟಿ

  • ಗ್ಲಾಡಿಯೇಟರ್ 2 - ಜನವರಿ 1
  • ಬೀಸ್ಟ್ ಗೇಮ್ಸ್ ಶೋ (ಸಂಚಿಕೆ 4) - ಜನವರಿ 2
  • ದಿ ರಿಗ್ (ವೆಬ್ ಸೀರೀಸ್) - ಜನವರಿ 2
  • ಗುಣ ಸೀಸನ್ 2 (ವೆಬ್ ಸರಣಿ) - ಜನವರಿ 3

ನೆಟ್‌ಫ್ಲಿಕ್ಸ್ ಒಟಿಟಿ

  • ಅವಿಸ್: ಐ ಆಮ್‌ ಟಿಮ್ (ಸಾಕ್ಷ್ಯಚಿತ್ರ) – ಡಿಸೆಂಬರ್ 31
  • ಡೋಂಟ್‌ ಡೈ: ದಿ ಮ್ಯಾನ್‌ ಹೂ ವಾಂಟ್ಸ್‌ ಟು ಲೀವ್‌ ಫಾರೆವರ್‌ - ಜನವರಿ 1
  • ಫ್ಯಾಮಿಲಿ ಕ್ಯಾಂಪ್‌- ಜನವರಿ 1
  • ರಿಯೂನಿಯನ್‌- ಜನವರಿ 1
  • ಲವ್ ಈಸ್ ಬ್ಲೈಂಡ್ (ವೆಬ್ ಸೀರೀಸ್) - ಜನವರಿ 1
  • ಮಿಸ್ಸಿಂಗ್ ಯು (ವೆಬ್ ಸೀರೀಸ್) – ಜನವರಿ 1
  • ದಿ ಬ್ಲಾಕ್‌ ಸ್ವಿಂಡ್ಲರ್‌ - ಜನವರಿ 1
  • ಸೆಲ್ಲಿಂಗ್‌ ದಿ ಸಿಟಿ (ವೆಬ್ ಸರಣಿ) - ಜನವರಿ 3
  • ವೆನ್ ದಿ ಸ್ಟಾರ್ಸ್ ಗಾಸಿಪ್ (ವೆಬ್ ಸೀರೀಸ್) - ಜನವರಿ 4

ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಒಟಿಟಿ

  • ಆಲ್‌ ವಿ ಇಮ್ಯಾಜಿನ್‌ ಆಸ್‌ ಲೈಟ್‌ - ಜನವರಿ 3

ಮನೋರಮಾ ಮ್ಯಾಕ್ಸ್ ಒಟಿಟಿ

  • ಐ ಆಮ್‌ ಕಥಲನ್ (ಮಲಯಾಳಂ) - ಜನವರಿ 1

ಲಯನ್ಸ್‌ ಗೇಟ್‌ ಪ್ಲೇ ಒಟಿಟಿ

  • ಡೇಂಜರಸ್‌ ವಾಟರ್‌ - ಜನವರಿ 3
  • ಟೈಗರ್‌ ಟ್ರಿಗರ್- ಜನವರಿ 3

ಬುಕ್ ಮೈ ಶೋ ಒಟಿಟಿ

  • ಕ್ರಿಸ್ಮಸ್ ಈವ್‌ ಇನ್ ಮಿಲ್ಲರ್ಸ್ ಪಾಯಿಂಟ್‌- ಡಿಸೆಂಬರ್ 30

ಆಹಾ ಒಟಿಟಿ

  • ಜಾಲಿ ಓ ಜಿಮ್ಖಾನಾ (ತಮಿಳು ಚಲನಚಿತ್ರ) - ಡಿಸೆಂಬರ್ 30

                                            ---

ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ

2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ. kannada.hindustantimes.com/astrology/yearly-horoscope

Whats_app_banner