ತೆಲುಗಿಗೂ ಕಾಲಿಟ್ಟ ನಿವೇದಿತಾ ಗೌಡ; ಸದ್ಯದಲ್ಲೇ ರಿಲೀಸ್‌ ಆಗಲಿದೆ ರೊಮ್ಯಾಂಟಿಕ್ ಸಾಂಗ್‌
ಕನ್ನಡ ಸುದ್ದಿ  /  ಮನರಂಜನೆ  /  ತೆಲುಗಿಗೂ ಕಾಲಿಟ್ಟ ನಿವೇದಿತಾ ಗೌಡ; ಸದ್ಯದಲ್ಲೇ ರಿಲೀಸ್‌ ಆಗಲಿದೆ ರೊಮ್ಯಾಂಟಿಕ್ ಸಾಂಗ್‌

ತೆಲುಗಿಗೂ ಕಾಲಿಟ್ಟ ನಿವೇದಿತಾ ಗೌಡ; ಸದ್ಯದಲ್ಲೇ ರಿಲೀಸ್‌ ಆಗಲಿದೆ ರೊಮ್ಯಾಂಟಿಕ್ ಸಾಂಗ್‌

ನಿವೇದಿತಾ ಗೌಡ ತಮ್ಮ ಅಭಿಮಾನಿಗಳಿಗೆ ಹೊಸ ಅಪ್ಡೇಟ್‌ ನೀಡಿದ್ದಾರೆ. ನಿವೇದಿತಾ ಗೌಡ ತೆಲುಗು ಹಾಗೂ ಕನ್ನಡದಲ್ಲಿ ಸದ್ಯದಲ್ಲೇ ರಿಲೀಸ್‌ ಆಗಲಿರುವ ರೊಮ್ಯಾಂಟಿಕ್, ಲವ್ ಸಾಂಗ್ ಒಂದರ ಪೋಸ್ಟರ್ ಹಂಚಿಕೊಂಡಿದ್ದಾರೆ.

ತೆಲುಗಿಗೂ ಕಾಲಿಟ್ಟ ನಿವೇದಿತಾ ಗೌಡ
ತೆಲುಗಿಗೂ ಕಾಲಿಟ್ಟ ನಿವೇದಿತಾ ಗೌಡ

ಬಿಗ್‌ ಬಾಸ್‌ ಮತ್ತು ರೀಲ್ಸ್‌ಗಳಿಂದ ಪ್ರಸಿದ್ಧರಾಗಿರುವ ನಿವೇದಿತಾ ಗೌಡ ತಮ್ಮ ಅಭಿಮಾನಿಗಳಿಗೆ ಹೊಸ ಅಪ್ಡೇಟ್‌ ನೀಡಿದ್ದಾರೆ. ನಿವೇದಿತಾ ಗೌಡ ಅವರು ಹೊಸದಾಗಿ ತಮ್ಮ ನಟನೆಯ ಸಾಂಗ್ ಒಂದು ರಿಲೀಸ್‌ ಆಗಿಲಿದೆ ಎಂಬ ಸೂಚನೆ ನೀಡಿದ್ದಾರೆ. ಅದರ ಪೋಸ್ಟರ್‌ಅನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ವಾಲು ಕಲ್ಲತೊ (ತೆಲುಗು) ಮನಸಾರೆ ನಿನ್ನ (ಕನ್ನಡ) ಪೋಸ್ಟರ್‌ಗಳನ್ನು ಶೇರ್ ಮಾಡಿದ್ದಾರೆ. ಸಾಕಷ್ಟು ಜನ ಅವರು ಹಂಚಿಕೊಂಡ ಪೋಸ್ಟರ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ.

