ಈ ದಿನದಿಂದ ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆಗಲಿದೆ ನಿತ್ಯಾ ಮೆನನ್ ನಟನೆಯ ತಮಿಳಿನ ಕಾದಲಿಕ್ಕ ನೆರಮಿಲ್ಲೈ ಸಿನಿಮಾ; ಕನ್ನಡದಲ್ಲೂ ವೀಕ್ಷಣೆಗೆ ಲಭ್ಯ
ಕನ್ನಡ ಸುದ್ದಿ  /  ಮನರಂಜನೆ  /  ಈ ದಿನದಿಂದ ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆಗಲಿದೆ ನಿತ್ಯಾ ಮೆನನ್ ನಟನೆಯ ತಮಿಳಿನ ಕಾದಲಿಕ್ಕ ನೆರಮಿಲ್ಲೈ ಸಿನಿಮಾ; ಕನ್ನಡದಲ್ಲೂ ವೀಕ್ಷಣೆಗೆ ಲಭ್ಯ

ಈ ದಿನದಿಂದ ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆಗಲಿದೆ ನಿತ್ಯಾ ಮೆನನ್ ನಟನೆಯ ತಮಿಳಿನ ಕಾದಲಿಕ್ಕ ನೆರಮಿಲ್ಲೈ ಸಿನಿಮಾ; ಕನ್ನಡದಲ್ಲೂ ವೀಕ್ಷಣೆಗೆ ಲಭ್ಯ

Kadhalikka Neramillai OTT: ಕಾದಲಿಕ್ಕ ನೆರಮಿಲ್ಲೈ ಒಟಿಟಿಗೆ ಆಗಮಿಸಲು ಸಜ್ಜಾಗಿದೆ. ನಿತ್ಯಾ ಮೆನನ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಈ ಚಿತ್ರದಲ್ಲಿ ಜಯಂ ರವಿ ನಾಯಕನಾಗಿ ನಟಿಸಿದ್ದಾರೆ. ಮೂಲ ತಮಿಳು ಮಾತ್ರವಲ್ಲದೆ, ಕನ್ನಡದಲ್ಲಿಯೂ ಈ ಸಿನಿಮಾ ವೀಕ್ಷಿಸಬಹುದಾಗಿದೆ.

Romantic Comedy OTT:  ಈ ದಿನದಿಂದ ಸ್ಟ್ರೀಮಿಂಗ್‌ ಆಗಲಿದೆ ನಿತ್ಯಾ ಮೆನನ್ ನಟನೆಯ ತಮಿಳಿನ ಕಾದಲಿಕ್ಕ ನೆರಮಿಲ್ಲೈ ಸಿನಿಮಾ; ಕನ್ನಡದಲ್ಲೂ ನೋಡಬಹುದು
Romantic Comedy OTT: ಈ ದಿನದಿಂದ ಸ್ಟ್ರೀಮಿಂಗ್‌ ಆಗಲಿದೆ ನಿತ್ಯಾ ಮೆನನ್ ನಟನೆಯ ತಮಿಳಿನ ಕಾದಲಿಕ್ಕ ನೆರಮಿಲ್ಲೈ ಸಿನಿಮಾ; ಕನ್ನಡದಲ್ಲೂ ನೋಡಬಹುದು

Kadhalikka Neramillai OTT: ಕಾಲಿವುಡ್‌ ನಟ ಜಯಂ ರವಿ ಮತ್ತು ನಿತ್ಯಾ ಮೆನನ್‌ ಮುಖ್ಯಭೂಮಿಕೆಯಲ್ಲಿ ನಟಿಸಿರುವ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ ಕಾದಲಿಕ್ಕ ನೆರಮಿಲ್ಲೈ, ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಪ್ರೇಕ್ಷಕರ ಮೆಚ್ಚುಗೆ ಪಡೆದಿತ್ತು. ಜನವರಿ 14ರಂದು ಸಂಕ್ರಾಂತಿ ಹಬ್ಬದ ಪ್ರಯುಕ್ತ ತೆರೆಕಂಡಿದ್ದ ಈ ಸಿನಿಮಾದಲ್ಲಿ ಪ್ರಸ್ತುತ ಕಾಲಘಟ್ಟದ ಸಂಬಂಧಗಳ ಬಗ್ಗೆ ಬೆಳಕು ಚೆಲ್ಲಲಾಗಿತ್ತು. ಇದೀಗ ಇದೇ ಸಿನಿಮಾ ಒಟಿಟಿಗೆ ಆಗಮಿಸುತ್ತಿದೆ.

ಕಾದಲಿಕ್ಕ ನೆರಮಿಲ್ಲೈ ಸಿನಿಮಾ ನಾಳೆ (ಫೆಬ್ರವರಿ 11) ನೆಟ್‌ಫ್ಲಿಕ್ಸ್‌ ಒಟಿಟಿ ವೇದಿಕೆಯಲ್ಲಿ ಸ್ಟ್ರೀಮ್ ಆಗಲಿದೆ. ಮೂಲ ತಮಿಳಿನ ಜತೆತೆ ತೆಲುಗು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿಯೂ ಈ ಸಿನಿಮಾ ವೀಕ್ಷಣೆಗೆ ಲಭ್ಯ ಇರಲಿದೆ. ಈ ವಿಚಾರವನ್ನು ಸ್ವತಃ ನೆಟ್‌ಫ್ಲಿಕ್ಸ್‌ ಒಟಿಟಿ ಖಚಿತಪಡಿಸಿದೆ. ಚಿತ್ರಮಂದಿರಗಳಲ್ಲಿ ತಮಿಳು ಭಾಷೆಯಲ್ಲಿ ಮಾತ್ರ ಬಿಡುಗಡೆಯಾದ ಕಾದಲಕ್ಕ ನೆರಮಿಲ್ಲೈ ಚಿತ್ರವು ಒಟಿಟಿಯಲ್ಲಿ ಐದು ಭಾಷೆಗಳಲ್ಲಿ ಬಿಡುಗಡೆ ಆಗುವುದರಿಂದ, ಹೆಚ್ಚು ವೀಕ್ಷಣೆ ಪಡೆಯುವ ಸಾಧ್ಯತೆಯಿದೆ.

ಐವಿಎಎಫ್‌ ಕುರಿತ ಸಿನಿಮಾ

ಕಾದಲಿಕ್ಕ ನೆರಮಿಲ್ಲೈ ಸಿನಿಮಾ ಚಿತ್ರಮಂದಿರಗಳಲ್ಲಿ ತೆರೆಕಂಡು ಕೇವಲ ನಾಲ್ಕು ವಾರಗಳಲ್ಲಿ ಒಟಿಟಿಗೆ ಬರಲು ಸಜ್ಜಾಗಿದೆ. ಜನವರಿ 14 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಚಿತ್ರ ಇದೀಗ ಒಟಿಟಿಗೆ ಬರಲು ರೆಡಿಯಾಗಿದೆ. ಕಾದಲಿಕ್ಕ ನೆರಮಿಲ್ಲೈ ಚಿತ್ರವನ್ನು ಕೃತಿಕಾ ಉದಯನಿಧಿ ನಿರ್ದೇಶಿಸಿದ್ದಾರೆ. ಈ ಚಿತ್ರವು ಹಾಸ್ಯ ಮತ್ತು ಪ್ರಸ್ತುತ ಪೀಳಿಗೆಯ ಸಂಬಂಧಗಳ ಮಿಶ್ರಣವಾಗಿದೆ. ಇಡೀ ಸಿನಿಮಾ ಐವಿಎಎಫ್‌ನಲ್ಲಿನ ಅವ್ಯವಸ್ಥೆ ಮತ್ತು ನಂತರದ ಬಂಧಗಳ ಸುತ್ತ ಸುತ್ತುತ್ತದೆ. ಚಿತ್ರದಲ್ಲಿ ಜಯಂ ರವಿ, ನಿತ್ಯಾ, ಯೋಗಿ ಬಾಬು, ಲಾಲ್, ವಿನಯ್ ರಾಯ್, ಜಾನ್ ಕೊಕ್ಕನ್, ಟಿಜೆ ಭಾನು, ಲಕ್ಷ್ಮಿ ರಾಮಕೃಷ್ಣನ್ ಮತ್ತು ವಿನೋದಿನಿ ಪ್ರಮುಖ ಪಾತ್ರಗಳಲ್ಲಿದ್ದಾರೆ.

ಆಸ್ಕರ್ ಪ್ರಶಸ್ತಿ ವಿಜೇತ ಎಆರ್ ರೆಹಮಾನ್ ಅವರ ಸಂಗೀತ ಕಾದಲಿಕ್ಕ ನೆರಮಿಲ್ಲೈ ಚಿತ್ರಕ್ಕಿದೆ. ರೆಡ್ ಜೈಂಟ್ಸ್ ಮೂವೀಸ್ ಬ್ಯಾನರ್ ಅಡಿಯಲ್ಲಿ ಉದಯನಿಧಿ ಸ್ಟಾಲಿನ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಗವೆಮಿಕ್ ಆರಿ ಅವರ ಛಾಯಾಗ್ರಹಣ, ಲಾರೆನ್ಸ್ ಕಿಶೋರ್ ಸಂಕಲನ ಚಿತ್ರಕ್ಕಿದೆ.