ತೆಲುಗು ನಟ ಗೌರಿ ನಾಯ್ಡು ಜೊತೆ ನಿವೇದಿತಾ ಗೌಡ ಕಾಣಿಸಿಕೊಂಡಿದ್ದಾರೆ. ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಹಾಡು ರಿಲೀಸ್‌ ಆಗಲಿದೆ ಎಂದು ತಿಳಿಸಿದ್ದಾರೆ. ಭಾವನೆ ಹಾಗೂ ಪ್ರೀತಿಯ ಮಿಶ್ರಣದ ಈ ಸೊಗಸಾದ ಹಾಡಿಗೆ ನೀವೂ ಜೊತೆಯಾಗಿ ಎಂದು ಬರೆದುಕೊಂಡಿದ್ದಾರೆ. ಈ ಹಿಂದೆ ಅವರು ಸಾಮಾಜಿಕ ಜಾಲತಾಣದಲ್ಲಿ ಶೂಟಿಂಗ್ ಬಗ್ಗೆ ಯಾವುದೇ ಮಾಹಿತಿ ಹಂಚಿಕೊಂಡಿರಲಿಲ್ಲ. ಇದೀಗ ಅನಿರೀಕ್ಷಿತ ಎಂಬಂತೆ ಪೋಸ್ಟರ್ ರಿಲೀಸ್‌ ಮಾಡಿದ್ಧಾರೆ.

ವಿಚ್ಛೇದನ ಪಡೆದುಕೊಂಡ ನಂತರದಲ್ಲಿ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಇಬ್ಬರೂ ಪರಸ್ಪರ ಒಬ್ಬರಿಗೊಬ್ಬರು ಸಪೋರ್ಟ್ ಮಾಡುತ್ತೇವೆ ಎಂದು ಹೇಳಿದ್ದರು. ಅದೇ ರೀತಿ ಅವರಿಬ್ಬರೂ ತಮ್ಮ ತಮ್ಮ ಬದುಕನ್ನು ಬದುಕುತ್ತಿದ್ದಾರೆ. ಅದಲ್ಲದೇ ತಮ್ಮ ಇಷ್ಟದಂತೆ ಈ ದಿನಗಳನ್ನು ಕಳೆಯುತ್ತಿದ್ದಾರೆ. ಯಾವುದೇ ಬೇಸರ ನಮಗಿಲ್ಲ ಎಂದು ಅವರು ಹಲವು ಕಡೆ ಹೇಳಿಕೊಂಡಿದ್ಧಾರೆ. ಕರಿಯರ್ ಬೆಳವಣಿಗೆಗಾಗಿ ನಾವು ಈ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದೂ ಸಹ ಅವರು ಆಗಲೇ ತಿಳಿಸಿದ್ದರು.

ಚಂದನ್ ಹಾಗೂ ನಿವೇದಿತಾ ಇಬ್ಬರೂ ಸೇರಿ ಒಂದು ಸಿನಿಮಾದಲ್ಲೂ ನಟನೆ ಮಾಡಿದ್ದಾರೆ. ಇನ್ನು ನಿವೇದಿತಾ ಒಪ್ಪಿಕೊಂಡಿರುವ ಸಿನಿಮಾಗಳ ಶೂಟಿಂಗ್‌ ನಡೆಯುತ್ತಲೇ ಇದೆ ಎಂದಿದ್ದಾರೆ. ಅದರ ನಡುವೆ ಈ ಒಂದು ಪೋಸ್ಟರ್‌ ಬಿಡುಗಡೆ ಮಾಡಿದ್ದಾರೆ. ಯಾರೇ ಅವರ ಬಗ್ಗೆ ಏನೇ ಕಾಮೆಂಟ್ ಮಾಡಿದರೂ ತಮ್ಮ ಜೀವನದಲ್ಲಿ ಏನೂ ಬದಲಾವಣೆ ಮಾಡಿಕೊಳ್ಳದೆ ತಮ್ಮಿಷ್ಟದಂತೆ ಬದುಕು ನಡೆಸುತ್ತಿದ್ದಾರೆ. ಇದಕ್ಕೆ ಅವರನ್ನು ಮೆಚ್ಚಲೇಬೇಕು ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಅಭಿನಂದನೆಗಳು ಗೊಂಬೆ ಆಲ್ ದಿ ಬೆಸ್ಟ್ ಎಂದು ಹಲವರು ಶುಭಕೋರಿದ್ದಾರೆ.