ಇತ್ತೀಚೆಗೆ ಒಟಿಟಿಯಲ್ಲಿ ಬಿಡುಗಡೆ ಆದ ಕೆಲವು ಸಿನಿಮಾಗಳು

1. Mrs

ಬಿಡುಗಡೆ ದಿನಾಂಕ: ಫೆಬ್ರವರಿ 7, 2025

OTT ಪ್ಲಾಟ್‌ಫಾರ್ಮ್: Zee5

 

2. ದಿ ಮೆಹ್ತಾ ಬಾಯ್ಸ್

ಬಿಡುಗಡೆ ದಿನಾಂಕ: ಫೆಬ್ರವರಿ 7, 2025

OTT ಪ್ಲಾಟ್‌ಫಾರ್ಮ್: ಅಮೆಜಾನ್ ಪ್ರೈಮ್ ವಿಡಿಯೋ

 

3. ಬಡಾ ನಾಮ್ ಕರೆಂಗೆ

ಬಿಡುಗಡೆ ದಿನಾಂಕ: ಫೆಬ್ರವರಿ 7, 2025

OTT ಪ್ಲಾಟ್‌ಫಾರ್ಮ್: SonyLIV

 

4. ದಿ ಗ್ರೇಟೆಸ್ಟ್‌ ರೈವರ್ಲಿ: ಭಾರತ vs ಪಾಕಿಸ್ತಾನ

ಬಿಡುಗಡೆ ದಿನಾಂಕ: ಫೆಬ್ರವರಿ 7, 2025

OTT ಪ್ಲಾಟ್‌ಫಾರ್ಮ್: ನೆಟ್‌ಫ್ಲಿಕ್ಸ್

 

5. ಬೇಬಿ ಜಾನ್

ಬಿಡುಗಡೆ ದಿನಾಂಕ: ಫೆಬ್ರವರಿ 5, 2025

OTT ಪ್ಲಾಟ್‌ಫಾರ್ಮ್: ನೆಟ್‌ಫ್ಲಿಕ್ಸ್

 

6. ದೇವಕಿ ನಂದನ ವಾಸುದೇವ

ಬಿಡುಗಡೆ ದಿನಾಂಕ: ಫೆಬ್ರವರಿ 8, 2025

OTT ಪ್ಲಾಟ್‌ಫಾರ್ಮ್: ಡಿಸ್ನಿ + ಹಾಟ್‌ಸ್ಟಾರ್

 

7. 35 ಚಿನ್ನ ವಿಷಯಂ ಇಲ್ಲ

ಬಿಡುಗಡೆ ದಿನಾಂಕ: ಫೆಬ್ರವರಿ 7, 2025

OTT ಪ್ಲಾಟ್‌ಫಾರ್ಮ್: SUNNXT

 

8. ಗೇಮ್ ಚೇಂಜರ್

ಬಿಡುಗಡೆ ದಿನಾಂಕ: ಫೆಬ್ರವರಿ 7, 2025

OTT ಪ್ಲಾಟ್‌ಫಾರ್ಮ್: ಅಮೆಜಾನ್ ಪ್ರೈಮ್ ವಿಡಿಯೋ

 

9. ಮದ್ರಾಸ್ಕರನ್

ಬಿಡುಗಡೆ ದಿನಾಂಕ: ಫೆಬ್ರವರಿ 7, 2025

OTT ಪ್ಲಾಟ್‌ಫಾರ್ಮ್: ಆಹಾ ತಮಿಳು

 

10. ಡಾಕು ಮಹಾರಾಜ್ (ಮುಂಬರುವ ಸಿನಿಮಾ)

ಬಿಡುಗಡೆ ದಿನಾಂಕ: ಫೆಬ್ರವರಿ 9, 2025

OTT ಪ್ಲಾಟ್‌ಫಾರ್ಮ್: ನೆಟ್‌ಫ್ಲಿಕ್ಸ್

 

11. ಮರ್ಯಾದೆ ಪ್ರಶ್ನೆ

ಬಿಡುಗಡೆ ದಿನಾಂಕ: ಫೆಬ್ರವರಿ 7, 2025

OTT ಪ್ಲಾಟ್‌ಫಾರ್ಮ್: ಅಮೆಜಾನ್‌ ಪ್ರೈಂ ವಿಡಿಯೋ

 

 

Whats_app_banner